ಹಿರಿಯೂರು :
ತಾಲ್ಲೂಕಿನ ರಂಗಾಪುರಗ್ರಾಮದಿಂದ ಜವಗೊಂಡನಹಳ್ಳಿ ಗಾರ್ಮೆಟ್ಸ್ ಕೆಲಸಕ್ಕೆ ತೆರಳುತಿದ್ದ ಆಟೋ ಗೌಡನಹಳ್ಳಿ ತೋಟದಹತ್ತಿರ ಅಪಘಾತವಾಗಿದ್ದು, ಅಪಘಾತದಲ್ಲಿ ದೇವರಾಜ್(32) ಎಂಬ ಯುವಕನು ಸ್ಥಳದಲ್ಲೇ ಸಾವನ್ನಪಿದ್ದು, ಜೊತೆಗೆ 5-6 ಜನಕ್ಕೆ ತೀರ್ವ ಗಾಯಗಳಾಗಿವೆ ಎನ್ನಲಾಗಿದೆ.
ಈ ವಿಚಾರ ತಿಳಿದ ಮಾಜಿ ಸಚಿವರಾದ ಡಿ.ಸುಧಾಕರ್ ರವರು ಕಾಂಗ್ರೆಸ್ ಪಕ್ಷದ ಮುಖಂಡರುಗಳನ್ನು ಆಸ್ಪತ್ರೆಗೆ ಕಳುಹಿಸಿ, ಸಾವಿಗೀಡಾದ ಯುವಕನ ಕುಟುಂಬಕ್ಕೆ ಸಾಂತ್ವಾನ ಹೇಳಿದ ಕಾಂಗ್ರೆಸ್ ಮುಖಂಡರುಗಳು ಗಾಯಗೊಂಡಿರುವ ಎಲ್ಲರಿಗೂ ಆರ್ಥಿಕ ಧನ ಸಹಾಯ ಮಾಡಿದರು.
ಈ ಸಂದರ್ಭದಲ್ಲಿ ಗಾಯಾಳುಗಳ ಕುಟುಂಬಸ್ಥರು, ಕಾಂಗ್ರೆಸ್ ಮುಖಂಡರು, ಪಕ್ಷದ ಕಾರ್ಯಕರ್ತರು, ಆಸ್ಪತ್ರೆಯ ವೈದ್ಯರು, ದಾದಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
ಜವಗೊಂಡನಹಳ್ಳಿಯ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದ ಆಟೋ ಅಪಘಾತ, ಸ್ಥಳದಲ್ಲಿಯೇ ಸಾವನ್ನಪ್ಪಿದ ದೇವರಾಜ್ ಗಾಯಾಳುಗಳಿಗೆ ಡಿ.ಸುಧಾಕರ್ ರಿಂದ ವೈಯಕ್ತಿಕಸಹಾಯ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments