ಹಿರಿಯೂರು :
ತಾಲ್ಲೂಕಿನ ಅಭಿವೃದ್ಧಿಯಾಗಬೇಕಾದರೆ ಮೊದಲು ಶೈಕ್ಷಣಿಕ ಪ್ರಗತಿಯಾಗಬೇಕು, ಸರ್ಕಾರಿ ಶಾಲೆಗಳಲ್ಲಿ ಸುಸಜ್ಜಿತ ಕೊಠಡಿಗಳು, ಶೌಚಾಲಯಗಳು, ಹಾಗೂ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು ಈ ನಿಟ್ಟಿನಲ್ಲಿ ಅಗತ್ಯಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹೇಳಿದರು.
ತಾಲ್ಲೂಕಿನ ಪಟ್ರೆಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ, ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ನೀರಿನ ಫಿಲ್ಟರ್ ನೀಡಿದರು,
ಈ ಕಾರ್ಯಕ್ರಮದಲ್ಲಿ ಆದಿವಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಣ್ಣಮ್ಮ, ಸದಸ್ಯರಾದ ನಾಸಿರಾಭಾನು, ಸೈಯದ್ ಮುನೀರ್, ಕಾಂತರಾಜು, ಮಾಜಿ ಅಧ್ಯಕ್ಷರಾದ ರಘು ನಾಯಕ, ಸುಭಾನ್ ಖಾನ್, ಮಾಜಿ ಸದಸ್ಯರಾದ ಅಯ್ಯಸ್ವಾಮಿ, ಎಂ.ಸೋಮಸುಂದರ್, ವಿ.ಎ.ದೇವದಾಸ್, ಪಟ್ರೆಹಳ್ಳಿ ಶ್ರೀಧರ್, ಕೃಷ್ಣಮೂರ್ತಿ, ಪಿಡಿಓ ರಾಜೇಶ್ವರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಮುಖಂಡರಾದ ಕಂದೀಕೆರೆ ಸುರೇಶ್ ಬಾಬು, ಶಿವರಾಮ ನಾಯಕ, ಶಿವಕುಮಾರ್, ಮಹೇಶ್, ರವಿಕುಮಾರ್, ಗೋವಿಂದರಾಜು, ಶ್ರೀಪತಿ, ಸಿದ್ದೇಶ್ ಕುಮಾರ್, ನವೀನ್ , ಎಳನೀರು ಮಣಿ, ಸುಂದರ್, ಕೆ.ರಾಜು, ಗಿರೀಶ್, ಕೆ.ಆರ್.ಹಳ್ಳಿ ಇತರರು ಉಪಸ್ಥಿತರಿದ್ದರು.
ಪಟ್ರೆಹಳ್ಳಿಗ್ರಾಮದ ಸರಕಾರಿಶಾಲೆಯ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಡಿ.ಸುಧಾಕರ್
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments