ಹಿರಿಯೂರು :
ಪ್ರಧಾನಮಂತ್ರಿ ಸ್ವ-ನಿಧಿ ಮತ್ತು ಸ್ವ-ನಿಧಿ ಸೇವಾ ಸಮೃದ್ಧಿ ಮಾಸಾಚರಣೆ ಪ್ರಯುಕ್ತ ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಬೀದಿಬದಿ ವ್ಯಾಪಾರಿಗಳು ಆತ್ಮ ನಿರ್ಭರ ನಿಧಿ ಯೋಜನೆಯಡಿ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಬೀದಿಬದಿ ವ್ಯಾಪಾರಿಗಳು ಈ ಸಾಲ ಸೌಲಭ್ಯ ಪಡೆದು ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಹೆಚ್.ಮಹಂತೇಶ್ ಹೇಳಿದರು.
ನಗರದಲ್ಲಿ ನಗರಸಭೆ ವತಿಯಿಂದ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಸಾಲ ಪಡೆಯುವ ಬಗ್ಗೆ ಸೋಮವಾರ ಬೀದಿಬದಿ ವ್ಯಾಪಾರಿಗಳಿಗೆ ಬೀದಿನಾಟಕ ಹಾಗೂ ಡಿಜಿಟಲ್ ಕೋಡ್ ವಿತರಿಸುವ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮದ ನೇತೃತ್ವವನ್ನು ವಹಿಸಿ, ಅವರು ಮಾತನಾಡಿದರು.
ದೋಬಿ ಮತ್ತು ಇಸ್ತ್ರಿ ಸೇವೆ ಮಾಡುವರು, ಹಳೆಯ ಪಾತ್ರೆಗಳ ವ್ಯಾಪಾರಿಗಳು, ಬಡಿಗಿ, ಚಮ್ಮಾರರು, ಬಿದರಿನ ಬುಟ್ಟಿ ಬೊಂಬು ಮಾರುವವರು, ಏಣಿ ವ್ಯಾಪಾರಸ್ಥರು ಹೂವಿನ ಕುಂಡಗಳನ್ನು ಮಾರುವವರು, ನೇಯ್ಗೆದಾರರು, ಎಳನೀರು ಮಾರಾಟಗಾರರು, ಆಹಾರ ತಯಾರಿಸಿ ಮಾರುವವರು, ದಿನಪತ್ರಿಕೆ ಹಾಲು ಹಂಚುವವರನ್ನು ಬೀದಿಬದಿ ವ್ಯಾಪಾರಿಗಳೆಂದು ಪರಿಗಣಿಸಿ, ಅವರಿಗೂ ಪ್ರಧಾನಮಂತ್ರಿ ಸ್ವ ನಿಧಿ ಯೋಜನೆ ಅಡಿ ಸಾಲ ಮತ್ತು ಇತರೆ ಸೌಲಭ್ಯ ಒದಗಿಸಲಾಗುವುದು ಎಂಬುದಾಗಿ ಅವರು ಮಾಹಿತಿ ನೀಡಿದರು.
ಈ ಸೌಲಭ್ಯ ಪಡೆಯಲು ಆಸಕ್ತಿಯುಳ್ಳವರು ಪಡಿತರ ಕಾರ್ಡ್, ಆಧಾರ ಕಾರ್ಡ್, ಚುನಾವಣೆ ಗುರುತಿನ ಚೀಟಿ, ವೈಯಕ್ತಿಕ ಉಳಿತಾಯದ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ವ್ಯಾಪಾರ ಮಾಡುತ್ತಿರುವ ಸ್ಥಳದ ಫೋಟೋ, ವ್ಯಾಪಾರಿಗಳ ಪಾಸ್ ಫೋರ್ಟ್ ಸೈಜ್ ನ 2 ಫೋಟೋ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಈ ದಾಖಲೆಗಳನ್ನು ನಗರಸಭೆ ಕಚೇರಿಗೆ ತಲುಪಿಸುವ ಮೂಲಕ ಹೆಸರು ನೊಂದಾಯಿಸಿಕೊಂಡು ಈ ಸೌಲಭ್ಯ ಪಡೆಯಬೇಕು ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಮುದಾಯ ಸಂಘಟನಾ ಅಧಿಕಾರಿ ಶಿವಶಂಕರ್, ಸಮುದಾಯ ಸಂಪನ್ಮೂಲ ವ್ಯಕ್ತಿ ತನುಜ, ಎನ್.ಜಿ.ಓ ರಾಜೇಶ್ವರಿ, ಕಲಾವಿದರಾದ ಗಂಗಾಧರ್, ಕೃಷ್ಣಮೂರ್ತಿ, ಸುರೇಶ್, ರಮೇಶ್, ಮತ್ತು ಬೀದಿಬದಿ ವ್ಯಾಪಾರಿಗಳು ಭಾಗವಹಿಸಿದ್ದರು.
ನಗರಸಭೆಯಿಂದ ಪಿಎಂ ಸ್ವನಿಧಿ ಯೋಜನೆಯಡಿ ಸಾಲ ಪಡೆಯುವ ಕುರಿತು ಬೀದಿಬದಿ ವ್ಯಾಪಾರಿಗಳಿಗೆ ಜಾಗೃತಿ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments