ಪ್ರವಾಸೋದ್ಯಮ

ಗುರುಪೂರ್ಣಿಮೆಯಂದು ಬೃಹತ್ ಶಿವನ ವಿಗ್ರಹ ಲೋಕಾರ್ಪಣೆ -ಶ್ರೀಕನ್ನೇಶ್ವರ ಆಶ್ರಮ.

ಚಳ್ಳಕೆರೆ ಜು.14ಬೃಹತ್ 39 ಅಡಿ ಎತ್ತರದ ಶಿವನ ವಿಗ್ರಹವನ್ನು ಗುರುಪೂರ್ಣಿಮೆ ದಿನದಂದು ಲೋಕಾರ್ಪಣೆಗೊಳ್ಳಲಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ದೊಡ್ಡೇರಿ ಸಮೀಪದ ಶ್ರೀಸತ್ ಉಪನಾಸಿ ಕನ್ನೇಶ್ವರ ಆಶ್ರಮದಲ್ಲಿ ನೂತನವಾಗಿ ಸತತ ಐದು ತಿಂಗಳಿಂದ ಸುಮಾರು 39ಅಡಿ ಎತ್ತರದ ಶಿವನ ವಿಗ್ರಹವನ್ನು ದಾವಣಗೆರೆ ಮೂಲಕ ಶಿಲ್ಪಿಶಿವಶಂಕರ್ ಹಾಗೂ ಸುಮಾರು 25 ಜನರು ನಿರಂತರವಾಗಿ ಶಿವನ ವಿಗ್ರಹವನ್ನು ನಿರ್ಮಿಸಿಸುತ್ತಾರೆ.


ಅಷಾಡ ಮಾಸದ ಗುರುಪೂರ್ಣೀಮೆ ಜು.21 ರ ಭಾನುವಾರ ವಿಶೇಷ ಪೂಜೆಯೊಂದಿಗೆ ಉದ್ಘಾಟನೆಯಾಗಲಿದೆ.


ಶ್ರೀ ಸತ್ ಉಪಾಸಿ ಮಲ್ಲಪಸ್ವಾಮಿಗಳು ಯಾವುದೇ ಕಟ್ಟಡ,ವಿಗ್ರಹ,ಸ್ಥಾಪನೆ ವಾಹನ ಖರೀದಿ ಹಾಗೂ ಪ್ರಯಾಣ ಬೆಳೆಸ ಬೇಕಾದರೂ ಸಹ 9 ರ ಸಂಖ್ಯೆಯನ್ನು ಅನುಸರಿಸುತ್ತಾರೆ. ಸಂಖ್ಯಾಶಾಸ್ತ್ರದಲ್ಲಿ ಒಂಬತ್ತನೆಯ ಸಂಖ್ಯೆಯನ್ನು ‘ಬ್ರಹ್ಮಸಂಖ್ಯೆ’ ಎನ್ನುತ್ತಾರೆ. ‘ದೈವಸಂಖ್ಯೆ’ ಮತ್ತು ‘ವೃದ್ಧಿಸಂಖ್ಯೆ’ ಎಂದೂ ಹೇಳುತ್ತಾರೆ. ಈ ಒಂಬತ್ತನೆಯ ಸಂಖ್ಯೆಯನ್ನೇ ಪುರಾಣ ಸಂಖ್ಯೆ’ಒಂಬತ್ತರ ಸಂಖ್ಯೆ ಶ್ರೀಪಾದವಲ್ಲಭ ಇವರ ಇತಿಹಾಸಹೊಂದಿದೆ ಎನ್ನಲಾಗಿದೆ.

ಕರ್ನಾಟಕ ಬಂದ್‌ಗೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ಎಂದಿನಂತೆ ವ್ಯಾಪಾರ ವಹಿವಾಟು.


ಚಳ್ಳಕೆರೆ ಸೆ.29.ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ರೈತ ಹಾಗೂ ಕನ್ನಡ ಪರ ಸಂಘಟನೆಗಳು ಶುಕ್ತವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಎಂದಿನಂತೆ ಪ್ರತಿ ಶುಕ್ರವಾರ ವಾರದ ರಜೆ ಅಂಗಡಿಗಳನ್ನು ಮುಚ್ಚಿರುವುದು ಬಿಟ್ಟರೆ ಉಳಿದ ಅಂಗಡಿಗಳು ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದ್ದವು. ಕರ್ನಾಟಕ ಬಂದ್ ಎಂದು ಘೋಷಣೆ ಮಾಡಿದ್ದರು ಜನರು ನಗರಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿತ್ತು ಎಂದಿನಂತೆ ಸಾರಿಗೆ ಹಾಗೂ ಖಾಸಗಿ ಬಸ್ ಗಳ ಸಂಚಾರ ಇದ್ದರೂ ಪ್ರಯಾಣಿಕರ ಕೊರೆಯಿಂದ ಸಾರಿಗೆ ಬಸ್ ಗಳು ಖಾಲಿ ಖಾಲಿ ಸಂಚರಿಸಿದರೆ ಖಾಸಗಿ ಬಸ್ ಗಳು ಪ್ರಯಾಣಿಕರಿಗಾಗಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದವು. ರಾಷ್ಟ್ರೀಯ ಹೆದ್ದಾರಿ ವಾಹನ ದಟ್ಟಣೆಯಿಂದ ಸಂಚರಿಸುವ ರಸ್ತೆ ಕೆಲವೆ ವಾಹನಗಳ ಸಂಚಾರದಿಂದ ರಸ್ತೆ ಬಿಕೋ ಎನ್ನುತ್ತಿತ್ತು.
ಉಳಿದಂತೆ ಶಾಲಾ- ಕಾಲೇಜುಗಳು, ಬ್ಯಾಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.
ನಗರದ ಬಹುತೇಕ ಹೋಟೆಲ್‌, ದಿನಸಿ ಅಂಗಡಿ-ತರಕಾರಿ ಅಂಗಡಿ, ಬ್ಯಾಂಕ್‌, ಪೆಟ್ರೋಲ್‌ ಪಂಪ್‌ ಹಾಗೂ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ನಗರದಲ್ಲಿ‌ಯಾವುದೇ ಅಹಿತರ ಘಟನೆಗಳು ನಡೆಯದಂತೆ ಮುನ್ನಚ್ವರಿಯಾಗಿ ,144 ಸೆಕ್ಷನ್ ಜಾರಿಗೊಳಿಸಲಾಗಿತ್ತು ಪೋಲಿಸ್ ಬಿಗಿ ಬಂದೊಬಸ್ತು ವ್ಯವಸ್ಥೆ ಕಲ್ಪಿಸಲಾಗಿತ್ತು.

ಮೇ 22 ರಿಂದ ಸಾಣೀಕೆರೆ ಗ್ರಾಮದ ಗಂಜಿಗುಂಟಮ್ಮ ಜಾತ್ರೋ ಮಹೋತ್ಸವ ಜರುಗಲಿದೆ.

ಚಳ್ಳಕೆರೆ ಜನಧ್ವನಿ ವಾರ್ತೆ ಮೇ 17.
ರಾಷ್ಟ್ರೀಯಯ ಹೆದ್ದಾರಿ ಚಳ್ಳಕೆರೆ ಬೆಂಗಳೂರು ಮಾರ್ಗಗವಾಗಿ ಹೋಗುವರಾಷ್ಟಿçÃಯ ಹೆದ್ದಾರಿಯಲ್ಲಿ ಸುಮಾರು ೧೩ ಕಿ.ಮೀ ದೂರದಲ್ಲಿ ಸಿಗುವ ಸಾಣೀಕೆರೆಗ್ರಾಮ ಹತ್ತು ಹಲವು ವಿಶಿಷ್ಟ ಪಡೆದು ಕೂಡಿದ್ದು. ಪುರಾತನ ಇತಿಹಾಸ ಈ ಗ್ರಾಮದೊಂದಿಗೆ ತಳಕುಹಾಕಿಕೊಂಡಿದೆ. ಇಲ್ಲಿನ ಜನರರಿಂದ ಲಭ್ಯವಾಗುವ ಮಾಹಿತಿಗಳಿಂದ ಸ್ಥಳಿಯ ಪರಂಪರೆ ಅನಾವರಣಗೊಳ್ಳುತ್ತಾ ಹೋಗುತ್ತದೆ.
ಹಿನ್ನೆಲೆ


ಗ್ರಾಮದಲ್ಲಿ ನೆಲೆಸಿರುವ ಪ್ರಾಚೀನ ದೇವತೆ ಗಂಜಿಗುಂಟಮ್ಮ ಈ ಭಾಗದ ಹತ್ತಾರು ಹಳ್ಳಿಗಳ ಭಕ್ತರನ್ನು ತನ್ನಡೆಗೆ ಸೆಳೆದುಕೊಂಡು ಅಪಾರ ಭಕ್ತ ಸಮುಹ ಹೊಂದಿದ್ದಾಳೆ ಇದಲ್ಲದೆ ಈ ಗ್ರಾಮ ಅನೇಕ ಐತಿಹಾಸಿಕ ಕುರುಗಳುಳ್ಳ ಕೋಟೆ, ಕೊತ್ತಲ, ಬುರುಜು ಬತೇರಿ, ಮಂಟಪಗಳು, ಉಯ್ಯಾಲೆ ಕಂಬ, ವೀರಗಲ್ಲು, ಸಪ್ತಮಾತೃಕೆಯರ(ಏಳುಮಂದಿ ಅಕ್ಕಮ್ಮ) ಕಲ್ಲುಗಳು ಇಲ್ಲಿನ ಇತಿಹಾಸಕ್ಕೆ ಕನ್ನಡಿ ಹಿಡಿಯುತ್ತಿವೆ.
ಸಾಣೀಕೆರೆ ಮಧ್ಯಭಾಗದಲ್ಲಿ ಸುಮಾರು ವರ್ಷಗಳ ಹಿಂದೆ ಬಂದು ನೆಲೆಸಿರುವ ಗಂಜಿಗುಂಟಮ್ಮ ಗ್ರಾಮದ ಜನರ ಆರಾಧ್ಯ ದೇವತೆಯಾಗಿ ಇಂದಿಗೂ ಕಂಗೊಳಿಸುತ್ತಿದ್ದಾರೆ. ಈ ದೇವತೆ ಸಾಣೀಕೆರೆಗೆ ಬಂದು ನೆಲಸಿದ ಬಗ್ಗೆ ಯಾವುದೇ ಸ್ಪಷ್ಟ ಕುರುಗಳು ಇಲ್ಲವಾದರೂ ಹಿಂದಿನ ಕಾಲದ ಹಿರಿಯ ವಯಸ್ಕರು ಹೇಳುವ ಜನಪದ ಕತೆಗಳನ್ನು ಆಧರಿಸಿ ಗ್ರಾಮದ ಸಾಣೀಕೆರೆ ಸಾಹಿತಿ ಹಾಗೂ ಗ್ರಂಥಪಾಲಕ ರಘುನಾಥ ಪತ್ರಿಕೆಗೆ ಮಾಹಿತಿ ನೀಡುತ್ತಾ 250 ವರ್ಷಗಳ ಹಿಂದೆ ಸಾಣೀಕೆರೆಗೆ ಬಂದು ನೆಲೆಸಿದ್ದಾಳೆ ಎಂಬ ಮಾಹಿತಿ ನೀಡುತ್ತಾರೆ.

ದೇವಿಯ ಪೂರ್ವ ಇತಿಹಾಸದ ಕುರಿತು ಜನರಿಂದ ಮಾಹಿತಿ ಸಂಗ್ರಹಿಸಿದ ರಘುನಾಥ್ ಅನೇಕ ಜನಪದ ಕತೆಗಳನ್ನು ಹೇಳುತ್ತಾರೆ. ದೈವೀಸ್ವರೂಪಿ ದೇವಿಯು ಹೊಳೆಯಲ್ಲಿ ತೇಲುತ್ತಾ ಎಲ್ಲಿದಂಲೋ ಬಂದು ಸಾಣೀಕೆರೆ ಪಕ್ಕದ ಗಂಜಿಗುAಟೆ ,ಗರಣಿ ಹಳ್ಳದ ದಡದಲ್ಲಿರುವ ಒಂದು ಪೊದೆಯಲ್ಲಿ ನೆಲೆಯೂರುತ್ತಾಳೆ. ದನಗಾಹಿ ಹುಡುಗರು ಹಳ್ಳದಲ್ಲಿ ನೀರು ಕುಡಿಸಲು ದನಗಳನ್ನು ಹೊಡೆದುಕೊಂಡು ಹೋದಾಗ ನಾನು ನಿಮ್ಮ ಜತೆ ಬರುತ್ತೇನೆ ಎಂಬ ವಿಚಿತ್ರ ದ್ವನಿಯೊಂದು ಕೇಳಿಸಿಕೊಂಡ ಹುಡುಗರು ಭಯಭೀತರಾಗಿ ಮನೆಯ ಹಿರಿಯರಿಗೆ ವಿಷಯ ತಿಳಿಸುತ್ತಾರೆ.
ಗಂಜಿ ಗುಂಟೆ ಗ್ರಾಮದ ಜಡಿಯಾರ ನಿಂಗಪ್ಪನ ಮಗನ ಕನಸಿನಲ್ಲಿ ಬಂದ ದೇವತೆ ನಿಮ್ಮ ಮನೆಗೆ ಬರುವುದಾಗಿ ಕೋರಿಕೊಳ್ಳುತ್ತಾಳೆ. ಅಂದಿನಿAದ ಗಂಜಿಗುAಟೆಯಲ್ಲಿದ್ದ ದೇವಿ ನಂತರದ ದಿನಗಳಲ್ಲಿ ಸಾಣೀಕೆರೆಯಲ್ಲಿ ಬಂದು ನೆಲೆಯೂರಿದಳು ಎಂಬ ಕತೆ ಕೇಳಿಬರುತ್ತದೆ. ಗಂಜಿಗುAಟಮ್ಮ ದೇವಿಯನ್ನು ಕರಿಯಮ್ಮ ದೇವಿ ಎಂಬ ಹೆಸರಿನಿಂದಲೂ ಕರೆಯುವುದು ವಾಡಿಕೆಯಾಗಿದೆ. ಇಂತಹ ದೇವತೆಗೆ ಮೂರು ವರ್ಷಕೊಮ್ಮೆ ಸಾಣೀಕೆರೆ ಗ್ರಾಮಸ್ಥರು ಸೇರಿದಂತೆ ಸುತ್ತ ಮುತ್ತಲ ಹಳ್ಳಿಗಳ ಜನರು ದೊಡ್ಡ ಜಾತ್ತಾ ಮಹೋತ್ಸವ ನಡೆಸುತ್ತಾರೆ. ಒಂದು ವಾರಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಬುಡಕಟ್ಟು ಸಮುದಾಯದ ಅನೇಕ ಆಚರಣೆಗಳನ್ನು ಇಲ್ಲಿ ಮುಂದುವರಿಸಲಾಗುತ್ತಿದೆ.
ಜಾತ್ರೆ ಪ್ರಾರಂಭಕ್ಕೂ ಮುನ್ನ ದೇವಿಯನ್ನು ಗಂಜಿಗುAಟೆ ಗರಣಿ ಹಳ್ಳಕ್ಕೆ ಕರೆದೊಯ್ದು ಹಳ್ಳದಲ್ಲಿ ಎರೆಡು ಚಿಲುಮೆ ತೋಡಿ ದೇವಿಗೆ ಗಂಗಾಸ್ಣಾನ, ಅಭಿಷೇಕ, ನಂತರ ಏಳು ಜನ ಈರಗಾರರು ಮತ್ತು ದೇವಿಯ ಪಟ್ಟದ ಪೂಜಾರಿ ಉಪವಾಸ ನಡೆಮುಡಿಯಲ್ಲಿ ಬಂದು ಮಧ್ಯರಾತ್ರಿಯಲ್ಲಿ ದೇವಿಯ ಅಗ್ನಿಕುಂಡದಲ್ಲಿ ನಡೆದು ಹೋಗುವುದು ರೋಮಾಂಚನವನ್ನುAಟು ಮಾಡುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಮೇ 22 ರಿಂದ ಶಿವಶರಣರ ಆರಾಧನೆ ಮತ್ತು ರುದ್ರಾಭಿಶೇಕದಿಂದ ಪ್ರಾರಂಭವಾಗಿ ಮೇ 30 ರಂದು ಕಂಕಣ ವಿಸರ್ಜನೆ ಮಾಡಿ ಜೂನ್ 2 ಮರಿಪರಿಷೆ ಇರುತ್ತದೆ ಮೇ 25ರಂದು ದೇವಿಯ ಹೊಳೆ ಪೂಜೆ, 28 ರಂದು ದೇವಿಯ ಸಿಡಿ ಉತ್ಸವ, 29 ರಂದು ಪೋತರಾಜರ ಉತ್ಸವ, ಹೀಗೆ ಒಂಬತ್ತು ದಿನಗಳ ವಿಶೇಷ ಪೂಜೆಯೊಂದಿಗೆ ಜಾತ್ರೋತ್ಸವ ನಡೆಯುತ್ತದೆ.

ಚಳ್ಳಕೆರೆ ಜನಧ್ವನಿ ವಾರ್ತೆ ಮಾ.9


ಶ್ರೀಗುರುಹಟ್ಟಿ ತಿಪ್ಪೇಶನ ಜಾತ್ರೆ ಪ್ರಾರಂಭವಾಗಿದ್ದು ಮಾ೧೦ ಮಧ್ಯಾಹ್ನ ೩ ಗಂಟೆಗೆ ಸರಿಯಾಗಿ ದೊಡ್ಡ ರಥೋತ್ಸವ ನಡೆಯಲಿದೆ, ರಾಜ್ಯದಮೂಲೆ ಮೂಲೆಯಿಂದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ರಥ ಎಳೆಯಲಿದ್ದಾರೆ.
ಜಾತ್ರೆಗೆ ಬರುವ ಭಕ್ತರಿಗೆ ಸಾರಿಗೆ, ಕುಡಿಯುವ ನೀರು, ತುರ್ತು ಚಿಕಿತ್ಸೆ ಸೇರಿದಂತೆ ಎಲ್ಲಾ ಮೂಲ ಭೂತ ಸೌಲಭ್ಯಗಳನ್ನು ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿಲಿದ್ದು ಕಾನೂನು ಸುವ್ಯವಸ್ಥೆಗೆ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ.

ಶ್ರೀಗುರು ತಿಪ್ಪೇರುದ್ರಸ್ವಾಮಿಯವರ ಕಾಯಕ ಶೇಷ್ಠತೆಯನ್ನು ಸಾರಿದ ನಾಯಕನಹಟ್ಟಿ ಪುಣ್ಯಕ್ಷೇತ್ರವು ಭಾವೈಕ್ಯತೆ ಸಂಗವಾಗಿ ಭಕ್ತಿ ಭಾವದ ಕೇಂದ್ರವಾಗಿದೆ. ಇಂಥಹ ಚೈತನ್ಯ ನೀಡುವ ಪವಿತ್ರ ತಾಣವೆ ‘‘ಹೊರಮಠ’’.
ನಾಯಕನಹಟ್ಟಿ ಪಟ್ಟಣದ ಪಶ್ಚಿಮ ದಿಕ್ಕಿಗಿರುವ ಹಾಗೂ ಊರ ಹೊರಗಿರುವ ಮಠಕ್ಕೆ ಹೊರಮಠವೆಂದು ಕರೆಯುವ ವಾಡಿಕೆಯಿದೆ. ಶ್ರೀಗುರು ತಿಪ್ಪೇರುದ್ರಸ್ವಾಮಿಗಳೇ ಕಟ್ಟಿಸಿದ ಚಿಕ್ಕಕೆರೆಗೆ ಹೊಂದಿಕೊAಡಿರುವAತೆ ಈ ಹೊರಮಠವಿದೆ. ಇಲ್ಲಿ ಶ್ರೀಗಳು ತಮ್ಮ ಅಂತಿಮ ಯಾತ್ರೆಯನ್ನು ಕೈಗೊಂಡ ಜೀವೈಕ್ಯ ಸ್ಥಳವಾಗಿದೆ. ಸಮಾಧಿಯ ಮೇಲೆ ನಿರ್ಮಿತವಾದ ದೇವಾಲಯದ ಮೇಲೆ ಗೋಲಾಕಾರದ ಇಂಡೋ–ಇಸ್ಲಾಮಿಕ್ ಶೈಲಿಯ ಗೋಳಗುಮ್ಮಟ, ಹಿಂದೂ ಮುಸಲ್ಮಾನರ ಭಾವೈಕೆತೆಯ ಸಂಕೇತವಾಗಿದೆ. ಈ ಗುಮ್ಮಟವನ್ನನು ೧೮ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ.
ಈ ಹೊರಮಠ ದೇವಾಲಯವನ್ನು ಕ್ರಿ.ಶ.೧೬೮೯ರಿಂದ ೧೮೨೧ರ ಮಧ್ಯದ ಅವಧಿಯಲ್ಲಿ ನಿರ್ಮಿಸಲಾಗಿದೆ ಎಂದು ಅಂದಾಜಿಸಲಾಗಿದೆ. ದೇವಾಲಯವನ್ನು ಚಿತ್ರದುರ್ಗವನ್ನು ಆಳಿದ ಧರ್ಮಾಭಿಮಾನಿ ಬಿಚ್ಚುಗತ್ತಿ ಭರಮಣ್ಣ ನಾಯಕನು ನಿರ್ಮಿಸಿದ ಎಂದು ಇತಿಹಾಸ ವಿದ್ವಾಂಸರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಹಾಗೇ ಇನ್ನು ಕೇಲ ಮೌಖಿಕ ಪರಂಪರೆಯ ಐತಿಹ್ಯಗಳ ಪ್ರಕಾರ ಹೈದರಾಲಿ ಈ ದೇವಾಲಯವನ್ನು ಜಿರ್ಣೋದ್ದಾರ ಮಾಡಿದನೆಂದು ತಿಳಿದು ಬರುತ್ತದೆ.
ಹೊರಮಠದ ವಿಶೇಷತೆ
ಹೊರಮಠದಲ್ಲಿ ಅನೇಕ ಪ್ರಕೃತಿ ವಿಸ್ಮಯವಾದ ಹಾಗೂ ಪ್ರಕೃತಿ ನಿಯಮಕ್ಕೆ ಸವಾಲಾಗುವ ಸಂಗತಿಗಳು ಕಂಡು ಬರುತ್ತವೆ. ಕೇಲವು ವರ್ಷಗಳ ಹಿಂದೆ ದೇವಾಲಯದ ಮುಂಭಾಗದಲ್ಲಿ ಸುಂದರವಾದ ಹೂದೋಟವಿತ್ತು. ಇಲ್ಲಿ ಎಲ್ಲಾ ಜಾತಿಯ ಹೂವಿನ ಗಿಡಗಳು,ಹಣ್ಣಿನ ಗಿಡಗಳು ಇದ್ದವು. ರುದ್ರಾಕ್ಷಿ, ಹತ್ತಿ, ಅಶ್ವತ್ತ, ಆಲ, ಬೇವು, ಬನ್ನಿ ವೃಕ್ಷಗಳು ದೇವಾಲಯದ ಆವರಣದಲ್ಲಿ ವನ ಮಹೋತ್ಸವವನ್ನು ನಿರ್ಮಿಸಿವೆ. ವಿಶೇಷವಾಗಿ ಒಂದೇ ತೆಂಗಿನ ಬುಡದಲ್ಲಿ ಐದು ತೆಂಗಿನ ಮರಗಳು ಬೆಳೆದದ್ದು, ಪಂಚಾಗಣಾಧೀಶ್ವರರನ್ನು ಕುರಿತು ಹೇಳುತ್ತದೆ ಎಂಬ ನಂಬಿಕೆಯ ಜೊತೆಗೆ ವಿಸ್ಮಯವನ್ನು ಉಂಟು ಮಾಡುತ್ತದೆ. ದೇವಾಯಲದ ಆವರಣದಲ್ಲಿ ಕಲ್ಲಿನಿಂದ ನಿರ್ಮಿಸಿದ ವಿಶಾಲವಾದ ಕಲ್ಯಾಣಿ ಇದೆ. ಇದರಲ್ಲಿ ನೈಸರ್ಗಿಕವಾಗಿ ನೀರು ಹರಿದು ಬರುತ್ತಿತ್ತು. ಇದೇ ನೀರನ್ನು ದೇವಾಲಯದ ನಿತ್ಯ ಪೂಜೆಗೆ ಬಳಸಲಾಗುತ್ತಿತ್ತು. ಈ ನೀರು ಬರೀ ನೀರಲ್ಲ ಅದು ಪನ್ನಿರು ಎಂಬುದು ಭಕ್ತರ ಬಲವಾದ ನಂಬಿಕೆಯಾಗಿತ್ತು. ಆದರೆ ಬಗಾಲದ ಹಿನ್ನೆಲೆಯಲ್ಲಿ ಇಂದು ಕಣ್ಮರೆಯಾಗಿದೆ.
ಬುಡಕಟ್ಟು ಆಚರಣೆಯ ನೆಲೆವೀಡು
ಹೊರಮಠ ದೇವಾಲಯದಲ್ಲಿ ನಡೆಯುವ ಎಲ್ಲಾ ಆಚರಣೆಗಳು ಬುಡಕಟ್ಟು ಸಂಸ್ಕೃತಿಯ ಹಿನ್ನೆಲೆಯನ್ನು ಹೊಂದಿವೆ. ನೆಲಮೂಲ ಪರಂಪರೆಯ ಪ್ರತೀಕದಂತೆ ಕಂಡು ಬರುತ್ತದೆ. ಈ ದೇವಾಲಯಕ್ಕೆ ಬರುವ ಭಕ್ತರು, ಅವರು ನಡೆಸುವ ಆಚರಣೆಗಳು ಸಂಪೂರ್ಣವಾಗಿ ಬುಡಕಟ್ಟು ಸಂಸ್ಕೃತಿಗಳ ಜೀವಂತಿಕೆ ಸಾಕ್ಷಿಯಾಗಿವೆ. ಗುಗ್ಗರಿಹಬ್ಬ, ಮೊಸರುಗಡಿಗೆ ಪೂಜೆ, ಪರುವು, ಸಸ್ಯಹಾರ ಮತ್ತು ಮಾಂಸಹಾರ ಎಂಬ ಬೇಧವಿಲ್ಲದೆ ಸಮಕಾಲೀನ ಆಹಾರ ಪದ್ಧತಿಯನ್ನು ಬಿಂಬಿಸುತ್ತದೆ.
ಸಾಧು ಸಂತರ ಮೆಚ್ಚಿನ ತಾಣ
ನಾಯಕನಹಟ್ಟಿ ಹೊರಮಠ ದೇವಾಲಯವು ಸಾಧುಸಂತರ ಮೆಚ್ಚನ ತಾಣವಾಗಿದೆ. ಇಲ್ಲಿ ನಡೆಯುವ ವಾರ್ಷಿಕ ರತೋತ್ಸವದ ಹಿಂದಿನ ದಿನದ ರಾತ್ರಿ ದೇವಾಲಯದ ಆವರಣದಲ್ಲಿ ದೇಶದ ನಾನಾ ಭಾಗಗಳಿಂದ ವಿವಿಧ ರೀತಿಯ ಸಾಧುಸಂತರು ಬಂದು ಸಂಗಮವಾಗುತ್ತಾರೆ. ವಿವಿಧ ಕಡೆಗಳಿಂದ ಬರುವ ಸಾಧುಗಳು ದೇಶದ ಆದ್ಯಾತ್ಮಿಕ ಚಿಂತನೆಯ ಸ್ಥಿತಿಗತಿಯನ್ನು ಕುರಿತು ಚರ್ಚೆ ನಡೆಸು್ತತಾರೆ. ಮದ್ಯಮಾಂಸ, ಭಂಗಿ ಸೇದುವ ಮೂಲಕ ಹಾಡು ಭಜನೆಗಳ ಮೂಲಕ ರಾತ್ರಿ ಪೂರ್ತಿ ಕಳೆಯುತ್ತಾರೆ. ಬೇಳಗಿನ ಜಾವ ಯಾರ ಕೈಗೂ ಸಿಗದಂತೆ ತಮ್ಮತಮ್ಮ ಸ್ವಸ್ಥಾನಗಳಿಗೆ ಮರಳುತ್ತಾರೆ. ಹಾಗೂ ಈ ಸಾಧುಗಳು ಯಾರ ಬಳಿಯು ಭಿಕ್ಷೆಯ್ನನು ಬೇಡದಿರುವುದು ವಿಶೇಷವಾಗಿದೆ.
ಜಿರ್ಣೋದ್ದಾರಗೊಂಡ ದೇವಾಲಯ

ದೇವಾಲಯವು ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಸೇರ್ಪಡೆಗೊಂಡ ನಂತರ ದೇವಾಯಲದಲ್ಲಿ ವಿನೂತವಾದ ಬದಲಾವಣೆಗಳು ಕಂಡು ಬಂದವು. ಕರ್ನಾಟಕ ರಾಜ್ಯದಲ್ಲಿ ‘ಎ’ ಗ್ರೇಡ್ ದೇವಾಲಯ ಎಂಬ ಮಾನ್ಯತೆ ಪಡೆದ ಈ ದೇವಾಲಯವು ವಾರ್ಷಿಕವಾಗಿ ಮೂರು ಕೋಟಿಗಳಿಗಿಂತ ಹೆಚ್ಚು ಆದಾಯ ತಂದು ಕೊಡುತ್ತವೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಹೊರಮಠವು ಹಲವು ರೀತಿಯಲ್ಲಿ ಬದಲಾಣೆಯನ್ನು ಹೊಂದಿದೆ.
ಹೊರಮಠದ ದೇವಾಲಯದ ಜೀರ್ಣೋದ್ದಾರ ಕಾರ್ಯವು ಸುಮಾರು ೩ಕೋಟಿ ರೂಗಳಲ್ಲಿ ನಡೆದಿದೆ. ಕಾಂಪೌAಡ್, ಸಾಲುಗೋಪುರ, ಕಲ್ಯಾಣಿ, ಸಿಸಿರಸ್ತೆ, ದೇವಾಲಯದ ಆವರಣದಲ್ಲಿ ಕಲ್ಲುಹಾಸಿಗೆ, ನೂತನವಾಗಿ ನಿರ್ಮಿಸದ ದ್ವಾರಬಾಗಿಲು, ಗೋಪುರದ ಮೇಲಿರುವ ಉಬ್ಬು ಶಿಲ್ಪಗಳು, ಕಲ್ಯಾಣಯಲ್ಲಿರುವ ಕಾಯಕಯೋಗಿಯ ಪ್ರತಿಮೆ, ದೇವಾಲಯಕ್ಕೆ ನೀರಿನ ಸಂಪರ್ಕ, ಮೂಲಭೂತ ಸೌಲಭ್ಯಗಳ ಪೂರೈಸುವಿಕೆ, ಹಾಗೂ ಯಾತ್ರಿ ನಿವಾಸ ಸೇರಿದಂತೆ ಹಲವು ಪ್ರಗತಿ ಪರ ಕಾರ್ಯಗಳು ನಡೆದು ದೇವಾಲಯ ಕಂಗೊಳಿಸುತ್ತಿದೆ.
ಇಂತಹ ಹಿನ್ನೆಲೆಯಿರುವ ದೇವಾಲಯದ ಆವರಣದಲ್ಲಿ ದೇವರ ದರ್ಶನ ಪಡೆದು ಒಮ್ಮೆ ಕುಳಿತರೆ ಮನಸ್ಸಿಗೆ ಸಾರ್ಥಕವಾದ ಭಾವ ಕಂಡುಬರುತ್ತದೆ. ಅದೇ ಈ ಪವಿತ್ರದ ಕ್ಷೇತ್ರದ ಮಹಿಮೆಯಾಗಿದೆ.

ಕಲ್ಲಿನ ಕೋಟೆ ಚಿತ್ರದುರ್ಗ ಜಿಲ್ಲೆಯ ಇತಿಹಾಸ

ಜನಧ್ವನಿವಾರ್ತೆ ಚಿತ್ರದುರ್ಗ ನ 1ಚಿತ್ರದುರ್ಗ
ಜಿಲ್ಲೆಯ ಬಗ್ಗೆ ಚಿತ್ರದುರ್ಗ ನಗರ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ಕೇಂದ್ರ ಸ್ಥಳದಿಂದ ವಾಯುವ್ಯ ದಿಕ್ಕಿನಲ್ಲಿ 200 ಕಿ.ಮೀ. ದೂರದಲ್ಲಿರುವ ಐತಿಹಾಸಿಕ ಮತ್ತು ರಾಜ್ಯದ 30 ಜಿಲ್ಲಾ ಕೇಂದ್ರ ಸ್ಥಳಗಳಲ್ಲಿ ಒಂದಾಗಿದೆ. ಚಿತ್ರದುರ್ಗ, ಮೊಳಕಾಲ್ಮೂರು, ಹೊಳಲ್ಕೆರೆ, ಹಿರಿಯೂರು, ಚಳ್ಳಕೆರೆ, ಹೊಸದುರ್ಗ ತಾಲ್ಲೂಕುಗಳನ್ನು ಒಳಗೊಂಡಿದೆ. ಕುತೂಹಲ ಮೂಡಿಸುವ ಸ್ಥಳ ಪುರಾಣಗಳು, ಶಿಲಾಯುಗದಷ್ಟು ಪುರಾತನವಾದ ಮನುಷ್ಯ ವಾಸಸ್ಥಳದ ನೆಲೆಗಳು, ಪ್ರಾಚೀನ, ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ ಪ್ರಾಶಸ್ತ್ಯದ ಸ್ಥಳಗಳಿಂದ ತುಂಬಿರುವ ಚಿತ್ರದುರ್ಗವು ಸಾವಿರಾರು ವರ್ಷಗಳ ನಾಗರಿಕತೆಗಳ ತವರು ಹಾಗೂ ಪ್ರಾಚೀನತೆ, ಆಧುನಿಕತೆಗಳ ಸಮ್ಮಿಲನ ಹೊಂದಿರುವ ಪ್ರದೇಶವಾಗಿದೆ. ಕ್ರಿ.ಶ.02ನೇ ಶತಮಾನದಲ್ಲಿ ಇದು ಮೌರ್ಯರ ಸಾಮಂತರಾಗಿದ್ದ ಶತವಾಹನರಿಗೆ ವಶವಾಯಿತು. ಆಗ ಬೌದ್ಧಧರ್ಮವು ಪ್ರಚಾರದಲ್ಲಿತ್ತು. ಆನಂತರ ಇದು ಬನವಾಸಿ ಕದಂಬರ ಆಳ್ವಿಕೆಗೆ ಸೇರಿತು. ಮುಂದೆ ಚಾಲುಕ್ಯರು, ಪಲ್ಲವರು, ರಾಷ್ಟ್ರಕೂಟರು, ಚೋಳರು, ಹೊಯ್ಸಳರು, ವಿಜಯನಗರದ ಅರಸರು, ಕಾಮಗೇತಿ ವಂಶದ ಪಾಳೆಯಗಾರರು, ಹೈದರ್ ಅಲಿ ಟಿಪ್ಪು ಸುಲ್ತಾನರು ಹಾಗೂ ಮೈಸೂರು ಅರಸರು ಮೊದಲಾದವರು ಆಳಿದ್ದಾರೆ. ಪಾಳೆಯಗಾರರ ಆಳ್ವಕೆಯ ಕಾಲ ಚಿತ್ರದುರ್ಗ ಇತಿಹಾಸ ಕಾಲದಲ್ಲಿ ಮಹತ್ವ ಪೂರ್ಣವಾಗದೆ. ಈ ಕಾಲದಲ್ಲಿ ಇಲ್ಲನ ಕೋಟೆ ಕೊತ್ತಲಗಳು ಬಲಗೊಂಡವು. ಗುಡಿಗೋಪುಗಳು, ಮಠಮಾನ್ಯಗಳು ಉದ್ದಾರವಾದವು. ಅದರಿಂದ ರಾಜಕೀಯ ಸ್ಥಾನಮಾವ ವೃದ್ಧಸಿತು. ಚಿತ್ರದುರ್ಗವು ಪಾಳೆಯಗಾರರ ರಾಜಧಾನಿಯಾಗೆ ಮೆರೆಯಿತು. ಪಾಳೆಯಗಾರರಲ್ಲಿ ಅತ್ಯಂತ ಪ್ರಭಾವೀ ಶಕ್ತಿಶಾಲಿ ಹಾಗೂ ಪ್ರಖ್ಯಾತ ಪಾಳೆಯಗಾರ ಎಂದರೆ ಮದಕರಿನಾಯಕ, ಹೈದರಾಲಿ ವಿರುದ್ಧ ಹೋರಾಡಿದ ಒನಕೆ ಓಬವ್ವ ಧೀರ ಮಹಿಳೆಯಾಗಿದ್ದಾಳೆ. ಜಾನಪದ ಸಾಹಿತ್ಯ ಮತ್ತು ಬುಡಕಟ್ಟು ಸಂಸ್ಕೃತಿಯ ಸಂಪ್ರದಾಯ, ಆಚರಣೆ, ನಂಬಿಕೆಗಳನ್ನು ಒಳಗೊಂಡ ಬಿಡಿ ಹಾಡುಗಳು, ಖಂಡಕಾವ್ಯ,ಮಹಾಕಾವ್ಯಗಳಿವೆ. ಗಾದ್ರಿ ಪಾಲನಾಯಕನ ಕಥನಕಾವ್ಯ, ಎತ್ತಪ್ಪ ಜುಂಜಪ್ಪನ ಮಹಾಕಾವ್ಯಗಳಿವೆ. ನಾಡೋಜ ಸಿರಿಯಜ್ಜಿ, ತೋಪಮ್ಮ, ಭೋವಿ ಜಯಮ್ಮ, ದಾನಮ್ಮ ಮೊದಲಾದ ಜನಪದ ಸಾಹಿತ್ಯದ ಸಿರಿಯದೆ. ಕೋಲಾಟ, ಭಜನೆ, ಸೋಬಾನೆ, ದೇವರಪದ, ಸುಗ್ಗಿಪದ ಮುಂತಾದ ಹಾಡುಗಳು, ಉರುಮೆ. ತಮಟೆ, ಕಹಳೆ, ಖಾಸಾ ಬೇಡರ ಪಡೆ, ಮರಗಾಲು ಕುಣಿತ, ಮಹಿಳಾ ತಮಟೆ, ಡೊಳ್ಳು ಕುಣಿತ, ಮೂಡಲಪಾಯ, ವೀರಗಾಸೆ ಮೊದಲಾದ ಜಾನಪದ ಪ್ರಕಾರಗಳು ಜಿಲ್ಲೆಯಲ್ಲಿವೆ.
ಮಗ್ಗಲೂರು ಚನ್ನಬಸವಣ್ಣ (18ನೇ ಶತ), ಲೊಡಗನೂರುನವರು ಎನ್ನಲಾದ ಚಂದ್ರಭೀಮಕವಿಯ ಮದಕರಿರಾಜೇಂದ್ರದಂಡಕ (18ನೇಶತ.), ಬೃಹನ್ಮಠದ ಮಹಾದೇವಕವಿ(19ನೇಶತ), ಆರ್. ನರಸಿಂಹಾಚಾರ್ಯ, ಮಾರ್ಟಿಮರ್ ವ್ಹೀಲರ್, ಡಾ|| ಎಂ.ಹೆಚ್.ಕೃಷ್ಣ, ಹುಲ್ಲೂರು ಶ್ರೀನಿವಾಸಜೋಯಿಸರು,ಎಂ.ಎಸ್.ಪುಟ್ಟಣ್ಣಯ್ಯ, ದುರ್ಗದ ಚಾರಿತ್ರಿಕ ಲಾವಣಿ ಬರೆದ ಲಾಳಸಿಂಗಿ ಸೋಮಣ್ಣ, ಚಿತ್ರದುರ್ಗ ಬಖೈರು ಖ್ಯಾತಿಯ ಭೀಮಾಜಿಪಂತ್, ಬಿ.ಎಲ್.ರೈಸ್, ಪ್ರೊ.ಶ್ರೀಶೈಲ ಆರಾಧ್ಯಾ, ಪ್ರೊ.ಲಕ್ಷ್ಮಣ್ ತೆಲಗಾವಿ, ಡಾ|| ಬಿ.ರಾಜಶೇಖರಪ್ಪ ಮೊದಲಾದವರು ಸಂಶೋಧನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಹಿರಿಯೂರಿನ ಮಾದವಾಲಂಕಾರ ಬರೆದ ಮಾಧವಾ, ವಿರೂಪಾಕ್ಷ ಶತಕ ಬರೆದ ರಂಗಕವಿ, ಬಬ್ಬೂರು ರಂಗ ಬರೆದ ಕೃತಿಗಳು, ಆಧುನಿಕ ಕನ್ನಡ ಸಾಹಿತ್ಯದ ಅಗ್ರಮಾನ್ಯ ಕವಿಗಳಾದ ಟಿ.ಎಸ್. ವೆಂಕಣ್ಣಯ್ಯ, ತ.ಸು.ಶಾಮರಾಯರು, ಕಾದಂಬರಿಕಾರ ತ.ರಾ.ಸುಬ್ಬರಾವ್, ಸೀತಾರಾಮಶಾಸ್ರೀ, ಬೆಳಗೆರೆ ಚಂದ್ರಶೇಖರ ಶಾಸ್ತ್ರೀಗಳು, ಬೆಳಗೆರೆ ಕೃಷ್ಣಶಾಸ್ತ್ರಿಗಳು, ಬೆಳಗೆರೆ ಜಾನಕಮ್ಮ ಮುಂತಾದವರು ಕಥೆ, ಕವನ, ವಿಮರ್ಶೆ, ಕಾದಂಬರಿ, ಸಂಶೋಧನೆ, ವೈಚಾರಿಕತೆ ಮೊದಲಾದ ಸಾಹಿತಿಗಳು, ಪ್ರಗತಿಪರ ಚಳುವಳಿಗಾರರು, ಚಿಂತಕರು, ಬರಹಗಾರರಿದ್ದಾರೆ. ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಶಿವಸಂಚಾರ ಕಲಾತಂಡ, ಮುರುಘಾ ಮಠದ ಜಮುರಾ ಸುತ್ತಾಟ, ಕುಮಾರೇಶ್ವರ ನಾಟಕ ಸಂಘ, ರಂಗಸೌರಭ ಕಲಾ ಸಂಘ, ನಾಟ್ಯರಂಜನಿ ನೃತ್ಯ ಕಲಾ ಕೇಂದ್ರ ಮೊದಲಾದ ಕಲಾತಂಡಗಳು ವಿಭಿನ್ನ ರಂಗಪ್ರಯೋಗ ಹಾಗೂ ನೃತ್ಯ ರೂಪಕಗಳ ಪ್ರದರ್ಶನಗಳಿಂದ ಸಾಂಸ್ಕೃತಿಕ ಕ್ಷೇತ್ರವನ್ನು ಶ್ರೀಮಂತಗೊಳಿಸಿವೆ.
ಐತಿಹಾಸಿಕ ಹಾಗೂ ಕೋಟೆಗಳ ನಗರ ಎಂದು ಪ್ರಖ್ಯಾತಿ ಪಡೆದ ಚಿತ್ರದುರ್ಗ ನಗರ ಮಧ್ಯ ಭಾಗದಲ್ಲಿರುವ ರಂಗಮಂದಿರವು ಆಧುನಿಕ ಸಾಹಿತಿ ತಳುಕಿನ ರಾಮಸ್ವಾಮಿ ಸುಬ್ಬರಾವ್ (ತ.ರಾ.ಸು) ಹೆಸರಿನಲ್ಲಿ ದಿನಾಂಕ 11-11-2006 ರಂದು ಕರ್ನಾಟಕ ರಾಜ್ಯದ ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಇವರಿಂದ ಲೋಕಾರ್ಪಣೆಗೊಂಡಿತು. ಇತ್ತೀಚೆಗೆ ನವೀಕರಣಗೊಂಡು ಅತ್ಯಾಧುನಿಕ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಹೊಂದಿದ್ದು, ವಿಶಾಲವಾದ ವೇದಿಕೆ, ಗ್ರೀನ್ ರೂಂ ಹಾಗೂ 534 ಆಸನಗಳ ವ್ಯವಸ್ಥೆಯಿರುತ್ತದೆ.
ಇತಿಹಾಸ
ಚಿತ್ರದುರ್ಗವು ಬೆಂಗಳೂರಿನಿಂದ 200 ಕಿ.ಮೀ ಅಂತರದಲ್ಲಿ ಮತ್ತು ಬೆಂಗಳೂರಿನ ವಾಯುವ್ಯ ದಿಕ್ಕಿನಲ್ಲಿರುತ್ತದೆ. ಚಿತ್ರದುರ್ಗವು ಡೆಕ್ಕನ್ ಪ್ರಸ್ತಭೂಮಿಯ ಹೃದಯ ಭಾಗದಲ್ಲಿದ್ದು ಈ ಜಿಲ್ಲೆಯ ಶೌರ್ಯ ಮತ್ತು ಪರಾಕ್ರಮಕ್ಕೆ ಹೆಸರಾಗಿದೆ. ಮೂಲತಃ ಈ ನಗರಕ್ಕೆ ಚಿತ್ರಕಲ್ಲು ದುರ್ಗ, ಚಿನ್ಮೂಲಾದ್ರಿ, ಚಿಂತಲಕಲದುರ್ಗ, ಚಿಂತಲಕಲ್ಲು ದುರ್ಗ ಟಿಪ್ಪುಸುಲ್ತಾನನ ಕಾಲದಲ್ಲಿ ಫರ್ರಶಾಬಾದ್ ಎಂದು ಬ್ರಿಟೀಷರ ಕಾಲದಲ್ಲಿ ಚಿಟಲುಡ್ರಗ್ ಎಂದು ಅಂತಿಮವಾಗಿ ಹಾಲಿ ಚಿತ್ರದುರ್ಗ ಎಂದು ಗುರುತಿಸಿಕೊಂಡಿರುತ್ತದೆ.
ಮೊಳಕಾಲ್ಮೂರು ತಾಲ್ಲೂಕು ಬ್ರಹ್ಮಗಿರಿ ಸಮೀಪ ದೊರತಿರುವ ಅಶೋಕನ ಕಾಲದ ಶಿಲಾಶಾಸನದ ಪ್ರಕಾರ ಚಿತ್ರದುರ್ಗವು ಮೌರ್ಯ ಸಂಸ್ಥಾನದ ಭಾಗವಾಗಿರುತ್ತದೆ. ಮೌರ್ಯ ಸಂಸ್ಥಾನವು ಪತನಗೊಂಡ ನಂತರ ರಾಷ್ಟ್ರಕೂಟರು, ಚಾಲುಕ್ಯರು ಮತ್ತು ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿತ್ತು. 14ನೇ ಶತಮಾನದಲ್ಲಿ ವಿಜಯನಗರ ಅರಸರ ಆಳ್ವಿಕೆಗೆಯಲ್ಲಿದ್ದೂ ಕ್ರಿ.ಶ.1565 ರಲ್ಲಿ ನಡೆದ ವಿಜಯನಗರದ (ತಾಳಿಕೋಟೆ ಯುದ್ಧದ) ಪತನದ ನಂತರ ಚಿತ್ರದುರ್ಗದ ಪಾಳೆಯಗಾರರು (ನಾಯಕರ) ಸ್ವತಂತ್ರ ಪಾಳೆಯಗಾರರೆನಿಸಿಕೊಂಡರು. ಕ್ರಿ.ಶ.1779 ರಲ್ಲಿ ಚಿತ್ರದುರ್ಗದ ಕೋಟೆಯನ್ನು ಹೈದರಾಲಿ ಮತ್ತು ಅವರ ಮಗ ಟಿಪ್ಪುಸುಲ್ತಾನ್ ಇವರು ಕೋಟೆಯನ್ನು ವಶಪಡಿಸಿಕೊಂಡು ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಂಡರು. ಬ್ರಿಟಿಷರಿಂದ ಟಿಪ್ಪುಸುಲ್ತಾನ್ ಸೋಲನ್ನು ಅನುಭವಿಸಿದ ನಂತರ ಕೋಟೆಯು ಯದು ವಂಶ ಸಂಸ್ಥಾನದ ಆಡಳಿತದ ವ್ಯಾಪ್ತಿಗೆ ಸೇರಲ್ಟಡುತ್ತದೆ.
ಚಿತ್ರದುರ್ಗದ ಕೋಟೆಯು ಊಹೆಗೂ ನಿಲುಕದ ಆಕಾರದ ಕಲ್ಲುಬಂಡೆಗಳು, ಕಣಿವೆಗಳು, ಏಳುಸುತ್ತಿನ ಕೋಟೆ, ಕೊತ್ತಲ, ಬುರುಜು ಬತೇರಿಗಳು ಅಪಾರ ದೇವ ಮಂದಿರಗಳು ಒಟ್ಟಾರೆ ಪ್ರಾಚೀನ ಕಾಲದಿಂದ-ಆಧುನಿಕ ಕಾಲದವರೆಗಿನ ಐತಿಹಾಸಿಕ ಸ್ಮಾರಕಗಳ ಕೇಂದ್ರ ಬಿಂದುವಾಗಿರುತ್ತದೆ. ತುಂಟ ರಾಕ್ಷಸರ ಆಟದ ಮೈದಾನದಲ್ಲಿರುವ ಕಲ್ಲು ಬಂಡೆಗಳು ಸುತ್ತಲು ಹರಡಿದಂತೆ ಇದ್ದೂ ಬಾನಾಂಗಳದ ನೆರಳು ಗೆರೆಯ ಚಿತ್ರಗಳಂತೆ ಗೋಚರಿಸುತ್ತವೆ. ಮಹಾಭಾರತ ಮಹಾಕಾವ್ಯದನ್ವಯ ಪಾಂಡವರು ಮತ್ತು ಅವರ ತಾಯಿ ಕುಂತಿಯೊಂದಿಗೆ ವನವಾಸದಲ್ಲಿರುವಾಗ ಚಿತ್ರದುರ್ಗದ ಮಾರ್ಗವಾಗಿ ಹೋಗುವಾಗ ನರಬಕ್ಷಕ ಹಿಡಂಬಸುರನೊಂದಿಗೆ ಮಲ್ಲಯುದ್ಧ ಮಾಡುತ್ತಾನೆ. ಈ ಮಲ್ಲಯುದ್ಧದಲ್ಲಿ ಬೃಹದಕಾರವಾದ ಕಲ್ಲುಬಂಡೆಗಳನ್ನು ಅಸ್ತ್ರಗಳಾಗಿ ಬಳಸುತ್ತಾರೆ. ಚಿತ್ರದುರ್ಗ ನಗರವು ಬೆಟ್ಟಗುಡ್ಡಗಳಿಂದ, ಕಲ್ಲುಬಂಡೆಗಳಿಂದ ಆವೃತವಾಗಿರುವುದು ಕಂಡುಬರುತ್ತದೆ. ಮಲ್ಲಯುದ್ಧದಲ್ಲಿ ಹಿಡಂಬಸುರನು ಸೋತ ನಂತರ ಈ ಪ್ರದೇಶದಲ್ಲಿ ಶಾಂತಿ ನೆಲೆಗೊಂಡಿತ್ತು.
ವಿಜಯನಗರ ಸಾಮ್ರಾಜ್ಯದ ಸೈನ್ಯದಲ್ಲಿ ಮುಖ್ಯಸ್ಥನಾಗಿ ಸೇವೆ ಸಲ್ಲಿಸುತ್ತಿದ್ದ ತಿಮ್ಮಣ್ಣ ನಾಯಕ ಇವರ ದಕ್ಷತೆ ಹಾಗೂ ಸಾಧನೆಯನ್ನು ಮೆಚ್ಚಿ ವಿಜಯನಗರ ದೊರೆಯು ಇವರನ್ನು ಚಿತ್ರದುರ್ಗದ ಗೌರ್ನರ್ ಆಗಿ ನೇಮಕ ಮಾಡುತ್ತಾರೆ. ಇದು ಚಿತ್ರದುರ್ಗ ಪಾಳೇಗಾರ ನಾಯಕರ ಆರಂಭಿಕ ಆಡಳಿತವಾಗಿರುತ್ತದೆ. ತಿಮ್ಮಣ್ಣನಾಯಕನ ಮಗ ಒಬಣ್ಣನಾಯಕ ಮದಕರಿ ನಾಯಕ ಎಂಬ ಹೆಸರಿನಲ್ಲಿ 1588 ಮತ್ತು ಇವರ ಮಗ ಕಸ್ತೂರಿ ರಂಗಪ್ಪ 1602 ರ ಅವಧಿಯಲ್ಲಿ ಶಾಂತಿಯುತವಾದ ಉತ್ತಮ ಆಳ್ವಿಕೆ ನಡೆಸುತ್ತಾರೆ. ಕಸ್ತೂರಿ ರಂಗಪ್ಪನಿಗೆ ಸಂತಾನವಿಲ್ಲದ ಕಾರಣ ದತ್ತು ಪಡೆದಿದ್ದ ಮಗನನ್ನು ಕಲವೇ ತಿಂಗಳುಗಳ ಅವಧಿಯಲ್ಲಿ ದತ್ತು ಪುತ್ರನನ್ನು ದಳವಾಯಿಗಳು ಕೊಲೆಗೈದಿರುತ್ತಾರೆ.ಎರಡನೆ ಮದಕರಿ ನಾಯಕನ ಸಹೋದರ ಚಿಕ್ಕಣ್ಣ ನಾಯಕ ಇವರು 1676 ರಲ್ಲಿ ಸಿಂಹಾಸನವನ್ನು ಅಲಂಕರಿಸುತ್ತಾನೆ. ನಂತರ ಅವನ ಸಹೋದರನಾದ ಮೂರನೇ ಮದಕರಿ ನಾಯಕ 1686 ರಲ್ಲಿ ಅಧಿಕಾರವನ್ನು ವಹಿಸಿಕೊಳ್ಳುತ್ತಾನೆ. ಮೂರನೇ ಮದಕರಿನಾಯಕನ ಆಳ್ವಿಕೆಯನ್ನು ದಳವಾಯಿಗಳು ಒಪ್ಪದೇ ಇರುವುದರಿಂದ ಅವನ ದೂರ ಸಂಬಂಧಿ ಭರಮಪ್ಪನಾಯಕನಿಗೆ 1689 ರಲ್ಲಿ ಅಧಿಕಾರ ಹಸ್ತಾಂತರವಾಗುತ್ತದೆ. ಈತನು ನಾಯಕರುಗಳ ಪೈಕಿ ಪ್ರಭಾವಿ ಹಾಗೂ ಉತ್ತಮ ಆಡಳಿತಗಾರನ್ನೆನಿಸಿಕೊಳ್ಳುತ್ತಾನೆ. ಇವರ ಆಡಳಿತದ ಅವಧಿಯು ಅಲ್ಪವಾದಿ ಆಗಿದ್ದದ್ದರಿಂದ ಇವರ ಯಾವುದೇ ಉತ್ತಮ ಆಡಳಿತ ನೀಡಲು ಅವಕಾಶವಾಗಿರುವುದಿಲ್ಲ. 1721 ರಲ್ಲಿ ನಾಲ್ಕನೆ ಹಿರಿ ಮದಕರಿನಾಯಕ, 1748 ರಲ್ಲಿ ಎರಡನೇ ಕಸ್ತೂರಿ ರಂಗಪ್ಪನಾಯಕ, 1758 ರಲ್ಲಿ ಐದನೇ ಮದಕರಿ ನಾಯಕರ ಆಳ್ವಿಕೆಯೂ ಅಷ್ಟಷ್ಟಿದ್ದು ಗಮನರ್ಹವಾಗಿರುವುದಿಲ್ಲ.
ಭೌಗೋಳಿಕ ವಿವರ :
ಕರ್ನಾಟಕ ರಾಜ್ಯದ ಜಿಲ್ಲೆಗಳಲ್ಲಿ ಚಿತ್ರದುರ್ಗ ಜಿಲ್ಲೆಯು ಒಂದಾಗಿದ್ದು, ಉತ್ತರದಲ್ಲಿ ಬಳ್ಳಾರಿ ಜಿಲ್ಲೆ, ಪೂರ್ವ ದಿಕ್ಕಿನಲ್ಲಿ ಅನಂತರಪು ಜಿಲ್ಲೆ, ಆಗ್ನೇಯ ದಿಕ್ಕಿನಲ್ಲಿ ತುಮಕೂರು ಜಿಲ್ಲೆ ಪಶ್ಚಿಮದಲ್ಲಿ ಶಿವಮೊಗ್ಗ ಜಿಲ್ಲೆ, ವಾಯುವ್ಯದಲ್ಲಿ ಧಾರವಾಡ ಜಿಲ್ಲೆ, ನೈರುತ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆಗಳಿಂದ ಸುತ್ತುವರಿಯಲ್ಪಟ್ಟಿರುತ್ತದೆ. ಮೂಲತಃ ಚಿತ್ರದುರ್ಗ ಜಿಲ್ಲೆಯು 9 ತಾಲ್ಲೂಕು (ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ, ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮೂರು, ದಾವಣಗೆರೆ, ಜಗಳೂರು ಮತ್ತು ಹರಿಹರ) ಒಳಗೊಂಡಿದ್ದು, ದಿ:15.08.1997 ರಂದು ಹೊಸದಾಗಿ ದಾವಣಗೆರೆ ಜಿಲ್ಲೆ ರಚನೆಯಾದ ಕಾರಣ ಈ ಜಿಲ್ಲೆಯ ಮೂರು ತಾಲ್ಲೂಕುಗಳು (ದಾವಣಗೆರೆ, ಜಗಳೂರು, ಹರಿಹರ) ದಾವಣಗೆರೆ ಜಿಲ್ಲೆಗೆ ಸೇರ್ಪಡೆಯಾಗಿ ಅಂತಿಮವಾಗಿ ಹಾಲಿ ಚಿತ್ರದುರ್ಗ ಜಿಲ್ಲೆಯಲ್ಲಿ 6 ತಾಲ್ಲೂಕುಗಳು ಮಾತ್ರ ಉಳಿದಿರುತ್ತವೆ. ಈ ಜಿಲ್ಲೆಯಲ್ಲಿ ಖನಿಜ ಸಂಪತ್ತು ಹೇರಳವಾಗಿರುತ್ತದೆ. (ಬಂಗಾರ, ತಾಮ್ರ, ಮ್ಯಾಂಗನೀಸ್, ಕಬ್ಬಿಣದ ಅದಿರು, ಗ್ರಾನೈಟ್)
ಪ್ರವಾಸೋದ್ಯಮ
ಚಿತ್ರದುರ್ಗ ಜಿಲ್ಲೆಯು ಜಗತ್ತಿಗೆ ಪರಿಚಯವಾಗಿರುವುದು ಸಾಮಾನ್ಯವಾಗಿ ಇಲ್ಲಿಯ ಸ್ಮಾರಕಗಳಿಂದ ಎಂಬುದು ಸರ್ವವಿಧಿತ. ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ವಿವಿಧ ಕಾಲಘಟ್ಟದಲ್ಲಿ ನಿರ್ಮಿಸಲಾದ ನೂರಾರು ಸ್ಮಾರಕಗಳು ಜಿಲ್ಲೆಯಾದ್ಯಂತ ಇವೆ. ಇವು ಈ ಭಾಗವನ್ನಾಳಿದ ವಿವಿಧ ಮನೆತನಗಳ ಪ್ರತಿಬಿಂಬವಾಗಿವೆಯಲ್ಲದೆ, ಪ್ರಮುಖ ಪ್ರವಾಸಿ ತಾಣಗಳಾಗಿವೆ. ಕರ್ನಾಟಕದ ಮಧ್ಯಭಾಗದಲ್ಲಿರುವ ಚಿತ್ರದುರ್ಗ ಜಿಲ್ಲೆಯನ್ನು ಕರ್ನಾಟಕವನ್ನಾಳಿದ ಬಹುತೇಕ ಮನೆತನಗಳು ಈ ಭಾಗದಲ್ಲಿ ಆಳ್ವಿಕೆ ನಡೆಸಿವೆ.ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಮೌರ್ಯ ಚಕ್ರವರ್ತಿ ಅಶೋಕನ ಆಳ್ವಿಕೆಗೆ ಈ ಜಿಲ್ಲೆಯ ಉತ್ತರಭಾಗ ಒಳಪಟ್ಟಿದ್ದರೆ, ಕ್ರಿಸ್ತಶಕದ ನಂತರದಲ್ಲಿ ಕರ್ನಾಟಕವನ್ನು ಆಳಿದ ಶಾತವಾಹನರು, ಕದಂಬರು, ಬಾದಾಮಿಯ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು, ಹೊಯ್ಸಳರು, ವಿಜಯನಗರದ ಅರಸರು, ಚಿತ್ರದುರ್ಗ ಪಾಳೇಗಾರರು ಮುಂತಾದ ಎಲ್ಲಾ ಪ್ರಮುಖ ರಾಜವಂಶಗಳ ಅಧೀನ ಅರಸರ ಸಾಮ್ರಾಜ್ಯಗಳ ಭಾಗವಾಗಿ ಸಾಗಿ ಬಂದ ಸುದೀರ್ಘ ಇತಿಹಾಸ ಈ ಜಿಲ್ಲೆಯದು.
ಇವರ ಆಳ್ವಿಕೆಯ ಸಂದರ್ಭದಲ್ಲಿ ನಿರ್ಮಿಸಿದ ಇಲ್ಲಿಯ ಸ್ಮಾರಕಗಳು ಅಂದಿನ ವೈಭವದ ಬದುಕಿಗೆ ಹಿಡಿದ ಕನ್ನಡಿಗಳಂತಿವೆ. ಅಲ್ಲದೆ ಈ ಪರಿಸರದ ಬದುಕು, ಆಡಳಿತದ ವಿಚಾರ, ಸಾಂಸ್ಕೃತಿಕ ವಿಚಾರ, ಆಳ್ವಿಕೆಯ ಸಾಮರಸ್ಯ ಜನ ಸಾಮಾನ್ಯರ ಬಗ್ಗೆ ರಾಜನಿಗಿದ್ದ ಕಾಳಜಿ, ರಾಜನ ಬಗ್ಗೆ ಜನಸಾಮಾನ್ಯರಿಗಿದ್ದ ಗೌರವ ಮುಂತಾದ ವಿಚಾರಗಳ ಬಗ್ಗೆ ಬೆಳಕು ಚೆಲ್ಲುತ್ತವೆ. ಬಹು ಮುಖ್ಯವಾಗಿ ಸ್ಮಾರಕಗಳು ಕಾಲಘಟ್ಟದಲ್ಲಿ ಆದ ವಾಸ್ತುರಚನೆ ಮತ್ತು ಬೆಳವಣಿಗೆಯನ್ನು ಪರಿಚಯಿಸುವುದರೊಂದಿಗೆ ಸ್ಥಳೀಯ ಸಂಪನ್ಮೂಲಗಳ ಸಧ್ಬಳಕೆಯ ಯಜಮಾನಿಕೆಯನ್ನು ಸಂಕೇತಿಸುತ್ತವೆ.
ವಿಶೇಷವಾಗಿ ವಿಜಯನಗರ ಸಾಮ್ರಾಜ್ಯದ ನಂತರ ಚಿತ್ರದುರ್ಗವನ್ನು ಒಂದು ಕೇಂದ್ರನ್ನಾಗಿ ಮಾಡಿಕೊಂದು ಕ್ರಿ.ಶ. 16 ನೇ ಶತಮಾನದ ಮಧ್ಯಕಾಲದಿಂದ ಕ್ರಿ.ಶ. 18 ನೇ ಶತಮಾನದ ುತ್ತ ಉತ್ತರಾರ್ಧವರೆಗೆ ಆಳ್ವಿಕೆ ನಡೆಸಿದವರೆಂದರೆ ಚಿತ್ರದುರ್ಗದ ಪಾಳೇಯಗಾರರು. ಇವರು ಚಿತ್ರದುರ್ಗದ ನಾಯಕರೆಂದೇ ಕರ್ನಾಟಕದ ಇತಿಹಾಸದಲ್ಲಿ ಪ್ರಸಿಧ್ದಿ ಪಡೆದಿದ್ದಾರೆ.. ಈ ಮನೆತನದಲ್ಲಿ 14 ಜನ ಪಾಳೆಯಗಾರರು ಸುಮಾರು 211 ವರ್ಷಗಳ ಕಾಲ ಆಳ್ವಿಕೆ ನಡೆಸಿದರಲ್ಲದೆ, ವಿಜಯನಗರದ ಅರಸರು ಹಾಕಿಕೊಟ್ಟ ಮಾರ್ಗದಲ್ಲಿಯೇ ಮುನ್ನಡೆದು ಅವರ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದುವರೆಸಿದರೆಂದು ಹೇಳಬಹುದು. ಇವರು ಸ್ಥಳೀಯ ಜನಪದೀಯ ಸಂಸ್ಕೃತಿಗೂ ಪ್ರೋತ್ಸಾಹ ನೀಡುವುದರ ಮೂಲಕ ಶಿಷ್ಟ ಮತ್ತು ದೇಶೀಯ ಸಂಸ್ಕೃತಿಗಳ ಸಂಮ್ಮೇಳನಕ್ಕೆ ಅವಕಾಶ ಕಲ್ಪಿಸಿದರು. ಜಿಲ್ಲೆಯ ಸಾಂಸ್ಕೃತಿಕ ಇತಿಹಾಸದಲ್ಲಿ ವೈವಿಧ್ಯತೆಯನ್ನು ಕಾಪಾಡಿಕೊಂಡು ಬರುತ್ತಾ ಕರ್ನಾಟಕದ ಪರಂಪರೆಯನ್ನು ಎತ್ತಿ ಹಿಡಿದರಲ್ಲದೆ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನ ಕಲ್ಪಿಸಿಕೊಂಡರು. ಇವರು ವಾಲ್ಮೀಕಿ ಮತಸ್ಥರೂ, ಕಾಮಗೇತಿ ವಂಶಜರೂ ಆಗಿದ್ದು, ‘ಕಸ್ತೂರಿ’ ಎಂಬ ಅಭಿದಾನವನ್ನು ‘ಶ್ರೀಮನ್ಮಹಾನಾಯಕಾಚಾರ್ಯ’ ಎಂಬ ಬಿರುದನ್ನು ಧರಿಸಿಕೊಂಡು ಇತಿಹಾಸದಲ್ಲಿ ಮದಕರಿನಾಯಕರೆಂದೇ ಪ್ರಸಿಧ್ದರಾಗಿದ್ದಾರೆ. ಇವರ ಕಾಲದಲ್ಲಿ ಅನೇಕ ಪ್ರಜಾಹಿತ ಕಾರ್ಯಗಳು ನಡೆದವು. ದೇವಾಲಯಗಳು, ಅಗ್ರಹಾರಗಳು, ಕೆರೆಗಳು, ಮಠಗಳು, ಕೋಟೆ-ಕೊತ್ತಲಗಳು ಇವರ ಕಾಲದಲ್ಲಿ ನಿರ್ಮಾಣಗೊಂಡವು. ಆದ್ದರಿಂದಲೇ ಇವರ ಆಳ್ವಿಕೆಯ ಕಾಲವನ್ನು ಒಂದು ವರ್ಣರಂಜಿತ ಅಧ್ಯಾಯವೆಂದು ಕರೆಯಲಾಗುತ್ತಿದೆ.
ಅಂಕಿ ಅಂಶಜಿಲ್ಲೆಯ ಸಂಕ್ಷಿಪ್ತ ನೋಟ
ವಿವರಣೆ ವಿವರಗಳು
ತಾಲ್ಲೂಕುಗಳು

6

ಉಪವಿಭಾಗ

1

ಹೋಬಳಿಗಳು

22

ಗ್ರಾಮ ಪಂಚಾಯಿತಿಗಳು

189

ಹಳ್ಳಿಗಳು

1063

ಆಡಳಿತಾತ್ಮಕ ವ್ಯವಸ್ಥೆ

ವಿವರಣೆ ವಿವರಗಳು
ನಗರ ಸ್ಥಳೀಯ ಸಂಸ್ಥೆಗಳು

7

ನಗರನಭೆ/ಪುರಸಭೆ/ಪ.ಪಂ

3/1/3

ವಾಸವಿಲ್ಲದ ಹಳ್ಳಿಗಳು

113

ಪೊಲೀಸ್ ಸ್ಟೇಷನ್

24

ವಾಸವಿರುವ ಹಳ್ಳಿಗಳು

946

ಭೌಗುಳೀಕ ವಿಸ್ತೀರ್ಣ (in Sq.Km)

ತಾಲ್ಲೂಕು ಗ್ರಾಮಾಂತರ ಪ್ರದೇಶ ನಗರ ಪ್ರದೇಶ ಒಟ್ಟು
ಮೊಳಕಾಲ್ಮೂರು

695.94

43.06

739

ಚಳ್ಳಕೆರೆ

2043.29

30.71

2074

ಚಿತ್ರದುರ್ಗ

1352.38

30.62

1383

ಹೊಳಲ್ಕರೆ

1088.86

10.17

1099

ಹೊಸದುರ್ಗ

1432.74

5.26

1438

ಹಿರಿಯೂರು

1682.78

20.22

1703

ಒಟ್ಟು

8295.99

140.01

8436

You cannot copy content of this page