ತಾಲೂಕು ಮಟ್ಟದ ಪಠ್ಯೇತರ ಚಟುವಟಿಕೆ ಸ್ಪರ್ಧೆಯಲ್ಲೆ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಭಾಗವಹಿಸುವಂತೆ ಬಿಇಒ ಸುರೇಶ್.

by | 12/11/23 | ಶಿಕ್ಷಣ

ಚಳ್ಳಕೆರೆ ಜನಧ್ಬನಿ ವಾರ್ತೆ ನ.,12.
ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ 2023-24 ನೇ
ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಪ್ರತ್ಯೇಕವಾಗಿ ಸಹ ಪಠ್ಯ ಚಟುವಟಿಕೆ
ಸ್ಪರ್ಧೆಗಳನ್ನು ತಾಲ್ಲೂಕು ಮಟ್ಟದಲ್ಲಿ ದಿನಾಂಕ:21-11-2023 ರಂದು ವಿಶ್ವಭಾರತಿ ಪ್ರೌಢಶಾಲೆ
ಚಳ್ಳಕೆರೆ ಇಲ್ಲಿ ಆಯೋಜಿಸಿದ್ದು, ಆಸಕ್ತ ಪ್ರತಿಭಾವಂತ ಶಿಕ್ಷಕರು ಈ ಸ್ಪರ್ಧೆಗಳಲ್ಲಿ ಹೆಚ್ಚಿನ
ಸಂಖ್ಯೆಯಲ್ಲಿ ಭಾಗವಹಿಸಲು ತಿಳಿಸಿದೆ.ಒಬ್ಬ ಶಿಕ್ಷಕರು ಒಂದು ಸ್ಪರ್ಧೆಯಲ್ಲಿ ಮಾತ್ರ
ಭಾಗವಹಿಸಲು ಅವಕಾಶವಿದ್ದು, ಪ್ರಥಮ ಸ್ಥಾನ ಪಡೆದ ಶಿಕ್ಷಕರು ಮುಂದಿನ ಹಂತಕ್ಕೆ
ಅರ್ಹರಾಗಿರುತ್ತಾರೆ.ಮತ್ತು ವಿಜೇತ ಶಿಕ್ಷಕರಿಗೆ ನಗದು ಬಹುಮಾನ ನೀಡಲಾಗುವುದು.
ಸ್ಪರ್ಧೆಯ ವಿಷಯಗಳು ಈ ಕೆಳಗಿನಂತಿವೆ.
ಸ್ಪರ್ಧೆಯ ವಿವರ:- 1.ಜನಪದಗೀತೆ ಸ್ಪರ್ಧೆ
2.ಆಶುಭಾಷಣ ಸ್ಪರ್ಧೆ,
3.ಪ್ರಬಂಧ ಸ್ಪರ್ಧೆ,
4.ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆ,
5.ಸ್ಥಳದಲ್ಲೇ ಪಾಠೋಪಕರಣ ತಯಾರಿಕೆ ಸ್ಪರ್ಧೆ
6. ರಸಪ್ರಶ್ನೆ(ಸಾಮಾನ್ಯ ಜ್ಞಾನ) ಸ್ಪರ್ಧೆ
7. ರಸಪ್ರಶ್ನೆ(ವಿಜ್ಞಾನ) ಸ್ಪರ್ಧೆ

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *