ಪ್ರಭಾಕರ ಮ್ಯಾಸನಾಯಕ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯ ಅಂತರಾಳದ ಮಾತು

by | 27/02/23 | ವೈರಲ್

ಆತ್ಮೀಯರೇ..

ಕೊನೆಗಳಿಗೆ ತನಕ ಹೋರಾಟ ಮಾಡಿದ್ದರ ಫಲವಾಗಿ ಅಭಿಮನ್ಯುವಿಗೆ ಶೂರ ಎಂಬ ಬಿರುದು ಬಂತು ಎಂದು ಕೇಳಿದ್ದೇವೆ. ಅಭಿಮನ್ಯು ನನಗೆ ಪ್ರೇರಣೆ. ಅದೇ ರೀತಿ ಮಾಡಿದಷ್ಟು ನೀಡುಭಿಕ್ಷೆಯ ಶ್ರೀಕ್ಷೇತ್ರ ಇರುವುದು ಕೂಡ ಮೊಳಕಾಲ್ಮೂರು ಕ್ಷೇತ್ರದಲ್ಲಿ. ಇಲ್ಲಿ ಕಳೆದ 10 ವರ್ಷಗಳಿಂದ ನಿರಂತರವಾಗಿ ಸೇವಾಕಾರ್ಯ ಕೈಗೊಂಡಿದ್ದೇನೆ. ನನ್ನ ಪರಿಶ್ರಮಕ್ಕೆ ಭಗವಂತ ಕೈ ಹಿಡಿದು ನಡೆಸುತ್ತಾನೆ ಎಂಬ ಅಚಲ ನಂಬಿಕೆ ನನ್ನದು. ಈಗಲೂ ಕ್ಷೇತ್ರದ ಜನರೊಡನೆ ಇದ್ದೇನೆ, ಮುಂದೆಯೂ ಇರುತ್ತೇನೆ.ನನ್ನ ನೋಡಿ ನಗುವವರು ಆಡಿಕೊಳ್ಳುವವರು, ಕಿಚಾಯಿಸುವವರು ಹಾಗೂ ನನಗೆ ಮಾಡುತ್ತಿರುವ ಅಪಮಾನ ಅವಮಾನಗಳು ಎಲ್ಲವೂ ನನಗೆ ಪ್ರೇರಣೆಯಾಗಿದೆ.
ಇವೆಲ್ಲವೂ ನನ್ನನ್ನು ಮತ್ತಷ್ಟು ಸದೃಢನನ್ನಾಗಿಸಿದೆ. ನನಗೆ ಅಪಮಾನ ಅವಮಾನ ಮಾಡುತ್ತಿರುವ ಎಲ್ಲರನ್ನು ಬಸವಣ್ಣನವರ ಹೇಳಿರುವ ವಚನದಂತೆ ಜರಿದವರೆನ್ನ ಜನ್ಮ ಬಂಧುಗಳೆಂಬಂತೆ ಅತ್ಯಂತ ಸ್ನೇಹಭಾವದಿಂದ ಸ್ವೀಕರಿಸಿದ್ದೇನೆ.
ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರು ಹೇಳಿರುವಂತೆ *ಕನಸಿನ ಗುರಿ ಕೇಳಿ ಜನ ಇವನೊಬ್ಬ ಹುಚ್ಚ ಎನ್ನಬೇಕು ಗುರಿ ತಲುಪಿದ ಮೇಲೆ ನೋಡಿ ನಗಾಡಿರುವವರು ಹುಚ್ಚರಾಗಬೇಕು* ಇವು ನನಗೆ ಆದರ್ಶ ನುಡಿಗಳು ಕ್ಷೇತ್ರದಲ್ಲಿ ನನ್ನ ಗುರಿ ತಲುಪುತ್ತೇನೆ. ನನ್ನ ಮಾತೃಸಮಾನ ಪಕ್ಷ ಈ ಬಾರಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ವಿಶ್ವಾಸವಿದೆ. ಮತದಾರ ದೇವರುಗಳ ಆಶೀರ್ವಾದದಿಂದ ಶಾಸಕನಾಗುತ್ತೇನೆ ಎಂಬ ಅಧಮ್ಯ ವಿಶ್ವಾಸ ನನ್ನದು. ಇದಕ್ಕೆ ಕ್ಷೇತ್ರದ ಜನರ ಸಹಕಾರ ಕೋರುತ್ತೇನೆ. ಮಹಾತ್ಮ ಗಾಂಧೀಜಿ ಅವರು ಉಪ್ಪಿನ ಸತ್ಯಾಗ್ರಹ ಆರಂಭ ಮಾಡಿದಾಗ ಹಿಂದೆ ಬಂದವರು ಕೇವಲ ಮೂರು ಜನ ಮಾತ್ರ ಹಾಗೆ ಶಿವಾಜಿ ಮಹಾರಾಜರು ಸೈನ್ಯ ಕಟ್ಟಲು ಹೊರಟಾಗ ಸಿಕ್ಕಿದ್ದು ಹಸು ಮೇಯಿಸುವ ನಾಲ್ಕಾರು ಹುಡುಗರು ಮಾತ್ರ. ಇವರ್ಯಾರು ಎದೆಗುಂದದೆ ಸೈನ್ಯ ಕಟ್ಟಿ ಇಡೀ ಹಿಂದೂ ಸಮಾಜಕ್ಕೆ ಪ್ರೇರಣೆಯಾಗಿದ್ದಾರೆ. ಹಾಗೆ ನಾನು ಕೂಡ ಶುಭೋದಯ ಕಾರ್ಯಕ್ರಮ ಮುಖೇನ ಕ್ಷೇತ್ರದಾದ್ಯಂತ ಸಂಚರಿಸಿ ಜನರ ಮನಸ್ಸನ್ನು ಗೆಲ್ಲುತ್ತೇನೆ. *ನನ್ನ ತಾಯಿ ನನಗೆ ಕಲಿಸಿಕೊಟ್ಟ ಸಂಸ್ಕಾರ*
ಯಾರಿಗೂ ನೋವುಂಟು ಮಾಡಬೇಡ ಯಾರಿಗೂ ಕೆಡಕು ಬಯಸಬೇಡ ಎಂದು ನನ್ನ ತಾಯಿ ಅನಕ್ಷರಸ್ಥೆ ಆದರೂ ಮೇಲಿನಂತೆ ಸದಾ ಹೇಳುತ್ತಿದ್ದರು. ಅಣ್ಣ ಶ್ರೀರಾಮುಲು ಅವರ ಬಗ್ಗೆ ಆವೇಶದಲ್ಲಿ ಭಾವನಾತ್ಮಕವಾಗಿ ಮಾತನಾಡಿರುವ ಬಗ್ಗೆ ಇತ್ತೀಚೆಗೆ ಸ್ನೇಹಿತನೋರ್ವ ಒಂದು ಆಡಿಯೋ ಒಂದು ವೈರಲ್ ಮಾಡಿದ್ದರು. ಅದು ನನ್ನನ್ನು ಮಾನಸಿಕವಾಗಿ ಬಹಳ ನೋಯಿಸಿದೆ. ಇದು ಉದ್ದೇಶಪೂರ್ವಕವಾಗಿ ಮಾತನಾಡಿದ್ದಲ್ಲ. ಯಾರು ಈ ಬಗ್ಗೆ ಅನ್ಯತಾಭಾವಿಸಬಾರದು ಈ ಬಗ್ಗೆ ಅವರಲ್ಲಿ ಹಾಗು ಕಾರ್ಯಕರ್ತರಲ್ಲಿ ಕ್ಷಮೆ ಕೇಳಿದ್ದೇನೆ ಪಕ್ಷದಲ್ಲಿರುವ ಎಲ್ಲರೂ ಅಣ್ಣ ತಮ್ಮಂದಿರು, ಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿಯೋಣ ಪಕ್ಷ ಗೆಲ್ಲಿಸೋಣ ಎಂದು ಆಶಿಸುತ್ತಾ ನಿಮ್ಮೆಲ್ಲರ ಸಹಕಾರದ ನಿರೀಕ್ಷೆಯಲ್ಲಿ

ಇಂತಿ ನಿಮ್ಮ ಪ್ರೀತಿಯ
ಪ್ರಭಾಕರ ಮ್ಯಾಸನಾಯಕ
ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *