ಬಬ್ಬೂರು ಕೃಷಿ ವಿಜ್ಞಾನ ಕೇಂದ್ರ ನೆಪ ಮಾತ್ರಕ್ಕೆ ಹೊರೆತು ಅಲ್ಲಿ ರೈತರಿಗೆ ಅನುಕೂಲವಾಗುವಂತ ಯಾವ ಕೆಲಸಗಳು ನಡೆಯುತ್ತಿಲ್ಲ : ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ

by | 04/10/23 | ಪ್ರತಿಭಟನೆ


ಹಿರಿಯೂರು :
ಮೈಸೂರು ಮಹಾರಾಜರಾದ ನಾಲ್ವಡಿಕೃಷ್ಣರಾಜ ಒಡೆಯರ್ ರವರು ಬಯಲುಸೀಮೆಯಲ್ಲಿ ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಳೆ ಹಾಗೂ ನೀರಾವರಿ ಆಶ್ರಯಿತ ಹೊಸಹೊಸ ಬೀಜಗಳನ್ನು ಸಂಸ್ಕರಿಸಿ ರೈತರಿಗೆ ಬೀಜ ಮಾರಾಟ ಮಾಡುವ ಸದುದ್ದೇಶದಿಂದ ಸುಮಾರು 100 ಎಕರೆಯಷ್ಟು ವಿಸ್ತೀರ್ಣವಾದ ಜಾಗದಲ್ಲಿ ಬಬ್ಬೂರು ಕೃಷಿ ವಿಜ್ಞಾನ ಕೇಂದ್ರವನ್ನು ಪ್ರಾರಂಭಿಸಲಾಯಿತು ಎಂಬುದಾಗಿ ತಾಲ್ಲೂಕು ರೈತಸಂಘದ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.
ತಾಲ್ಲೂಕು ರೈತಸಂಘದ ವತಿಯಿಂದ ಕರೆಯಲಾಗಿದ್ದ ಮಾಸಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇದೀಗ ಕೃಷಿ ವಿಜ್ಞಾನ ಕೇಂದ್ರ ಶತಮಾನೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಆಗಮಿಸುತ್ತಿರುವುದು ಸ್ವಾಗತ ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿ ಇಲಾಖೆ ಕೃಷಿ ವಿಜ್ಞಾನ ಕೇಂದ್ರ ನೆಪ ಮಾತ್ರಕ್ಕೆ ಹೊರೆತು ಅಲ್ಲಿ ನೂರಾರು ಲೋಪದೋಷಗಳು ಕಂಡುಬರುತ್ತವೆ ಕೃಷಿ ವಿಜ್ಞಾನ ಕೇಂದ್ರ ಪ್ರಾರಂಭವಾಗಿ ಇಷ್ಟು ದಿವಸವಾದರೂ ಯಾವುದೇ ಹೊಸ ತಳಿ ಬೀಜ ಕಂಡುಹಿಡಿದಿರುವುದಿಲ್ಲ ಎಂಬುದಾಗಿ ಅವರು ಆಪಾದಿಸಿದರು.
ಸರ್ಕಾರದಿಂದ ಲಕ್ಷಾನುಗಟ್ಟಲೆ ಸಂಬಳ ತೆಗೆದುಕೊಂಡು ಜ್ಞಾನಿಗಳು ಐಷಾರಾಮಿ ಕಟ್ಟಡಗಳಲ್ಲಿ ಕುಳಿತು ಬರೀಕಾಲಹರಣ ಮಾಡುತ್ತಿದ್ದಾರೆ ಅಲ್ಲದೆ ಸಾವಯವ ಉತ್ಪನ್ನಗಳ ಪರೀಕ್ಷಾ ಕೇಂದ್ರದ ಬಿಲ್ಡಿಂಗ್ ಕಟ್ಟಿ ಮೂರು ವರ್ಷವಾದರೂ ಯಾವುದೇ ಲ್ಯಾಬ್ ಪ್ರಾರಂಭವಾಗಿರುವುದಿಲ್ಲ. ರೈತರ ತರಬೇತಿ ಕೇಂದ್ರಗಳು ಸಹ ನೆಪಮಾತ್ರಕ್ಕೆ ಸೀಮಿತವಾಗಿವೆ ಯಾವುದೇ ನಾಟಿ ಹಸುಗಳಾಗಲಿ, ನಾಟಿ ಬೀಜಗಳಾಗಲಿ ಸಂಸ್ಕರಣ ಕೇಂದ್ರಗಳಲ್ಲಿ ಇರುವುದಿಲ್ಲ ಎಂದರಲ್ಲದೆ
ಯಂತ್ರೋಪಕರಣಗಳು ತಯಾರಿಸಿ ಬಾಡಿಗೆ ಕೊಡುವುದಕ್ಕೆ ಸೀಮಿತವಾಗಿವೆ. ಮಣ್ಣು ನೀರು ಪರೀಕ್ಷೆಗೆ ಬರುವ ರೈತರ ಹತ್ತಿರ 500 ರೂ ತೆಗೆದುಕೊಳ್ಳುತ್ತಾರೆ. ಇಂದೇ ಬೆಂಗಳೂರು ಜಿಕೆವಿಕೆ ವಿಜ್ಞಾನ ಕೇಂದ್ರ ಅಡಿಯಲ್ಲಿ ಇದ್ದ ಸಂದರ್ಭದಲ್ಲಿ ಅನೇಕ ಕೃಷಿಮೇಳಗಳನ್ನು ನಡೆಸುತ್ತಿದ್ದರು. ಈಗ ಶಿವಮೊಗ್ಗ ಕೃಷಿ ವಿಜ್ಞಾನ ಕೇಂದ್ರಕ್ಕೆ ಒಳಪಟ್ಟ ದಿನದಿಂದ ಯಾವುದೇ ಕೃಷಿಮೇಳವಾಗಲಿ ರೈತರಿಗೆ ಸಂಬಂಧಿಸಿದ ಯಾವ ಕಾರ್ಯಕ್ರಮಗಳು ಕ್ರಮಬದ್ಧವಾಗಿ ನಡೆಯುತ್ತಿಲ್ಲ ಎಂದು ಆಪಾದಿಸಿದರು.
ಆದ್ದರಿಂದ ಈಗ ಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ ಆಗಮಿಸುತ್ತಿರುವ ರಾಜ್ಯದ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ಧರಾಮಯ್ಯನವರು ಬಬ್ಬೂರು ಕೃಷಿವಿಜ್ಞಾನ ಕೇಂದ್ರದ ಕಾರ್ಯವೈಖರಿಗಳನ್ನು ಬದಲಾಯಿಸಬೇಕಾಗಿ ರೈತಸಂಘದ ಮೂಲಕ ಒತ್ತಾಯಿಸುತ್ತೇವೆ, ಎಂದರಲ್ಲದೆ,
ಸರ್ಕಾರ ಬರಗಾಲ ಘೋಷಣೆ ಮಾಡಿದ್ದರೂ ತಾಲ್ಲೂಕಿನಲ್ಲಿ ಇದುವರೆಗೂ ಯಾವುದೇ ಗೋಶಾಲೆಯಾಗಲಿ, ಕುಡಿಯುವ ನೀರಿನ ಸಮಸ್ಯೆ ಆಗಲಿ ಬೆಳೆ ಪರಿಹಾರ ಬೆಳೆ ವಿಮೆ ಇದರ ಬಗ್ಗೆಯಾಗಲಿ ಸರ್ಕಾರದ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬುದಾಗಿ ಸರ್ಕಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಈ ಬಗ್ಗೆ ಸರ್ಕಾರ ಕೂಡಲೇ ಗಮನ ಹರಿಸಬೇಕು ಎಂಬುದಾಗಿ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನ ಬೆಸ್ಕಾಂ ಇಲಾಖೆಯಲ್ಲಿ ಅಕ್ರಮಸಕ್ರಮ ಯೋಜನೆಯಲ್ಲಿ ನಾಲ್ಕು ವರ್ಷವಾದರೂ ಪರಿವರ್ತಕಗಳನ್ನು ಅಳವಡಿಸಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ, ಇದೇ ತಿಂಗಳು 10ನೇ ತಾರೀಕು ಬೆಸ್ಕಾಂ ಎಂಡಿ ಕಚೇರಿಗೆ ಮುತ್ತಿಗೆ ಹಾಕಲು ಸಭೆಯಲ್ಲಿ ಒಮ್ಮತದಿಂದ ತೀರ್ಮಾನ ಕೈಗೊಳ್ಳಲಾಯಿತು.
ಭದ್ರಾ ಜಲಾಶಯದಿಂದ ಈ ವರ್ಷ ವಾಣಿವಿಲಾಸ ಸಾಗರಕ್ಕೆ ಯಾವುದೇ ನೀರು ಹರಿಸಿಲ್ಲ, ಅಲ್ಲದೆ ತುಂಗಾದಿಂದ ಭದ್ರಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ಒತ್ತಾಯಿಸಿ ನವಂಬರ್ ತಿಂಗಳಲ್ಲಿ ತುಂಗಾದಿಂದ ಭದ್ರದವರೆಗೆ ಪಾದಯಾತ್ರೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಎತ್ತಿನಹೊಳೆ ಕಾಮಗಾರಿ ನಡೆಯುತ್ತಿದ್ದು ವಾಣಿವಿಲಾಸ ಜಲಾಶಯಕ್ಕೆ ಪ್ರಾಯೋಗಿಕವಾಗಿ ಹರಿಸುತ್ತೇವೆಂದು ಜಲಸಂಪನ್ಮೂಲ ಇಲಾಖೆ ಹೇಳಿದ್ದು, ಕೂಡಲೇ ಈ ಕಾರ್ಯವನ್ನು ಪ್ರಾರಂಭಿಸಬೇಕೆಂದು ಸಭೆಯಲ್ಲಿ ಒತ್ತಾಯಿಸಿದರಲ್ಲದೆ, ನಮ್ಮ ತಾಲ್ಲೂಕಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳಿಗೆ ತಾಲ್ಲೂಕಿನ ಈ ಎಲ್ಲಾ ಸಮಸ್ಯೆಗಳ ಕುರಿತು ಮನವಿಪತ್ರ ಸಲ್ಲಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಭೆಯಲ್ಲಿ ತಾಲ್ಲೂಕು ರೈತಸಂಘದ ಕಾರ್ಯದರ್ಶಿ ಆಲೂರು ಸಿದ್ದರಾಮಣ್ಣ, ತಿಮ್ಮಾರೆಡ್ಡಿ, ಬಬ್ಬೂರು ಶಿವಣ್ಣ, ರಂಗಸ್ವಾಮಿ, ಹಳ್ಳಿಕೆರೆ ತಿಪ್ಪೇಸ್ವಾಮಿ, ರಂಗೇನಹಳ್ಳಿ ಜಗದೀಶ್, ಜಯಣ್ಣ ಹೊಸಕೆರೆ, ನಾರಾಯಣಪ್ಪ, ಜಗದೀಶ್, ಸೂರ್ಯಗೊಂಡನಹಳ್ಳಿ ರಾಮಣ್ಣ, ಶ್ರೀರಂಗಮ್ಮ, ಲೋಕೇಶ್, ವಿರೂಪಾಕ್ಷಪ್ಪ, ರಾಮಕೃಷ್ಣ, ಚಂದ್ರಶೇಖರ್, ಸತ್ಯವೇಲು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Latest News >>

ನಗರದ ನಗರಸಭೆಗೆ ಜಿಲ್ಲಾಧಿಕಾರಿ ವೆಂಕಟೇಶ್ ಭೇಟಿ ನಗರಸಭೆಯ ಆಯುಕ್ತರು,ಅಧಿಕಾರಿಗಳೊಂದಿಗೆ ಸಭೆ

ಹಿರಿಯೂರು: ಇದೀಗ ಪ್ರಸ್ತುತ ತಿಂಗಳು ಮಳೆಗಾಲ ಆಗಿರುವುದರಿಂದ ಹಲವಾರು ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದ್ದು, ನಗರದ ಜನರ ಉತ್ತಮ...

ಲಕ್ಕೇನಹಳ್ಳಿ: ಸ್ವಾಮಿತ್ವ ಯೋಜನೆಯ ಕುರಿತು ಗ್ರಾಮ ಸಭೆ ಗ್ರಾಮ ಪಂಚಾಯಿತಿಗೆ ಒಳಪಡುವ ಆಸ್ತಿಗಳಿಗೆ ಪಿ.ಆರ್.ಕಾರ್ಡ್ (ಹಕ್ಕುಪತ್ರ) ನೀಡುವ ಯೋಜನೆ

ಹಿರಿಯೂರು ಜೂ.21: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜೆ.ಜಿ.ಹಳ್ಳಿ ಹೋಬಳಿಯ ದಿಂಡಾವರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೊಳಪಡುವ...

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ಪಹಣಿಗೆ ಆಧಾರ್ ಜೋಡಣಿ: ತಿಂಗಳಾಂತ್ಯಕ್ಕೆ ಶೇ.75ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿ

ಚಿತ್ರದುರ್ಗ ಜೂನ್.21: ಪಹಣಿಗೆ ಆಧಾರ್ ಜೋಡಣೆ ಕಾರ್ಯವನ್ನು ಪ್ರಥಮಾಧ್ಯತೆಯಾಗಿ ಪರಿಗಣಿಸಿ, ತಿಂಗಳಾಂತ್ಯಕ್ಕೆ ಹಿರಿಯೂರು ತಾಲ್ಲೂಕಿನಲ್ಲಿ...

10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಅಭಿಮತ ಮಾನಸಿಕ ಸದೃಢತೆ ಹಾಗೂ ಒತ್ತಡ ಮುಕ್ತ ಜೀವನಕ್ಕೆ ಯೋಗ ಸಹಕಾರಿ

ಚಿತ್ರದುರ್ಗ ಜೂನ್21: ಯೋಗ ದೈಹಿಕವಾಗಿ ಶಕ್ತಿ ಹಾಗೂ ಚೈತನ್ಯ ತುಂಬುವದರ ಜೊತೆಗೆ ಮಾನಸಿಕವಾಗಿ ಸಹ ಸದೃಢರನ್ನಾಗಿಸುತ್ತದೆ. ಇಂದಿನ ನಿತ್ಯದ...

ವಿದ್ಯಾರ್ಥಿಗಳು ಪ್ರತಿ ದಿನ ಯೋಗಾಸನ ಮಾಡುವುದು ಅಭ್ಯಾಸ ಮಾಡಿಕೊಳ್ಳಿ ಶ್ರೀ ತಿಪ್ಪೇರುದ್ರಸ್ವಾಮಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಂವೈಟಿ ಸ್ವಾಮಿ.

ನಾಯಕನಹಟ್ಟಿ:: ವಿದ್ಯಾರ್ಥಿಗಳು ಪ್ರತಿಯೊಬ್ಬರು ಯೋಗಾಸನ ಮಾಡುವುದು ರೂಡಿಸಿಕೊಂಡಾಗ ಮಾತ್ರ ಆರೋಗ್ಯವಂತರಾಗಿರಲು ಸಾಧ್ಯ. ಎಂದು ಶ್ರೀ...

ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ: -ಮುಖ್ಯಮಂತ್ರಿ ಸಿದ್ದರಾಮಯ್ಯ

ಬಳ್ಳಾರಿ,ಜೂ.20 ರಾಜ್ಯದಲ್ಲಿ ಸಾರಿಗೆ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ವಿಷಯ ಸದ್ಯ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸೋಲಿನ ಹೊಣೆಯನ್ನು ನಾನೇ ಹೊರುವೆ: ಪರಾಜಿತ ಅಭ್ಯರ್ಥಿ ಬಿ ಎನ್ ಚಂದ್ರಪ್ಪ 

ಚಳ್ಳಕೆರೆ: ಚಿತ್ರದುರ್ಗ ಜಿಲ್ಲೆಯು ಕಳೆದ ಹತ್ತು ವರ್ಷಗಳಿಂದ ನನ್ನ ಕರ್ಮಭೂಮಿಯಾಗಿದ್ದು ಇಲ್ಲಿನ ಜನತೆ ಮನೆ ಮಗನಂತೆ ನೋಡಿದ್ದು ಒಂದು ಬಾರಿ...

ಜಾತಿನಿಂದನೆ, ದೌರ್ಜನ್ಯಗಳಂತಹ ಆರೋಪಗಳನ್ನು ಪರಿಶಿಷ್ಟರು ಕೈಬಿಟ್ಟಾಗ ಮಾತ್ರ ಸಮಾಜದಲ್ಲಿಬೆಳೆಯಲು ಸಾಧ್ಯ: ನೂತನ ಸಂಸದರಾದ ಗೋವಿಂದ ಕಾರಜೋಳ

ಹಿರಿಯೂರು: ಜಾತಿ ನಿಂದನೆ ಮತ್ತು ದಲಿತ ದೌರ್ಜನ್ಯಗಳಂತಹ ವೃತಾ ಆರೋಪಗಳನ್ನು ಪರಿಶಿಷ್ಟರು ಕೈ ಬಿಟ್ಟಾಗ ಮಾತ್ರ ಸಮಾಜದಲ್ಲಿ ಬೆಳೆಯಲು ಸಾಧ್ಯ...

ಚಿಕ್ಕಾಲಘಟ್ಟ ಗ್ರಾಮದಲ್ಲಿ ಜನಸ್ಪಂದನ ಕಾರ್ಯಕ್ರಮ ಶೀಘ್ರ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯ ಭರವಸ -ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ

ಚಿತ್ರದುರ್ಗ. ಜೂನ್.19: ಚಿಕ್ಕಾಲಘಟ್ಟ ಗ್ರಾಮದ ಬಹುದಿನಗಳ ಬೇಡಿಕೆಯಾದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಈಗಾಗಲೇ ಜಾಗ...

ಜನಪ್ರತಿನಿಧಿಗಳು ಸರ್ಕಾರಿ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸೋಣ – ಸಂಸದ ಗೋವಿಂದ ಕಾರಜೋಳ

ಚಿತ್ರದುರ್ಗ. ಜೂನ್19: ಚುನಾಯಿತ ಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಸಮನ್ವಯತೆಯಿಂದ ಉತ್ತಮವಾಗಿ ಕಾರ್ಯನಿರ್ವಹಿಸಿ ಕೇಂದ್ರ ಹಾಗೂ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page