ಪದಕ ಪಡೆದ ವಿಜೇತ ಕ್ರೀಡಾಪುಟುಗಳಿಗೆ ನಗದು ಬಹುಮಾನ: ಅರ್ಜಿ ಆಹ್ವಾನ

by | 02/11/23 | ಕ್ರೇಡೆ

ಚಿತ್ರದುರ್ಗ ನ.02:
2021 ಮತ್ತು 2022ನೇ ಸಾಲಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಪದಕ ಪಡೆದ ಕರ್ನಾಟಕ ಕ್ರೀಡಾಪಟುಗಳು ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ವಿವಿಧ ಕ್ರೀಡೆಗಳಲ್ಲಿ ಪ್ರತಿನಿಧಿಸಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ರಾಷ್ಟ್ರಕ್ಕೆ ಕೀರ್ತಿ ತಂದ ಕರ್ನಾಟಕದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ವತಿಯಿಂದ ನಗದು ಪುರಸ್ಕಾರವನ್ನು ನೀಡಲಾಗುತ್ತದೆ.
ಭಾರತ ಸರ್ಕಾರದಿಂದ ಅಂಗೀಕೃತವಾಗಿರುವ ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಭಾಗವಹಿಸಿ ಪದಕ ವಿಜೇತರಾದಲ್ಲಿ ರೂ.50,000/ ನಗದು ಪುರಸ್ಕಾರ ನೀಡಲಾಗುವುದು.
ಒಲಂಪಿಕ್ ಗೇಮ್ಸ್ ನಲ್ಲಿ ಚಿನ್ನ ಪಡೆದವರಿಗೆ ರೂ.5 ಕೋಟಿ, ಬೆಳ್ಳಿ ರೂ.3 ಕೋಟಿ, ಕಂಚು ರೂ.2 ಕೋಟಿ ನೀಡಲಾಗುವುದು. ಏಷಿಯನ್ ಗೇಮ್ಸ್‍ನಲ್ಲಿ ಚಿನ್ನ ಪಡೆದವರಿಗೆ ರೂ.25 ಲಕ್ಷ, ಬೆಳ್ಳಿ ರೂ.15ಲಕ್ಷ, ಕಂಚು ರೂ.8 ಲಕ್ಷ ನೀಡಲಾಗುವುದು. ಕಾಮನ್ ವೆಲ್ತ್ ಗೇಮ್ಸ್‍ನಲ್ಲಿ ಚಿನ್ನ ಪಡೆದವರಿಗೆ ರೂ.25 ಲಕ್ಷ, ಬೆಳ್ಳಿ ರೂ.15 ಲಕ್ಷ, ಕಂಚು ರೂ.8 ಲಕ್ಷ. ವಲ್ರ್ಡ್ ಕಪ್, ಚಾಂಪಿಯನ್‍ಷಿಪ್ (ಭಾರತ ಸರ್ಕಾರದಿಂದ ಅಂಗೀಕೃತವಾಗಿ ಭಾರತ ತಂಡದ ಭಾಗವಾಗಿ ಪ್ರತಿನಿಧಿಸಿ) ಚಿನ್ನ ಪಡೆದವರಿಗೆ ರೂ.5 ಲಕ್ಷ, ಬೆಳ್ಳಿ ರೂ.3 ಲಕ್ಷ, ಕಂಚು ರೂ.2 ಲಕ್ಷ, ನ್ಯಾಷಿನಲ್ ಗೇಮ್ಸ್(ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಕ್ರೀಡೆಗಳು) ಗಳಲ್ಲಿ ಚಿನ್ನ ಪಡೆದವರಿಗೆ ರೂ.5 ಲಕ್ಷ, ಬೆಳ್ಳಿ ರೂ.3 ಲಕ್ಷ, ಕಂಚು ರೂ.2 ಲಕ್ಷ, ನ್ಯಾಷಿನಲ್ ಚಾಂಪಿಯನ್‍ಷಿಪ್(ಒಲಂಪಿಕ್ ಕ್ರೀಡೆಗಳಿಗೆ ಮಾತ್ರ) ಚಿನ್ನ ಪಡೆದವರಿಗೆ ರೂ.2 ಲಕ್ಷ, ಬೆಳ್ಳಿ ರೂ.1 ಲಕ್ಷ, ಕಂಚು ರೂ. 50,000, ಜ್ಯೂನಿಯರ್ ನ್ಯಾಷಿನಲ್ (ಒಲಂಪಿಕ್ ಕ್ರೀಡೆಗಳಿಗೆ ಮಾತ್ರ) ಚಿನ್ನ ಪಡೆದವರಿಗೆ ರೂ.50,000, ಬೆಳ್ಳಿ ರೂ.25,000, ಕಂಚು ರೂ,15,000, ಸಬ್ ಜ್ಯೂನಿಯರ್ ನ್ಯಾಷಿನಲ್ (ಒಲಂಪಿಕ್ ಕ್ರೀಡೆಗಳಿಗೆ ಮಾತ್ರ) ಚಿನ್ನ ಪಡೆದವರಿಗೆ ರೂ. 25,000, ಬೆಳ್ಳಿ ರೂ.15,000, ಕಂಚು ರೂ.10,000 ನಗದು ಬಹುಮಾನ ನೀಡಲಾಗವುದು.
ಒಲಂಪಿಕ್ಸ್ ಗೇಮ್ಸ್, ಕಾಮನ್‍ವೆಲ್ತ್ ಗೇಮ್ಸ್ ಮತ್ತು ಏಷ್ಯನ್‍ಗೇಮ್ಸ್ ಕ್ರೀಡಾಕೂಟಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಕ್ರೀಡಾಕೂಟಗಳಲ್ಲಿ ಪದಕ ಪಡೆಯುವ ಕ್ರೀಡಾಪಟುಗಳಿಗೆ ವಾರ್ಷಿಕ ಗರಿಷ್ಠ ರೂ.5.00 ಲಕ್ಷ ಅಥವಾ ವಾರ್ಷಿಕ ಅತ್ಯತ್ತಮ ಎರಡು ಸಾಧನೆಗಳನ್ನು ಪರಿಗಣಿಸಿ ಯಾವುದು ಕಡಿಮೆಯೊ ಆ ಮೊತ್ತಕ್ಕೆ ನಗದು ಬಹುಮಾನವನ್ನು ನೀಡಲಾಗುವುದು.
ಚಿತ್ರದುರ್ಗ ಜಿಲ್ಲೆಯ ಕ್ರೀಡಾಪಟುಗಳು ಕರ್ನಾಟಕವನ್ನು ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಅಧಿಕೃತವಾಗಿ ಪ್ರತಿನಿಧಿಸಿ ಪದಕ ಪಡೆದ ಅರ್ಹ ಕ್ರೀಡಾಪಟುಗಳು ಹಾಗೂ ಭಾರತವನ್ನು ಅಧಿಕೃತವಾಗಿ ಪ್ರತಿನಿಧಿಸಿ ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿದ ಕರ್ನಾಟಕದ ಕ್ರೀಡಾಪಟುಗಳ ವಿವರವನ್ನು ನಿಗಧಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಯನ್ನು ಶಿಫಾರಸ್ಸಿನೊಂದಿಗೆ ಸಲ್ಲಿಸಬೇಕು.
ಅರ್ಜಿಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿಯಿಂದ ಪಡೆದು ಅದೇ ಕಚೇರಿಗೆ ನವೆಂಬರ್ 25ರ ಒಳಗಾಗಿ ಸಲ್ಲಿಸಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *