ಹಿರಿಯೂರು :
ದೇಶದ ಪ್ರತಿಯೊಬ್ಬರಲ್ಲೂ ಏಕತೆ ಮನೋಭಾವ ಉಂಟಾಗಬೇಕು, ದೇಶಪ್ರೇಮ, ದೇಶಭಕ್ತಿ ಮೂಡಿಸಬೇಕೆಂಬ ಉದ್ದೇಶದಿಂದ ದೇಶದಾದ್ಯಂತ “ನನ್ನ ಮಣ್ಣು ನನ್ನ ದೇಶ” ಎಂಬ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರದ ಆದೇಶದಂತೆ ಹಮ್ಮಿಕೊಳ್ಳಲಾಗಿದೆ, ದೇಶದ ಎಲ್ಲಾ ಕಡೆಯಿಂದ ಮಣ್ಣು ಹಾಗೂ ಅಕ್ಕಿಯನ್ನು ಸಂಗ್ರಹಿಸಿ, ಅದನ್ನು ದೆಹಲಿಗೆ ಕಳುಹಿಸಲಾಗುತ್ತಿದ್ದು, ಈ ಮೂಲಕ ಐಕ್ಯತೆಯ ಸಂದೇಶವನ್ನು ಸಾರಲಾಗುತ್ತಿದೆ ಎಂಬುದಾಗಿ ಆರೋಗ್ಯ ನಿರೀಕ್ಷಕರಾದ ವೈ.ಎಸ್.ಸಂಧ್ಯಾ ಹೇಳಿದರು.
ನಗರದ ನೆಹರು ಮೈದಾನದಲ್ಲಿ ನಗರಸಭೆ ವತಿಯಿಂದ 76 ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ “ನನ್ನ ಮಣ್ಣು ನನ್ನ ದೇಶ” ಕಾರ್ಯಕ್ರಮದಡಿ ನಗರ ವ್ಯಾಪ್ತಿಯಲ್ಲಿ ಮನೆಮನೆಗಳಲ್ಲಿ ಅಕ್ಕಿ ಸಂಗ್ರಹಣೆ ಮಾಡಿ, ನಂತರ ಅವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಕರಾದ ವೈ.ಎಸ್.ಸಂಧ್ಯಾ, ನಗರಸಭೆ ಸೂಪರ್ವೈಸರ್ ವೀರಖ್ಯಾತಪ್ಪ, ಮತ್ತು ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆಲೂರು ಹನುಮಂತರಾಯಪ್ಪ, ಹಾಗೂ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕರಾದ ಶ್ರೀಮತಿ ಸೌಮ್ಯ, ಶಿಕ್ಷಕರಾದ ಉಮೇಶ್ ಯಾದವ್, ಶಿಕ್ಷಕಿಯರುಗಳಾದ ಶ್ರೀಮತಿ ವಸಂತಾ, ಶ್ರೀಮತಿ ನಂದಿನಿ, ಶ್ರೀಮತಿ ಅಸ್ಮಾ, ಶ್ರೀಮತಿ ಸುಧಾ, ಶ್ರೀಮತಿ ಮುಬೀನಾ, ಶ್ರೀಮತಿ ಶೋಭಾ, ಸೇರಿದಂತೆ ಶಿಕ್ಷಕಿ ಅಂಬಿಕಾ, ಹಾಗೂ ಮಕ್ಕಳು ಹಾಗೂ ಪೌರಕಾರ್ಮಿಕರು, ಹಾಗೂ ಬಡಾವಣೆ ನಿವಾಸಿಗಳು ಭಾಗವಹಿಸಿದ್ದರು.
ನಗರಸಭೆಯಿಂದ ಪರಸ್ಪರ ಐಕ್ಯತೆಯ ಸಂದೇಶ ಸಾರಲು “ನನ್ನ ಮಣ್ಣು ನನ್ನ ದೇಶ” ಕಾರ್ಯಕ್ರಮ ನಡೆಸಲಾಗುತ್ತಿದೆ ನಗರಸಭೆಯ ಆರೋಗ್ಯ ನಿರೀಕ್ಷಕರಾದ ವೈ.ಎಸ್.ಸಂಧ್ಯಾ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments