ಜಯಮ್ಮ ಮತ್ತು ಎ.ಶಿವಮೂರ್ತಿ ತೋಟಕ್ಕೆ ಆಕಸ್ಮಿಕ ಬೆಂಕಿ ಸುಮಾರು 2500 ಕ್ಕೂಹೆಚ್ಚು ಗಿಡಗಳು ಅಗ್ನಿಗಾಹುತಿಯಾಗಿವೆ

by | 18/02/23 | Uncategorized

ಹಿರಿಯೂರು :
ನಗರದ ಹೊರವಲಯದ 70 ಕಣಿವೆ ಸೇತುವೆ ಬಳಿ ಇರುವ ಜಯಮ್ಮ ಸೇವ್ಯಾ ನಾಯ್ಕ್ ಮತ್ತು ಎ.ಶಿವಮೂರ್ತಿ ನಾಯ್ಕ್ ಎಂಬುವರ ತೋಟದಲ್ಲಿ ಶುಕ್ರವಾರ ಮಧ್ಯಾಹ್ನ ಸುಮಾರು 4 ಗಂಟೆಯ ಸಮಯದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಬೆಂಕಿಯ ಕೆನ್ನಾಲಿಗೆ ತೋಟವೆಲ್ಲಾ ಆವರಿಸಿತು ಅಡಿಕೆ, ಬಾಳೆ, ತೆಂಗು ಸೇರಿದಂತೆ ಸುಮಾರು 2,500 ಕ್ಕೂ ಹೆಚ್ಚು ಗಿಡಗಳು ಅಗ್ನಿಗೆ ಆಹುತಿಯಾಗಿದ್ದು, ರೈತರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.
ಈ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ಆರ್.ನಾಗೇಂದ್ರ ನಾಯ್ಕ್ ಹಾಗೂ ಅನೇಕ ಮುಖಂಡರು ಸ್ಥಳಕ್ಕೆ ಭೇಟಿ ನೀಡಿದ್ದರಲ್ಲದೆ, ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ಕರೆಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *