ಪರಿಶಿಷ್ಟ ಜಾತಿಯಲ್ಲಿ ಪರಿಶಿಷ್ಟ ಪಂಗಡದ ಸಾರ್ವಜನಿಕರಿಗೆ ಹಾಗೂ ರೈತರಿಗೆ ಸೂಕ್ತ ಸಾಲ ಸೌಲಭ್ಯ ನೀಡುತ್ತಿಲ್ಲ ಎಂಬ ದೂರುಗಳು ಕೇಳಿಬಂದಿದ್ದು ಇದನ್ನು ನಾನು ಸಹಿಸುವುದಿಲ್ಲ ಬ್ಯಾಂಕ್ ಅಧಿಕಾರಿಗಳ ವಿರುದ್ದ ಶಾಸಕ ಟಿ.ರಘುಮೂರ್ತಿ ಗರಂ.

by | 06/09/23 | ಆರ್ಥಿಕ

ಚಳ್ಳಕೆರೆ ಸೆ.6 ಸರಕಾರ ಗ್ಯಾರೆಂಟಿ ಯೋಜನೆಗಳನ್ನು ಸೆ.30 ರ ಒಳಗೆ ಅರ್ಹ ಫಲಾನುವಿಗಳು ವಂಚಿತರಾಗದಂತೆ ಗುರಿ ಮುಟ್ಟಲು ಅಧಿಕಾರಿಗಳು ಮುಂದಾಗುವಂತೆ ಶಾಸಕ ಟಿ.ರಘುಮೂರ್ತಿ ಹೇಳಿದರು. ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ . ವಿವಿಧ ಬ್ಯಾಂಕ್ ವ್ಯವಸ್ಥಾಪಕರ ವಿವಿಧ ಇಲಾಖೆ ಅಧಿಕಾರಿಗಳಿಗೆ ಆಯೋಜಿದ್ದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದ ಐದು ಯೋಜನೆಗಳಿಗೆ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಫಲಾನುಭವಿಗಳ ಖಾತೆಗೆ ಹಣ ಪಾವಾತಿ ಮಾಡಲಾಗುತ್ತಿದ್ದು ಬಡಕುಟುಂಬ ಹಾಗೂ ಅರ್ಹ ಗೃಹಿಣಿಯರು ಗ್ಯಾರೆಂಟಿ ಯೋಜನೆಗಳಿಂದ ವಂಚಿತರಾಗದಂತೆ ಅಧಿಕಾರಿಗಳು ಮುಂದಾಗ ಬೇಕು. ಯಾವುದೇ ಸರಕಾರಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಹಾಗೂ ಯೋಜನೆಗಳು ಯಶಸ್ವಿಯಾಗಲು ಅಧಿಕಾರಿಗಳಿಂದ ಮಾತ್ರ ಸಾಧ್ಯ.
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಜನರಿಗೆ 5 ಗ್ಯಾರಂಟಿ ಯೋಜನೆಗಳ ಭರವಸೆಯನ್ನು ನೀಡಿತ್ತು ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳು ಜಾರಿಗೊಂಡಿವೆ ಈ ನಿಟ್ಟಿನಲ್ಲಿ ಅಧಿಕಾರಿಗಳು ಉತ್ತಮ ಕೆಲಸ ನಿರ್ವಹಿಸಿದ್ದಾರೆ ಆದರೂ ಅನ್ನಭಾಗ್ಯ .ಗೃಹಲಕ್ಷ್ಮಿ .ಗೃಹಜ್ಯೋತಿ. ಯೋಜನೆಗಳು ಶೇ85ರಷ್ಟು ಮಾತ್ರ ಪ್ರಗತಿ ಕಂಡಿವೆ ತಾಲೂಕಿನಲ್ಲಿ ಈ ಯೋಜನೆಗಳ ವ್ಯಾಪ್ತಿಗೆ ಬರುವ ಫಲಾನುಭವಿಗಳು ವಂಚಿತರಾಗಬಾರದು ಸರ್ಕಾರ ಬಡವರಿಗಾಗಿ ಇಂತಹ ಯೋಜನೆಗಳನ್ನು ರೂಪಿಸಿದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಗರಸಭೆ .ಬೆಸ್ಕಾಂ ಇಲಾಖೆ. ಆಹಾರ ಇಲಾಖೆ. ಬ್ಯಾಂಕ್ ಅಧಿಕಾರಿಗಳು ತಮ್ಮ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ತಂಡಗಳನ್ನು ರಚಿಸಿಕೊಂಡು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲ ಪ್ರತಿ ಮನೆಗಳಿಗೆ ಭೇಟಿ ನೀಡಿ ಯೋಜನೆಗಳಿಂದ ವಂಚಿತರಾಗಿರುವ ಫಲಾನುಭವಿಗಳನ್ನು ಗುರುತಿಸಿ ಯೋಜನೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ವಂಚಿತರಾಗಿದ್ದಾರೆ ಯಾವ ಕಾರಣ ಎಂದು ತಿಳಿದುಕೊಂಡು ಅವುಗಳನ್ನು ಸರಿಪಡಿಸಿ ಯೋಜನೆಗೆ ಒಳಪಡಿಸುವ ಜವಾಬ್ದಾರಿ ಹೊರಬೇಕು ಇದಕ್ಕಾಗಿ ತಕ್ಷಣದಿಂದಲೇ ಕಾರ್ಯ ಪ್ರವೃತ್ತರಾಗಬೇಕು ಸೆಪ್ಟೆಂಬರ್ 30ರೊಳಗೆ ಶೇಕಡ ನೂರರಷ್ಟು ಗುರಿ ಸಾಧಿಸಲು ಪ್ರಯತ್ನ ಪಡಬೇಕು ಯಾವುದೇ ಕಾರಣಕ್ಕೂ ನೆಪಗಳನ್ನು ಹೇಳದೆ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿದರೆ ಅಂತಹ ಅಧಿಕಾರಿಗಳನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಹರಿಪ್ರಸಾದ್ ಮಾಹಿತಿ ನೀಡಿ ಗೃಹಲಕ್ಷ್ಮಿ ಯೋಜನೆಗೆ ತಾಲೂಕಿನಲ್ಲಿ 89 920 ಫಲಾನುಭವಿಗಳು ನೋಂದಾಯಿಸಿಕೊಂಡಿದ್ದು 78597 ಫಲಾನುಭವಿಗಳಿಗೆ ಯೋಜನೆ ಜಾರಿಗೊಳಿಸಲಾಗಿದೆ ಬಾಕಿ ಉಳಿದಿರುವ 11323 ಫಲಾನುಭವಿಗಳಿಗೆ ಯಾವ ಕಾರಣಕ್ಕೆ ಹಣ ಬಂದಿಲ್ಲ ಎಂಬುದನ್ನು ಪತ್ತೆ ಹಚ್ಚಲಾಗುವುದು 87.41 ರಷ್ಟು ಯೋಜನೆಯಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.

ಬೆಸ್ಕಾಂ ಇಲಾಖೆಗೆ ಟಾರ್ಗೆಟ್:
ಬೆಸ್ಕಾಂ ಇಲಾಖೆ ಅಧಿಕಾರಿಗಳು ಲೈನ್ ಮ್ಯಾನ್ ಗಳ ತಂಡ ರಚಿಸಿ ಪ್ರತಿ ಮನೆಗೆ ಭೇಟಿ ನೀಡಿ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳು ನೋಂದಾವಣೆ ಮಾಡಿಕೊಳ್ಳದಿದ್ದರೆ ಅಂತಹವರನ್ನು ಗುರುತಿಸಿ ಯೋಜನೆ ವ್ಯಾಪ್ತಿಗೆ ಒಳಪಡಿಸಬೇಕು ಕುಟೀರ ಜ್ಯೋತಿ ಯೋಜನೆಗೆ ಒಳಪಟ್ಟವರನ್ನು ಗೃಹಜೋತಿ ಯೋಜನೆಯ ಲಾಭ ಪಡೆಯಲು ಇರುವ ಕಾನೂನು ನಿಯಮಗಳನ್ನು ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು

ಬ್ಯಾಂಕ್ ವ್ಯವಸ್ಥಾಪಕರಿಗೆ ತರಾಟೆ:
ಸಭೆಯಲ್ಲಿ ಪಾಲ್ಗೊಂಡಿದ್ದ ಬ್ಯಾಂಕ್ ವ್ಯವಸ್ಥಾಪಕರಿಗೆ ತರಾಟೆಗೆ ತೆಗೆದುಕೊಂಡ ಶಾಸಕರು ಬ್ಯಾಂಕುಗಳಲ್ಲಿ ಪರಿಶಿಷ್ಟ ಜಾತಿಯಲ್ಲಿ ಪರಿಶಿಷ್ಟ ಪಂಗಡದ ಸಾರ್ವಜನಿಕರಿಗೆ ಹಾಗೂ ರೈತರಿಗೆ ಸೂಕ್ತ ಸಾಲ ಸೌಲಭ್ಯ ನೀಡುತ್ತಿಲ್ಲ ಎಂಬ ದೂರುಗಳು ಕೇಳಿಬಂದಿದ್ದು ಇದನ್ನು ನಾನು ಸಹಿಸುವುದಿಲ್ಲ ಸಾಲ ನೀಡುವುದಲ್ಲದೆ ವಸೂಲಿ ಮಾಡುವುದು ಬ್ಯಾಂಕ್ ಸಿಬ್ಬಂದಿಯ ಜವಾಬ್ದಾರಿ ಆಗಿರುತ್ತದೆ ಇಲ್ಲಸಲ್ಲದ ನೆಪಗಳನ್ನು ಹೇಳಿ ಸಾಲ ಸೌಲಭ್ಯಗಳಿಂದ ವಂಚನೆಗೆ ಒಳಪಡಿಸುತ್ತಿದ್ದೀರಾ ದೂರವಾಣಿಯ ಮೂಲಕ ಜಿಲ್ಲಾ ಬ್ಯಾಂಕ್ ಲೀಡ್ ವ್ಯವಸ್ಥಾಪಕರಿಗೆ ಮಾತನಾಡಿ ಕೂಡಲೇ ತಾಲೂಕಿನಲ್ಲಿ ಎಲ್ಲಾ ಬ್ಯಾಂಕುಗಳ ಅಧಿಕಾರಿಗಳ ಸಭೆ ನಡೆಸಿ ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ತಲುಪಲು ಇ.ಕೆ ವೈ ಸಿ ಮಾಡಬೇಕು ಹಾಗೂ ಬ್ಯಾಂಕುಗಳಲ್ಲಿನ ಸಾರ್ವಜನಿಕರ ಸಮಸ್ಯೆಗಳನ್ನು ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ನಿಮ್ಮ ವಿರುದ್ಧ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ನ್ಯಾಯಬೆಲೆ ಮಾಲೀಕರ ಸಮಸ್ಯೆಗೆ ಪರಿಹಾರ: ನ್ಯಾಯಬೆಲೆ ಅಂಗಡಿ ಮಾಲೀಕರು ತಮ್ಮ ವ್ಯಾಪ್ತಿಗೆ ಒಳಪಡುವ ಗ್ರಾಹಕರನ್ನು ಸರ್ಕಾರದ ಯೋಜನೆಗಳನ್ನು ಪಡೆಯಲು ಇರುವ ಅಡೆತಡೆಗಳನ್ನು ನಿವಾರಿಸಬೇಕು ಎಂದರು.ಇದೇವೇಳೆ ನ್ಯಾಯ ಬೆಲೆ ಅಂಗಡಿ ಮಾಲೀಕರು ತೂಕ ಅಳತೆ ವ್ಯತ್ಯಾಸ ಕಮಿಷನ್ ಬಿಡುಗಡೆ ಸೇರಿದಂತೆ ಹಲವು ಸಮಸ್ಯೆಗಳನ್ನು ಶಾಸಕರ ಮುಂದೆ ತೆರೆದಿಟ್ಟರು ಇದಕ್ಕೆ ಉತ್ತರಿಸಿದ ಶಾಸಕರು ನಿಮ್ಮ ಎಲ್ಲ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಳ್ಳಿ ಮುಂದಿನ ಸಭೆಯಲ್ಲಿ ಆಹಾರ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕರನ್ನು ಸಭೆಗೆ ಆಹ್ವಾನಿಸಿ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ತಿಳಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ರಹನ್ ಪಾಷಾ.ಸೇರಿದಂತೆ ನ್ಯಾಯಬೆಲೆ ಅಂಗಡಿಗಳ ಮಾಲೀಕರು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Latest News >>

ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಸೂಚನೆ ವಸತಿ ನಿಲಯಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಕಾವಲುಗಾರರ ನೇಮಿಸಿ

ಚಿತ್ರದುರ್ಗ ಮೇ.27: ಜಿಲ್ಲೆಯ ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿರಬೇಕು. ಒಂದು ವೇಳೆ ಸಿಸಿ ಕ್ಯಾಮೆರಾಗಳು...

ಲಕ್ಕೂರ ಆನಂದರ ಸಾಹಿತ್ಯ ಕೃಷಿ ನಾಡಿಗೆ ಪರಿಚಯಿಸಬೇಕಿದೆ: ಹುಲಿಕುಂಟೆ ಮೂರ್ತಿ

ಚಿತ್ರದುರ್ಗ ಮೇ.26 ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ಕವಿ, ಬರಹಗಾರ ಆನಂದ್ ಸಿ.ಲಕ್ಕೂರು ಮಾಡಿರುವ ಸಾಹಿತ್ಯ ಕೃಷಿಯನ್ನು...

ಕುಂಚಿಟಿಗರಿಗೆ ಕೇಂದ್ರ OBC ಮೀಸಲಾತಿಗಿಂತ EWS ಮೀಸಲಾತಿ ಉತ್ತಮ -ಎಸ್ ವಿ ರಂಗನಾಥ್.

ಹಿರಿಯೂರು ಇತ್ತೀಚೆಗೆ ಕುಂಚಿಟಿಗ ಸಮಾಜದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿರುವ ಸುದ್ದಿ ಏನೆಂದರೆ ಅದು ಕುಂಚಿಟಿಗರಿಗೆ ಕೇಂದ್ರ ಸರ್ಕಾರದ OBC...

ಹುಚ್ಚವನಹಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗಲು ದಾರಿ ಇಲ್ಲದ ಕಾರಣ ಚಾನಲ್ ಒಳಗಡೆ ನೀರಿನಲ್ಲಿ ಇಳಿದು ಸಾಗಬೇಕು ಎಂಬುದು ಗ್ರಾಮಸ್ಥರ ಅಳಲು

ಹಿರಿಯೂರು: ತಾಲ್ಲೂಕಿನ ಹುಚ್ಚವನಹಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗಲು ಸರಿಯಾದ ದಾರಿ ಇಲ್ಲದ ಕಾರಣ ಈ ಊರಲ್ಲಿ ಯಾವುದೇ ವ್ಯಕ್ತಿ ಸತ್ತರೆ ಆ...

ವರಣುನ ಆರ್ಭಟಕ್ಕೆ ನೆಲಕ್ಕುರಿಳೆ ಬೆಳೆ- ಮನೆಗಳಿಗೆ ನುಗ್ಗಿದ ನೀರು-ಹಳ್ಳಕೊಳ್ಳಗೆ ನೀರು..

ಚಳ್ಳಕೆರೆ ಮೇ25 ವರುಣನ ಆರ್ಭಟಕ್ಕೆ ತೋಟಗಾರಿಕೆ ಬೆಳೆಗಳು ನೆಲಕ್ಕುರಿಳಿದರೆ ಮನೆಗಳಿಗೆ ನೀರು ನುಗ್ಗಿದ ಘಟನೆ ಜರುಗಿದೆ. ತಾಲೂಕಿನಾದ್ಯಂತ...

ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ. ₹ 71.41.325 ರೂ ಸಂಗ್ರಹ ಸಂತಾನ ಭಾಗ್ಯ ನೌಕರಿ ಆರ್ಥಿಕ ಆರೋಗ್ಯ ಸಂಪತ್ತು ಕರುಣಿಸುವಂತೆ ಹುಂಡಿಯಲ್ಲಿ ಲಿಖಿತ ಪತ್ರಗಳು‌ ಪತ್ತೆ ..!.

ನಾಯಕನಹಟ್ಟಿ:: ಮೇ.24. ಐತಿಹಾಸಿಕ ನಾಯಕನಹಟ್ಟಿ ಶ್ರೀ ಗುರುತಿಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಹಣದ ಎಣಿಕೆ ಕಾರ್ಯವನ್ನು...

ಸಮಾಜದ ಸಮಗ್ರ ಬೆಳವಣಿಗೆಗೆ ಶಿಕ್ಷಣ ವಲಯ ಅಭಿವೃದ್ಧಿ ಆಗಬೇಕಾಗಿದೆ ಶಾಸಕ ಎನ್ ವೈ ಗೋಪಾಲಕೃಷ್ಣ.

ನಾಯಕನಹಟ್ಟಿ:: ಮೇ.23. ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿದ್ದಾರೆ....

ತಾಲ್ಲೂಕಿನ ಶುಭೋದಯ ಸೇವಾವೃದ್ದಾಶ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ಎಲ್.ಮೂರ್ತಿ ರವರ ಹುಟ್ಟುಹಬ್ಬಆಚರಣೆ: ಮುಖ್ಯಸ್ಥ ತೇಜೋಮೂರ್ತಿ

ಹಿರಿಯೂರು: ಅಭಿಮತ ಪತ್ರಿಕೆಯ ಸಂಪಾದಕರು ಹಾಗೂ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಎಸ್.ಸಿ.ಸೆಲ್. ಘಟಕ ಅಧ್ಯಕ್ಷರಾದ ಜಿ.ಎಲ್.ಮೂರ್ತಿ...

ಮೌಡ್ಯಗಳಿಂದ ಹೊರಬಂದು ಬುದ್ಧನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಿದೆ:ಪ್ರೊ.ಸಿಕೆ ಮಹೇಶ್ವರಪ್ಪ ಅಭಿಮತ 

ಚಳ್ಳಕೆರೆ: ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ಶಾತವಾಹನ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ವಿಜಯ ಸಂಕಲ್ಪ ದಿನಪತ್ರಿಕೆ ವತಿಯಿಂದ ಬುದ್ಧ...

ವಾಣಿವಿಲಾಸಸಾಗರ ಜಲಾಶಯಕ್ಕೆ ತಗ್ಗಿದ ಒಳಹರಿವು ಮುಂಗಾರು ಮಳೆಯಿಂದಾಗಿ 1.65ಅಡಿ ನೀರು ಸಂಗ್ರಹ

ಹಿರಿಯೂರು : ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯಕ್ಕೆ ಪೂರ್ವ ಮುಂಗಾರು ಮಳೆಯಿಂದಾಗಿ 1.65 ಅಡಿ ನೀರು ಸಂಗ್ರಹವಾಗಿದೆ. ಇದರಿಂದ ಪ್ರಸ್ತುತ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page