ಚಳ್ಳಕೆರೆ.ಜನಧ್ವನಿ ವಾರ್ತೆ ನ.2
ಗ್ರಾಮೀಣ ಅಭಿವೃದ್ಧಿಗೆ ಬರುವ ವಿವಿಧ ಯೋಜನೆಗಳ ಕಾಮಗಾರಿಗಳ ಕ್ರಿಯಾಯೋಜನೆ, ತಾಂತ್ರಿಕ ಮಂಜುರಾತಿಗಾಗಿ ಗುತ್ತಿಗೆದಾರರು ಕಚೇರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಹೌದು ಇಚು ಚಳ್ಳಕೆರೆ ನಗರದ ಹೊರವಲಯದಲ್ಲಿರುವ ಜಿಲ್ಲಾಪಂಚಾಯತ್ ಇಂಜಿನಿಯರಿAಗ್ ಉಪವಿಭಾಗ ಕಚೇರಿಯಲ್ಲಿ ಇಂಜಿನಿಯರ್‌ಗಳ ಕೊರತೆಯಿಂದ ಗ್ರಾಮೀಣ ಭಾಗದ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿಗಳಿಗೆ ಬಿಡುಗಡೆಯಾದ ಅನದಾನಕ್ಕೆ ಕ್ರಿಯಾ ಯೋಜನೆ, ಬಿಲ್ ಬರೆಯಲು, ಕಾಮಗಾರಿಗಳ ಅಭಿವೃದ್ಧಿಗೆ ಕುಂಠಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ
ಚಳ್ಳಕೆರೆ ತಾಲೂಕು ಭೌಗೋಳಿಕ ವಿಸ್ತೀರ್ಣವಾಗಿದ್ದು 40 ಗ್ರಾಮಪಂಚಾಯಿತಿಗಳನ್ನು ಹೊಂದಿದ್ದು ಕಸಬಾ,ನಾಯಕನಹಟ್ಟಿ,ತಳಕು, ಪರಶುರಾಂಪುರ ನಾಲ್ಕು ಹೋಬಳಿ ಕೇಂದ್ರಗಳಿದ್ದು ನಾಯಕನಹಟ್ಟಿ , ತಳಕು ಹೋಬಳಿಗಳು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರವ್ಯಾಪ್ತಿಗೆ ಬರುತ್ತವೆ ತಾಲೂಕು ಕೇಂದ್ರದಿಂದ ಓಬಳಾಪುರ, ಹಿರಿಹಳ್ಳಿ, ಸಿದ್ದೇಶ್ವರನದುರ್ಗ, ಅಬ್ಬೇನಹಳ್ಳಿ ಸೇರಿದಂತೆ ಕೆಲ ಗ್ರಾಮಪಂಚಾಯಿತಿಗಳು ಚಳ್ಳಕೆರೆ ಕೇಂದ್ರ ಸ್ಥಳದಿಂದ ಸುಮಾರು ನಲವತ್ತು ಕಿ.ಮೀ ದೂರ ಇವೆ ಇಂತಹ 40 ಗ್ರಾಪಂ ಕಚೇರಿಗಳಿಗೆ 14,15 ನೇ ಹಣಕಾಸು ಯೋಜನೆ ಸೇರಿದಂತೆ ಕಟ್ಟಡ, ರಸ್ತೆ ಅಭಿವೃದ್ಧಿಗಳ ಹೊಣೆ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪವಿಭಾಗದ ಕಚೇರಿಗೆ ಬರುತ್ತವೆ ಇಂಜಿನಿಯರ್‌ಗಳ ಕೊರತೆಯಿಂದ ಕಾಮಗಾರಿಗಳ ಕ್ರಿಯಾಯೋಜನೆ, ಕಾಮಗಾರಿಗಳು ಎಲ್ಲಿ ನಡೆಯುತ್ತವೆ, ಕಾಮಗಾರಿಗಳ ಗುಣಮಟ್ಟ ಪರಿಶೀಲನೆ, ಕಾಮಗಾರಿಗಳ ಎಂ.ಬಿ ಬರೆದು ಬಿಲ್ ಬರೆಯಲು ವಿಳಂಬ ದೋರಣೆಯಿಂದ ಗುತ್ತಿಗೆದಾರರು ಕಾಮಗಾರಿಗಳ ಬಿಲ್ ಗಾಗಿ ಕಚೇರಿಗೆ ಪರದಾಡವಂತಾಗಿದೆ ಎಂದು ಆರೋಪಗಳು ಕೇಳಿ ಬರುತ್ತಿವೆ.
ತಾಲೂಕಿಗೆ ಒಬ್ಬನೇ ಇಂಜಿನಿಯರ್
ಊರಿಗೆ ಒಬ್ಬಳೆ ಪದ್ಮವಾತಿ ಎಂಬ ಗಾದೆ ಮಾತಿನಂತೆ ತಾಲೂಕಿಗೆ ಒಬ್ಬ ನೆ ಜೂನಿಯರ್ ಇಂಜಿಯರ್ ಎಂ.ಎಸ್ ಮುಹೀಬುರ್ ರೆಹಮಾನ್ ವೇತನ ಪಡೆಯುವ ಒಂದು ವರ್ಷದ ತೆರಿಗೆ ಹಣ ಸುಮಾರು 1 ಲಕ್ಷಕ್ಕೂ ಹೆಚ್ಚು ಹಟ್ಟದೆ ಇರುವುದರಿಂದ ಈಗ ತೆರಿಗೆ ಇಲಾಖೆ ಎಇಇ ಅಧಿಕಾರಿಗೆ ಹೊಣೆ ನೀಡಲಾಗಿದೆ ಎನ್ನಲಾಗಿದೆ. ಕೆಲವು ವೈಯುಕ್ತಿಕ ಸಮಸ್ಯೆಯಿಂದ ಕಚೇರಿಗೆ ಬಾರದೆ ಇರುವುದು ಗುತ್ತಿಗೆದಾರರಿಗೆ ದೊಡ್ಡ ತಲೆ ಬಿಸಿಯಾಗಿದೆ.ಕಚೇರಿಗೆ ಬಾರದೆ ಜನರ ಕೈಗೂ ಸಿಗದೆ ಇರುವುದು ಮತ್ತಷ್ಟು ಸಮಸ್ಯೆಯಾಗಿದ್ದು. ಈಗ ಇರುವ ಒಬ್ಬ ಮಹಿಳಾ ಎಇಇ ಇಡೀ ತಾಲೂಕಿನ 40 ಗ್ರಾಪಂ ಹೊಣೆ ಇವರ ಮೇಲಿದೆ.
ಲೆಕ್ಕಕ್ಕುಂಟು ಕೆಲಸಕ್ಕಿಲ್ಲ.
ಕಚೇರಿಯಲ್ಲಿ ಒಂದು ಸಹಾಯಕ ಕಾರ್ಯಪಾಲಕ ಅಭಿಯಂತರ ಹುದ್ದೆ 1, ಸಹಾಯಕ ಇಂಜಿಯರ್ ಹುದ್ದೆ 1ಸಹಾಯಕ ಇಂಜಿಯರ್ ವರ್ಗಾವಣೆಗೊಂಡು ಸುಮಾರು 8 ವರ್ಷಗಳು ಕಳೆದರೂ ನೆಮಕವಾಗಿಲ್ಲದ ಕಾರಣ ಹುದ್ದೆ ಖಾಲಿ ಇದೆ.
3 ಜ್ಯೂನಿಯರ್ ಇಂಜಿಯರ್‌ಗಳ ಮಂಜುರಾತಿ ಹುದ್ದೆಗಳಿದ್ದು ಗುರುರಾಜ್ ಹಾಗೂ ಉಮೇಶ್ ಇಬ್ಬರು ಜ್ಯೂನಿಯರ್ ಇಂಜಿನಿಯರ್ ಗಳನ್ನು ಚಿತ್ರದುರ್ಗ ಕಾರ್ಯಪಾಲಯಕ ಇಂಜಿಯರ್ ಪಂಚಾಯತ್ ರಾಜ್ ವಿಭಾಗ ಜಿಲ್ಲಾ ಕಚೇರಿಗೆ ನಿಯೋಜನೆ ಮಾಡಲಾಗಿದೆ. ಇರುವ ಒಬ್ಬ ಜೆ ಇ ಜ್ಯೂನಿಯರ್ ಇಂಜಿನಿಯರ್ ಎಂ.ಎಸ್ ಮುಹೀಬುರ್ ರೆಹಮಾನ್ ಇಡೀ ತಾಲೂಕಿನ 40 ಗ್ರಾಪಂ ವ್ಯಾಪ್ತಿಯ ಕಾಮಗಾರಿಗಳ ಸ್ಥಳಕ್ಕೆ ಹೋಗದೆ ಕಚೇರಿಯಲ್ಲಿ ಲೆಕ್ಕಕ್ಕುಂಟು ಆಟಕಿಲ್ಲ ಎಂಬಂತಾಗಿದೆ.
ತಾಲೂಕಿನ 40 ಗ್ರಾಮಪಂಚಾಯತ್ ವ್ಯಾಪ್ತಿಗಳಲ್ಲಿ ನಡೆಯುವ ಜಿಪಂ, ತಾಪಂ, ಗ್ರಾಪಂ ವ್ಯಾಪ್ತಿಯ 15 ನೇ ಹಣಕಾಸು, ಬಯಲು ಸೀಮೆ ಅಭಿವೃದ್ಧಿ, ಅಂಗನವಾಡಿ, ಲಂಬಾಣಿ ತಾಂಡ ಸೇರಿದಂತೆ ವಿವಿಧ ಯೋಜನೆಯ ಅಭಿವೃದ್ಧಿ ಕಾಮಗಾರಿಗಳ ಸ್ಥಳ ಪರಿಶೀಲನೆ, ಅಂದಾಜು ಪಟ್ಟಿ,ತಾಂತ್ರಿಕ ಮಂಜುರಾತಿ, ಅಳತೆ ಪುಸ್ತಕ(ಎಂಬಿ) ಬರೆಯಲು ಒಬ್ಬರಿಂದ ಸಾಧ್ಯವಾಗದೆ ಇರುವ ಒಬ್ಬ ಇಂಜಿಯರ್ ಗುತ್ತಿಗೆದಾರರ ಕೈಗೂ ಸಿಗದೆ ಆಡಳೀತ, ತಾಂತ್ರಿಕ ಮಂಜುರಾತಿ ಹಾಗೂ ಕ್ರಿಯಾ ಕಾಮಗಾರಿಗಳ ಅಂದಾಜು ಪಟ್ಟಿಗಳಿಗೆ ಸಹಿ ಹಾಕಿಸಲು ಗುತ್ತಿಗೆದಾರರು ಪಂಚಾಯತ್ ರಾಜ್ ಇಂಜಿಯರಿಂಗ್ ಉಪವಿಭಾಗ ಕಚೇರಿಗೆ ದಿನ ನಿತ್ಯ ಹಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಇಂಜಿನಿಯಂಗ್ ಉಪವಿಭಾಗದ ಚಳ್ಳಕೆರೆ ಕಚೇರಿಗೆ ಜೂನಿಯರ್ ಇಂಜಿನಿಯರ್ ಗಳನ್ನು ಕಳಿಸಿಕೊಡುವರೇ ಕಾದು ನೋಡ ಬೇಕಿದೆ.

ಜಿಪಂ ಇಂಜಿಯರಿಂಗ್ ಉಪವಿಭಾಗದ ಕಚೇರಿಯಲ್ಲಿ ಮೂರು ಹುದ್ದೆಗೆ ಒಬ್ಬ ಇಂಜಿನಿಯರ್ ಇರುವ ಒಬ್ಬ ಇಂಜಿಯರ್ ಕಚೇರಿಗೆ ಬಾರದೆ ಗುತ್ತಿಗೆದಾರರು ಪರದಾಟ ಅಭಿವೃದ್ಧಿಗೆ ಮಾರಕ.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments