ಹಿರಿಯೂರು :
ನಗರಸಭೆಯ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ವಾಣಿಜ್ಯ ಅಂಗಡಿ ಮಳಿಗೆಗಳಿಗೆ ಮಾಲೀಕರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಅಂಗಡಿಗಳ ಮಾಲೀಕರಿಗೆ ದಂಡವಿಧಿಸಲಾಗುತ್ತಿದೆ ಎಂಬುದಾಗಿ ಹಿರಿಯ ಆರೋಗ್ಯ ನಿರೀಕ್ಷಕರಾದ ಜಿ.ಮೀನಾಕ್ಷಿ ಹೇಳಿದರು.
ನಗರದ ವಿವಿಧ ಅಂಗಡಿ ಮಳಿಗೆಗಳಿಗೆ ಭೇಟಿ ನೀಡಿ, ಸರ್ಕಾರದ ಕಾಯ್ದೆಗಳನ್ನು ಪಾಲಿಸದ ಅಂಗಡಿ ಮಾಲೀಕರಿಗೆ ನಗರಸಭೆ ವತಿಯಿಂದ ತಂಡ ವಿಧಿಸಿ, ನಂತರ ಅವರು ಮಾತನಾಡಿದರು.
ನಗರದಲ್ಲಿ ವ್ಯಾಪಾರಕ್ಕೆ ಉದ್ದಿಮೆ ಪರವಾನಿಗೆ ತೆಗೆದುಕೊಳ್ಳದೆ ಇರುವ ಅಂಗಡಿಗಳ ಮಾಲೀಕರಿಗೆ ನೋಟಿಸ್ ನೀಡಿ, ಉದ್ದಿಮೆಗಳ ಪರವಾನಿಗೆ ಪಡೆಯಲು ಸೂಚನೆ ನೀಡಿದರಲ್ಲದೆ, ಸುಮಾರು 10 ಅಂಗಡಿಗಳ ಮಾಲೀಕರಿಗೆ ಒಟ್ಟಾರೆ 2500 ರೂಗಳ ದಂಡ ವಿಧಿಸಿದರು.
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾಯ್ದೆ ಅಡಿ ತಂಬಾಕು ಉತ್ಪನ್ನಗಳನ್ನು ಮಾರಾಟಗಾರರಿಗೆ ಮತ್ತು ನಿಯಮಗಳನ್ನು ಉಲ್ಲಂಘಿಸಿದವರಿಗೆ ಸೆಕ್ಷನ್ 4. ಸೆಕ್ಷನ್ 6 ಎ, ಸೆಕ್ಷನ್ 6 ಬಿ ಕಾಯ್ದೆಯನ್ವಯ ದಂಡ ವಿಧಿಸಿ. ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರಾದ ಜಿ.ಮೀನಾಕ್ಷಿ. ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಕರಾದ ವಿನಯ್, ಸೂಪರ್ವೈಸರ್ ಈರಕ್ಯಾತಪ್ಪ, ನಗರಸಭೆಯ ಸಿಬ್ಬಂದಿಗಳಾದ ಅಜಯ್ ಕುಮಾರ್, ಸೇರಿದಂತೆ ಅನೇಕರು ಹಾಜರಿದ್ದರು.
ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ವಾಣಿಜ್ಯಅಂಗಡಿಮಳಿಗೆಗಳ ಮಾಲೀಕರಿಗೆ ದಂಡವಿಧಿಸಿದ ಆರೋಗ್ಯನಿರೀಕ್ಷಕಿ ಮೀನಾಕ್ಷಿ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments