ದೇಶದ ಸಂಪತ್ತು ಗೋಮಾತೆ ಎಂದು ಪೂಜೆ ಮಾಡುವ ಜಾನುವಾರುಗಳಿಗೆ ಹಾಗೂ ದೇವರ ಎತ್ತುಗಳಿಗೆ ಮೇವು ವಿತರಿಸಲು ಸರಕಾರಗಳು ಮುಂದೆ ಬರುತ್ತಿಲ್ಲ ಎಂದು ಜಪಾನಂದ ಜೀ ಮಹರಾಜ್ ವಿಷಾದ

by | 31/10/23 | ಸುದ್ದಿ


ಚಳ್ಳಕೆರೆ ಜನಧ್ವನಿ ವಾರ್ತೆ ಅ31
ಚಂದ್ರಲೋಕಕ್ಕೆ ರಾಕೇಟ್ ಉಡಾವಣೆ ಸೇರಿದಂತೆ ಅವಶ್ಯತೆ ಇಲ್ಲದೆ ಕಾಮಗಾರಿಗಳಿಗೆ ಸಕಾರ ಕೋಟಿ ಕೋಟಿ ಅನುದಾನ ಖರ್ಚು ಮಾಡುತ್ತಿದೆ. ದೇಶದ ಸಂಪತ್ತು ಗೋಮಾತೆ ಎಂದು ಪೂಜೆ ಮಾಡುವ ಜಾನುವಾರುಗಳಿಗೆ ಹಾಗೂ ದೇವರ ಎತ್ತುಗಳಿಗೆ ಹಿಡಿ ಮೇವು ಕೊಡಲು ಸರಕಾರಗಳು ಮುಂದೆ ಬರುತ್ತಿಲ್ಲ ಎಂದು ಜಪಾನಂದ ಜೀ ಮಹರಾಜು ವಿಷಾದ ವ್ಯಕ್ತಪಡಿಸಿದರು.


ನಗರದ ಪ್ರವಾಸಿ ಮಂದಿರಲ್ಲಿ ಸುಧಾಮೂರ್ತಿ ಮೂರ್ತಿ ಪೌಂಡೇಷನ್ ಹಾಗೂ ರಾಮಕೃಷ್ಣ ಸೇವಾಶ್ರಮ ಹಾಗೂ ಶ್ರೀ ಸ್ವಾಮಿವಿವೇಕನಂದ ಸಂಘಟಿತ ಗ್ರಾಮಾಂತ ಆರೋಗ್ಯ ದೇವಾ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಮೊಳಕಾಲ್ಮೂರು ಹಾಗೂ ಚಳ್ಳಕೆರೆ ತಾಲೂಕಿನ ವಿವಿಧ ಗ್ರಾಮದಲ್ಲಿರುವ ದೇವರ ಎತ್ತುಗಳಿಗೆ ಉಚಿತ ಮೇವು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರಕಾರ ಬರಗಾಲೆ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದರೂ ಸಹ ಅನುದಾನ ಬಿಡುಗಡೆ ಮಾಡದೆ ಇರುವುದು ಅಭಿವೃದ್ಧಿಗೆ ಕುಂಠಿತವಾಗಿದೆ. ಮೊಳಕಾಲ್ಮೂರು, ಚಳ್ಳಕೆರೆ, ಕೂಡ್ಲಗಿ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಸಾವಿರಾರು ಎತ್ತುಗಳಿದ್ದು ಮೇವಿಲ್ಲದ ಅಪೌಷ್ಠಿಕತೆಯಿಂದ ಬಳಲಿ ಸಾಯುವ ಹಂತಕ್ಕೆ ತಲುಪಿವೆ ಆದರೂ ಸಹ ಸರಕಾರ ಇನ್ನು ಗೋಶಾಲೆ ತೆರಯಲು ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ ಮೇವಿಗಾಗಿ ಪುಡಿಗಾಸು ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಬುಡಕಟ್ಟು ಸಂಸ್ಕೃತಿಯ ಜನರು ದೇವರ ಹೆಸರಿನಲ್ಲಿ ಬಿಡುವ ಜಾನುವಾರುಗಳಿಗೆ ಕಿವಿ ಚುಚ್ಚುವ ಪದ್ದತಿಯಿಂದ ದೂರವಿದ್ದಾರೆ ಇಂತಹ ಎತ್ತುಗಳಿಗೆ ಉಚಿತ ಮೇವು ವಿತರಣೆ ಮಾಡುವುದಿಲ್ಲ ಎಂದರೆ ಎಷ್ಟು ಸರಿ? . ಬಿರು ಬಿಸಿನ ಕಾವು ಹಾಗೂ ಚುನಾವಣೆಯ ಕಾವಿನ ನಡುವೆ ದೇವರ ಎತ್ತುಗಿಗಳನ್ನು ಕಡೆಗಣಿಸುತ್ತಿರುವುದರಿಂದ ಮೇವು ನೀರಿಲ್ಲದೆ ಬಳಲುವ ಪರಿಸ್ಥಿತಿ ನಿರ್ಮಾಣವಾಗಿದ್ದು ಸರಕಾರಗಳು ಪಶುಪಂಪತ್ತನ್ನುಉಳಿಸಲು ಉಚಿತ ಮೇವು ಸರಬರಾಜು ಮಾಡುವಂತೆ ಸರಕಾರಕ್ಕೆ ಒತ್ತಾಯಿಸಿದರು.

ತಾಲೂಕಿನಗರ‍್ಲಕಟ್ಟೆ, ನರ‍್ಲಗುಂಟೆ, ನೆಲಗೇತನಹಟ್ಟಿ, ಭೀಮಗೊಂಡನಹಳ್ಳಿ, ಜೋಗಿಹಟ್ಟಿ,
ಚನ್ನಬಯಯ್ಯನಹಟ್ಟಿ, ಅಬ್ಬೇನಹಳ್ಳಿ, ಮೊಳಕಾಲ್ಮೂರು ತಾಲೂಕಿನ ಸೂರಮ್ಮನಹಳ್ಳಿ, ಮುತ್ತಿಗಾರಹಳ್ಳಿ ಗ್ರಾಮಗಳಲ್ಲಿ ಸುಮಾರು 1500ರಿಂದ ಎರಡು ಸಾವಿರ ಕ್ಕೂ ಹೆಚ್ಚು ದೇವರ ಎತ್ತುಗಳಿದ್ದು ಮೇವು ನೀರಿನಲ್ಲದೆ ಪ್ರಾಣ ಬಿಡುವ ಹಂತಕ್ಕೆ ತಲುಪಿವೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ಮುಂದಿನ ಮಳೆ ಬರುವ ತನಕ ದೇವರ ಎತ್ತುಗಳಿಗೆ ಉಚಿತವಾಗಿ ಮೇವು ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಈಗಾಗಲೆ ಪಾವಗಡ ತಾಲೂಕಿನ ಮೇವು ವಿತರಣೆ ಕೇಂದ್ರವನ್ನು ಪ್ರಾರಂಬಿಸಿದ್ದು ಮೇವಿನ ಕೊರತೆ ಇರುವವರು ಬಂದು ಮೇವು ಪಡೆಯ ಬಹುದು ಆದರೆ ಇಲ್ಲಿ ದೇವರ ಎತ್ತುಗಳು ಆಗಿರುವುದರಿಂದ ಕಾಡಿನಲ್ಲಿ ಮೀವಿನ ಕೊರತೆಯಿಂದ ಗೋಪಾಲರಿಗೆ ಗೊತ್ತು ಜಾನುವಾರುಗಳನ್ನು ಸಾಕಲು.
ಸಾವಿರಾರು ಎಕರೆ ಭೂಮಿಯನ್ನು ಡಿಆರ್‌ಡಿಒ, ಬಾರ್ಕ್ನಂತಹ ಸಂಸ್ಥೆಗಳಿಗೆ ನೀಡಿದ್ದು ಕಾಂಪೌAಡ್ ನಿರ್ಮಾಣದಿಂದ ಜಾನುವಾರುಗಳನ್ನು ಮೇಹಿಸಲು ಭೂಮಿಯಿಲ್ಲದಂತಾಗಿದೆ..ಸ್ವಯA ಸಂಸ್ಥೆಗಳು ಮೇವು ವಿತರಣೆ ಮಾಡಿದರೂ ಸಹ ಸರಕಾರ ಮಾತ್ರ ಮೇವು ವಿತರಣೆ ಮಾಡಲು ಮುಂದೆ ಬರುತ್ತಿಲ್ಲ ನಾನು ಸಮುದಾಯ ಭವನ ಕೊಡಿ. ಕಟ್ಟಡ ಕೊಡಿ ಎಂದು ವೈಯುಕ್ತ ಅಭಿವೃದ್ಧಿಗೆ ಅನುದಾನ ಕೇಳುತ್ತಲ್ಲ ಗೋಸಂಬಪತ್ತು ಉಳಿವಿಗಾಗಿ ಮೇವು ಕೊಡಿ ಎಂದು ಕೇಳುತ್ತಿದ್ದೇನೆ ಮುಂದಿನ ದಿನಗಳ ಮೇವು ನೀಡುವಂತೆ ಒತ್ತಾಯಿಸಿ ರೈತರೊಂದಿಗೆ ವಿಧಾನ ಸೌಧದ ಮುಂದೆ ಪ್ರತಿಟಣೆ ಮಾಡಲಾಗುವುದು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.


ಕಿಲಾರಿಗಳಾದ ಮಂಜಣ್ಣ, ಪಾಲಯ್ಯ ಮಾತನಾಡಿ ಅಡವಿಯಲ್ಲೂ ಮೇವಿಲ್ಲದೆ ಇರುವುದರಿಂದ ದೇವರ ಎತ್ತುಗಳನ್ನು ಪಾಲನೆ ಫೋಷಣೆ ಮಾಡುವುದು ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಈ ಸಂದರ್ಭದಲ್ಲಿ ದೇವರ ಎತ್ತುಗಳ ಮೇವು ವಿತರಣಾ ಸಂಯೋಜನಕರಾದ ಮಹೇಶ್,ಸಿದ್ದೇಶ್ ಇತರರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *