ನಾಗರಾಜ.ಓ ಅವರಿಗೆ ಪಿಹೆಚ್‍ಡಿ ಪದವಿ ಪ್ರದಾನ

by | 15/11/23 | ಶಿಕ್ಷಣ


ಚಳ್ಳಕೆರೆ ನ. 15:
ಚಳ್ಳಕೆರೆ ತಾಲೂಕಿನ ದಾಸರಗಿಡ್ಡಯ್ಯನಹಟ್ಟಿ (ಮಜಿರೆ-ಕಾಟವ್ವನಹಳ್ಳಿ) ಗ್ರಾಮದ ಭಾಗ್ಯಮ್ಮ, ಓಬಯ್ಯ ದಂಪತಿಗಳ ಮಗನಾದ ನಾಗರಾಜ.ಓ ಅವರಿಗೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿಯನ್ನು ಪ್ರದಾನ ಮಾಡಲಾಗಿದೆ.
ಇವರು ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಪಿ.ಎಸ್.ಶಶಿಧರ ಅವರ ಮಾರ್ಗದರ್ಶನದಲ್ಲಿ “ಎನ್ ಎಕಾನಾಮಿಕ್ ಆನಾಲಿಸಿಸ್ ಆಫ್ ಪಲ್ಸಸ್ ಪ್ರೊಡಕ್ಷನ್ ಅಂಡ್ ಮಾರ್ಕೆಟಿಂಗ್ ಇನ್ ಕರ್ನಾಟಕ” ಎಂಬ ವಿಷಯದ ಕುರಿತು ಮಂಡಿಸಿದ ಮಹಾ ಪ್ರಬಂಧಕ್ಕೆ ಪಿ.ಎಚ್.ಡಿ ಪದವಿಯನ್ನು ನೀಡಲಾಗಿದೆ ಎಂದು ವಿಶ್ವ ವಿದ್ಯಾಲಯದ ಪರೀಕ್ಷಾ ವಿಭಾಗವು ಪ್ರಕಟಣೆಯಲ್ಲಿ ತಿಳಿಸಿದೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *