ಹಿರಿಯೂರು :
ಯಾವುದೇ ಜಾತಿಮತ ಕುಲ ಭೇದವಿಲ್ಲದೆ, ಭಕ್ತಿಯಿಂದ ಮಾಡುವ ಕಾಯಕ ಶಿವನಿಗೆ ಸಲ್ಲುತ್ತದೆ ಎಂದು ಸಾರಿದ ದಲಿತ ವಚನಕಾರರು ಸರಳ ಭಾಷೆಯಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ತಮ್ಮ ವಚನಗಳನ್ನು ರಚಿಸುವ ಮೂಲಕ ಸಮಾಜದ ಲೋಪದೋಷಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬುದಾಗಿ ವಾಣಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಡಿ.ಧರಣೇಂದ್ರಯ್ಯ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ದಲಿತ ವಚನಕಾರರ ಜಯಂತ್ಯೋತ್ಸವ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ದೋಳಯ್ಯ, ಆಯ್ದಕ್ಕಿ ಮಾರಯ್ಯ, ಸೂಳೆ ಸಂಕವ್ವ, ಹೀಗೆ ಹಲವಾರು ವಚನಕಾರರು ತಮ್ಮ ಸರಳ ಭಾಷೆಯ ವಚನಗಳ ಮೂಲಕ ಸಮಾಜವನ್ನು ಜಾಗೃತಗೊಳಿಸುವ ಕೆಲಸ ಮಾಡಿದ್ದು, ಇಂತಹ ವಚನಕಾರರ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂಬುದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ತಹಶೀಲ್ದಾರರಾದ ಪ್ರಶಾಂತ್ ಪಾಟೀಲ್ ಮಾತನಾಡಿ, ದಲಿತ ಸಮುದಾಯದಲ್ಲಿ ಜನಿಸಿದ್ದರೂ ಅತ್ಯುತ್ತಮ ಸಾಹಿತ್ಯ ರಚನೆ ಮಾಡುವ ಮೂಲಕ ವಿದ್ಯೆ, ಜ್ಞಾನಕ್ಕೆ ಯಾವುದೇ ಜಾತಿ ಮತಗಳ ಭೇದಭಾವವಿಲ್ಲ, ಶ್ರದ್ಧೆ-ಭಕ್ತಿ ಇದ್ದರೆ ಯಾರು ಬೇಕಾದರೂ ಸಾಹಿತ್ಯ ರಚಿಸಬಹುದು ಸಂವಿಧಾನ ಬರೆಯಬಹುದು ಎಂಬುದನ್ನು ದಲಿತ ಸಮುದಾಯದ ವಚನಕಾರರು ಹಾಗೂ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ರವರು ಸಾಬೀತುಪಡಿಸಿದ್ದಾರೆ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಗೀತಾಗಂಗಾಧರ್, ನಗರಸಭೆ ಸದಸ್ಯರುಗಳಾದ ಶ್ರೀಮತಿ ವಿಶಾಲಾಕ್ಷಮ್ಮ, ಶ್ರೀಮತಿ ಶಿವರಂಜಿನಿಯಾದವ್, ಶ್ರೀಮತಿ ರತ್ನಮ್ಮ, ಡಿಎಸ್.ಎಸ್.ಮುಖಂಡರಾದ ಪರಮೇಶ್ವರಪ್ಪ, ಬಿ.ಇ.ಓ ಮಹೇಶ್ವರರೆಡ್ಡಿ, ಕೆ.ಎಂ.ಮನೋಹರ್, ಚಂದ್ರಶೇಖರ್, ಸಮಾಜ ಕಲ್ಯಾಣ ತಿಪ್ಪೇಸ್ವಾಮಿ, ಸಮಾಜದ ಮುಖಂಡರಾದ ರಂಗನಾಥ ನಾಯ್ಕ, ರಂಗಸ್ವಾಮಿ, ಓಂಕಾರಪ್ಪ, ತಿಪ್ಪೇಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿಎತರಿದ್ದರು.
ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿನಡೆದ “ದಲಿತವಚನಕಾರರ ಜಯಂತ್ಯೋತ್ಸವ” ಕಾರ್ಯಕ್ರಮ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments