ಬಯಲು ಸೀಮೆಯಲ್ಲಿ ಕಾಫಿ, ಕಾಳು ಮೆಣಸು ಬೆಳೆ- ಸಮಗ್ರ ಕೃಷಿ ಹಾಗೂ ಸಾವಯಕೃಷಿ ಪದ್ದತಿಯಿಂದ ಬಂಗಾರದ ಬೆಳೆ ತೆಗೆದ ಹೊಸಮನೆ ತಿಪ್ಪೇಸ್ವಾಮಿ.

by | 17/05/24 | ಕೃಷಿ


ಚಳ್ಳಕೆರೆ ಜನಧ್ವನಿ ವಾರ್ತೆ ಮೇ 17. ವ್ಯವಸಾಯದಲ್ಲಿ ಏನು ಆದಾಯ ಇಲ್ಲ, ಬರೀ ಲಾಸು ಎಂದು ಮೂಗು ಮುರಿಯುವವರಿಗೆ ಇಲ್ಲೊಬ್ಬ ರೈತ ಮಾದರಿಯಾಗಿದ್ದಾನೆ.


ಫಸಲಿಗೆ ಬಂದು ಕಾಳು ಮೆಣಸು ಕಾಫಿ ಬೆಳೆ ಅಡಿಕೆ ಬೆಳೆಯಲ್ಲಿ ಸಮಗ್ರ ಕೃಷಿ
ಹೌದು ಇದು ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗ್ರಾಪಂ ವ್ಯಾಪ್ತಿಯ ಬರಮಸಾಗರ ಗ್ರಾಮದ ಸಮೀಪ ಬಂಜರು, ತಗ್ಗು ದಿನ್ನೆಯಿಂದ ಕೃಷಿಗೆ ಯೋಗ್ಯವಲ್ಲದ 30 ಎಕರೆ ಭೂಮಿಯನ್ನು ಹಸನು ಮಾಡಿಕೊಂಡು ಶೇಂಗಾ ತೊಗರಿ ಬಿತ್ತನೆ ಮಾಡಿ ಕೈ ಸುಟ್ಟುಕೊಂಡು 1995 ರಿಂದ ಕೃಷಿಯ ಸಾಧನೆ ಮಾಡಿಕೊಂಡು 6 ಕೊಳವೆ ಬಾವಿ ಕೊರಸಿ 5 ಎಕರೆ ದಾಳಿಂಬೆ, ಕೊಡಗಿನಂತಹ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಬೆಳೆಯಬಹುದಾದ ಬಯಲು ಸೀಮೆಯಲ್ಲಿ ಕಾಫಿ, ಕಾಳು ಮೆಣಸನ್ನು ಅಡಿಕೆ ಬೆಳೆಯಲ್ಲಿ ಸಮಗ್ರ ಕೃಷಿ ಪತ್ತಿಯನ್ನು ಅಳವಡಿಸಿಕೊಂಡು ಬೆಳೆದಿರುವ ರೈತ ಲಾಭ ಪಡೆಯುವ ಮೂಲಕ ಹೊಸ ಪ್ರಯೋಗಕ್ಕೆ ಮುನ್ನುಡಿ ಬರೆದು, ಯಶಸ್ಸು ಕಂಡಿದ್ದಾರೆ.
ರೈತ ಹೊಸಮನೆ ಎಚ್.ಎಸ್. ತಿಪ್ಪೇಸ್ವಾಮಿ ಹೊಸ ತಂತ್ರಜ್ಙಾನದೊಂದಿಗೆ ತಮ್ಮ 30 ಎಕರೆ ಭೂಮಿಯನ್ನು ಸಮಗ್ರ ಕೃಷಿಗೆ ಅಳವಡಿಸಿಕೊಳ್ಳುವ ಮೂಲಕ ಬಯಲು ಸೀಮೆಯಲ್ಲೂ ಕಾಫಿ ಮತ್ತು ಕಾಳು ಮೆಣಸು , ದಾಳಿಂಬೆ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಜಮೀನಿನಲ್ಲಿ ತೆಂಗು, ಅಡಿಕೆ , ಕಾಫೀ , ಕಾಳು ಮೆಣಸು, ಮಾವು, ದಾಳಿಂಬೆ,ಸೇರಿದಂತೆ ವಿವಿಧ ತೋಟಗಾರಿಕೆ ಗಿಡಗಳನ್ನು ಬೆಳೆಸಿದ್ದಾರೆ.
ದಾಳಿಂಬೆ ಹಣ್ಣಿಗೆ ಪಕ್ಷಿ, ಕೀಟ ಬಾದೆ ಹಾಗೂ ಕಳ್ಳರ ಹತೋಟಿಗೆ ಬಲೆ ಹಾಕಿ ರಕ್ಷಣೆ ಮಾಡಿದ್ದಾರೆ, ದಾಳಿಂಬೆ ಬೆಳೆತ ಬುಡಕ್ಕೆ ಮ್ಯಾಟ್ ಹಾಕಿದ್ದಾರೆ ಇದರಿಂದ ಕಳೆ, ಕೀಟಬಾದೆ, ತೇವಾಂಶ ಹತೋಟಿಗೆ ಬರುತ್ತಿದೆ ಈ ರೀತಿ ಪ್ರಥಮ ತಂತ್ರಜ್ಞಾನ ಅಳವಡಿಸಿಕೊಂಡಿರುವ ರೈತ ಹೊಸಮನೆತಿಪ್ಪೇಸ್ವಾಮಿ ಎಂದು ಕೃಷಿ ತಜ್ಞರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ಇನ್ನೇನು ದಾಳಿಂಬೆ ಉತ್ತಮ ಇಳುವರಿ ಬಂದಿದ್ದು ಎರಡು ತಿಂಗಳಿಗೆ ಕಟಾವಿಗೆ ಬರುತ್ತದೆ ಹೆಚ್ಚು ಲಾಭ ನಿರೀಕ್ಷಯಾಗಿದೆ.


ಕೀಟ,ಪಕ್ಷಿ ಹಾಗೂ ಕಳ್ಳರ ರಕ್ಷಣೆಗೆ ದಾಳಿಂಬೆ ಬೆಳೆಗೆ ಬಲೆ ರಕ್ಷಣೆ
ಒಂದು ಬೃಹತ್ ನೀರಿನ ತೊಟ್ಟಿಯನ್ನು ನಿರ್ಮಿಸಿ 6 ಕೊಳವೆ ಬಾವಿಗಳ ನೀರು ಸಂಗ್ರಹಿಸಿ ನಂತರ ಬೆಳೆಗಳಿಗೆ ಬಿಡುತ್ತಾರೆ ತುಂತುರು ಹನಿ ನೀರಾವರಿ ಪದ್ದತಿಯನ್ನು ಹಳವಿಸಿಕೊಂಡಿದ್ದಾರೆ.


ಮುವತ್ತು ಎಕರೆಯಲ್ಲಿನ ಬೆಳೆ ಬೆಳೆಯಲು ಸಾವಯವ ಕೃಷಿಗೆ ಎಮ್ಮೆ, ಹಸು ಸಾಕಾಣಿಗೆ ಸಗಣಿ ಗಂಜಲು ನಿಂದ ಜೀವಾಮೃತ ತಯಾರಿ.
ಹಸು , ಎಮ್ಮೆ, ಸುಮಾರು 25 ರಾಸುಗಳನ್ನು ಸಾಕುತ್ತಿದ್ದು ಇದರಿಂದ ಸಗಣಿ, ಗಂಜಲ, ಬೆಲ್ಲ, ದ್ವಿದಳ ಧಾನ್ಯಗಳ ಹಿಟ್ಟು ಕಲಬೆರಿಕೆ ಮಾಡಿದ ಜೀವಾಮೃತ ಸೇರಿಸಿ ದೊಡ್ಡದಾದ ತೊಟ್ಟಿಯಲ್ಲಿ ಸಂಗ್ರಹ ಮಾಡಿದ ಪರಿಸರದ ಸೊಪ್ಪು ಮತ್ತು ಕೊಟ್ಟಿಗೆ ಗೊಬ್ಬರಕ್ಕೆ ಹರಿಬಿಡಲಾಗುತ್ತದೆ. ಇದರಿಂದ ಪ್ರತಿದಿನ 15 ರಿಂದ 18 ಸಾವಿರ ಲೀಟರ್ ಜೀವಾಮೃತ ಬಳಕೆಯಲ್ಲಿ ಗಿಡಗಳಿಗೆ ಯಾವುದೇ ರೋಗಬಾಧೆ ಆಗದಂತೆ ಸಮೃದ್ಧಿಯಾಗಿ ಬೆಳೆಸಿದ್ದಾರೆ.

ಬಂಜೆ ಮಾವಿನ ಮರಕ್ಕೆ ಕಸಿ ಮಾಡಿರುವುದು.


ದಾಳಿಂಬೆ ಬೆಳೆಯ ಬುಡಕ್ಕೆ ಹೊಸತಂತ್ರಜ್ಞಾನದಿಂದ ಮ್ಯಾಟ್ ಹಾಕಿ ಕೀಟ ಬಾದೆ, ತೇವಾಂಶ, ಕಳೆಯಿಂದ ರಕ್ಷಣೆ,

ಸಮಗ್ರ ಕೃಷಿಯಲ್ಲಿ ಯಶಸ್ಸು ಕಂಡ ಹೊಸ ಮನೆ ತಿಪ್ಪೇಸ್ವಾಮಿ.
ಹೊಸಮನೆ ತಿಪ್ಪೇಸ್ವಾಮಿ ಜನಧ್ವನಿ ಯೊಂದಿಗೆ ಮಾತನಾಡಿ ಕೃಷಿ ಲಾಭದಾಯಕವಾಗಿದೆ. ಆದರೆ, ಇದಕ್ಕೆ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಬೇಕು, ಸಮಗ್ರ ಕೃಷಿ ಮಾಡಿದ್ದಲ್ಲಿ ಹೆಚ್ಚಿನ ಆದಾಯ ಪಡೆದುಕೊಳ್ಳಬಹುದು. ಶ್ರಮದೊಂದಿಗೆ ತಾಂತ್ರಿಕ ಕೊಂಡಿದ್ದೇ ಆದಲ್ಲಿ ಉತ್ತಮ ಆದಾಯ ನಿರೀಕ್ಷೆ ಅಂಶಗಳನ್ನು ಕೃಷಿಯಲ್ಲಿ ಅಳವಡಿಸಿ ಮಾಡಬಹುದು.
ಬಯಲುಸೀಮೆಯ ಮಣ್ಣಿನ ನೆಲದಲ್ಲಿ ಕಾಫಿ ಮತ್ತು ಕಾಳುಮೆಣಸು ಬೆಳೆ ಅಷ್ಟಾಗಿ ಫಸಲು ನೀಡುವುದಿಲ್ಲ ಎನ್ನುವ ಆಂತಕ ಇತ್ತು. ಆದರೂ, ಪ್ರಯತ್ನ ಮಾಡಿ ನಾಟಿ ಮಾಡಲಾಗಿದೆ. ಈ ಭಾಗದಲ್ಲಿ ಕಾಫಿ ಬೆಳೆ ಬೆಳೆಯುತ್ತಿದ್ದೇನೆ ಎಂದು ಹೇಳಿಕೊಳ್ಳುವ ಮನಸ್ಸಿರಲಿಲ್ಲ. 3 ವರ್ಷದ ಬಳಿಕ ಸಮೃದ್ಧಿಯಾಗಿ ಬೆಳೆ ಬೆಳೆದಿರುವ ಕಾರಣ, ನಮ್ಮ ಭೂಮಿಯಲ್ಲೂ ಕಾಫಿ ಬೆಳೆ ದಕ್ಕುತ್ತದೆ ಎನ್ನುವ ವಿಶ್ವಾಸ ಮೂಡಿದಂತಾಗಿದೆ.ಕಾಫಿ ಬೆಳೆಯುವುದರಿಂದ ಅದರ ಎಲೆಗಳು ನೆಲಕ್ಕೆ ಬಿದ್ದು ಸಾವಯವ ಗೊಬ್ಬರ ಆಗುತ್ತಿದೆ ನೀರಿನ ತೇವಾಂಶ ಇಡಿದ್ದಿಟ್ಟುಕೊಳ್ಳುತ್ತದೆ ಎಂದು ತಿಳಿಸಿದರು.

ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಡಾ,ವಿರುಪಾಕ್ಷಪ್ಪ.
ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಆರ್. ವಿರೂಪಾಕ್ಷಪ್ಪ ಜನಧ್ವನಿಯೊಂದಿಗೆ ಮಾತನಾಡಿ ಅಡಿಕೆ ಫಸಲು ನಡುವೆ ಕಾಫಿ ಮತ್ತು ಕಾಳುಮೆಣಸು ಬೆಳೆದು ಬಯಲುಸೀಮೆಯಲ್ಲಿ ಕಾಫಿ ಬೆಳೆಯ ಯಶಸ್ವಿ ಕಂಡಿದ್ದಾರೆ. ಕಾಫಿ ಬೆಳೆಯಲು ಖರ್ಚು ಹೆಚ್ಚು ಬಿಸಿಲಿನ ತಾಪಕ್ಕೆ ಕಾಫಿ ಬೆಳೆ ಬರುವುದಿಲ್ಲ ಆದರೂ ಸಹ ನೀರುಣಿಸಿ ಸಾವಯ ಹಾಗೂ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕೃಷಿಯಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು,

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page