ದಲಿತ ಕುಂದು ಕೊರತೆ ಸಭೆ ಕರೆದು ಒಂದು ವರ್ಷ ಕಳೆದಿದೆ ಅಧಿಕಾರಿಗಳು ಬರ‍್ತಾರೆ ಹೋಗ್ತಾರೆ ಆದರೆ ಹಿಂದಿನ ಸಭೆಯಲ್ಲಿ ನಡೆದ ಕುಂದು ಕೊರತೆಗಳು ಕೇವಲ ಪುಸ್ತಕದಲ್ಲಿ ಮಾತ್ರ ಉಳಿದಿವೆ ಸಭಾ ನಡುವಳಿ ಪುಸ್ತಕವೂ ಇಲ್ಲದಂತಾಗಿದೆ ಎಂದು ದಲಿತ ಮುಖಂಡರ ಗಂಭೀರ ಆರೋಪ..

by | 13/11/23 | ಸುದ್ದಿ

‌ ‌ ‌‌‌‌‌ ಚಳ್ಳಕೆರೆ ಜನಧ್ವನಿ ವಾರ್ತೆ ನ.13. ದಲಿತ ಕುಂದು ಕೊರತೆ ಸಭೆ ಕರೆದು ಒಂದು ವರ್ಷ ಕಳೆದಿದೆ ಅಧಿಕಾರಿಗಳು ರ‍್ತಾರೆ ಹೋಗ್ತಾರೆ ಆದರೆ ಹಿಂದಿನ ಸಭೆಯಲ್ಲಿ ನಡೆದ ಕುಂದು ಕೊರತೆಗಳು ಕೇವಲ ಪುಸ್ತಕದಲ್ಲಿ ಮಾತ್ರ ಉಳಿದಿವೆ ಸಭಾ ನಡುವಳಿ ಪುಸ್ತವೂ ಇಲ್ಲದಂತಾಗಿದೆ ಎಂದು ದಲಿತ ಮುಖಂಡು ಗಂಭೀರ ಆರೋಪ ಮಾಡಿದರು.
ನಗರದ ಚಿತ್ರದುರ್ಗ ರಸ್ತೆಯಲ್ಲಿರುವ ಉಪಾಧೀಕ್ಷರ ಕಚೇರಿ ಆವರಣದಲ್ಲಿ ಪೊಲೀಸ್ ಇಲಾಖೆವತಿಯಿಂದ ಆಯೋಜಿಸಿದ್ದ ದಲಿತ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರು ಆರೋಪ ಮಾಡಿದರು.
ದಲಿತ ಸಮುದಾಯಗಳ ಮೇಲೆ ದೌರ್ಜನ್ಯ ಪ್ರಕರಣುಗಳು ನಡೆದಾಗ ದಲಿತ ಮುಖಂಡರು ನ್ಯಾಯಕ್ಕಾಗಿ ಠಾಣೆಗೆ ಹೋದಾಗ ಅಲ್ಲಿನ ಸಿಬ್ಬಂದಿಗಳು ಗೌರವ ಕೊಡುತ್ತಿಲ್ಲ ಮೊದಲು ಠಾಣೆಯ ಸಿಬ್ಬಂದಿಗಳಿಗೆ ಸಭೆ ನಡೆಸಿ ಸೌಜನ್ಯರೀತಿ ವರ್ತಿಸುವಂತೆ ತಿಳುವಳಿಕೆ ಹೇಳಬೇಕಿದೆ.


ದಲಿತ ಕುಂದು ಕೊರತೆ ಸಭೆಗೆ ಸಮಾಜಕಲ್ಯಾಣ ಇಲಾಖೆ ಹಾಗೂ ತಹಶೀಲ್ದಾರ್ ಇರಬೇಕು ಯಾವುದೇ ದಲಿತ ಕುಂದು ಕೊರತೆ ಸಭೆಯಲ್ಲಿ ಅಧಿಕಾರಿಗಳು ಇರುವುದಿಲ್ಲ ಕಳೆದ ಒಂದು ವರ್ಷದ ಹಿಂದೆ ನಡೆದ ಸಭೆಯಲ್ಲಿ ಅನೇಕ ಸಮಸ್ಯೆಗಳನ್ನು ಹೇಳಲಾಗಿತ್ತು ಅವು ಯಾವೂ ಪರಿಹಾರ ಕಂಡಿಲ್ಲ ಪ್ರತಿ ತಿಂಗಳು ಸಭೆ ನಡೆಯ ಬೇಕು ಹಿಂದಿನ ನಡುವ ಪುಸ್ತಕದಲ್ಲಿನ ಸಮಸ್ಯೆಗಳ ಚರ್ಚೆ ವಿಷಯಗಳ ಹೇಳಿ ಸಭೆ ಮುಂದುವರಿಸುವಂತೆ ದಲಿತ ಮುಖಂಡರಾದ ವಿಜಯ್, ಚಂದ್ರಣ್ಣ, ಆನಂದ್,ತಿಪ್ಪೇಸ್ವಾಮಿ ಒತ್ತಾಯಿಸಿದರು.


ದಲಿತ ಮುಖಂಡ ಮಾಜಿ ನಗರಸಭೆ ಉಪಾಧ್ಯಕ್ಷ ವಿಜಯ್ ಮಾತನಾಡಿ ಎಲ್ಲಾ ಇಲಾಖೆ ಅಧಿಕಾರಿಗಳೊಂದಿಗೆ ಶಾಸಕರು ಜನ ಸಂಪರ್ಕ ಸಭೆ ನಡೆಸುತ್ತಾರೆ ಅದೇ ರೀತಿ ದಲಿತ ಕುಂದು ಕೊರತೆ ಸಭೆಯನ್ನು ಸಮಾಜ ಕಲ್ಯಾಣ ಹಾಗೂ ಕಂದಾಯ ಇಲಾಖೆ , ಪೋಲಿಸ್ ಇಲಾಖೆ ಅಧಿಕಾರಿಗಳೊಂದಿಗೆ ಶಾಸಕ ಟಿ.ರಘುಮೂರ್ತಿ ದಲಿತ ಕುಂದು ಕೊರತೆ ಸಭೆ ನಡೆಸುವಂತೆ ಸಭೆ ಗಮನ ಸೆಳೆದರು.
ದಲಿತ ಮುಖಂಡ ಪ್ರಕಾಶ್ ಮಾತನಾಡಿ ತಳಕು,ಪರಶುರಾಂಪುರ ಹೋಬಳಿ ವ್ಯಾಪ್ತಿಯಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ ಬಿತ್ತನೆ ಸಮಯದಲ್ಲಿ ರಸ್ತೆ ಸಂಬಂಧ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಆದರೂ ಸಹ ಪೊಲೀಸ್ ಇಲಾಖೆ ದಲಿತರ ಕುಂದು ಕೊರತೆ ಸಭೆಗಳನ್ನು ನೆಪಕ್ಕೆ ಮಾತ್ರ ಮಾಡಲಾಗುತ್ತಿದೆ.
ಕಂದಾಯ ಮತ್ತು ಸಮಾಜ ಕಲ್ಯಾಣ ಇಲಾಖೆ ದಲಿತರ ಕುಂದು ಕೊರತೆ ಸಭೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ . ದಲಿತರ ಕಾಲೋನಿಯಲ್ಲಿ ದಲಿತ ಕುಂದು ಕೊರತೆ ಸಭೆಗಳನ್ನು ನಡೆಸುವುದನ್ನು ಬಿಟ್ಟು ಯಾರು ದಲಿತರ ಮೇಲೆ ದೌರ್ಜನ್ಯಗಳು ನಡೆಸುತ್ತಾರೆ ಅಲ್ಲಿ ದಲಿತ ಕುಂದು ಕೊರತೆ ಸಭೆಗಳನ್ನು ನಡೆಸ ಬೇಕು, ದಲಿತ ದೌರ್ಜನ್ಯ ಪ್ರಕರಗಳು ನಡೆದರೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.


ಡಿವೈಎಸ್‌ಪಿ ರಾಜಣ್ಣ ಮಾತನಾಡಿ ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಪ್ರತಿ ತಿಂಗಳು ದಲಿತ ಕುಂದು ಕೊರತೆ ಸಭೆಯನ್ನು ಸಮಾಜ ಕಲ್ಯಾಣ ಇಲಾಖೆ ಹಾಗೂ ಕಂದಾಯ ಇಲಾಖೆ ಸಹಯೋಗದೊಂದಿಗೆ ನಡೆಸಲಾಗುವುದು ಮುಂದಿ ಸಭೆ ಡಿ.12 ಕ್ಕೆ ಆಯೋಜನೆ ಮಾಡಲಾಗುವುದು ಅಷ್ಟೊತ್ತಿಗೆ ಕುಂದು ಕೊರತೆ ಸಭೆಯ ನಡುವಳಿ ಪುಸ್ತಕವನ್ನು ಪತ್ತೆ ಮಾಡಲಾಗುವುದು ದಲಿತರೊಂದಿಗೆ ಪೊಲೀಸ್ ಇಲಾಖೆ ಇದೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು ಮುಂದಿನ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕುಂದು ಕೊರತೆಗಳ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು.
ಸಭೆಯಲ್ಲಿ ದ್ಯಾವರನಹಳ್ಳಿ ಮನಕೆರೆ ಶಿವಮೂರ್ತಿ, ನನ್ನಿವಾಳ ನಾಗರಾಜ್, _ಡಾ.ಮಂಜುನಾಥ್ ಸಿ .ಟಿ.ಶ್ರೀನಿವಾಸ್, ಸೂರನಾಯಕ, ದ್ಯಾವರನಹಳ್ಳಿಆನಂದ್ ಕುಮಾರ್. ತಿಪ್ಪೇಶ್, ಹೊಟ್ಟೆಪ್ಪನಹಳ್ಳಿ ಕಾಂತರಾಜ್, ಭೂಸುದಾರಣೆ ಹಕ್ಕು ಹೋರಾಟ ಸಮಿತಿ ಶ್ರೀನಿವಾಸ್ ಮಾತನಾಡಿದರು.
ವೀರಭದ್ರಿ., ಸೂರಿ., ನಾವೆಲ್ಲ ಮಹೇಶ್, ಇತರರಿದ್ದರು.
ಚಳ್ಳಕೆರೆ ಪಿಐ ಆರ್.ಎಫ್.ದೇಸಾಯಿ, ತಳಕು ವೃತ್ತ ನಿರೀಕ್ಷಕ ಸಮೀವುಲ್ಲ, ಪಿಎಸ್‌ಐ ಗಳಾದ ಶಿವರಾಜ್ , ಧೆರಪ್ಪ , ದಲಿತ ದಲಿತ ಮುಖಂಡರಿದ್ದರು.

Latest News >>

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

ಚಿತ್ರದುರ್ಗ ಸೆ.6: ಯುವ ಜನೋತ್ಸವ ಅಂಗವಾಗಿ ಎಚ್‌ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆಯು ಚಿತ್ರದುರ್ಗ ನಗರದಲ್ಲಿ ಗುರುವಾರ...

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ ಸೆ.06: ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ...

ಮೊಳಕಾಲ್ಮುರು : ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ.

ಮೊಳಕಾಲ್ಮೂರು :-ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್ ವೈ....

ಬೆಂಬಲಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳ ಸ್ಥಾಪನೆ

ಚಿತ್ರದುರ್ಗ ಸೆ.04: 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ನಿಗದಿಪಡಿಸಿರುವ ರೂ.7,280/- (ಪ್ರತಿ ಕ್ವಿಂಟಾಲ್‌ಗೆ)...

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಚಿತ್ರದುರ್ಗ ಸೆ.04: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ...

ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ ಯ ಆಕರ್ಷಕ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ.

ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page