ಚಳ್ಳಕೆರೆ ಜನಧ್ವನಿ ವಾರ್ತೆ ಅ.29. ಡಾಂಬರ್ ರಸ್ತೆ ಕಿತ್ತು ಹೋಗಿ ಗುಂಡಿಗಳು ಬಿದ್ದಿದ್ದು ರಸ್ತೆ ಅಪಾಘಾತಕ್ಕೆ ಕೈಬೀಸಿ ಕರೆಯುವಂತಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಿಂದ ದೇವರೆಡ್ಡಿಹಳ್ಳಿ. ಗೌರಸಮುದ್ರ ಮಾರ್ಗ ಆಂದ್ರಪ್ರದೇಶಕ್ಕೆ ಸಂಪರ್ಕಿಸುವ ರಸ್ತೆ ಡಾಂಬರ್ ಕಿತ್ತುಹೋಗಿ ರಸ್ತೆಯಲ್ಲಿ ಗುಂಡಿಗಳೋ ಗುಂಡಿಗಳಲ್ಲಿ ರಸ್ತೆಯೋ ಎಂಬಂತಾಗಿದೆ. ಈ ಮಾರ್ಗದಲ್ಲಿ ದಿನ ನಿತ್ಯ ವಾಹನ ದಟ್ಟಣೆಯಿಂದ ದೇವರೆಡ್ಡಿಹಳ್ಳಿ ಗ್ರಾಮದಲ್ಲಿ ಆರೋಗ್ಯ ಕೇಂದ್ರವಿದ್ದು ಗರ್ಭಿಣಿ ಬಾಣಂತಿ ಮಹಿಳೆಯರನ್ನು ಈ ಕಿತ್ತು ಹೋದ ರಸ್ತೆಯಲ್ಲಿ ಕರೆತರಲು ಹರಸಹಾಸ ಪಡಬೇಕು ವಾಹನ ಸವಾರರು ಪ್ರಾಣ ಪಕ್ಷಿಯನ್ನು ಕೈಯಲ್ಲಿಡಿದು ವಾಹನ ಚಲಾಯಿಸುವುದು ಅನಿವಾರ್ಯವಾಗಿದೆ. ಈ ಕ್ಷೇತ್ರದಲ್ಲಿ ಅನೇಕ ಪ್ರಭಾವಿ ಶಾಸಕರು ಸಚಿವರಾಗಿ.ಸಚೇತಕರಾಗಿ ಆಡಳೀತ ನಡೆಸಿದರೂ ಕಿತ್ತುಹೋದ .ಗುಂಡಿಗಳು ಬಿದ್ದ ರಸ್ತೆ ದುರಸ್ಥಿ ಮಾಡಿಸಲು ಸಾಧ್ಯವಾಗಿಲ್ಲ ಈ ರಸ್ತೆ ಅಭವೃದ್ಧಿ ಜಾಕಣದೆ ಸುಮಾರು 70 ವರ್ಷಗಳು ಕಳೆದರೂ ಗ್ರಾಮೀಣ ಮುಖ್ಯ ರಸ್ತೆ ಅಭಿವೃದ್ಧಿಗೆ ಮುಂದಾಗಿಲ್ಲ ಈಗಾಗಲೆ ಸಾಕಷ್ಟು ಬಾರಿ ಈ ರಸ್ತೆಯಲ್ಲಿ ವಾಹನಗಳ ಅಪಘಾತಗಳಾಗಿ ಸಾವು ನೋವನ್ನು ಕಂಡಿವೆ.
ಈ ರಸ್ತೆ ರಾಷ್ಟ್ರೀಯ ಹೆದ್ದಾರಿಗೆ ಲಿಂಕ್ ಇರುವುದರಿಂದ ಬಳ್ಳಾರಿ.ಬೆಂಗಳೂರು.ಚಿತ್ರದುರ್ಗ ಸೇರಿದಂತೆ ಆಂದ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು ರಸ್ತೆಯಲ್ಲಿ ಗುಂಡಿಬಿದ್ದಿರುವ ಪರಿಣಾಮ ನಿತ್ಯ ರಸ್ತೆಯಲ್ಲಿ ಓಡಾಡುವ ವಾಹನ ಸವಾರರು ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ಸವಾರರಿಗೆ ನರಕಯಾತನೆಯಾಗಿದೆ.

ವೇಗವಾಗಿ ಬರುವ ವಾಹನ ಸವಾರರು ಗುಂಡಿ ನೋಡಿ ಸಡನ್ ಬ್ರೇಕ್ ಹಾಕಲು ಮುಂದಾಗುತ್ತಾರೆ. ಈ ಸಂದರ್ಭದಲ್ಲಿ ಹಿಂಭಾಗದಿಂದ ವೇಗವಾಗಿ ಬರುವ ವಾಹನಗಳು ಹಿಂಬದಿಯಿಂದ ಡಿಕ್ಕಿ ಹೊಡೆದು ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಗಳು ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿ ಡಾಂಬರ್ ರಸ್ತೆ ನಿರ್ಮಿಸುವರೇ ಕಾದು ನೋಡ ಬೇಕಿದೆ.
0 Comments