ತಾಲ್ಲೂಕಿನ ವದ್ದೀಕೆರೆ ಶ್ರೀಕಾಲಭೈರವೇಶ್ವರಸ್ವಾಮಿಯ ಮಹಾದ್ವಾರ ಉದ್ಘಾಟಿಸಿದ ಮಾಜಿ ಸಚಿವ ಸುಧಾಕರ್

by | 13/03/23 | ಸಾಂಸ್ಕೃತಿಕ, ಸುದ್ದಿ

ಹಿರಿಯೂರು :
ತಾಲ್ಲೂಕಿನ ಐಮಂಗಲ ಭಾಗದಲ್ಲಿನ ಭಕ್ತಾದಿಗಳು, ಕಾರ್ಯಕರ್ತರ, ಮುಖಂಡರ ಆಶಯದಂತೆ ಶ್ರೀವದ್ದೀಕೆರೆಸಿದ್ದೇಶ್ವರಸ್ವಾಮಿ ಎಂದು ಹೆಸರುವಾಸಿಯಾಗಿರುವ ಶ್ರೀಕಾಲಭೈರವೇಶ್ವರಸ್ವಾಮಿಯ ದೇವಸ್ಥಾನಕ್ಕೆ ದ್ವಾರ ಬಾಗಿಲನ್ನು ನಿರ್ಮಾಣ ಮಾಡಿಸಿದ್ದೇನೆ, ಯರಬಳ್ಳಿ ಭಾಗದಲ್ಲಿ ಚಳ್ಳಕೆರೆ ಶಾಸಕರಾದ ರಘುಮೂರ್ತಿರವರು ನಿರ್ಮಾಣ ಮಾಡಿದ್ದಾರೆ ಎಂಬುದಾಗಿ ಮಾಜಿ ಸಚಿವರಾದ ಡಿ.ಸುಧಾಕರ್ ಹೇಳಿದರು.
ತಾಲ್ಲೂಕಿನ ಐಮಂಗಲ ಗ್ರಾಮದಲ್ಲಿ ಶ್ರೀಕಾಲಭೈರವೇಶ್ವರಸ್ವಾಮಿಯ ಐತಿಹಾಸಿಕ ದೇವಸ್ಥಾನಕ್ಕೆ ತಮ್ಮ ಸ್ವಂತ ಹಣದಿಂದ 50 ಲಕ್ಷ ರೂಗಳಿಗೆ ನೂತನವಾಗಿ ನಿರ್ಮಿಸಿ ಕೊಟ್ಟಿರುವ ವದ್ದೀಕೆರೆ ಶ್ರೀಕಾಲಭೈರವೇಶ್ವರಸ್ವಾಮಿಯ ಮಹಾದ್ವಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಸೇರಿದಂತೆ ತಾಲ್ಲೂಕಿನ ಸಾವಿರಾರು ಭಕ್ತರು ವದ್ದೀಕೆರೆ ಸಿದ್ದಪ್ಪ ಸ್ವಾಮಿಯ ಭಕ್ತರಾಗಿದ್ದು, ಈ ಭಾಗದಲ್ಲಿ ಅಪಾರ ಶಕ್ತಿಯನ್ನು ಹೊಂದಿರುವ ಅತ್ಯಂತ ಪುರಾತನ ದೇವಸ್ಥಾನ ಇದಾಗಿದೆ. 2008 ರಲ್ಲಿ ಆಕಸ್ಮಿಕವಾಗಿ ಹಿರಿಯೂರಿನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರನಾಗಿ ಚುನಾವಣೆಗೆ ನಿಂತು ಶಾಸಕನಾದೆ, ಆ ಚುನಾವಣೆಯಲ್ಲಿ ಐಮಂಗಲ ಹೋಬಳಿಯಲ್ಲಿ 5000 ಕ್ಕೂ ಹೆಚ್ಚು ಮತಗಳ ಲೀಡ್ ಸಿಕ್ಕಿತ್ತು.
ಅಲ್ಲದೆ ಕಳೆದ 10 ವರ್ಷಗಳ ಕಾಲ ಹಿರಿಯೂರು ಶಾಸಕನಾಗಿ, ಮಂತ್ರಿಯಾಗಿ ಹಿರಿಯೂರು ತಾಲ್ಲೂಕಿಗೆ ಸಾವಿರಾರು ಕೋಟಿ ಅನುದಾನವನ್ನು ತಂದು ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಿದ್ದೇನೆ. ಐಮಂಗಲ ಭಾಗವು ಅತ್ಯಂತ ಬರುಡು ಭೂಮಿಯಾಗಿದ್ದು ಈ ಭಾಗಕ್ಕೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ವಾಣಿವಿಲಾಸ ಸಾಗರದಿಂದ ನೀರನ್ನು ಒದಗಿಸಲು ಆಗಲೇ ಎಲ್ಲಾ ಕಡೆ ಪೈಪ್ ಲೈನ್ ಕೆಲಸ ಮುಗಿಸಿದ್ದೆನು.
ಆದರೆ ದುರಾದೃಷ್ಟ 2018ರ ಚುನಾವಣೆಯಲ್ಲಿ ಪರಭವಗೊಂಡೆ, ಗೆದ್ದಂತಹ ಶಾಸಕರು 5 ವರ್ಷಗಳಲ್ಲಿ ಪೈಪ್ ಲೈನ್ ಕಾಮಗಾರಿ ಮುಗಿದಿದ್ದರು ಕೂಡ ಇದುವರೆಗೂ ನೀರಿನ ಸೌಲಭ್ಯವನ್ನು ಒದಗಿಸಿಲ್ಲ, ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೂ ಶುದ್ದ ಕುಡಿಯುವ ನೀರಿನ ಘಟಕವನ್ನು ಸ್ಥಾಪನೆ ಮಾಡಿದೆ 10 ವರ್ಷಗಳ ಕಾಲ ನನ್ನ ಶಾಸಕನ ಅವಧಿಯಲ್ಲಿ ಎಸ್.ಸಿ ಎಸ್.ಟಿ ಒ.ಬಿ.ಸಿ ಜನಾಂಗದವರಿಗೆ 6000ಕ್ಕಿಂತ ಹೆಚ್ಚು ಗಂಗಾ ಕಲ್ಯಾಣ ಯೋಜನೆಯಲ್ಲಿ ನೀರಿನ ಸೌಲಭ್ಯವನ್ನು ಕಲ್ಪಿಸಿದ್ದೇನೆ,
ಅಲ್ಲದೆ ಇದರಿಂದ ಸಾವಿರಾರು ರೈತರು ತಮ್ಮ ಬದುಕನ್ನು ಹಸನಾಗಿಸಿಕೊಂಡು ಆರ್ಥಿಕವಾಗಿ ಸಮಾಜದಲ್ಲಿ ಮುಂದೆ ಬಂದಿದ್ದಾರೆ. ಬಿ.ಜೆ.ಪಿ ಯವರಿಗೆ ವಾಮ ಮಾರ್ಗದಿಂದ ಅಧಿಕಾರ ಹಿಡಿಯುವುದು ಗೊತ್ತೇ ಹೊರತು ಆಡಳಿತ ನೆಡೆಸಲು ಬರುವುದಿಲ್ಲ. ಬಿ.ಜೆ.ಪಿ ಸರ್ಕಾರದ್ದೇನಿದ್ದರೂ 40% ಲಚ್ಚದ ಸರ್ಕಾರವಾಗಿದ್ದು, ನನ್ನ ಆಡಳಿತ ಅವಧಿಯಲ್ಲಿ ದ್ವೇಷದ ರಾಜಕಾರಣ ಮಾಡಿಲ್ಲ, ಚುನಾವಣೆ ದಿವಸ ಅಭ್ಯರ್ಥಿಗಳ ಪೂರ್ವಪರ ಯೋಚಿಸದೇ ಮತದಾರರು ಮತವನ್ನು ಹಾಕಿದರೆ ಇಂತಹ ಪರಿಸ್ಥಿತಿ ಅನುಭವಿಸಬೇಕಾಗುತ್ತದೆ ಎಂಬುದಾಗಿ ಹೇಳಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ವಿಜೇತನಾದರೆ 20 ರಿಂದ 30 ಕೋಟಿ ಹಣವನ್ನು ವದ್ದೀಕೆರೆ ಸಿದ್ದಪ್ಪನ ದೇವಸ್ಥಾನದ ಅಭಿವೃದ್ದಿಗೆ ಕಾರಣೀಭೂತನಾಗುತ್ತೇನೆ. 2018 ರಿಂದ 2021 ವರೆಗೂ ತಾಲ್ಲೂಕಿನಲ್ಲಿ ನಡೆದ ಎಲ್ಲಾ ಕಾಮಗಾರಿಗಳೂ ನಾನು ಶಾಸಕನಾದ ಅವಧಿಯಲ್ಲಿ ಬಂದಂತಹ ಹಣ ಆಗಿರುತ್ತದೆ.
ಅಲ್ಲದೆ ನನ್ನ ಆಡಳಿತ ಅವಧಿಯಲ್ಲಿ ಮುರಾರ್ಜಿ ವಸತಿ ಶಾಲೆ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಐ.ಟಿ.ಐ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು, ತೋಟಗಾರಿಕೆ ಮಹಾ ವಿದ್ಯಾಲಯಗಳನ್ನು ಸ್ಥಾಪನೆ ಮಾಡಿ ಈ ಭಾಗದ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದರು,
ಈ ಬಾರಿ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ 10 ಕೆ.ಜಿ ಅಕ್ಕಿ ಉಚಿತ, 200 ಯುನಿಟ್ ವಿದ್ಯುತ್ ಉಚಿತ, ಪ್ರತಿ ಮನೆ ಯಜಮಾನಿಗೆ ತಿಂಗಳಿಗೆ 2000 ರೂಗಳ ಉಚಿತ ಗ್ಯಾರೆಂಟಿ ಕಾರ್ಡ್ ಗಳನ್ನು ನೀಡುತ್ತಿದ್ದೇವೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನನ್ನನ್ನು ಅತ್ಯಂತ ಹೆಚ್ಚಿನ ಮತಗಳನ್ನು ನೀಡಿ ಜಯಶೀಲರನ್ನಾಗಿ ಮಾಡಬೇಕು ಎಂಬುದಾಗಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮಾಜಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲ್ಲಹಟ್ಟಿ ತಿಪ್ಪೇಸ್ವಾಮಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಈರಲಿಂಗೇಗೌಡ, ಪ್ರಚಾರ ಸಮಿತಿ ಅಧ್ಯಕ್ಷರಾದ ಸೂರಗೊಂಡನಹಳ್ಳಿ ಕೃಷ್ಣಮೂರ್ತಿ, ಹರ್ತಿಕೋಟೆ ದಯಾನಂದ ಮಾತನಾಡಿದರು. ಸ್ವಾಗತ ಭಾಷಣವನ್ನು ನಿವೃತ್ತ ಶಿಕ್ಷಕರಾದ ಮರಡಿಹಳ್ಳಿ ಹರೀಶ್ ರವರು ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಕಲ್ಲಹಟ್ಟಿ ತಿಪ್ಪೇಸ್ವಾಮಿ, ವದ್ದೀಕೆರೆ ಸಿದ್ದೇಗೌಡ, ಓಬೇಗೌಡ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಕ್ ಮಂಜುನಾಥ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಈರಲಿಂಗೇಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ಜೆ.ರಮೇಶ್, ಪ್ರಚಾರ ಸಮಿತಿ ಅಧ್ಯಕ್ಷರಾದ ಸೂರಗೊಂಡನಹಳ್ಳಿ ಕೃಷ್ಣಮೂರ್ತಿ, ಹರ್ತಿಕೋಟೆ ದಯಾನಂದ್, ಕೆ.ಪಿ.ಸಿ.ಸಿ ಸದಸ್ಯರಾದ ಕಂದಿಕೆರೆ ಸುರೇಶ್ ಬಾಬು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಿಡ್ಡೋಬನಹಳ್ಳಿ ಗ್ರಾಮಾಂತರ ಮಹಿಳಾ ಅಧ್ಯಕ್ಷರಾದ ನಾಗರತ್ನಮ್ಮ, ಅಶೋಕ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ಡಿ.ಕೋಟೆ ಚಂದ್ರಪ್ಪ, ನಾಗೇಂದ್ರನಾಯ್ಕ, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಪ್ರವೀಣ್, ಗೌನಹಳ್ಳಿ ಚಂದ್ರಪ್ಪ, ಮರಡಿಹಳ್ಳಿ ನಾಗರಾಜ್, ಕಲ್ಲಹಟ್ಟಿ ಹರೀಶ್, ಎಂ.ಡಿ.ಕೋಟೆ ನಾಗರಾಜ್, ಸೊಂಡೇಕೆರೆ ನಾಗರಾಜ್, ಎಂ.ಡಿ.ಕೋಟೆ ಕುಮಾರ್, ಎಸ್.ಸಿ ಘಟಕದ ಅಧ್ಯಕ್ಷರಾದ ಚಂದ್ರನಾಯ್ಕ, ರಾಮಜೋಗಿಹಳ್ಳಿ ಶಿವಮೂರ್ತಿ, ಮಾಜಿ ನಗರಸಭಾ ಅಧ್ಯಕ್ಷರಾದ ಶಿವರಂಜಿನಿ, ಜ್ಯೋತಿಲಕ್ಷ್ಮಿ, ಭರಂಪುರ ಬಾಬು, ಯುವ ಕಾಂಗ್ರೆಸ್ ಅಧ್ಯಕ್ಷರಾದ ಸಿದ್ದೇಶ್, ಗುರುಪ್ರಸಾದ್, ದಾಸಣ್ಣನಮಾಳಿಗೆ ಪಟೇಲ್, ಹರ್ತಿಕೋಟೆ ಮಹಂತೇಶ್, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರಾದ ದಯಾನಂದ್, ಮಾಜಿ ತಾ.ಪಂ.ಸದಸ್ಯರಾದ ಅಪ್ಪಾಜಿ ತಿಪ್ಪೇಸ್ವಾಮಿ, ಪ್ರಕಾಶ್ ಮಲ್ಲಪ್ಪನಹಳ್ಳಿ, ಬ್ಯಾಡರಹಳ್ಳಿ ಮಂಜುನಾಥ್, ವದ್ದೀಕೆರೆ ಗೋಪಾಲ್ ಕೃಷ್ಣ, ಆರ್.ಶಿವಣ್ಣ ವದ್ಧೀಕೆರೆ ಗ್ರಾಮಾಂತರ ಪಂಚಾಯಿತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ವೀರೇಶ್, ಮಸ್ಕಲ್ ಶ್ರೀನಿವಾಸ್, ಕಣುಮಪ್ಪ, ರಘು, ಮಹಂತೇಶ್, ಮರಡಿಹಳ್ಳಿ ರಘುರೆಡ್ಡಿ, ಕಂದಿಕೆರೆ ತಿಪ್ಪೇಸ್ವಾಮಿ, ಶ್ರೀನಿವಾಸ್ ವದ್ದೀಕೆರೆ, ಕೆ.ಸಿ.ರೊಪ್ಪ ಜಯಣ್ಣ, ಸೂರಗೊಂಡನಹಳ್ಳಿ ಸುರೇಶ್, ಹೇಮದಳ ಮಾಜಿ ಗ್ರಾ.ಪಂ.ಅಧ್ಯಕ್ಷರಾದ ಶ್ರೀಧರ್, ತಾಳವಟ್ಟಿ ಸಿದ್ದಾಭೋವಿ, ಬಾಲರಾಜ್, ದಿಂಡಾವರ ಮಹೇಶ್, ವಿ.ಕೆ.ಗುಡ್ಡ ಮಹಲಿಂಗಪ್ಪ, ಇನ್ನೂ ಹಲವಾರು ಮುಖಂಡರು ಭಕ್ತಾಧಿಗಳು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *