ನಗರದ ಬಹುತೇಕ ವಾರ್ಡ್ ಗಳಲ್ಲಿ ಜನ ವಸತಿ ಪ್ರದೇಶಗಳಲ್ಲಿನ ಖಾಲಿ ನಿವೇಶನಗಳ ಸ್ವಚ್ಚತೆ ಇಲ್ಲದೆ ಗಿಡಗೆಂಟೆಗಳು ಬೆಳೆದು ನಿವೇಶನಗಳು ಕಸದ ಡಂಪಿಂಗ್ ಕೇಂದ್ರಗಳಾಗಿ ರೋಗಗಳ ಉತ್ಪತ್ತಿ ಕೇಂದ್ರಗಳಾಗಿವೆ.

by | 28/09/23 | ಆರೋಗ್ಯ


ಚಳ್ಳಕೆರೆ ಜನಧ್ವನಿ ವಾರ್ತೆ ಸೆ.28. ನಗರದ ಖಾಲಿ ಸೈಟುಗಳಲ್ಲಿ ಕಸ-ಕಡ್ಡಿ, ಗಿಡ- ಗಂಟಿ ಬೆಳೆದಿದ್ದರೆ ಅಂತಹ ಸೈಟಿನ ಮಾಲೀಕರಿಗೆ ದಂಡ ಹಾಕಿ ಸ್ವಚ್ಛಗೊಳಿಸಬೇಕಾದ ಜವಾಬ್ದಾರಿ ಹೊತ್ತಿರುವ ನಗರಸಭೆ ಮಾತ್ರ ಮಾಲಿಕತ್ವದಲ್ಲಿರುವ ಖಾಲಿ ನಿವೇಶನಗಳಲ್ಲಿ ಜನ ಕಸ ತಂದು ಸುರಿಯುತ್ತಿದ್ದರೂ ಕಣ್ಮುಚ್ಚಿಕೊಂಡಿದೆ.
ಹೌದು ಇದು ಚಳ್ಳಕೆರೆ ನಗರ ಒಂದು ಕಾಲದಲ್ಲಿ ಎಕೆಂಡ್ ಬಾಂಬೆ ಎಂಬ ಕೀರ್ತಿಗೆ ಪಡೆದ ಚಳ್ಳಕೆರೆ ಈಗ ಎಣ್ಣೆ ಗಿರಣಿಗಳು ಮುಚ್ಚಿರುವುದರಿಂದ ಸೆಕೆಂಡ್ ಬಾಂಬೆ ಹೋಗಿ ವಿದ್ಯಾನಗರಿ, ವಿಜ್ಞಾನ ನಗರಿ ಎಂಬ ಖ್ಯಾತಿ ಪಡೆದು ಡಿಆರ್ ಡಿ ಒ, ಸೇರಿಂದ ವಿವಿಧ ಸಂಶೋದನಾ ಕೇಂದ್ರಗಳು ತಲೆ ಎತ್ತಿ ದೇಶದ ಭೂಪಟದಲ್ಲಿ ಸೇರಿರುವ ಚಳ್ಳಕೆರೆ ನಗರದ ಗಂಗಾಭವಾನಿ ಲಾಡ್ಜ್, ಶಾಂತಿನಗರ, ಸೋಮಗುದ್ದು ರಸ್ತೆಯ ಪ್ರವಾಸಿ ಮಂದಿರದ ಪಕ್ಕದ ಖಾಲಿ ನಿವೇಶನ ಸೇರಿಂದತೆ ಬಹುತೇಕ ವಾರ್ಡ್ ಗಳಲ್ಲಿ ಜನ ವಸತಿ ಪ್ರದೇಶಗಳ ಖಾಲಿ ನಿವೇಶನಗಳ ಸ್ವಚ್ಚತೆ ಇಲ್ಲದೆ ಹಾಗೂ ನಿರ್ವಹಣೆ ಇಲ್ಲದೆ ಗಿಡಗೆಂಟೆಗಳು ಬೆಳೆದು ಜನ ವಸತಿ ಪ್ರದೇಶಗಳ ಖಾಲಿ ನಿವೇಶನಗಳು ಕಸದ ಡಂಪಿಂಗ್ ಕೇಂದ್ರಗಳಾಗಿ ರೋಗಗಳ ಉತ್ಪತ್ತಿ ಕೇಂದ್ರಗಳಾಗಿ ಸೊಳ್ಳೆ ಹಂದಿಗಳ ವಾಸಸ್ಥಳಗಳಾಗಿವೆ.


ಖಾಲಿ ನಿವೇಶನದಲ್ಲಿ ಹಲವು ಜನ ನಿತ್ಯವೂ ಕಸ, ಮುಸುರಿ, ಹಳೆಯ ಬಟ್ಟೆ, ಮೃತಪಟ್ಟವರ ಮೇಲೆ ಧರಿಸಿದ್ದ ಬಟ್ಟೆಗಳನ್ನು ತಂದು ಎಸೆಯುತ್ತಾರೆ. ಇದರಿಂದಾಗಿ ಈ ಸ್ಥಳ ಅಕ್ಷರಶಃ ತಿಪ್ಪೆಯಾಗಿ ಮಾರ್ಪಟ್ಟಿದೆ.
ರಸ್ತೆಬದಿ, ಚರಂಡಿಯಲ್ಲಿ ಕಸ ಎಸೆಯುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಚಿಕುನ್ ಗುನ್ಯಾ, ಡೆಂಘಿ, ಕಾಲರಾ, ಮಲೇರಿಯಾದಂಥ ಭಯಾನಕ ರೋಗಗಳು ಅಕ್ಕಪಕ್ಕದ ಜನರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಹಲ್ಲು ಕಿತ್ತ ಹಾವಿನಂತಾದ ಕಾನೂನು.
ಕಾಯಿದೆ ಪ್ರಕಾರ ಖಾಲಿ ನಿವೇಶನಗಳನ್ನು ಮಾಲೀಕರು ನಿರ್ವಹಣೆ ಮಾಡದಿದ್ದರೆ, ಕ್ರಮ ಕೈಗೊಳ್ಳಬಹುದು. ಮೊದಲು ಖಾಲಿ ನಿವೇಶನದ ಸ್ವಚ್ಛತೆ ಬಗ್ಗೆ ಮಾಲೀಕರಿಗೆ ನೋಟಿಸ್ ನೀಡಬಹುದು. ಪಾಲಿಸದಿದ್ದರೆ ಪಾಲಿಕೆಯೇ ಸ್ವಚ್ಛಗೊಳಿಸಿ ವೆಚ್ಚವನ್ನು ಮಾಲೀಕರಿಂದ ವಸೂಲಿ ಮಾಡಲು ಸಹ ಅವಕಾಶಗಳಿವೆ. ಇದ್ಯಾವುದಕ್ಕೂ ಬಗ್ಗದಿದ್ದರೆ, ಕಾಯಿದೆ ಪ್ರಕಾರ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಸಹ ನಗರಸಭೆಗೆ ಇದೆ ಆದರೆ ಇದು ಯಾವುದೂ ನಮಗೆ ಸಂಬಂಧವಿಲ್ಲ ಎಂಬಂತೆ ಖಾಲಿ ನಿವೇಶನ ಮಾಲಿಕರು ಹಾಗೂ ನಗರಸಭೆ ಮೌನವಹಿಸಿದ್ದು.
ನಗರಸಭೆ ಅಧಿಕಾರಿಗಳು ಮಾತ್ರ ಖಾಲಿ ನಿವೇಶನಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಮಾಲೀಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಖಾಲಿ ನಿವೇಶನ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವರೇ ಕಾದು ನೋಡ ಬೇಕಿದೆ.
ಜನರೂ ಕೂಡ ಈ ಬಗ್ಗೆ ಜಾಗೃತರಾಗಬೇಕು. ಈಗಾಗಲೇ ನಗರಸಭೆಯಿಂದ ವಿತರಿಸಿರುವ ಎರಡು ಕಸದ ಡಬ್ಬಿಗಳಲ್ಲಿ ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ಕಸದ ವಾಹನ ಮನೆಯ ಬಳಿ ಬಂದಾಗ ಕೊಡುವುದನ್ನು ರೂಢಿಸಿಕೊಳ್ಳಬೇಕು ಎಂಬುದು ಜನಧ್ವನಿಯ ಡಿಜಿಟಲ್ ಮೀಡಿಯಾದ ಕಳಕಳಿ ಮನವಿ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page