ಚಿತ್ರದುರ್ಗ ಡಿ.14:
ಚಿತ್ರದುರ್ಗ ತಾಲ್ಲೂಕಿನ ಚಿಕ್ಕಗೊಂಡನಹಳ್ಳಿ ಗ್ರಾಮ ನಿವಾಸಿ ಬೇಬಿ (24 ವರ್ಷ) ಮಗಳಾದ ಬಾಲಕಿ ರುತಿಕ (2 ವರ್ಷ) ಇವರು 2023ರ ಸೆಪ್ಟೆಂಬರ್ 29 ರಂದು ಕಾಣೆಯಾಗಿರುವ ಪ್ರಕರಣ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಾಣೆಯಾದ ತಾಯಿ ಬೇಬಿ ಚಹರೆ ಇಂತಿದೆ. ಬೇಬಿ (24 ವರ್ಷ) ಗಂಡ ಬಸವರಾಜ, 5.5 ಅಡಿ ಎತ್ತರ, ಎಣ್ಣೆಕೆಂಪು ಬಣ್ಣ, ಸಾಧಾರಣ ಮೈಕಟ್ಟು, ದುಂಡುಮುಖ, ಕಪ್ಪು ಕೂದಲು, ಹೊಂದಿರುತ್ತಾರೆ.
ಕಾಣೆಯಾದ ಮಗು ರುತಿಕ ಚಹರೆ ಇಂತಿದೆ. ರುತಿಕ (2 ವರ್ಷ) ತಂದೆ ಬಸವರಾಜ, 2.5 ಅಡಿ ಎತ್ತರ, ದುಂಡು ಮುಖ ಹೊಂದಿರುತ್ತಾರೆ.
ಕಾಣೆಯಾದ ಸಮಯದಲ್ಲಿ ಬೇಬಿ ಎಂಬ ಮಹಿಳೆ, ಕೆಂಪು ಬಣ್ಣದ ಕೆಂಪು ಸೀರೆ, ಮಗು ರುತಿಕ ಧರಿಸಿದ ಬಟ್ಟೆ ಕೆಂಪು ಟಾಪ್ ಮತ್ತು ನೀಲಿ ಚಡ್ಡಿ ಧರಿಸಿರುತ್ತಾರೆ.
ಈ ಮೇಲ್ಕಂಡ ಚಹರೆಯುಳ್ಳ ತಾಯಿ ಮಗಳ ಕುರಿತು ಮಾಹಿತಿ ತಿಳಿದು ಬಂದಲ್ಲಿ ನಗರ ಪೊಲೀಸ್ ಠಾಣೆಗೆ ಸಂಪರ್ಕಿಸಬಹುದು ಎಂದು ಚಿತ್ರದುರ್ಗ ನಗರ ಪೊಲೀಸ್ ಠಾಣೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments