ಚಳ್ಳಕೆರೆ ಮಾ.11
ಗ್ರಾಮ ದೇವತೆ ಶ್ರೀಚಳ್ಳಕೆರೆಯಮ್ಮನ ದೇವಿಯನ್ನು ತವರು ಮನೆ ದೊಡ್ಡೇರಿ ಗ್ರಾಮಕ್ಕೆ ಗಂಗಾ ಪೂಜೆ ಮಾಡುವುದರೊಂದಿಗೆ ಜಾತ್ರೆಗೆ ಚಾಲನೆ ದೊರೆಯಿತು.
ಚಳ್ಳಕೇರಮ್ಮ ದೇವಸ್ಥಾನದ ಧರ್ಮದರ್ಶಿಗಳ ನೇತೃತ್ವದಲ್ಲಿ ಆಡಳಿತ ಮಂಡಳಿ ಹಾಗೂ ತಳವಾರರು, ಪೋತರಾಜರರು ಗ್ರಾಮದ ಪುರೋಹಿತರು, ಶಾನಭೋಗರ ಸಮ್ಮುಖದಲ್ಲಿ ಶ್ರೀದೇವಿಯ ಮೆರವಣಿಗೆಯೊಂದಿಗೆ ತವರು ಮನೆ ದೊಡ್ಡೇರಿ ಗ್ರಾಮಕ್ಕೆ ಗಂಗಾ ಪೂಜೆ ನೆರವೇರಿಸಲು ಹೊರಡುವ ಮುನ್ನ ಸಚಿವ ಡಿ.ಸುಧಾಕರ್ ಚಳ್ಳಕೆರೆಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿ ಗಂಗಾಪೂಜೆಗೆ ದೇವಿಯನ್ನು ಬೀಳ್ಕೊಟ್ಟರು.
![](https://janadhwani.in/wp-content/uploads/2024/03/IMG-20240311-WA0114.jpg)
0 Comments