ಚಳ್ಳಕೆರೆ ಜನಧ್ವನಿ ವಾರ್ತೆ ಜೂ7
ಪ್ರೆಸ್ ಎಂದು ವಾಹನದ ಮೇಲೆ ಹಾಕಿಕೊಂಡು ನಗರದ ಗಲ್ಲಿ ಗಲ್ಲಿ ಹಾಗೂ ಮುಖ್ಯ ರಸ್ತೆಯಲ್ಲಿ ಸುತ್ತಾಡುತ್ತಿರುವ ದ್ವಿಚಕ್ರವಾಹನ ಸುತ್ತಾಡುತ್ತಿರುವುದು ಬೆಳಕಿಗೆ ಬಂದಿದೆ.
ಹೌದು ಇದು ಚಳ್ಳಕೆರೆ ನಗರದಲ್ಲಿ ಕೋರಿಯರ್ ಪಾರ್ಸೆಲ್ ನ ಬೈಹತ್ ಬ್ಯಾಗ್ ಹಾಕಿಕೊಂಡು ದ್ವಿಚಕ್ರವಾಹನದ ಹಿಂದೆ ಮುಂದೆ ಪ್ರೆಸ್(PRESS) ಎಂದು ಪತ್ರಕರ್ತರಲ್ಲದ ಕೋರಿಯಸ್ ಸೇವೆ ನೀಡುವ ವಾಹನಗಳ ಮೇಲೆ ಪ್ರೆಸ್ ಎಂದು ದ್ವಿಚಕ್ರವಾಹನದಲ್ಲಿ ಹಾಕಿಸಿಕೊಂಡು ಓಡುತ್ತಿರುವುದು ಬೆಳಕಿಗೆ ಬಂದಿದೆ.
ಕೋರಿಯರ್ ಪಾರ್ಸೆಲ್ ನೀಡುವ ವಾಹನದಲ್ಲಿ ಪ್ರೆಸ್
ಇನ್ನು ಕೆಲವರು ಸರಕಾರಿ ಕಚೇರಿ ಅಧಿಕಾರಿಗಳ ಬಳಿ ನಾನು ಆಟಿಐ ಕಾರ್ಯಕರ್ತ ಕಾರ್ಯಕ್ರಮ ಮಾಡುತ್ತಿದ್ದೇವೆ. ಹೋರಾಟ ಮಾಡಲು ಜಾಥ ಹೋಗುತ್ತಿದ್ದೇವೆ ನಮಗೆ ನೀವು ಹಣದ ಸಹಾಯ ಮಾಡಬೇಕು ಎಂದು ಅಧಿಕಾರಿಗಳ ಬಳಿ ಕುಳಿತು ಹಣ ನೀಡುವಂತೆ ಪೀಡಿಸುತ್ತಿರುವ ಪ್ರಕರಣಗಳು ಹೆಚ್ಚಾಗಿವೆ.
ಇನ್ನು ಕೆಲವರು ತಮ್ಮ ವಾಹನಗಳ ಮೇಲೆ ಅನಧಿಕೃತವಾಗಿ ಪ್ರೆಸ್ ಎಂದು ಬೋರ್ಡ್ ಹಾಕಿಕೊಂಡು ನಿಯಮಗಳನ್ನು ಉಲ್ಲಂಘಿಸುತಿರುವುದು ಕಂಡುಬAದಿದೆ. ಪತ್ರಕರ್ತರಲ್ಲದವರ ವಾಹದಲ್ಲಿ ಪ್ರೆಸ್ ಎಂದು ಬರೆಸಿಕೊಂಡು ಓಡಾಡುವ ವಾಹನಗಳಿಗೆ ಪೊಲೀಸ್ ಇಲಾಖೆ ಕಡಿವಾಣ ಹಾಕ ಬೇಕಿದೆ.
0 Comments