ಜಗಲೂರು ಜನಧ್ವನಿ ವಾರ್ತೆ ಅ.28.
ಮನೆಯ ಖಾತೆಗೆ ಇ-ಸ್ವತ್ತು ಮಾಡಿಸಿಕೊಡುವ ವಿಚಾರವಾಗಿ ವ್ಯಕ್ತಿಯೊಬ್ಬನಿಂದ 10 ಸಾವಿರ ಹಣದ ಬೇಡಿಕೆಯಿದ್ದ ಜಗಳೂರು ತಾಲೂಕಿನ ಕೆಚ್ಚೇನಹಳ್ಳಿ ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿ ಎಸ್.ಎಂ ನಂದಿಲಿಂಗೇಶ ಸಾರಂಗಮಠ ಮತ್ತು ಡಾಟಾ ಎಂಟ್ರಿ ಆಪರೇಟರ್ ಅಜ್ಜಯ್ಯ ಶುಕ್ರವಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಕೆಳಗೋಟೆ ಗ್ರಾಮದ ಬಸವನಗೌಡ ದೂರಿನನ್ವಯ ಲೋಕಯುಕ್ತರು ಬಲೆ ಬೀಸಿದ್ದರು. ಬಸವನಗೌಡ ಎಂಬುವರಿಂದ ಇ-ಸ್ವತ್ತು ಮಾಡಿಕೊಡಲು ಕೇಳಿದ್ದ ಹತ್ತು ಸಾವಿರ ರೂ ಹಣ ಪಡೆಯುವಾಗ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಪಿಡಿಒ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಎಸ್‌ಪಿ ಎಂ.ಎಸ್.ಕೌಲಾಪೂರೆ ಮರ‍್ಗ ರ‍್ಶನದಲ್ಲಿ ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಪ್ರಭು ಬಿ.ಸುರಿನ್, ರಾಷ್ಟ್ರಪತಿ ಮತ್ತು ಮಧುಸೂದನ್ ಮೂರು ಜನರ ತಂಡ ತಾಪಂ ಕಚೇರಿಯ ಮೇಲೆ ದಾಳಿ ಮಾಡಿದೆ. ಆಗ ಕಚೇರಿಯ ಒಳಗೆ ಬಸವನಗೌಡ ಅವರಿಂದ ಲಂಚ ಪಡೆಯುತ್ತಿರುವಾಗ ನೇರವಾಗಿ ಸಿಕ್ಕಿಬಿದ್ದಿದ್ದಾರೆ.

ನಾನು ಇ-ಸ್ವತ್ತು ಮಾಡಿಕೊಡಲು ಬಸವನಗೌಡರಿಂದ ಹಣಕ್ಕೆ ಬೇಡಿಕೆಯಿಟ್ಟಿಲ್ಲ ಪಿಡಿಒ ಎಸ್.ಎಂ.ನಂದಿಲಿಂಗೇಶ ಸಾರಂಗಮಠ ನಿರಾಕರಿಸಿದರು.
ಹಾಗಾದರೆ ಹಣಕ್ಕೆ ಬೇಡಿಕೆಯೊಟ್ಟಿದ್ದ ಆಡಿಯೊ ಯಾರದ್ದು, ಡಾಟಾ ಎಂಟ್ರಿ ಆಪರೇಟರ್ ಬಳಿ ಹತ್ತು ಸಾವಿರ ಹಣ ಹೇಗೆ ಬಂತು ಎಂದು ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳ ತಂಡ ಪಿಡಿಒ ಮತ್ತು ಡಾಟಾ ಎಂಟ್ರಿ ಆಪರೇಟರ್ ಅಜ್ಜಯ್ಯ ಅವರನ್ನು ಪ್ರಶ್ನಿಸಿದರು. ಅಷ್ಟೇ ಅಲ್ಲ ತಾಪಂ ಇಓ ಕೆ.ಟಿ.ಕರಿಬಸಪ್ಪ ಮತ್ತು ಎಲ್ಲ ಸಿಬ್ಬಂದಿಗಳನ್ನು ಕರೆದು ಕೂಲಂಕಷವಾಗಿ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದರು. ವರದಿ ಜಗಳೂರು ಲೋಕೇಶ್
0 Comments