ನಗರದಲ್ಲಿ ಹಚ್ಚುತ್ತಿರುವ ಮಾನಸಿಕ ಅಸ್ವಸ್ಥರು.ಬಿಕ್ಷಕರು ರಕ್ಷಣೆ ಮಾಡುವವರು ಯಾರು…?
by ಗೋಪನಹಳ್ಳಿಶಿವಣ್ಣ | 06/03/23 | ಜನಧ್ವನಿ
. ಚಳ್ಳಕೆರೆ ನಗರದ ನೆಹರು ವೃತ್ತದಲ್ಲಿ ಹುಚ್ಚನ ಹುಚ್ಚಾಟ
ಚಳ್ಳಕೆರೆ ಜನಧ್ವನಿ ವಾರ್ತೆ ಮಾ.6. ನಗರದಲ್ಲಿ ನಿರ್ಗತಿಕ ಮಾನಸಿಕ ಅಸ್ವಸ್ಥರು ಹಾಗೂ ಬಿಕ್ಷುಕರ ಸಂಖ್ಯೆ ಹೆಚ್ಚಾಗಿದ್ದು ಊಟ ನೀರಿಲ್ಲದೆ ನಿತ್ರಾಣ ಸ್ಥಿತಿಲ್ಲಿ ರಸ್ತೆ ಬದಿಯಲ್ಲಿದ್ದರೂ ಆಶ್ರಯವಿಲ್ಲದೆ ಪರದಾಡುತ್ತಿರುವ ಇವರು, ಹಸಿದ ಹೊಟ್ಟೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ದಿನ ನಿತ್ಯ ಅಲೆದಾಡುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳು ತಲೆಕೆಡಿಸಿಕೊಂಡಿಲ್ಲ.

ಹೌದು ಇದು ಚಳ್ಳಕೆರೆ ನಗರದ ಹೃದಯಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ಬೇರೆ ಕಡೆಯಿಂದ ವೃದ್ದರು.ಅನಾಥರು. ಮಾನಸಿಕ ಅಸ್ವಸ್ಥರು ನಗರದಲ್ಲೆ ಹೆಚ್ಚಾಗುತ್ತಿದ್ದು ಆಶ್ರಯವಿಲ್ಲದೆ ವಿಕೃತ ಜೀವನ ಸಾಗಿಸುತ್ತಿದ್ದಾರೆ. ಇನ್ನು ಕೆಲವರು ರಸ್ತೆ ಮಧ್ಯೆ ಮಲಗಿ ಹುಚ್ಚಾಟ ಪ್ರದರ್ಶನ ಮಾಡುವುದರಿಂದ ವಾಹನ ಸವಾರರಿಗೆ ಕಿರಿ ಕಿರಿ ಮಹಿಳೆಯರಿಗೆ. ವಿದ್ಯಾರ್ಥಿನಿಯರಿಗೆ ಕಿರಿಕಿಯನ್ನುಂಟು ಮಾಡುತ್ತಿದ್ದಾರೆ. ಇನ್ನು ಕೆಲವು ಮಾನಸಿಕ ಅಸ್ವಸ್ಥರು ಅರೆ ಬರೆ ಉಡುಪು ಕೊಳಕು ಉಡುಪು ಹಾಕಿಕೊಂಡು ತಿರುಗಾಡುವುದರಿಂದ ಮಹಿಳೆಯರು ವಿದ್ಯಾರ್ಥಿಗಳು ಸಾರ್ವಜನಿಕರು ಮುಜುಗರದಿಂದ ಓಡಾಡುವ ಪರಿಸ್ಥಿ ಇದೆ. ಇಂತವರ ರಕ್ಷಣೆಗೆ ಇಲಾಖೆ ಇದೆ ಇದ್ದುವಿಲ್ಲದಂಗಿದ್ದು ಕೆಲವು ಮಾನಸಿಕ ಅಸ್ವಸ್ಥರುಬವಾಹನ ಅಪಘಾತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡ ನಿದರ್ಶನಗಳು ಇವೆ ಆದರೂ ಸಹ ಸಂಬಂಧ ಪಟ್ಟಅಧಿಕಾರಿಗಳು ಮಾತ ಇದಕ್ಕು ನಮಗೂ ಸಂಬಂಧ ಇಲ್ಲವೆಂಬತೆ ಕಂಡರೂ ಜಾಣಕುರುಡಿತನ ಪ್ರದರ್ಶನ ಮಾಡಿತ್ತಿದ್ದಾರೆ.

ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇಂತವರ ಬಗ್ಗೆ ಕರುಣೆ ತೋರಿಸಿ ಆಶ್ರಯ ನೀಡುವರೇ ಕಾದು ನೋಡ ಬೇಕಿದೆ.
0 Comments