ನಗರದಲ್ಲಿ ಬಿಡಾಡಿ ದನಗಳಿಗೆ ಕಡಿವಾಣ ಹಾಕುವರೇ..?

by | 17/01/23 | ಜನಧ್ವನಿ

ಚಳ್ಳಕೆರೆ ನಗರದಲ್ಲಿ ಅದರಲ್ಲೂ ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿಗೆ ಕಡಿವಾಣ ಬೀಳುತ್ತಿಲ್ಲ. ಇದರಿಂದಾಗಿ ವಾಹನ ಸವಾರರು ಮತ್ತು ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಹೌದು ಚಳ್ಳಕೆರೆ ನಗರದ ನೆಹರು ವೃತ್ತದಲ್ಲಿ ಜನನಿಬಿಡ ಪ್ರದೇಶ ಹಾಗೂ ವಾಹನಗಳ ಜನದಟ್ಟಣೆಯಿಂದ ಕೂಡಿದ್ದು ಮಂಗಳವಾರ ಸಂಜೆ 5 ಗಂಟೆ ಸುಮಾರಿನಲ್ಲಿ ಬಿಡಾಡಿ ದನಗಳ ಹಿಂಡು ಜನರ ಹಾಗೂ ವಾಹನಗಳಿಗೆ ಅಡ್ಡದಿಡ್ಡಿಯಾಗಿ ಓಡಿ ಬರುತ್ತಿದ್ದರಿಂದ ಮಹಿಳೆಯರು. ಪಾದಾಚಾರಿಗಳು ದಿಕ್ಕಾಪಾಲಿಗೆ ಓಡಿದರೆ ವರ್ತಕರ ಅಂಗಡಿ.ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರವಾಹನಗಳ ಮೇಲೆ ನುಗ್ಗೆದ್ದರಿಂದ ಸಾಲು ಸಾಲು ಬೈಕ್ ಗಳು ನೆಲಕ್ಕುರಿದವು. ಮುಖ್ಯ ರಸ್ತೆಗಳಲ್ಲೇ ರಾಜಾರೋಷವಾಗಿ ಓಡಾಡುತ್ತಿರುತ್ತವೆ. ವಾಹನಗಳಲ್ಲಿ ಸಂಚರಿಸುವ ಹಾಗೂ ಪ್ರಯಾಣಿಸುವವರ ಪ್ರಾಣಕ್ಕೆ ಸಂಚಕಾರ ತಂದೊಡ್ಡುತ್ತಿವೆ. ರಸ್ತೆ ಅಪಘಾತಗಳಿಗೂ ಕಾರಣವಾಗುತ್ತಿದೆ. ಇಷ್ಟಾದರೂ ಸಂಬಂಧಿಸಿದ ನಗರಭೆ ಹಾಗೂ ಸಂಬಂಧಪಟ್ಟ ಅಧಿರಿಗಳು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ನಗರದಲ್ಲಿ ಹಲವು ವರ್ಷಗಳಿಂದಲೂ ಈ ಸಮಸ್ಯೆ ಇದೆ. ಬಿಡಾಡಿ ದನಗಳಿಂದ ನಮಗೆ ಮುಕ್ತಿ ಸಿಗುವುದು ಯಾವಾಗ ಎನ್ನುವುದು ಜನರ ಪ್ರಶ್ನೆಯಾಗಿದೆ. ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಕಡಿವಾಣ ಹಾಕುವರೇ ಕಾದು ನೋಡ ಬೇಕಿದೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *