ಜೀವನದಲ್ಲಿನ ಜಿಗುಪ್ಸೆ ಬೀಡಾ ಅಂಗಡಿ ಮಾಲಿಕ ನೇಣಿಗೆ ಶರಣು.

by | 04/11/23 | ಕ್ರೈಂ


ಚಳ್ಳಕೆರೆ ಜನಧ್ವನಿ ವಾರ್ತೆ ನ.4. ಜೀವನದಲ್ಲಿ ಜಿಗುಪ್ಸೆಗೊಂಡ ಯುವಕನೋರ್ವ ನೇಣಿಗೆ ಶರಣಾದ ಘಟನೆ ಚಳ್ಳಕೆರೆ .ನಗರದಲ್ಲಿ ನಡೆದಿದೆ. ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯಲ್ಲಿ ಬಹಳ ವರ್ಷಗಳಿಂದ ಬೀಡ ಅಂಗಡಿ ನಡೆಸುತ್ತಿದ್ದ ಸೀತಾರಾಮ(49) ಬಾಪೂಜಿ ಕಾಲೇಜ್ ರಸ್ತೆಯ ಕೇದರನಾಥ ಹಾರ್ಡ್ ವೇರೆ ಮೇಲೆ ಬಾಡಿಗೆ ಕೊಠಡಿಯ ಬಾತ್ ರೂಂ ನಲ್ಲಿ ಆತ್ಮಹತ್ಯೆ ಗೆ ಶರಣಾಗಿದ್ದಾನೆ ಇಬ್ಬರು ಮಕ್ಕಳೊಂದಿ ಮಡದಿ ಕುಂದಾಪುರದಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ. ಮೃತನ ಗೆಳೆಯರು .ಗ್ರಾಹಕರು ಬೆಳಂ ಬೆಳಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತನ ದರ್ಶನ ಪಡಯುವ ದೃಶ್ಯ ಕಂಡು ಬಂತು‌ ಸ್ಥಳಕ್ಕೆ ಚಳ್ಳಕೆರೆ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಡೆತ್ ನೋಟ್ ವೈರಲ್ ಡೆತ್ ನೋಟಿನಲ್ಲಿ ನನಗೆ ಪರಿಸ್ಥಿ ಒತ್ತಡ ನಿಬಾಯಿಸೋಕೆ ಆಗದೆ ಈ ರೀತಿ ನಿರ್ಧಾರ ಮಾಡಿದ್ದೇನೆ.ದಯವಿಟ್ಟು ನನ್ನನ್ನು ಕ್ಷಮಿಸಿ.ಅಣ್ಣ ನನ್ನನ್ನು ಕ್ಷಮಿಸು ನನ್ನ ಹೆಂಡತಿ ಮಕ್ಕಳನ್ನು ಚನ್ನಾಗಿ ನೋಡಿಕೋ ಪ್ರವೀಣ್ ನನ್ನ ಹೆಂಡತಿ ಮಕ್ಕಳನ್ನು ಚನ್ನಾಗಿ ನೋಡಿಕೋ. ಎಲ್ಲರೂ ನನ್ನು ಕ್ಷಮಿಸಿ ಇಂತಿ ನಿಮ್ಮ ಸೀತರಾಮ.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *