ನೆಮ್ಮದಿ ಬದುಕಿಗೆ ಧ್ಯಾನ ಆದ್ಯಾತ್ಮಿಕ ಚಿಂತನೆಗಳಿಂದ ಮಾತ್ರ ಸಾಧ್ಯ ಎಂದು ಶ್ರೀ ಸತ್ ಉಪಾಸಿ

by | 19/02/23 | ಸಾಮಾಜಿಕ

ಚಳ್ಳಕೆರೆ ಫೆ.19
ಆಧುನಿಕ ಭರಾಟೆಯಲ್ಲಿ ಶಾಂತಿ, ನೆಮ್ಮದಿ ಇಲ್ಲದೇ ಒತ್ತಡದ ಬದುಕು ಅನಿವಾರ್ಯವಾಗಿದ್ದು. ನೆಮ್ಮದಿ ಬದುಕಿಗೆ ಧ್ಯಾನ ಆದ್ಯಾತ್ಮಿಕ ಚಿಂತನೆಗಳಿAದ ಮಾತ್ರ ಸಾಧ್ಯ ಎಂದು ಶ್ರೀ ಸತ್ ಉಪಾಸಿ ಮಲ್ಲಪ್ಪಸ್ವಾಮಿಗಳು ಆರ್ಶೀವನ ನೀಡಿದರು.
ತಾಲೂಕಿನ ದೊಡ್ಡೇರಿ ಸಮೀಪದ ಶ್ರೀ ಕನ್ನೇಶ್ವರಸ್ವಾಮಿ ಆಶ್ರಮದಲ್ಲಿ ನಡೆದ ಶಿವರಾತ್ರಿ ಜಾಗರಣೆ ಹಾಗೂ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಶ್ರಮದಲ್ಲಿ ಭಜನೆ, ದ್ಯಾನ , ಶಿವನ ಸ್ಮರಣೆ, ತತ್ವಪದಗಳು, ಗುರುದೀಕ್ಷೆ, ಹೋಮ ,ಹವನ, ವಿವಿಧ ಸಾಂಸ್ಕೃತ ಕಾರ್ಯಕ್ರಮಗಳಹಾಗೂ ವಿಶೇಷ ಪೂಜಾಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಿವರಾತ್ರಿ ಜಾಗರಣೆ ಕಾರ್ಯಕ್ರಮದಲ್ಲಿ ಕರ್ನಾಟಕ, ಆಂದ್ರ ಸೇರಿದಂತೆ ವಿವಿಧ ದೇಶಗಳಿಂದಲೂ ಇಲ್ಲಿಗೆ ಭಕ್ತಸಾಗರ ಹರಿದು ಬಂದಿತ್ತು ಕಾರ್ಯಕ್ರಮದಲ್ಲಿ ಶಾಸಕ, ಸಂಸದಸರು, ಜನಪ್ರತಿನಿಧಿಗಳು ಗಣ್ಯರು ಭಾಗವಹಿಸಿದ್ದರು.
ಈ ಮಾರ್ಗವಾಗಿ ಸಚಿವರು ಅಥವಾ ಗಣ್ಯರು ಈ ಭಾಗಕ್ಕೆ ಬಂದರೆ ಶ್ರೀ ಕನ್ನೇಶ್ವರಸ್ವಾಮಿ ಆಶ್ರಮಕ್ಕೆ ಬೇಟಿ ನೀಡಿ ಶ್ರೀ ಸತ್ ಉಪಾಸಿ ಮಲ್ಲಿಕಾರ್ಜುನಸ್ವಾಮಿಯವರ ದರ್ಶನ ಪಡೆಯುವ ವಾಡಿಕೆ ಇದೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *