ಜಿಲ್ಲಾ ಸೂಪರ್ ಡೆಂಟ್ ಆಫ್ ಪೋಲೀಸ್ ಅಧಿಕಾರಿ‌ಧರ್ಮೇಂದ್ರಕುಮಾರ್ ಮೀನಾರವರಿಗೆ ರೈತ ಮುಖಂಡ ಕಸವನಹಳ್ಳಿ‌ರಮೇಶ್ ಅಭಿನಂದನೆ.

by | 11/11/23 | ಮಾತೆಂದರೆ ಇದು


ಚಿತ್ರದುರ್ಗ.
ಚಿತ್ರದುರ್ಗ ಜಿಲ್ಲೆ, ಚಿತ್ರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಪ್ರಾರಂಭ ಮಾಡಿ ಅರಣ್ಯ ಸಂಪತ್ತುಗಳ ಲೂಟಿ ಮಾಡುತ್ತಿದ್ದ ಕಳ್ಳರನ್ನು ಚಿತ್ರದುರ್ಗ ಜಿಲ್ಲೆ ಸೂಪರ್ ಡೆಂಟ್ ಆಫ್ ಪೋಲೀಸ್ ಧರ್ಮೇಂದ್ರ ಕುಮಾರ್ ಮೀನಾ ರವರು ಬಂಧಿಸಿದ್ದು, ಇವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂಬುದಾಗಿ ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್ ಪ್ರಶಂಸಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಅತಿಹೆಚ್ಚಿನ ಸಂಖ್ಯೆಯ ಶ್ರೀಗಂಧ ಬೆಳೆಗಾರರಿದ್ದು, ತಮ್ಮ ತಮ್ಮ ಜಮೀನುಗಳಲ್ಲಿ ಕೃಷಿಕರು ಯಥೇಚ್ಛವಾಗಿ ಶ್ರೀಗಂಧ ಸಸಿಗಳನ್ನು ಬೆಳೆಸುತ್ತಿದ್ದು, ಅದರ ರಕ್ಷಣೆಯೇ ರೈತರಿಗೆ ಒಂದು ದೊಡ್ಡ ಸವಾಲ್ ಆಗಿದೆ. ಪ್ರತಿವಾರ ಅಥವಾ ಪ್ರತಿ 15 ದಿನಕ್ಕೊಮ್ಮೆ ಚಿತ್ರದುರ್ಗ ಜಿಲ್ಲೆಯಲ್ಲಿ ಶ್ರೀಗಂಧ ಮರಗಳನ್ನು ಕಡಿಯುವ ಕಳ್ಳರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ.


ಅಲ್ಲದೆ ಸರ್ಕಾರಿ ಅರಣ್ಯಗಳಲ್ಲಿ ಸಹ ಕಳ್ಳತನವಾಗುತ್ತಿದೆ ಇದರಲ್ಲಿ ದೂರು ಕೊಡುವವರ ಸಂಖ್ಯೆ ತುಂಬಾ ಕಡಿಮೆ. ತಾವುಗಳು ಈಗ ಹಿರಿಯೂರು ನಗರದ ಬಬ್ಬೂರು ಗ್ರಾಮದಲ್ಲಿ ಇಬ್ಬರು ಕಳ್ಳರನ್ನು ಹಾಗೂ ಅಪಾರ ಪ್ರಮಾಣದ ಶ್ರೀಗಂಧದ ತುಂಡುಗಳು ರಕ್ತ ಚಂದನದ ತುಂಡುಗಳು ಆನೆದಂತ ಚಿಪ್ಪುಗಳು ವಶಪಡಿಸಿಕೊಂಡಿರುವುದು ಈ ನಿಟ್ಟಿನಲ್ಲಿ ಪೋಲೀಸ್ ಇಲಾಖೆ ಒಂದು ಮಹತ್ವದ ಹೆಜ್ಜೆ ಇಟ್ಟಂತಾಗಿದೆ ಎಂದರಲ್ಲದೆ,
ತಾವುಗಳು ಶ್ರೀಗಂಧ ಬೆಳೆಯುವ ರೈತರನ್ನು ಹಾಗೂ ಸರ್ಕಾರಿ ಅರಣ್ಯದಲ್ಲಿರುವ ಶ್ರೀಗಂಧ ಹಾಗೂ ಇನ್ನಿತರೆ ಅಮೂಲ್ಯವಾದ ವನಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ಕಳ್ಳರನ್ನು ಬಂಧಿಸಿರುವುದು ರೈತರಲ್ಲಿ ಒಂದು ರೀತಿಯ ನಿರಾಳಬಾವ ಮೂಡಿಸಿದೆ. ಜಿಲ್ಲೆಯ ಆರು ತಾಲೂಕುಗಳಲ್ಲಿ ಲಕ್ಷಾಂತರ ಸಂಖ್ಯೆಯ ಶ್ರೀಗಂಧವನ್ನು ರೈತರು ತಮ್ಮ ಮಕ್ಕಳಿಗಿಂತ ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಟ್ಟು ಬೆಳೆಸುತ್ತಿದ್ದಾರೆ ಇದರಿಂದ ರಾಜ್ಯ ರಾಷ್ಟ್ರಕ್ಕೆ ಒಳ್ಳೆಯ ಹೆಸರು ಮತ್ತು ಆದಾಯ ತಂದುಕೊಡುತ್ತದೆ ಎಂದರು.
ಕರ್ನಾಟಕ ಶ್ರೀಗಂಧದ ಬೀಡು ಎಂದು ಮತ್ತೊಮ್ಮೆ ಹೆಸರಾಗಬೇಕೆಂದು ಬಯಸುತ್ತಾ ನೀವು ಶ್ರೀಗಂಧ ಕಳ್ಳರನ್ನು ಮೂಲವತ್ಪಾಟನೆ ಮಾಡಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತಾ, ಚಿತ್ರದುರ್ಗ ಜಿಲ್ಲೆಯ ಶ್ರೀಗಂಧ ಬೆಳೆಗಾರರ ಸಂಘ ಹಾಗೂ ಅಖಿಲ ಕರ್ನಾಟಕ ಶ್ರೀಗಂಧ ಹಾಗೂ ವನಕೃಷಿ ಬೆಳಗಾರರ ಸಂಘದಿಂದ ಜಿಲ್ಲಾ ಶ್ರೀಗಂಧ ಬೆಳೆಗಾರರ ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ ರೈತರ ಪರವಾಗಿ ತಮಗೆ ಅಭಿನಂದನೆಗಳು ಎಂದರಲ್ಲದೆ,
ನಮ್ಮ ರಾಜ್ಯ ಶ್ರೀಗಂಧ ಬೆಳೆಗಾರರ ಸಂಘದ ಅಧ್ಯಕ್ಷರಾದ ಶ್ರೀಯುತ ಅಮರನಾರಾಯಣ್ ಅವರು ಮತ್ತು ಪದಾಧಿಕಾರಿಗಳು ಅವಿರತವಾಗಿ ಶ್ರೀಗಂಧ ಬೆಳೆಯ ರಕ್ಷಣೆ ಬಗ್ಗೆ ಹೋರಾಡುತ್ತಿದ್ದಾರೆ. ಚಿತ್ರಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಯಾದ ಶ್ರೀಯುತ ಕಾಂತರಾಜ್ ಅವರಿಗೂ ಅವರ ಸಿಬ್ಬಂದಿ ವರ್ಗದವರಿಗೂ ತಾಲ್ಲೂಕಿನ ರೈತರ ಪರವಾಗಿ ಧನ್ಯವಾದಗಳು ಎಂದರಲ್ಲದೆ, ಇದನ್ನು ಇಲ್ಲಿಗೆ ಬಿಡದೆ ಶ್ರೀಗಂಧ ಕಡಿಯುವ ಕಳ್ಳರು ಅದನ್ನು ಖರೀದಿ ಮಾಡುವ ಕದೀಮರು ಹಾಗೂ ಕಾರ್ಖಾನೆಯವರನ್ನು ಎಡೆಮುರಿ ಕಟ್ಟಬೇಕು ಎಂಬುದಾಗಿ ಈ ಮೂಲಕ ಒತ್ತಾಯಿಸಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *