ಚಳ್ಳಕೆರೆ ಜನಧ್ವನ ವಾರ್ತೆ ಮಾ.17
ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆ ಮಾತಿನಂತೆ ಉಪನ್ಯಾಸಕರ ಹಾಗೂ ಆಡಳಿತ ಮಂಡಳಿಯ ಮುಸುಗಿನ ಜಗಳದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮೇಲೆ ಕೊಡಲಿ ಪೆಟ್ಟಿ ಬಿದ್ತಾದಂತಾಗಿದೆ.
ಹೌದು ಇದು ಚಳ್ಳಕೆರೆ ನಗರದ ಚಿತ್ರದುರ್ಗ ರಸ್ತೆಯ ವಾಸವಿ ಪದವಿ ಕಾಲೇಜಿನಲ್ಲಿ ಆಡಳಿ ಮಂಡಳಿ ಹಾಗೂ ಪದವಿ ಉಪನ್ಯಾಸಕರ ನಡುವಿನ ಗೊಂದಲಗಳಿಂದ ಇದ್ದಕ್ಕಿದಂತೆ 6 ಜನ ಪದವಿ ಉಪನ್ಯಾಸಕರು ಹುದ್ದೆಗೆ ರಾಜಿನಾಮೆ ನೀಡಿರುದರಿಂದ ಬಿ ಕಾಂ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಪರದಾಡುವಂತಾಗಿದೆ.


ಈ ಬಗ್ಗೆ ಆಡಳಿತ ಮಂಡಳಿಯವರನ್ನು ಕೇಳಿದರೆ ಉಪನ್ಯಾಸಕರ ಮೇಲೆ ಹೇಳಿತ್ತಾರೆ ಕಳೆದ ಒಂದು ವಾರದಿಂದ ಪದವಿ ಉಪನ್ಯಾಸಕರು ಇಲ್ಲದೆ ಪಠ್ಯ ಚಟುವಟಿಕೆಗಳು ಕುಂಠಿತವಾಗಿದ್ದು ಈ ಬಗ್ಗೆ ವಿದ್ಯಾರ್ಥಿಗಳನ್ನು ಆತಂಕಕ್ಕೆದೂಡುವಂತೆ ಮಾಡಿದ್ದು ಇಂದು ನಾಳೆ ಸರಿಯೋಗುತ್ತದೆ ಕಾಲೇಜಿನ ಮರ್ಯಾದೆ ಕಳೆಯ ಬಾರದು ಎಂದು ಇದ್ದರೂ ಸವಿದ್ಯಾರ್ಥಿಗಳ ಪದವಿ ಬೋದನೆ ಭವಿಷ್ಯದ ಬಗ್ಗೆ ಆಡಳಿತ ಮಂಡಳಿಯವರು ನಿರ್ಲಕ್ಷ ತೋರುತ್ತಿದ್ದಾರೆ.
ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದ ಆಡಳಿತ ಮಂಡಳಿಯವರು ಪಿಯು ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಉಪನ್ಯಾಸಕರನ್ನು ಪದವಿ ವಿದ್ಯಾರ್ಥಿಗಳಿಗೆ ಉಪನ್ಯಾಸ ಮಾಡಲು ಕಳಿಸುತ್ತಿದ್ದು ಅವರಿಗೆ ಪಾಠ ಬೋಧನೆ ಮಾಡಲು ಬರುವುದಿಲ್ಲಿ ಅವರು ಮಾಡಿದ ಪಠ್ಯವನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ ಬಳ್ಳಾರಿ ಮೂಲದ ಆಡಳಿತ ಮಂಡಿಯವರಾಗಿದ್ದು ಅಲ್ಲಿಯವರನ್ನೇ ಉಪನ್ಯಾಸಕರನ್ನು ಕಳಿಸುತ್ತಿರುವುದರಿಂದ ಬಳ್ಳಾರಿ ಹಾಗೂ ದಾವಣಗೆರೆ ವಿಶ್ವವಿದ್ಯಾಲಯದ ಪಠ್ಯ ಗಳ ವ್ಯತ್ಯಾಸ ವಿದ್ದು ನಾವು ದುಬಾರಿ ಶುಲ್ಕವನ್ನು ಕಟ್ಟಿ ವಿದ್ಯೆ ಕಲಿಯಲು ಕಾಲೇಜಿಗೆ ಸೇರಿದ್ದೇವೆಇಲ್ಲಿನ ಆಡಳೀತ ಮಂಡಳಿ ಹಾಗೂ ಪದವಿ ಉಪನ್ಯಾಸಕರ ನಡುವಿನ ಗೊಂದಲದಿಂದ ಈಗ ಬಿಕಾಂವಿದ್ಯಾರ್ಥಿಗಳು ಶಿಕ್ಷಣದಿಂದ ಹಿಂದುಳಿಯುವಂತಾಗಿದೆ ಕೂಡಲೆ ಹಳೆಯ ಪದವಿ ಉಪನ್ಯಾಸಕರನ್ನು ನೇಮಕ ಮಾಡಿ ನಮಗೆ ಶಿಕ್ಷಣಕೊಡಿಸುವಂತೆ ವಿದ್ಯಾರ್ಥಿಗಳು ಶಾಸಕ ಟಿ.ರಘುಮೂರ್ತಿ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

0 Comments