ತಾಲೂಕಿನಾಧ್ಯಂತ ಅಕ್ರಮ ಮದ್ಯಮಾರಾಟಕ್ಜೆ ಕಡುವಾಣ ಹಾಕುವಂತೆ ಕೆಆರ್ ಎಸ್ ಪಕ್ಷದಿಂದ ಮನವಿ.

by | 12/10/23 | ಪ್ರತಿಭಟನೆ

ಚಳ್ಳಕೆರೆ ಅ.12.ಅನೇಕ ದಿನಸಿ ಅಂಗಡಿ, ಹೋಟೆಲ್‌, ಸಣ್ಣಪುಟ್ಟ ವ್ಯಾಪಾರ ಸ್ಥಳಗಳೆಲ್ಲಾಅಕ್ರಮ ಮದ್ಯ ಮಾರಾಟ ಕೇಂದ್ರಗಳಾಗಿದ್ದು ಅಕ್ರಮ ಮದ್ಯಮಾರಾಟಕ್ಕೆ ಕಡಿವಾಣ ಹಾಕುವಂತೆ ಕೆಆರ್ ಎಸ್ ಪಕ್ಷದ ಸೈನಿಕರು ಅಬಕಾರಿ ಹಾಗೂ ತಹಶೀಲ್ದಾರ್ ಕಚೇರಿಗೆ ಮನವಿ ನೀಡಿದ್ದಾರೆ.
ರಾಜ್ಯಾದ್ಯಂತ ಕೆಅರ್ ಎಸ್ ಪಕ್ಷದವತಿಯಿಂದ ಮದ್ಯ ಮುಕ್ತ ಮಾಡಲು ಆಪರೇಷನ್ ಮದ್ಯ ಅಭಿಯಾನ ಹಮ್ಮಿಕೊಂಡು ಅಕ್ರಮ‌ಮದ್ಯ ಮಾರಾಟ ಮಾಡುವುದನ್ನು ರಿಯಾಲಿಟಿ ಚೆಕ್ ಮಾಡುವ ಮೂಲಕ ಅಬಕಾರಿ. ಪೋಲಿಸ್ . ಹಾಗೂ ಕಂದಾಯ ಇಲಾಖೆಗೆ ದಾಖಲೆ ಸಮೇತ ಮಾಹಿತಿ ನೀಡಲಾಗಿದೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ನಿಯಮ ಮೀರಿ ನಡೆಯುತ್ತಿರುವ ಅಕ್ರಮ ಮದ್ಯ ದಂಧೆ ವಿರುದ್ಧ ಕಠಿಣ ಕಾನೂನು ಕ್ರಮ ಮರೀಚಿಕೆಯಂತಿದೆ.

ಮದ್ಯ ಪೂರೈಕೆ, ಮಾರಾಟದ ಕುರಿತಂತೆ ನಿಖರ ಮಾಹಿತಿ ದೊರೆತರೂ ಅಧಿಕಾರಿಗಳು ಮಾತ್ರ ಮೌನವಹಿಸುತ್ತಾರೆ. ತಾಲೂಕಿನ ನಗರ ಹಾಗೂ ಹಳ್ಳಿಗಳಲ್ಲಿ ಎಗ್ಗಿಲ್ಲದೆ ಅಕ್ರಮ ಮದ್ಯ ಮಾರಾಟ‌ ಯಥೇಚ್ಛವಾಗಿ ಸಾಗಿದೆ.

ಅನೇಕ ದಿನಸಿ ಅಂಗಡಿ, ಹೋಟೆಲ್‌, ಸಣ್ಣಪುಟ್ಟ ವ್ಯಾಪಾರ ಸ್ಥಳಗಳೆಲ್ಲಾಅಕ್ರಮ ಮದ್ಯ ವಹಿವಾಟಿನ ಸ್ಥಳವಾಗಿವೆ. ನಿಯಮ ಮೀರಿ ನಡೆಯುತ್ತಿರುವ ಅಕ್ರಮ ಮದ್ಯ ದಂಧೆ ವಿರುದ್ಧ ಕಠಿಣ ಕಾನೂನು ಕ್ರಮ ಮರೀಚಿಕೆಯಂತಿದೆ.

ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *