ಚಳ್ಳಕೆರೆ ನ.19. ಪ್ರಧಾನಿ ದಿ.ಇಂದಿರಾ ಗಾಂಧಿ ಅವರು 20 ಅಂಶದ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಬಡವರು, ಶೋಷಿತರು ಹಾಗೂ ಧಮನಿತರ ಕೈ ಬಲಪಡಿಸಿದರು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಶಾಸಕರ ಭವದಲ್ಲಿ ಚಳ್ಳಕೆರೆ ಹಾಗೂ ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಸಮಿತಿವತಿಯಿಂದ ಆಯೋಜಿಸಿದ್ದ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿಯವರ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಜಾರಿಗೆ ತರುವ ಮೂಲಕ ಭೂಮಿ ಇಲ್ಲದವರಿಗೆ ಭೂಮಿ ಕೊಡಿಸಿದರು. ಮಹಿಳೆಯರ ಸಬಲೀಕರಣಕ್ಕಾಗಿ ವಿಧವಾ ಮಹಿಳೆಯರಿಗೆ ಮಾಶಾಸನ ಸೇರಿದಂತೆ ಜನ ಸಾಮಾನ್ಯರ ಕಲ್ಯಾಣ ಕಾರ್ಯಕ್ರಮ , ಬೀಕರ ಬರಗಾಲದಲ್ಲಿ ಕೆಂಪು ಜೋಳ ,ವಿತರಣೆ ಮಾಡುವ ಮೂಲಕ ಹಸಿವನ್ನು ನೀಗಿಸಿದ್ದರು.
ಅವರ ಕಲ್ಯಾಣ ಕಾರ್ಯಕ್ರಮಗಳು ಇಂದಿಗೂ ಅನುಷ್ಠಾನದಲ್ಲಿವೆ. ಜಾತ್ಯಾತೀತ ನಿಲುವು ಅವರಾದ್ದಾಗಿತ್ತು. ಉಕ್ಕಿನ ಮಹಿಳೆ ಎಂದು ಗುರುತಿಸಿಕೊಂಡರು ಎಂದು ಸ್ಮರಿಸಿದರು.
ಮಾಜಿ ಪುರಸಭೆ ಸದಸ್ಯ ಎಚ್,ಎಸ್. ಸೈಯಾದ್ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಪ್ಪ, ಶಶಿಧರ್,ನಗರಸಭೆ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

0 Comments