ಚಳ್ಳಕೆರೆ ಜನಧ್ವನಿ ವಾರ್ತೆ ಅ.27. ಸರ್ಕಾರಿ ಸೇವೆ ಮಾಡುವ ಅಧಿಕಾರಿಗಳು ನಿಂತ ನೀರಾಗಬಾರದು. ತಾನು ಎಷ್ಟು ವರ್ಷ ಅಧಿಕಾರದಲ್ಲಿದ್ದೇನೆ ಎಂಬುದು ಮುಖ್ಯವಲ್ಲ ಅಧಿಕಾರದಲ್ಲಿದ್ದಾಗ ಜನರಿಗೆ ಸೇವೆ ಮಾಡಿದ್ದೇವೆ ಎಂಬುದು ಮುಖ್ಯ ಎಂಬು ಮುಖ್ಯ ಎಂದು ವರ್ಗಾವಣೆಗೊಂಡ ತಾಪಂ ಇಒ ಜಿ.ಕೆ.ಹೊನ್ನಯ್ಯ ಮಾತನಾಡಿದರು.


ನೂತನ ತಾಪಂ ಇಒ ಶಶಿಧರ್ ಸನ್ಮಾನ ಸ್ವೀಕರಿಸಿ ಅಧಿಕಾರವಹಿಸಿಕೊಂಡುಮಾತನಾಡಿ ಚಳ್ಳಕೆರೆ ತಾಲೂಕು ದೊಡ್ಡ ಕೇಂದ್ರ 40 ಗ್ರಾಮಪಂಚಾಯತ್ ಕೇಂದ್ರಗಳನ್ನು ಹೊಂದಿದ್ದು ಬರಪೀಡಿತ ಪ್ರದೇಶವಾಗಿದ್ದು ಸರಕಾರದಿಂದ ಬಂದ ಯೋಜನೆಗಳನ್ನು ಸಕಾಲಕ್ಕೆ ಜನರಿಗೆ ತಲುಪಿಸುವ ಜನತೆ ಸರಕಾರಗಳಿಂದ ಬಂದ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಬೇಕು ಎಲ್ಲರೂ ಒಂದಾಗಿ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿಕೊಂಡರು ಸಭೆಯಲ್ಲಿ ಸಮಾಜಾ ಕಲ್ಯಾಣಾಧಿಕಾರಿ ಮಂಇಪ್ಪ ಸಹಾಯಕ ನಿರ್ಧೇಶಕ ಸಂತೋಷ್. ಪಿಆರ್ ಡಿ ಸಹಾಯಕ ನಿರ್ಧೇಶಕ ಸಂಪಂತ್. ಯೋಜನಾಧಿಕಾರಿ ಕೆಂಚಪ್ಪ.ಅಕ್ಷದಾಸೋಹ ಸಹಾಯಕ ನಿರ್ಧೇಶಕ ತಿಪ್ಪೇಸ್ವಾಮಿ. ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ದೇವೇಂದ್ರಪ್ಪ. ಪಿಡಿಒ ಗುಂಡಪ್ಪ.ಇನಾಯತ್ ಪಾಷ. ಇತರರಿದ್ದರು.
0 Comments