ಹಿರಿಯೂರು :
ನಗರದ ನೆಹರು ಮೈದಾನದಲ್ಲಿರುವ ಕ್ವಾಲಿಟಿ ಕಾಫಿ ವರ್ಕ್ಸ್ ನ ಅಂಗಡಿ ಮಾಲೀಕರಾದ ಎಂ.ರಾಧಾಕೃಷ್ಣರವರ ಪಟಾಕಿ ಅಂಗಡಿಯಲ್ಲಿ ಹಸಿರು ಪಟಾಕಿಗಳೊಂದಿಗೆ ನಿಷೇದಿತ ಪಟಾಕಿಗಳನ್ನು ಮಾರಾಟ ಮಾಡುತ್ತಿದ್ದು, ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ಈ ಅಂಗಡಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂಬುದಾಗಿ ಜಿಲ್ಲಾ ಪರಿಸರ ಅಧಿಕಾರಿ ಪ್ರಕಾಶ್ ಹೇಳಿದರು.
ನಗರದ ನೆಹರುಮೈದಾನದಲ್ಲಿ ನಗರಸಭಾ ಪೌರಾಯುಕ್ತರು ಮತ್ತು ಜಿಲ್ಲಾ ಪರಿಸರ ಅಧಿಕಾರಿಗಳು, ಉಪಪರಿಸರ ಅಧಿಕಾರಿಗಳು, ನಗರ ಪೋಲೀಸ್ ಠಾಣೆ ನಿರೀಕ್ಷಕರು, ಪೋಲೀಸ್ ಉಪನಿರೀಕ್ಷಕರು, ಅಗ್ನಿ ಶ್ಯಾಮಕದಳ ಅಧಿಕಾರಿಗಳು, ತಹಶೀಲ್ದಾರರ ಪರವಾಗಿ ಶಿರಸ್ತೇದಾರರು, ರಾಜಸ್ವ ನಿರೀಕ್ಷಕರು, ನಗರಸಭೆ ಆರೋಗ್ಯ ಅಧಿಕಾರಿಗಳು ಇವರ ಸಮಕ್ಷಮದಲ್ಲಿ ಅಂಗಡಿಯನ್ನು ಮುಟ್ಟುಗೋಲು ಹಾಕಿ ನಂತರ ಅವರು ಮಾತನಾಡಿದರು.
ಈ ಸಾರಿಯ ದೀಪಾವಳಿಹಬ್ಬದ ಸಂದರ್ಭದಲ್ಲಿ ಪರಿಸರ ಸಂರಕ್ಷಿಸಲು ಹಸಿರು ಪಟಾಕಿಗಳನ್ನೇ ವರ್ತಕರು ಮಾರಾಟ ಮಾಡಬೇಕು, ಹಾಗೂ ಅಗ್ನಿ ಅನಾಹುತ ತಪ್ಪಿಸಲು ಅಗತ್ಯ ಸುರಕ್ಷತಾಕ್ರಮ ಕೈಗೊಳ್ಳುವ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳ ಸ್ಪಷ್ಟ ಆದೇಶನೀಡಲಾಗಿದ್ದು, ಈ ಆದೇಶವನ್ನು ಪಟಾಕಿ ಮಾರಾಟಗಾರರು ಉಲ್ಲಂಘಿಸಿ ಹಸಿರು ಪಟಾಕಿಗಳ ಜೊತೆ ನಿಷೇದಿತ ಪಟಾಕಿಗಳನ್ನು ಮಾರಾಟಮಾಡುತ್ತಿರುವ ಹಿನ್ನೆಲೆಯಲ್ಲಿ ಅಗತ್ಯಕ್ರಮ ಕೈಗೊಂಡು ಎಫ್.ಐ.ಆರ್. ದಾಖಲಿಸಲಾಗಿದೆ ಎಂಬುದಾಗಿ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪರಿಸರ ಅಧಿಕಾರಿ ಇ.ಪ್ರಕಾಶ್, ಉಪಪರಿಸರ ಅಧಿಕಾರಿ ಪಿ.ರಾಜೇಶ್, ನಗರಸಭೆ ಪೌರಾಯುಕ್ತರಾದ ಹೆಚ್.ಮಹಂತೇಶ್, ಅಗ್ನಿ ಶಾಮಕದಳ ಸುಭಾನ್ ಸಾಬ್, ಶಿರಸ್ತೇದಾರ್ ತಿಪ್ಪೇಸ್ವಾಮಿ, ತಾಲ್ಲೂಕು ಕಚೇರಿ ಸಿಬ್ಬಂದಿವರ್ದವರು ಇತರರು ಉಪಸ್ಥಿತರಿದ್ದರು.
ನಿಷೇದಿತಪಟಾಕಿಗಳ ಮಾರಾಟಮಾಡುತ್ತಿದ್ದ ಹಿನ್ನೆಲೆ ನಗರದ ಪಟಾಕಿ ಅಂಗಡಿಗಳ ಮೇಲೆ ದಢೀರ್ ದಾಳಿ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments