ಪಕ್ಷ ಸಂಘಟನೆ ಜತಗೆ ಸಾಮಾಜ ಸೇವೆ ಮಾಡುತ್ತಿರು ಬಿಜೆಪಿ ಟಿಕೇಟ್ ಆಕಾಂಕ್ಷಿ ಪ್ರಭಾಕರ್ ಮ್ಯಾಸನಾಯಕ

by | 08/03/23 | ರಾಜಕೀಯ

.
ಮೊಳಕಾಲ್ಮೂರು ಜನಧ್ವನಿ ವಾರ್ತೆ ಮಾ.8. ಪ್ರಭಾಕರ್ ಮ್ಯಾಸನಾಯಕ ಬಿಜೆಪಿ ಟಿಕೆಟ್​ನ ಪ್ರಬಲ ಆಕಾಂಕ್ಷಿಯಾಗಿದ್ದು ಪಕ್ಷ ಸಂಘಟನೆ ಜತೆಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸಾಮಾಜ ಸೇವೆ ಮಾಡುತ್ತಿದ್ದಾರೆ. ಈಗಾಗಲೇ ಹಲವಾರು ಸಮಾಜ ಸೇವಾ ಕಾರ್ಯಗಳನ್ನ ಮಾಡುತ್ತಿದ್ದು, ಪಕ್ಷ ಸಂಘಟನೆಯನ್ನೂ ಮಾಡಿದ್ದಾರೆ. ಕೊವಿಡ್​ ಸಮಯದಲ್ಲಿ ಜನರಿಗೆ ಫುಡ್​ ಕಿಟ್​ಗಳನ್ನು ಹಂಚಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ಕೊಡಿಸಿದ್ದಾರೆ. ಮೂಲ ನಿವಾಸಿ, ಯುವ ನಾಯಕ ಮತ್ತು ಆರ್​ಎಸ್​ಎಸ್​ ಹಿನ್ನೆಲೆಯೇ ಪ್ರಭಾಕರ್ ಮ್ಯಾಸನಾಯಕಗೆ ಬೆನ್ನೆಲುಬಾಗಿದೆ. ವಿದ್ಯಾರ್ಥಿ ದೆಸೆಯಿಂದಲೇ ಶಿಸ್ತಿನ ಕೆಲಸ ಮಾಡ್ತಿರೋ ಮ್ಯಾಸನಾಯಕಗೆ ಅವರ ಉಪಜಾತಿ ಮತದಾರರು ಬೆಂಬಲಕ್ಕೆ ನಿಲ್ಲಲಿದ್ದಾರೆ. ಸುಮಾರು 1 ಲಕ್ಷಕ್ಕೂ ಹೆಚ್ಚು ಮ್ಯಾಸನಾಯಕರಿದ್ದು, ಇವರೆಲ್ಲಾ ಪ್ರಭಾಕರ್ ಬೆನ್ನಿಗೆ ನಿಲ್ಲೋ ಭರವಸೆ ಇದೆ
ಆರ್​ಎಸ್​​​ಎಸ್​​ ಮೂಲದ ಪ್ರಭಾಕರ್ ಮ್ಯಾಸನಾಯಕ ಬಿಜೆಪಿ ಟಿಕೆಟ್​ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಈಗಾಗಲೇ ಹಲವಾರು ಸಮಾಜ ಸೇವಾ ಕಾರ್ಯಗಳನ್ನ ಮಾಡುತ್ತಿದ್ದು, ಪಕ್ಷ ಸಂಘಟನೆಯನ್ನೂ ಮಾಡಿದ್ದಾರೆ.


ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಿಕೊಟ್ಟ ಪ್ರಭಾಕರ ಮ್ಯಾಸನಾಯಕ

ಮೊಳಕಾಲ್ಮೂರು ಕ್ಷೇತ್ರದ ಹೊಸದಡಗೂರು ಗ್ರಾಮಕ್ಕೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದಾಗ ಬಸ್ ಸೌಲಭ್ಯ ಇಲ್ಲದೇ ವಿದ್ಯಾರ್ಥಿಗಳಿಗೆ ರೈತರಿಗೆ ಹಾಗೂ ಮಹಿಳೆಯರಿಗೆ ತುಂಬಾ ತೊಂದರೆಯಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದರು.
ಅಂದೇ ಈ ಬಗ್ಗೆ ಸಂಬಂಧಪಟ್ಟ *ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಉನ್ನತ ಅಧಿಕಾರಿಗಳಿಗೆ* ಮಾತನಾಡಿ ನಾಗರಿಕರಿಗೆ ಅನುಕೂಲವಾಗುವಂತೆ ಬಸ್ ಸೌಕರ್ಯ ಒದಗಿಸಿಕೊಡುವಂತೆ ಮನವಿ ಮಾಡಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ. *ನುಡಿದಂತೆ ನಡೆದ ಕ್ರಿಯಾಶೀಲ ವ್ಯಕ್ತಿ ಪ್ರಭಾಕರ ಮ್ಯಾಸನಾಯಕ* ಇಂತಹ ವ್ಯಕ್ತಿ ಇಲ್ಲಿ ಶಾಸಕರಾಗಬೇಕು ಎಂದು ಜನರು ಬಯಸುತ್ತಿದ್ದಾರೆ.
ಇದರಿಂದಾಗಿ ಜಾಗೀರ್ ಬುಡ್ಡೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೊಲ್ಲರಹಟ್ಟಿ, ಜಂಬಲಮಲ್ಕಿ, ಹೊಸದಡಗೂರು ಹಾಗೂ ಬಸಾಪುರ ಗ್ರಾಮಗಳ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಜನರ ಸಂಕಷ್ಟಕ್ಕೆ ಸ್ಪಂದಿಸಿ ಬಸ್ ಸೌಕರ್ಯ ಒದಗಿಸಿಕೊಟ್ಟಂತ ಸಂಸ್ಥೆಯ *ವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ಉನ್ನತ ಅಧಿಕಾರಿಗಳಿಗೆ ಪ್ರಭಾಕರ ಮ್ಯಾಸನಾಯಕ* ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಓಬಳಾಪುರ ಗ್ರಾಮ ಪಂಚಾಯಿತಿ ದೊಡ್ಡ ಭಾದಿಹಳ್ಳಿ ಗ್ರಾಮದ ರೈತ *ಶಿವಣ್ಣ ಮತ್ತು ಮಹಾಂತೇಶ* ಅವರು ಕಳೆದ ಒಂದು ವಾರದಿಂದ ಸುಟ್ಟು ಹೋಗಿರುವ ಟಿ. ಸಿ ಬದಲಾವಣೆಗಾಗಿ *ತಳಕು ಮತ್ತು ದೊಡ್ಡಉಳ್ಳಾರತಿ* ಬೆಸ್ಕಾಂ ಎಸ್.ಒ ಮತ್ತು ಎಇಇ ಕಚೇರಿಗೆ ಅಲೆದಾಡಿದ್ದರು. ಯಾವುದೇ ಕೆಲಸ ಆಗಿರಲಿಲ್ಲ ರೈತರು ಈ ವಿಚಾರವಾಗಿ ಪ್ರಭಾಕರ ಮ್ಯಾಸನಾಯಕರನ್ನು ಸಂಪರ್ಕಿಸಿದರು. ಕೂಡಲೇ ಮ್ಯಾಸ ನಾಯಕರು ದಾವಣಗೆರೆ ಬೆಸ್ಕಾಂ ಸೂಪರ್ಡೆಂಟ್ ಇಂಜಿನಿಯರ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಇಂದು ಟಿಸಿ ವಿತರಣೆ ಮಾಡಿಲ್ಲ ಎಂದರೆ ಇಂಧನ ಮಂತ್ರಿಗಳಿಗೆ ವಿಚಾರ ತಿಳಿಸಿ ಧರಣಿ ಕೂರುವುದಾಗಿ ತಿಳಿಸಿದರು. ಈ ಕೂಡಲೇ ಒಂದೇ ಗಂಟೆಯಲ್ಲಿ ಇಂದು ಟಿ.ಸಿ. ವಿತರಿಸಿದರು. ಇದರಿಂದಾಗಿ ರೈತನ ಮೊಗದಲ್ಲಿ ಮಂದಹಾಸ ಮೂಡಿ ಬೆಳೆ ಉಳಿಸಿಕೊಳ್ಳುವುದಾಗಿ ಹೇಳಿ ತಳಕು ಬೆಸ್ಕಾಂ ಕಚೇರಿಯಿಂದ ಟಿ.ಸಿ ಕೊಡಿಸಿದ್ದಾರೆ ಚುನಾವಣೆ ಕೆಲವೇದಿನಗಳು ಬಾಕಿ ಇದ್ದು ಕ್ಷೇತ್ರದಲ್ಲಿ ಸಂಚರಿಸಿ ಪಕ್ಷ ಸಂಘಟನೆ ಹಾಗೂ ಸಮಾಜ ಸೇವೆ ಮಾಡುವ ಮೂಲಕ ಮತದಾರರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಇವರಿಗೆ ಬಿಜೆಪಿ ಟಿಕೆಟ್ ನೀಡುವಂತೆ ಕ್ಷೇತ್ರದ ಮತದಾರರು ಬಿಜೆಪಿ ವರಿಷ್ಠರಿಗೆ ಆಗ್ರಹಿಸಿದ್ದಾರೆ

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *