ನಾಯಕನಹಟ್ಟಿ ಪಟ್ಟಣಕ್ಕೆ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಆಗಮನ 6ನೇ ವರ್ಷದ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶ್ರೀಗಳು.

by | 13/01/24 | ಸುದ್ದಿ

ನಾಯಕನಹಟ್ಟಿ:: ರಾಜ್ಯದಲ್ಲಿ ನಾಯಕ ಸಮುದಾಯ 4ನೇ ಸ್ಥಾನವನ್ನು ಹೊಂದಿದೆ ವಾಲ್ಮೀಕಿ ಪೀಠವು ಮಹಾಋಷಿ ರಾಮ ಹಾಗೂ ವಾಲ್ಮೀಕಿ ಸ್ಮರಣೆಯನ್ನು ಶೋಷಿತರ ಜಾಗೃತಿಗೆ ಬಳಸುತ್ತಿದೆ ಎಂದು ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನ ನಂದ ಸ್ವಾಮೀಜಿ ಹೇಳಿದ್ದಾರೆ.

ಶುಕ್ರವಾರ ಪಟ್ಟಣದ ಶ್ರೀ ಹಟ್ಟಿ ಮಲ್ಲಪ್ಪ ನಾಯಕ ಕಚೇರಿಯಲ್ಲಿ 6ನೇ ವರ್ಷದ ವಾಲ್ಮೀಕಿ ಜಾತ್ರೆ ಪೂರ್ವಭಾವಿ ಸಭೆ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು. ಶೋಷಿತ ಬೇಡ ಅಡವಿ ಅರಣ್ಯದಲ್ಲಿ ಬೇಟೆಯಾಡಿಕೊಂಡು ಜೀವನ ಮಾಡುತ್ತಿದ್ದ ಈ ನಾಡಿನಲ್ಲಿ ವಾಸವಾಗಿರುವ ಸುಮಾರು 50ರಿಂದ 60 ಲಕ್ಷ ಜನಸಂಖ್ಯೆ ಹೊಂದಿರುವ ನಾಯಕ ಸಮುದಾಯ ಮೂಲತ ಕುಲ ಕಸಬು ಬೇಟೆ ಹಾಡಿಕೊಂಡು ನಮ್ಮ ಹಿರಿಯರು ಬದುಕನ್ನು ಕಟ್ಟಿಕೊಂಡಿದ್ದಾರೆ.


ಶೋಷಿತ ಬೇಡ ಸಮುದಾಯದ ವಾಲ್ಮೀಕಿ ಕ್ರಮೇಣ ಅಪಾರ ಪಾಂಡಿತ್ಯ ಬಳಸಿಕೊಂಡು ಜಗತ್ತಿಗೆ ಬೃಹತ್ ಕೃತಿ ರಾಮಾಯಣ ರಚಿಸಿದರು.
ಆ ಮಹಾ ಕೃತಿಯ ಮೂಲಕ ರಾಮ ನಾಮ ಜಗತ್ತಿಗೆ ಪರಿಚಯವಾಯಿತು ಎಂದು ತಿಳಿಸಿದರು.
ರಾಜ್ಯದಲ್ಲಿರುವ ಸುಮಾರು 60 ಲಕ್ಷ ನಾಯಕ ಸಮಾಜದವರಿಗೆ ನಮ್ಮದೇ ಆದ ಸುಧೀರ್ಘ ಇತಿಹಾಸವಿದೆ.
ಶ್ರೀ ವಾಲ್ಮೀಕಿ
ಗುರುಪೀಠದಿಂದ ಪ್ರತಿ ವರ್ಷ ಫೆ.8 ಮತ್ತು 9ರಂದು ವಾಲ್ಮೀಕಿ ಜಾತ್ರೆ ಆಯೋಜಿಸುವ ಮೂಲಕ ಸಮಾಜದವರಲ್ಲಿ ಇತಿಹಾಸವನ್ನು ಪರಿಸುವ ವೈಚಾರಿಕತೆ ಜಾಗೃತಿ ಮೂಡಿಸಲಾಗುತ್ತದೆ.
ಡಾ. ಬಿ ಆರ್ ಅಂಬೇಡ್ಕರ್ ರಚಿಸಿರುವ ಸಂವಿಧಾನ ಬಗ್ಗೆ ಎಲ್ಲಾ ಶೋಷಿತರಲ್ಲಿ ಅರವಿನ ಜಾಗೃತಿ ಮೂಡಿಸಲಾಗುತ್ತದೆ ಜಾತ್ರೆ ಕೇವಲ ಒಂದು ಧಾರ್ಮಿಕ ಕಾರ್ಯವಲ್ಲ ಎಂದರು.
ಫೆ.8. ರಂದು ಬೆಳಗ್ಗೆ 7ಕ್ಕ ರಾಜನಹಳ್ಳಿಯಿಂದ ಗುರುಪೀಠ ದವರೆಗೆ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮಹಾಋಷಿ ವಾಲ್ಮೀಕಿ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ.
ಫೆ.8ಕ್ಕೆ ವಾಲ್ಮೀಕಿ ಧ್ವಜಾರೋಹಣ ಸರ್ವಧರ್ಮ ಸಾಮೂಹಿಕ ವಿವಾಹ ನಂತರ ಮಹಿಳೆಯರ ನೌಕರರ ಯುವಕರ ಗೋಷ್ಠಿಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಾಸನ ತಂಡದವರಿಂದ ಬೆಳಗಿನ ಜಾವದವರೆಗೆ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನಗೊಳ್ಳಲಿದ್ದು ಅದರಿಂದ ನಾಯಕನಹಟ್ಟಿ ಹೋಬಳಿಯ ಎಲ್ಲಾ ನಾಯಕ ಸಮುದಾಯದವರು ಆರನೇ ವರ್ಷದ ವಾಲ್ಮೀಕಿ ಜಾತ್ರೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.


ಹಟ್ಟಿ ಮಲ್ಲಪ್ಪ ನಾಯಕ ಸಂಘದ ನಿರ್ದೇಶಕ ಬಂಡೆ ಕಪಿಲೆ ಓಬಣ್ಣ, ಪ್ರಾಸವಿಕವಾಗಿ ಮಾತನಾಡಿ ನಮ್ಮ ರಾಜನಹಳ್ಳಿ ಗುರುಪೀಠದ ಪ್ರಸನ್ನ ನಂದಪುರಿ ಸ್ವಾಮೀಜಿ 7.5. ಪರ್ಸೆಂಟ್ ಮೀಸಲಾತಿಗಾಗಿ ಮಳೆ ಚಿಳಿ ಗಾಳಿ ಎನ್ನದೆ ಹೋರಾಡಿದ್ದಾರೆ ನಾಯಕ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ ಅವರ ಕಾರ್ಯ ಸಾಧನೆ ಶ್ಲಾಘನೀಯ ಇಂತಹ ಪೂಜ್ಯರ ಪಡೆದಿರುವುದು ನಮ್ಮ ಪುಣ್ಯ ಎಂದರು.

ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿ ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು ಮಾತನಾಡಿ ನಾಯಕನಹಟ್ಟಿ ಹೋಬಳಿಯಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಸಮುದಾಯ ನಾಯಕ ಸಮುದಾಯ ಇಲ್ಲಿ ಬುಡಕಟ್ಟು ಸಂಸ್ಕೃತಿ ಆಚಾರ ವಿಚಾರಗಳು ಇಂದಿಗೂ ಜೀವಂತವಾಗಿ ಅದರಿಂದ ಆರನೇ ವರ್ಷದ ಆದಿ ಕವಿ ಮಹಾಋಷಿ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ಹೋಬಳಿಯ ಪ್ರತಿಯೊಬ್ಬರು ಸಂಭ್ರಮ ಸಡಗರದಿಂದ ಜಾತ್ರೋತ್ಸವದಲ್ಲಿ ಭಾಗಿಯಾಗಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಹಟ್ಟಿ ಮಲ್ಲಪ್ಪನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿ ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು, ಬಂಡೆ ಕಪಲೆ ಓಬಣ್ಣ, ಎಸ್. ಓಬಯ್ಯ, ಭೀಮಗೊಂಡನಹಳ್ಳಿ ಹನುಮಣ್ಣ, ಚಿನ್ನಯ್ಯ, ಪಾಪಣ್ಣ, ಭೈಯಣ್ಣ, ಜಿ ಬಿ ಮುದಿಯಪ್ಪ, ಟಿ. ಬಸಪ್ಪ ನಾಯಕ, ಎಸ್ ಟಿ ಬೋರ್ ಸ್ವಾಮಿ, ಮುಖಂಡರಾದ ಗುಂತಕೋಲಮ್ಮನಹಳ್ಳಿ ಮೀಸೆ ಓಬಯ್ಯ, ಚಂದ್ರಣ್ಣ, ಗಿಡ್ಡಾಪುರ ಬಿ. ಶಾರದಮ್ಮ, ನಲಗೇತನಹಟ್ಟಿ ನಲ್ಲನ ದೊಡ್ಡ ಬೋರಯ್ಯ, ಎ. ಎಂ ಬೋರಯ್ಯ, ನಲ್ಲನ ದಾಸಯ್ಯ, ಮಲ್ಲೂರಹಳ್ಳಿ ಬಿ. ಕಾಟಯ್ಯ, ಕೆ ಟಿ ನಾಗರಾಜ್, ರೇಖಲಗೆರೆ ಅಶೋಕ್, ವೀರೇಶ್, ತಿಪ್ಪೇಸ್ವಾಮಿ, ರಾಮಸಾಗರ ಮಂಜಣ್ಣ, ಎಸ್ ಶಿವತಿಪ್ಪೇಸ್ವಾಮಿ. ಸೇರಿದಂತೆ ನಾಯಕನಹಟ್ಟಿ ಹೋಬಳಿಯ ನಾಯಕ ಸಮುದಾಯದ ಎಲ್ಲಾ ಹಿರಿಯರು ಮುಖಂಡರು ಯುವಕರು ಭಾಗವಹಿಸಿದ್ದರು

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page