ನವರಾತ್ರಿ ಹಂಗವಾಗಿ ಯುವತಿಯರು, ಮಹಿಳೆಯರು, ಮತ್ತು ಮಕ್ಕಳು ಬೆಳಗಿನ ಜಾವ ಬನ್ನಿಮರಕ್ಕೆ ಪೂಜೆಸಲು ಮುಗಿ ಬಿದ್ದ ಮಹಿಳೆಯರು.

by | 24/10/23 | ಸುದ್ದಿ

ಚಳ್ಳಕೆರೆ ಅ24. ನವರಾತ್ರಿ ಹಬ್ಬ ಆರಂಭವಾದರೆ ಸಾಕು ಮಹಿಳೆಯರಿಗೆ ಎಲ್ಲಿಲ್ಲದ ಸಡಗರ, ಸಂಭ್ರಮ. ಕಾರಣ ನವರಾತ್ರಿ ಹಬ್ಬದ 9 ದಿನಗಳ ಕಾಲ ಮಹಿಳೆಯರು ವಿಶೇಷ ಮೌನವೃತ ಆಚರಣೆ ಮಾಡುತ್ತಿರುವುದನ್ನು ವಿಶೇಷವಾಗಿ ಕಂಡು ಬರುತ್ತದೆ. .ನವರಾತ್ರಿ ಆರಂಭವಾದ ಪ್ರಯುಕ್ತ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ನವರಾತ್ರಿ ಹಬ್ಬದಲ್ಲಿ ಬೆಳಗಿನ ಮಬ್ಬುಗತ್ತಲಲ್ಲಿ ವಿಶಿಷ್ಠವಾದ ಮೌನಾಚರಣೆಯೊಂದನ್ನು ಆಚರಿಸುತ್ತಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಇಲ್ಲಿನ ಮಹಿಳೆಯರು ಬೆಳಗಿನ ಬ್ರಾಹ್ಮಿ ಮುಹೂರ್ತದಲ್ಲಿ ಮೌನವಾಗಿ ಬನ್ನಿ ಮಹಾಕಾಳಿ ಕಟ್ಟೆಗೆ ಹೋಗಿ ಪೂಜೆ ಸಲ್ಲಿಸಿ ವಿಶೇಷವಾದ ಮೌನವೃತಾಚರಣೆ ಬೆಳಗಿನ ಜಾವ ಆಚರಿಸುತ್ತಿರುವುದು ಕಂಡು ಬರುತ್ತದೆ.

ಆಶ್ವೀಜ ಮಾಸದ ನವರಾತ್ರಿಯ ಪ್ರತಿದಿನ ಯುವತಿಯರು, ಮಹಿಳೆಯರು, ಮತ್ತು ಮಕ್ಕಳು ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಮನೆ ಸ್ವಚ್ಛಗೊಳಿಸಿ, ದೇವರ ಕೋಣೆಯಲ್ಲಿ ರಂಗೋಲಿ ಹಾಕಿ, ಶೃಂಗಾರ ಮಾಡಿ ಮೌನವಾಗಿಯೇ ಇದ್ದು, ಮಡಿವಂತಿಕೆಯಿಂದ ಮನೆಯಲ್ಲಿ ದೇವರಿಗೆ ದೀಪ ಹಚ್ಚಿ ಗುಂಪು ಗುಂಪಾಗಿ ಮಬ್ಬು ಕತ್ತಲಲ್ಲಿ ಕೈಯಲ್ಲಿ ಹೂ-ಕಾಯಿ, ಕುಂಕುಮ ಹಣ್ಣುಹಂಪಲುಗಳೊಂದಿಗೆ ಬನ್ನಿ ಮಹಾಕಾಳಿ ಕಟ್ಟೆಗೆ ಯಾರೊಂದಿಗೂ ಮಾತನಾಡದೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಚಳ್ಳಕೆರೆ ನಗರದ ತಾಲೂಕು ಪಂಚಾಯತ್ ಕಚೇರಿ ಆವರಣ.ಐಟಿಐ ಜಾಲೇಜು ಮುಂಭಾಗ.ಕಾಳಿಕಾಂಭ ದೇವಸ್ಥಾನ. ವೀರಭದ್ರಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧ ಕಡೆಯಿರುವ ಬನ್ನಿಮರದ ಕಟ್ಟೆಗೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ಅರಕೆಗಳನ್ನು ಮಾಡಿಕೊಂಡಿದ್ದಾರೆ ಈ ಪೂಜೆಯನ್ನು ದಸರಾ ಹಬ್ಬದ ನವಮಿಯಲ್ಲಿ ಕೆಲವು ಮಹಿಳೆಯರು ಮೂರು ದಿನ.ಐದು ದಿನ ಇನ್ನು ಕೆಲವರು ಒಂಬತ್ತು ದಿನ ವಿಶೇಷ ಬನ್ನಿಮರದ ಪೂಜೆ ಸಲ್ಲಿಸುತ್ತಾರೆ.
ಬನ್ನಿ ಮರದ ಪೂಜೆ ಸಲ್ಲಿಸುವಾಗ ಗುಂಪು ಗುಂಪಾಗಿದ್ದರೂ ಮೌನ ವೃತದೊಂದಿಗೆ ಆರಣೆ ಮಾಡಿ ನಂತರ ಮನೆಗೆ ಹೋಗಿ ಮೌನವೃತ ಆರಣೆ ಬಿಡುತ್ತಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *