ದಸರಾ ಹಬ್ಬವನ್ನು ಪ್ರತಿ ವರ್ಷದಂತೆ ಅದ್ದೂರಿಯಾಗಿ ಭಕ್ತಿಭಾವದಿಂದಆಚರಿಸಬೇಕು : ರಾಜೇಶ್ ಕುಮಾರ್

by | 12/10/23 | ಸುದ್ದಿ


ಹಿರಿಯೂರು :
ದಸರಾ ಹಬ್ಬವನ್ನು ಪ್ರತಿ ವರ್ಷದಂತೆ ಈ ಬಾರಿಯೂ ಅದ್ದೂರಿಯಾಗಿ ಭಕ್ತಿಭಾವದಿಂದ ಆಚರಿಸುವ ನಿಟ್ಟಿನಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದೇವಾಲಯಗಳ ಮುಖ್ಯಸ್ಥರು ಅಗತ್ಯವಾದ ಸಹಕಾರ ನೀಡಬೇಕು ಎಂಬುದಾಗಿ ತಾಲ್ಲೂಕು ತಹಶೀಲ್ದಾರ್ ರಾಜೇಶ್ ಕುಮಾರ್ ಹೇಳಿದರು.
ನಗರದ ತೇರುಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ನಡೆದ ದಸರಾ ಹಬ್ಬದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ, ಅವರು ಮಾತನಾಡಿದರು.
ಇದೇ ಅಕ್ಟೋಬರ್ 23 ರಂದು ಸೋಮವಾರ ಆಯುಧಪೂಜೆ, ಮಂಗಳವಾರ ಅಂಬಿನೋತ್ಸವ, ಹಾಗೂ ಬುಧವಾರ ಮೈಲಾರಲಿಂಗೇಶ್ವರಸ್ವಾಮಿ ಸರಪಳಿ ಪವಾಡ ಉತ್ಸವ ನಡೆಸಲು ತೀರ್ಮಾನಿಸಲಾಗಿದೆ ಎಂಬುದಾಗಿ ಅವರು ಹೇಳಿದರು.
ಈ ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ಎಲ್.ಮೂರ್ತಿ, ಪಿ.ಎಸ್.ಐ ಮಂಜುನಾಥ್, ಆರೋಗ್ಯ ಅಧಿಕಾರಿ ಡಾ. ಟಿ.ವೆಂಕಟೇಶ್, ಆರೋಗ್ಯ ನಿರೀಕ್ಷಕರಾದ ಸಂಧ್ಯಾ, ಅಶೋಕ್, ಪ್ರಸನ್ನ ಜೋಯಿಸ್, ವಿಶ್ವನಾಥ್ ಆಚಾರ್ಯ, ನಾಗರಾಜ್ ಆಚಾರ್ಯ, ಶ್ರೀಕಂಠಪ್ಪ, ಚೇತನ್, ಪ್ರಶಾಂತ್, ಭೋಜಣ್ಣ, ಕಾರ್ತಿಕ್, ಎಂ.ಕೃಷ್ಣ ,ಕಂದಾಯ ಇಲಾಖೆಯ ಸ್ವಾಮಿ, ಬಸವರಾಜ್ ಬೆಸ್ಕಾಂ ನ ರವಿಕುಮಾರ್, ಅರಣ್ಯ ಇಲಾಖೆಯ ವಿನಯ್, ಅಗ್ನಿಶಾಮಕ ದಳದ ಸುಭಾನ್ ಸಾಬ್, ಮುಖಂಡರಾದ ಬಸವರಾಜ ನಾಯಕ, ಎಂ.ರವೀಂದ್ರನಾಥ್, ಸತ್ಯನಾರಾಯಣ ಮೂರ್ತಿ, ಕೃಷ್ಣ, ಶೇಖರ್, ರಂಗನಾಥ್, ವೆಂಕಟೇಶಮೂರ್ತಿ, ಸುರೇಶ್ ಇತರರು ಭಾಗವಹಿಸಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *