ಜಾತ್ರೆ ಉತ್ಸವ ಹಬ್ಬಗಳ ಆಚರಣೆಯಿಂದ ಗ್ರಾಮಗಳಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ ಬಿಜೆಪಿ ಆಕಾಂಕ್ಷಿ ಅನಿಲ್ ಕುಮಾರ್

by | 19/02/23 | ಸಾಂಸ್ಕೃತಿಕ

ಚಳ್ಳಕೆರೆ ಫೆ.19 ತಾಲ್ಲೂಕಿನ ವರವಿನೋರಹಟ್ಟಿಯಲ್ಲಿ ಶ್ರೀಬೋರಲಿಂಗೇಶ್ವರಸ್ವಾಮಿ ದೇವಾಲಯದ ಬಳಿ ಮಹಾಶಿವರಾತ್ರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು.
ಶನಿವಾರ ರಾತ್ರಿಯಿಂದಲ್ಲಿ ಶಿವರಾತ್ರಿ ಹಬ್ಬ ಆರಂಭವಾಗಿದ್ದು, ಗ್ರಾಮದ ಭಕ್ತಾಧಿಗಳು ಶನಿವಾರ ರಾತ್ರಿ ಶ್ರೀಬೋರಲಿಂಗೇಶ್ವರ ಸ್ವಾಮಿಗೆ ಪುಷ್ಪಹಾರಗಳನ್ನು ಹಾಕಿ ಭಕ್ತಾ ಸಮರ್ಪಿಸಲು ಎತ್ತಿನಗಾಡಿಯಲ್ಲಿ ಬೃಹತ್ ಗಾತ್ರದ ಪುಷ್ಪಹಾರಗಳನ್ನು ಎತ್ತಿನ ಚಕಡಿಗಾಡಿಯಲ್ಲಿ ಮೆರೌಣಿಗೆ ನಡೆಸಿ, ಶ್ರೀಬೋರಲಿಂಗೇಶ್ವರ ಸ್ವಾಮಿಗೆ ಪುಷ್ಪಹಾರಗಳನ್ನು ಸಮರ್ಪಿಸಿ ತಮ್ಮ ಭಕ್ತಿಯನ್ನು ಸಮರ್ಪಣೆ ಮಾಡಿದರು.
ನಂತರ ಭಾನುವಾರ ಶ್ರೀ ಬೋರಲಿಂಗೇಶ್ವರ ಸ್ವಾಮಿ ದೇವಾಲಯ ಬಳಿ ಮನ್ನಲಾರ್ ವಂಶಸ್ಥರಿಗೆ ಮಣೇವು ಕಾರ್ಯಕ್ರಮವನ್ನು ಆಚರಣೆ ಮಾಡುವ ಮೂಲಕ ಶಿವರಾತ್ರಿ ಹಬ್ಬವನ್ನು ಆಚರಣೆ ಮಾಡಿದರು.
ನಂತರ ಅನ್ನದಾಸೋಹ ಕಾರ್ಯಕ್ರಮ ಜರುಗಿತು.
ಬಿಜೆಪಿ ಆಕಾಂಕ್ಷಿ ಅನಿಲ್ ಕುಮಾರ್ ಹಾಗೂಮುಖಂರು ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *