ಹಿರಿಯೂರು :
ಈ ಬಾರಿಯ ದೀಪಾವಳಿ ಹಬ್ಬವನ್ನು ನಾವೆಲ್ಲರೂ, ಪರಿಸರಸ್ನೇಹಿ ಹಸಿರುಪಟಾಕಿಯನ್ನು ಹಚ್ಚುವುದರ ಜೊತೆಗೆ ಮನೆಯ ಮುಂದೆ ದೀಪಗಳನ್ನು ಬೆಳಗುವ ಮೂಲಕ ಯಾವುದೇ ಪ್ರಾಣಿಸಂಕುಲಕ್ಕೆ ಹಾಗೂ ನಮ್ಮ ಸುತ್ತಲಪರಿಸರಕ್ಕೆ, ಅಲ್ಲದೆ ಸಾರ್ವಜನಿಕರ ಆರೋಗ್ಯಕ್ಕೆ ತೊಂದರೆಯಾಗದಂತೆ ಅತ್ಯಂತ ಸರಳವಾಗಿ ದೀಪಾವಳಿ ಹಬ್ಬವನ್ನು ಆಚರಿಸಲು ಎಲ್ಲರೂ ಮುಂದಾಗಬೇಕು ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಹೆಚ್.ಮಹಂತೇಶ್ ಹೇಳಿದರು.
ನಗರಸಭೆ ವ್ಯಾಪ್ತಿಯಲ್ಲಿರುವ ವಾರ್ಡ್ ನಂ 30ರ ಬಿಸಿಎಂ ಹಾಸ್ಟೆಲ್ ಮಕ್ಕಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಎನ್.ಜಿಓ ದ ಸದಸ್ಯರುಗಳು, ನಗರಸಭೆಯ ಸಿಬ್ಬಂದಿ ವರ್ಗದವರು, ಸ್ವಚ್ಛತಾ ಕಾರ್ಮಿಕರು ಮತ್ತು ಸಾರ್ವಜನಿಕರ ಜೊತೆಗೂಡಿ ರಂಗೋಲಿ ಹಾಕಿ ದೀಪಬೆಳಗುವುದರ ಮೂಲಕ ಹಮ್ಮಿಕೊಳ್ಳಲಾಗಿದ್ದ “ಸ್ವಚ್ಛ ದೀಪಾವಳಿ ಶುಭ ದೀಪಾವಳಿ” ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಹಾಸ್ಟೆಲ್ ಮಕ್ಕಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಎನ್.ಜಿಓ ದ ಸದಸ್ಯರುಗಳು, ನಗರಸಭೆಯ ಸಿಬ್ಬಂದಿ ವರ್ಗದವರು, ಸ್ವಚ್ಛತಾ ಕಾರ್ಮಿಕರು ಮತ್ತು ಸಾರ್ವಜನಿಕರಿಂದ ಹಸಿರು ಪಟಾಕಿ ಹಚ್ಚುವಂತೆ ಪ್ರತಿಜ್ಞೆ ಮಾಡಿಸಿ ಸಹಿ ಪಡೆಯುವದರ ಮೂಲಕ ಹಣತೆಗಳನ್ನು ಹಿಡಿದು ಸೆಲ್ಫೀ ತೆಗೆದುಕೊಳ್ಳುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನಗರಸಭೆಯ ಪೌರಾಯುಕ್ತರಾದ ಹೆಚ್.ಮಹಾಂತೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಶಿವಕುಮಾರ್, ವಲಯ ಮೇಲ್ವಿಚಾರಕರಾದ ಶ್ರೀಮತಿ ಗೀತಾ, ಹಿರಿಯ ಆರೋಗ್ಯ ನಿರೀಕ್ಷಕರಾದ ವೈ.ಎಸ್.ಸಂಧ್ಯಾ, ಕಿರಿಯ ಆರೋಗ್ಯ ನಿರೀಕ್ಷಕರಾದ ಅಶೋಕ್ ಕುಮಾರ್ ಹಾಗೂ ಮಹಾಲಿಂಗರಾಜು, ಸೂಪರ್ ವೈಸರ್ ಈರಖ್ಯಾತಪ್ಪ, ನಗರಸಭೆ ಸ್ವಚ್ಛತೆ ಕಾರ್ಮಿಕರು ಮತ್ತು ವಾಹನ ಚಾಲಕರು ಹಾಜರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಪರಿಸರಸ್ನೇಹಿ ಹಸಿರುಪಟಾಕಿಯನ್ನು ಹಚ್ಚಿ ಸರಳವಾಗಿ ದೀಪಾವಳಿ ಹಬ್ಬಆಚರಿಸಲು ಎಲ್ಲರೂ ಮುಂದಾಗಬೇಕು ನಗರಸಭೆಯ ಪೌರಾಯುಕ್ತರಾದ : ಹೆಚ್. ಮಹಂತೇಶ್
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments