ತಾಲ್ಲೂಕು ಮಟ್ಟದ ಜನತಾದರ್ಶನ 158 ಹಳ್ಳಿಗಳಿಗೆ ವಿವಿ ಸಾಗರದಿಂದ ಶುದ್ಧ ಕುಡಿಯುವ ನೀರು ಕಾಮಗಾರಿಗೆ ಶೀಘ್ರ ಚಾಲನೆ -ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ

by | 04/10/23 | ಸುದ್ದಿ


ಚಿತ್ರದುರ್ಗ ಅ. 04
ಚಿತ್ರದುರ್ಗ ತಾಲ್ಲೂಕಿನ 158 ಗ್ರಾಮಗಳಿಗೆ ವಾಣಿವಿಲಾಸ ಸಾಗರ ಜಲಾಶಯದಿಂದ ಶುದ್ಧ ಕುಡಿಯುವ ನೀರು ಪೂರೈಸುವ ಕಾಮಗಾರಿಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಶಾಸಕ ಕೆ.ಸಿ. ವೀರೇಂದ್ರ ಪ್ಪಪಿ ಅವರು ಹೇಳಿದರು.
ನಗರದ ತ.ರಾ.ಸು ರಂಗಮಂದಿರದಲ್ಲಿ ಬುಧುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ನಗರ ಸಭೆ ವತಿಯಿಂದ ಆಯೋಜಿಸಲಾದ ತಾಲ್ಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ತಾಲ್ಲೂಕಿನ 158 ಹಳ್ಳಿಗಳಿಗೆ ವಾಣಿ ವಿಲಾಸ ಸಾಗರದಿಂದ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಕಾಮಗಾರಿಗೆ ಶೀಘ್ರವೇ ಚಾಲನೆ ನೀಡಿ, ಕುಡಿಯುವ ನೀರಿನ ಬವಣೆಗೆ ಮುಕ್ತಿ ಹಾಡಲಾಗುವುದು. ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಹಳ್ಳಿಗಳಲ್ಲಿನ ಚರಂಡಿಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಲು ಈಗಾಗಲೆ ಸೂಚನೆ ನೀಡಲಾಗಿದೆ. ಚರಂಡಿಗಳ ಸ್ವಚ್ಛತೆ ಬಳಿಕ, ಗ್ರಾಮಸ್ಥರು ಪುನಃ ಚರಂಡಿಗಳಿಗೆ ಕಸವನ್ನು ಸುರಿಯಬಾರದು, ಹೀಗಾದಲ್ಲಿ ಚರಂಡಿ ನೀರು ಕಟ್ಟಿಕೊಂಡು, ನೀರು ನಿಂತು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತದೆ. ಗ್ರಾಮಗಳ ಸ್ವಚ್ಛತೆಯಲ್ಲಿ ಜನರೂ ಕೂಡ ತಮ್ಮ ಜವಾಬ್ದಾರಿಯನ್ನು ಅರಿತು, ನೈರ್ಮಲ್ಯ ಕಾಪಾಡಿಕೊಳ್ಳಲು ಸಹಕರಿಸಬೇಕು, ಗ್ರಾಮದ ಯುವಕರು ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಬೇಕು ಎಂದರು. ನಗರಕ್ಕೆ ಹೊಂದಿಕೊಂಡಿರು ಮಲ್ಲಾಪುರ ಕೆರೆ ಸ್ವಚ್ಛಗೊಳಿಸಲಾಗುವುದು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ದೂರದೃಷ್ಟಿ ಫಲವಾಗಿ ಸರ್ಕಾರಿ ಅಧಿಕಾರಿಗಳೇ ಜನರ ಬಳಿಗೆ ತೆರಳಿ ಅಹವಾಲುಗಳನ್ನು ಆಲಿಸುವಂತೆ ಆಗಿದೆ. ಜನತಾ ದರ್ಶನದಲ್ಲಿ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ತಡಮಾಡದೆ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು. 3 ತಿಂಗಳ ನಂತರ ಚಿತ್ರದುರ್ಗ ತಾಲೂಕಿಗೆ ಸಂಬಂಧಿಸಿದಂತೆ ನಡೆಯುವ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಇಂದು ಸಲ್ಲಿಸಿದ ಅರ್ಜಿಗಳಿಗೆ ಪರಿಹಾರ ದೊರಕದಿದ್ದರೆ ಜನಪ್ರತಿನಿಧಿಗಳ ಗಮನಕ್ಕೆ ತರಬಹದು. ಇಂದು ಜರುಗಿದ ಜನತಾ ದರ್ಶನದಲ್ಲಿ ನಾಗರಿಕ, ವೈಯಕ್ತಿಕ ಹಾಗೂ ಗ್ರಾಮಗಳ ಸಮಸ್ಯೆಗಳನ್ನು ಕುರಿತು ಜನರು ಅಹವಾಲು ಸಲ್ಲಿಸಿದ್ದಾರೆ. ಇವುಗಳನ್ನು ಶೀಘ್ರ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು.
ಈ ಹಿಂದೆ ಚಿತ್ರದುರ್ಗ ತಾಲೂಕಿನಲ್ಲಿ ಪರಿಶಿಷ್ಟ ಜಾತಿ/ ಪ.ವರ್ಗದವರಿಗೆ ಮಂಜೂರು ಮಾಡಿದ್ದ 822 ಮನೆಗಳ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತ್ತು, ಆದರೆ ಇದೀಗ ನಿರ್ಮಾಣ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಬರಗಾಲದ ಹಿನ್ನಲೆಯಲ್ಲಿ ಗ್ರಾಮೀಣ ಭಾಗದಿಂದ ವಲಸೆ ತಪ್ಪಿಸಲು ಮನರೇಗಾದಡಿ 150 ದಿನಗಳ ಕೆಲಸ ನೀಡಲಾಗುತ್ತಿದೆ. ಇದರ ಅಡಿ ರೈತರು ಜಮೀನುಗಳಿಗೆ ಬದುಗಳನ್ನು ನಿರ್ಮಿಸಿಕೊಳ್ಳಬಹುದು ಎಂದರು.
ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ಆದೇಶದಂತೆ ಸೆ.25 ರಂದು ಹಿರಿಯೂರಿಲ್ಲಿ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲಾತ್ತು. 15 ದಿನಗಳಿಗೊಮ್ಮೆ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲಾಗುವುದು. ಜನರು ವಿವಿಧ ಕಡೆಗಳಿಂದ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಕಚೇರಿಗೆ ಬಂದು ಅಹವಾಲು ಸಲ್ಲಿಸುತ್ತಾರೆ. ಸ್ವೀಕರಿಸಿದ ಜನರ ಅಹವಾಲುಗಳನ್ನು ವಿಳಂಬ ಮಾಡದೇ ತಕ್ಷಣೆವೇ ಪರಿಹಾರ ನೀಡಲಾಗುವುದು. ಸಕಾಲದಲ್ಲಿ ಜನರಿಗೆ ಸೇವಗಳನ್ನು ನೀಡಿ ಸರ್ಕಾರದ ಯೋಜನೆಗಳನ್ನು ತಲುಪಿಸಲಾಗುವುದು. ಜನರು ಈ ಜನತಾ ದರ್ಶನ ಕಾರ್ಯಕ್ರಮ ಉಪಯೋಗಿಸಿಕೊಂಡು ಮನವಿ ಸಲ್ಲಿಸಬೇಕು. ಹೀಗೆ ಸ್ವೀಕರಿಸಿದ ಅರ್ಜಿಗಳನ್ನು ಐಪಿಜಿಆರ್‍ಎಸ್ ತಂತ್ರಾಂಶದಲ್ಲಿ ಅಳವಡಿಸಿ, ಸಂಬಂಧಪಟ್ಟ ಇಲಾಖೆಗೆ ಕಳುಹಿಸಿಕೊಡಲಾಗುವುದು. ಅರ್ಜಿಗಳು ವಿಲೇವಾರಿ ಆಗುವವರೆಗೂ ತಂತ್ರಾಂಶದ ಮೂಲಕ ಮೇಲ್ವಿಚಾರಣೆ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು ವಿದ್ಯಾವಿಕಾಸ ಯೋಜನೆಯಡಿ ತಾಲೂಕಿನ 25,472 ಮಕ್ಕಳಿಗೆ ಎರಡನೇ ಹಂತದ ಶಾಲಾ ಸಮವಸ್ತ್ರ ವಿತರಣೆ ಕಾರ್ಯಕ್ಕೆ ಸಾಂಕೇತಿಕವಾಗಿ ಮಕ್ಕಳಿಗೆ ಸಮವಸ್ತ್ರ ವಿತರಿಸುವ ಮೂಲಕ ಚಾಲನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗೃಹಲಕ್ಷ್ಮೀ, ಸುಕನ್ಯಾ ಸಮೃದ್ದಿ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ನೀಡಿದರು.
ಕಂದಾಯ ಇಲಾಖೆ ಇಂದಿರಾ ಗಾಂಧಿ ವೃದ್ಧಾಪ್ಯ ಯೋಜನೆಗಳ ಫಲಾನುಭವಿಗಳ ಅರ್ಜಿಯನ್ನು ಸ್ಥಳದಲ್ಲಿಯೇ ಸ್ವೀಕರಿಸಿ, ಮಂಜೂರಾತಿ ಪತ್ರದ ಆದೇಶ ಪ್ರತಿಗಳನ್ನು ಇದೇ ಸಂದರ್ಭದಲ್ಲಿ ವಿತರಣೆ ಮಾಡಲಾಯಿತು. ಅಂಗವಿಕಲರ ವೇತನ ಭತ್ಯೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣೆ ಮಾಡಲಾಯಿತು. 94 ಸಿ ಅಡಿ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಿಕೊಂಡ ಮನೆಗಳನ್ನು ಸಕ್ರಮಗೊಳಿಸಿದ ಹಕ್ಕು ಪತ್ರಗಳನ್ನು ಫಲಾನುಭವಿಗೆ ನೀಡಲಾಯಿತು. ಇದರಿಂದ ಫಲಾನುವಿಗಳಿಗೆ ಮನೆಯ ಒಡೆತನದ ಹಕ್ಕು ಲಭಿಸಿ ಅದನ್ನು ಪರಭಾರೆ ಹಾಗೂ ಬ್ಯಾಂಕಿನಲ್ಲಿ ಸಾಲ ಪಡೆದು ಅಭಿವೃದ್ಧಿ ಪಡಿಸಲು ಅವಕಾಶ ಲಭಿಸಿದೆ.
ಕೃಷಿ ಇಲಾಖೆ ರೈತ ಆತ್ಮಹತ್ಯೆ ಪ್ರಕರಣದಲ್ಲಿ ರೈತರ ಕುಟುಂಬದವರಿಗೆ ಪರಿಹಾರ ಧನ ವಿತರಿಸಲಾಯಿತು. ರೇμÉ್ಮ ಇಲಾಖೆ ವತಿಯಿಂದ 100 ಚದುರ ಅಡಿಯ ರೇμÉ್ಮ ಮನೆ ನಿರ್ಮಾಣಕ್ಕೆ ಸಹಾಯಧನ ಆಯ್ಕೆಯಾದ ರೈತರಿಗೆ ಧನ ಸಹಾಯದ ಚೆಕ್‍ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಜಿಲ್ಲಾ ಪಂಚಾಯತಿ ಅಭಿವೃದ್ಧಿ ಹಾಗೂ ಅರ್ನಿಬಂಧಿತ ಅನುದಾನ, ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಅನುದಾನದಡಿ 16 ಫಲಾನುಭವಿಗಳಿಗೆ ತ್ರಿಚಕ್ರವಾಹನ ವಿತರಿಸಲಾಯಿತು.
ಅಹವಾಲುಗಳ ಸ್ವೀಕಾರಕ್ಕಾಗಿ ತ.ರಾ.ಸು. ರಂಗಮಂದಿರದಲ್ಲಿ 4 ಕೌಂಟರ್‍ಗಳನ್ನು ತೆರೆಯಲಾಗಿತ್ತು. ಆರೋಗ್ಯ ಇಲಾಖೆ ವತಿಯಿಂದ ಸ್ಥಳದಲ್ಲಿಯೇ ಕೌಂಟರ್ ತೆರೆದು ಆಯುಷ್ಮಾನ್ ಆರೋಗ್ಯ ಕರ್ನಾಟಕ ಕಾರ್ಡುಗಳನ್ನು ಸಾರ್ವಜನಿಕರಿಗೆ ಮುದ್ರಿಸಿಕೊಡಲಾಯಿತು.
ಜಿ.ಪಂ. ಸಿಇಓ ಎಸ್.ಜಿ.ಸೋಮಶೇಖರ್, ಉಪವಿಭಾಗಧಿಕಾರಿ ಎಂ.ಕಾರ್ತೀಕ್, ತಹಶೀಲ್ದಾರ್ ಡಾ.ನಾಗವೇಣಿ, ತಾ.ಪಂ. ಇ.ಓ ಹನುಮಂತಪ್ಪ, ನಗರಸಭೆ ಪೌರಾಯುಕ್ತೆ ರೇಣುಕಾ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಈ ಮೊದಲು ಪಿಯುಸಿ ವಿಜ್ಞಾನ ತರಗತಿಗೆ ಪ್ರವೇಶಕ್ಕೆ ಅವಕಾಶವಿತ್ತು, ಆದರೆ ಈಗ ಇಲ್ಲ, ಸದ್ಯ ನಗರದಲ್ಲಿ ಕೇವಲ 02 ಸರ್ಕಾರಿ ಕಾಲೇಜಲ್ಲಿ ಮಾತ್ರ ಪಿಯುಸಿ ವಿಜ್ಞಾನ ತರಗತಿಗೆ ಪ್ರವೇಶಕ್ಕೆ ಅವಕಾಶವಿದೆ, ಇದರಿಂದ ಸುತ್ತಮುತ್ತಲ ಗ್ರಾಮಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ, ಈ ಮೊದಲಿನಂತೆಯೇ ಸರ್ಕಾರಿ ವಿಜ್ಞಾನ ಕಾಲೇಜಲ್ಲಿ ಪಿಯುಸಿ ತರಗತಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸುವಂತೆ ಸಾರ್ವಜನಿಕರು ಕೋರಿದರು. ಚಿತ್ರದುರ್ಗ ನಗರದ ಪ್ರಮುಖ ಬಿ.ಡಿ. ರಸ್ತೆ ಹಾಗೂ ತುರುವನೂರು ರಸ್ತೆಯಲ್ಲಿ ಫುಟ್‍ಪಾತ್‍ಗಳನ್ನು ಅಂಗಡಿಕಾರರೇ ಬಳಸುತ್ತಿದ್ದಾರೆ, ಪಾದಚಾರಿಗಳು ಓಡಾಡಲು ಅವಕಾಶವಾಗುತ್ತಿಲ್ಲ, ನಗರದ ತ.ರಾ.ಸು. ರಂಗಮಂದಿರದ ಶೌಚಾಲಯಗಳು ಹಾಳಾಗಿದ್ದು, ಸರಿಪಡಿಸಬೇಕಿದೆ, ನಗರದ ರಾಜಕಾಲುವೆಗಳು ಒತ್ತುವಾರಿಯಾಗಿದ್ದು, ತೆರವಿಗೆ ನಗರಸಭೆ ಕ್ರಮ ಕೈಗೊಳ್ಳಬೇಕು, ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರು ಸಮಸ್ಯೆ, ಜಮೀನಿನ ಸರ್ವೆ ಮಾಡಿಕೊಡುವುದು, ನಿವೇಶನ ಹಾಗೂ ಮನೆ ಕೋರಿಕೆ ಸೇರಿದಂತೆ ವಿವಿಧ ಅಹವಾಲುಗಳು ಸಲ್ಲಿಕೆಯಾದವು. ಜನತಾದರ್ಶನದಲ್ಲಿ ಸಾರ್ವಜನಿಕರಿಂದ ವಿವಿಧ ಅಹವಾಲುಗಳಿಗೆ ಸಂಬಂಧಿಸಿದಂತೆ ಸುಮಾರು 230 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page