ಚಿತ್ರದುರ್ಗ ಅ.21:
ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 1053 ಕಂದಾಯ ಗ್ರಾಮಗಳಿದ್ದು, ಈ ಪೈಕಿ 514 ಗ್ರಾಮಗಳಲ್ಲಿ ಸರ್ಕಾರದ ವತಿಯಿಂದ ಖಾಸಗಿ ಜಮೀನುಗಳಲ್ಲಿ ಬಹುಮಾಲೀಕತ್ವ ಇರುವ ಪಹಣಿಗಳಲ್ಲಿ ಪೋಡಿಮುಕ್ತ ಅಭಿಯಾನದ ಮೂಲಕ ಉಚಿತವಾಗಿ ಪೋಡಿ ಕೆಲಸ ನಿರ್ವಹಿಸಲಾಗಿರುತ್ತದೆ.
ಪೋಡಿಮುಕ್ತ ಅಭಿಯಾನಕ್ಕೆ ಬಾಕಿ ಉಳಿದಿರುವ 539 ಗ್ರಾಮಗಳಲ್ಲಿ ಬಹುಮಾಲೀಕತ್ವ ಹೊಂದಿರುವ ಪಹಣಿಗಳಲ್ಲಿ ಪೋಡಿಮುಕ್ತ ಅಭಿಯಾನದ ಮೂಲಕ ಉಚಿತವಾಗಿ ಅಳತೆ ಮಾಡಿ ಪೋಡಿ ಮಾಡಲು ಸರ್ಕಾರವು ಚಿತ್ರದುರ್ಗ ಜಿಲ್ಲೆಯಲ್ಲಿ ಅಕ್ಟೋಬರ್‍ನಿಂದ ಪೋಡಿಮುಕ್ತ ಅಭಿಯಾನ ಪ್ರಾರಂಭಿಸಿದೆ.
ಈ ಯೋಜನೆಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಂಡು ನಿಮ್ಮ ಜಮೀನಿನ ಹತ್ತಿರ ಅಳತೆ ಕೆಲಸಕ್ಕೆ ಹಾಜರಾಗುವ ಭೂಮಾಪಕರಿಗೆ ಸಹಕಾರ ನೀಡಿ ಪೋಡಿಮುಕ್ತ ಅಭಿಯಾನದಲ್ಲಿ ಉಚಿತ ಪೋಡಿ ಮಾಡಿಸಿಕೊಂಡು ಸರ್ಕಾರದ ಯೋಜನೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದೀವ್ಯ ಪ್ರಭು ತಿಳಿಸಿದ್ದಾರೆ.
ಪೋಡಿಮುಕ್ತ ಅಭಿಯಾನ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments