ತಾಮ್ರದದ ತಂತಿ ಕಳವು ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಚಿತ್ರಹಳ್ಳಿ ಠಾಣೆಯ ಪೋಲಿಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

by | 14/02/24 | ಕ್ರೈಂ

ಚಿತ್ರಹಳ್ಳಿ ಫೆ.14. ತಾಮ್ರತಂತಿ ಕಳವು ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಚಿತ್ರಹಳ್ಳಿ ಠಾಣೆಯ ಪೋಲಿಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಚಿತ್ರದುರ್ಗ ನಗರ ಜೋಗಿಮಟ್ಟಿ ರೋಡ್‌ನ ವಾಸಿಯಾದ ನವೀನ್ ಕುಮಾರ್ ವಿಂಡ್ ವರ್ಲ್ಡ್
ಲಿಮಿಟೆಡ್ ಕಂಪೆನಿಯ ಆಡಳಿತ ವ್ಯವಸ್ಥಾಪಕರು ನೀಡಿದ ದೂರಿನಲ್ಲಿ ದಿನಾಂಕ8.10.2023 ರಂದು ರಾತ್ರಿ
ವೇಳೆಯಲ್ಲಿ ಹೊಳಲ್ಕೆರೆ ತಾಲ್ಲೂಕ್ ತೇಕಲವಟ್ಟಿ ಗ್ರಾಮದ ಬಳಿ ಇರುವ ತಮ್ಮ ಕಂಪೆನಿಯ ಜಿಮ್ ಒನ್
ರೋಡ್-02 ಸೈಟ್‌ನಲ್ಲಿ 08 ಪವನ ವಿದ್ಯುತ್ ಕೇಂದ್ರಗಳಿಗೆ ಅಳವಡಿಸಿರುವ 300 Sq.mm, ನ ಸುಮಾರು
700 ಮೀಟರ್ ತಾಮ್ರದ ವಿದ್ಯುತ್ ವಾಹಕ ಕೇಬಲ್‌ಗಳನ್ನು ಯಾರೋ ಕಳ್ಳರು ಕಟ್ ಮಾಡಿಕೊಂಡು
ತೆಗೆದುಕೊಂಡು ಹೋಗಿದ್ದು, ಇದರ ಸುಮಾರು7 ಲಕ್ಷ ರೂ ಗಳಾಗಬಹುದು. ಕಳ್ಳತನವಾಗಿರುವ
ಮಾಲನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದರು. ದೂರು ಸ್ವೀಕರಿಸಿ ತಂಡ ರಚನೆ ಮಾಡಿ ದಿನಾಂಕ:13.10.2023 ರಂದು
ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ಮೊ.ನಂ. 149/2023 ಕಲಂ: 379 ಐ.ಪಿ.ಸಿ ರೀತ್ಯಾ ಪ್ರಕರಣ
ದಾಖಲಿಸಿ ತನಿಖೆ ಕೈಗೊಂಡಿರುತ್ತೆ.
ಸದರಿ ಪ್ರಕರಣದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಮಾನ್ಯ ಪೊಲೀಸ್
ಅಧೀಕ್ಷಕರವರ ಮಾರ್ಗದರ್ಶನದ ಮೇರೆಗೆ ಹೊಳಲ್ಕೆರೆ ವೃತ್ತದ ಎಂ.ಬಿ ಚಿಕ್ಕಣ್ಣನವರ್, ಸಿಪಿಐ,
ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯ ಪಿ.ಎಸ್.ಐ ಕಾಂತರಾಜು ಹಾಗೂ ಸಿಬ್ಬಂದಿಯವರನ್ನು
ಒಳಗೊಂಡ ತಂಡವು ತಾಂತ್ರಿಕ ಸಾಕ್ಷ್ಯಗಳು ಹಾಗೂ ಬಾತ್ಮೀದಾರರ ಮಾಹಿತಿಯ
ಆಧಾರದ ಮೇಲೆ
ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನ ಆರೋಪಿತರನ್ನು ದಸ್ತಗಿರಿ ಮಾಡಿ ವಿಚಾರಣೆಗೆ
ಒಳಪಡಿಸಲಾಗಿರುತ್ತದೆ.
ಎ-1 ಗುರುಮೂರ್ತಿ ಕೆ ತಂದೆ ಕೆಂಚಪ್ಪ, 24 ವರ್ಷ, ಕೊಳಾಳ್ ಗ್ರಾಮ, ಹೊಳಲ್ಕೆರೆ ತಾಲ್ಲೂಕ್,
ಚಿತ್ರದುರ್ಗ ಜಿಲ್ಲೆ.
ಎ-2 ಸಂತೋಷ್ ಕೆ ತಂದೆ ಕೆಂಚಪ್ಪ, 24 ವರ್ಷ, ಕೊಳಾಳ್ ಗ್ರಾಮ, ಹೊಳಲ್ಕೆರೆ ತಾಲ್ಲೂಕ್, ಚಿತ್ರದುರ್ಗ
ಜಿಲ್ಲೆ.
ಎ-3 ಸಣ್ಣಕೆಂಚಪ್ಪ ತಂದೆ ಶಿವಲಿಂಗಪ್ಪ, 23 ವರ್ಷ, ಕೊಳಾಳ್ ಗ್ರಾಮ, ಹೊಳಲ್ಕೆರೆ ತಾಲ್ಲೂಕ್,
ಚಿತ್ರದುರ್ಗ ಜಿಲ್ಲೆ ರವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಸದರಿ ಆರೋಪಿತರ ಮಾಹಿತಿಯ ಮೇರೆಗೆಎ-4, ಕೆ.ಎಸ್ ರಾಘವೇಂದ್ರ ಯಾನೆ ಸ್ವಾಮಿ ತಂದೆ ಸಿದ್ದಪ್ಪ, 30 ವರ್ಷ, ಡ್ರೈವರ್ ಕೆಲಸ, ಕೊಳಾಳ್
ಗ್ರಾಮ, ಹೊಳಲ್ಕೆರೆ ತಾಲ್ಲೂಕ್, ಚಿತ್ರದುರ್ಗ ಜಿಲ್ಲೆ.
ಎ-7 ವೆಂಕಟೇಶ್ ಜೆ ತಂದೆ ಲೇಟ್ ಜಯ್ಯಪ್ಪ, 42 ವರ್ಷ, ವ್ಯಾಪಾರ ವೃತ್ತಿ, ಹೆಚ್.ಡಿ ಪುರ ಗ್ರಾಮ,
ಹೊಳಲ್ಕೆರೆ ತಾಲ್ಲೂಕ್, ಚಿತ್ರದುರ್ಗ ಜಿಲ್ಲೆ.
ಎ-8 ಡಿ ರಾಜು ತಂದೆ ದೇವರಾಜ, 26 ವರ್ಷ, ಚಾಲಕ ವೃತ್ತಿ, ಹೆಚ್.ಡಿ ಪುರ ಗ್ರಾಮ, ಹೊಳಲ್ಕೆರೆ
ತಾಲ್ಲೂಕ್, ಚಿತ್ರದುರ್ಗ ಜಿಲ್ಲೆ.
ವಿಚಾರಣೆಯಲ್ಲಿ ಮೇಲ್ಕಂಡ ಎ-1 ರಿಂದ ಎ-4 ಆರೋಪಿತರು, ಎ-5 ಕೃಷ್ಣ ತಂದೆ ಪಾತಪ್ಪ, 27
ವರ್ಷ, ಡ್ರೈವರ್ ಕೆಲಸ, ಕೊಳಾಳ್ ಗ್ರಾಮ, ಹೊಳಲ್ಕೆರೆ ತಾಲ್ಲೂಕ್, ಚಿತ್ರದುರ್ಗ ಜಿಲ್ಲೆ ಹಾಗೂ ಎ-6
ಚಂದ್ರು ತಂದೆ ತಿಪ್ಪೇಸ್ವಾಮಿ, 25 ವರ್ಷ, ಡ್ರೈವರ್ ಕೆಲಸ, ಕೊಳಾಳ್ ಗ್ರಾಮ, ಹೊಳಲ್ಕೆರೆ ತಾಲ್ಲೂಕ್,
ಚಿತ್ರದುರ್ಗ ರವರೊಂದಿಗೆ ಸೇರಿಕೊಂಡು ತೇಕಲವಟ್ಟಿ ಗ್ರಾಮದ ಗುಡ್ಡದ ಮೇಲಿರುವ ವಿಂಡ್ ಫ್ಯಾನ್‌ಗಳಲ್ಲಿ
ಅಳವಡಿಸಿರುವ ಕಾಪರ್ ವೈರ್‌ನ ವಿದ್ಯುತ್ ಕೇಬಲ್‌ಗಳನ್ನು ಕಳ್ಳತನದಿಂದ ಕಟ್ ಮಾಡಿಕೊಂಡು
ಮೋಟಾರ್ ಬೈಕ್‌ಗಳ ಸಹಾಯದಿಂದ ಗುಡ್ಡದಿಂದ ಕೆಳಗೆ ತಂದು ಎ-7 ಆರೋಪಿಗೆ ಕಳ್ಳತನ ಮಾಡಿರುವ
ಸ್ಪಲ್ಪ ಮಾಲನ್ನು ಮಾರಾಟ ಮಾಡಿದ್ದು, ಅದನ್ನು ಎ-7 ಆರೋಪಿಯು ಎ-8 ಆರೋಪಿಯ ಬಾಬು ಟಾಟಾ
ಎಸಿಇ ಲಗೇಜ್ ವಾಹನದಲ್ಲಿ ಜಗಳೂರಿನ ಒಂದು ಗುಜರಿ ಅಂಗಡಿಗೆ ಮಾರಾಟ ಮಾಡಿರುವುದಾಗಿ ಹಾಗೂ
ಎ-1 ರಿಂದ ಎ-6 ಆರೋಪಿತರು ಕಳ್ಳತನ ಮಾಡಿದ ಉಳಿದ ಮಾಲನ್ನು ಹಿರಿಯೂರಿನ ಒಂದು ಗುಜರಿ
ಅಂಗಡಿಯ ಮಾಲೀಕರಿಗೆ ಮಾರಾಟ ಮಾಡಿರುವುದಾಗಿ ತಿಳಿದು ಬಂದಿರುತ್ತದೆ.
ದಿನಾಂಕ:07.02.2024 ರಂದು ಎ-1 ರಿಂದ ಎ-4 ಆರೋಪಿತರಿಂದ ಹಿರಿಯೂರು ನಗರದ ಗುಜುರಿ
ತೂಕದ
ಮಾಲೀಕನಿಗೆ ಮಾರಿದ್ದ 85.600
ಕಾಪರ್ ವೈರನ್ನು
ಅಮಾನತ್ತುಪಡಿಸಿಕೊಳ್ಳಲಾಗಿರುತ್ತದೆ. ಇದರ ಅಂದಾಜು ಬೆಲೆ 77,040/- ರೂ ಇರುತ್ತದೆ. ಎ-1 ಮತ್ತು
ಎ-8 ಆರೋಪಿತರಿಂದ ಜಗಳೂರಿನ ಗುಜರಿ ಅಂಗಡಿ ಮಾಲೀಕನಿಗೆ ಮಾರಿದ್ದ 350.15 ಕೆ.ಜಿ ತೂಕದ
ಕಾಪರ್ ವೈರನ್ನು ಅಮಾನತ್ತುಪಡಿಸಿಕೊಳ್ಳಲಾಗಿರುತ್ತದೆ. ಇದರ ಅ೦ದಾಜು ಬೆಲೆ 3,15,135/- ರೂ.
ಇರುತ್ತದೆ. ಆರೋಪಿತರು ಕಳ್ಳತನ ಮಾಡಿದ್ದ ಕಾಪರ್ ವೈರ್‌ಗಳನ್ನು ಸಾಗಾಣಿಗೆ ಮಾಡಲು ಬಳಸಿದ
ವಾಹನಗಳಾದ 1] ಕೆಎ-68-2684 ಟಾಟಾ ಎಸಿಇ ಲಗೇಜ್ ವಾಹನ ಅ೦ದಾಜು ಬೆಲೆ 6,00,000/- 2]
ಅಂಗಡಿಯ
ಕೆಎ-16-ಇ-3814 ನೇ ನಂಬರಿನ ಬೈಕ್‌ನ ಅಂದಾಜು ಬೆಲೆ 1 ಲಕ್ಷ ರೂ3] ಕೆಎ-16-ಇಆರ್-2551
ನೇ ಬೈಕ್ ಅಂದಾಜು ಬೆಲೆ 1ಲಕ್ಷ ರೂ/- ಅನ್ನು ಅಮಾನತ್ತುಪಡಿಸಿಕೊಂಡಿದ್ದು, ಮೇಲ್ಕಂಡ ಮಾಲು
ಮತ್ತು ವಾಹನಗಳ ಒಟ್ಟು ಮೌಲ್ಯ 11,92,175/- ರೂಪಾಯಿಗಳು ಆಗಿರುತ್ತದೆ. ಸದರಿ ಪ್ರಕರಣದಲ್ಲಿನ
ಎ-5 ಮತ್ತು ಎ-6 ಆರೋಪಿತರು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಹಾಗೂ ತನಿಖೆ
ಮುಂದುವರೆದಿರುತ್ತದೆ.
ಸದರಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಎಂ.ಬಿ ಚಿಕ್ಕಣ್ಣನವರ್, ಸಿಪಿಐ, ಹೊಳಲ್ಕೆರೆ ವೃತ್ತ,
ಕಾಂತರಾಜು, ಪಿ.ಎಸ್.ಐ ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆ, ಮತ್ತು ಸಿಬ್ಬಂದಿಯವರಾದ
ಆರ್.ಡಿ.ರಮೇಶ್‌ಕುಮಾರ, ರುದ್ರೇಶ್ (ಚಿಕ್ಕಜಾಜೂರು ಠಾಣೆ), ತಿಮ್ಮಣ್ಣ, ಸನಾವುಲ್ಲಾ. ರವಿಕುಮಾರ,
ಕುಬೇರಪ್ಪ, ನೂರ್ ಅಹಮದ್ ನದಾಪ್, ಸಿದ್ದನಗೌಡ ರವರುಗಳ ಕಾರ್ಯವನ್ನು ಮಾನ್ಯ ಪೊಲೀಸ್
ಅಧೀಕ್ಷಕರು ಶ್ಲಾಘಿಸಿರುತ್ತಾರೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page