ಜನಧ್ವನಿ ಎಫೆಕ್ಟ್ ವರದಿ ಬೆಳಕು ಚೆಲ್ಲಿದ ನಂತ ಶುದ್ದ ಕುಡಿಯುವ ನೀರಿನ ಘಟಕ ದಿರಸ್ಥಿ ಭಾಗ್ಯ ನೀಡಿದ ಅಧಿಕಾರಿಗಳು.

by | 19/10/23 | ಇಂಪ್ಯಾಕ್ಟ್

ಜನಧ್ವನಿ ವರದಿ ಪಲಶೃತಿ


ನಾಯಕನಹಟ್ಟಿ ಅ.19: ನಾಯಕನಹಟ್ಟಿ ಹೋಬಳಿ ವ್ಯಾಪ್ತಿ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಗುಂತಕೋಲಮ್ಮನಹಳ್ಳಿ ಎರಡು ವರ್ಷದಿಂದ ದುರಸ್ತಿಯಾಗದೆ ಇದ್ದ ನೀರಿನ ಘಟಕವನ್ನು ಗ್ರಾಮಸ್ಥರು ಖಚಿತ ಮಾಹಿತಿಯ ಮೇರೆಗೆ ಬುಧವಾರ ಜನಧ್ವನಿ ಡಿಜಿಟಲ್ ಮೀಡಿಯಾ ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಶುದ್ದ ನೀರಿನ ಘಟಕವನ್ನು ದುರಸ್ಥಿ ಮಾಡಿಸಿದ್ದಾರೆ. ಚಳ್ಳಕೆರೆ ಎ ಡಬ್ಲ್ಯೂ ದಯಾನಂದ್ ಇಂದು ಗ್ರಾಮಕ್ಕೆ ಆಗಮಿಸಿ ಶುದ್ಧ ನೀರಿನ ಘಟಕವನ್ನು ದುರಸ್ತಿ ಪಡಿಸಿ ಮಾತನಾಡಿ ಮುಂಬರುವ ದಿನಗಳಲ್ಲಿ ಶುದ್ಧ ನೀರಿನ ಘಟಕವನ್ನು ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗುವುದು ಅಲ್ಲಿಯವರೆಗೆ ಗ್ರಾಮಸ್ಥರು ಶುದ್ಧ ನೀರಿನ ಘಟಕವನ್ನು ಸ್ವಚ್ಛತೆ ಸೇರಿದಂತೆ ಸ್ವಚ್ಛವಾಗಿ ಇಟ್ಟುಕೊಳ್ಳಬೇಕೆಂದು ಮನವರಿಕೆ ಮಾಡಿದರು.

ಇದೇ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಬಿ.ಅನಿತಮ್ಮ ಜಿ ಎಂ ಜಯಣ್ಣ, ಸದಸ್ಯರಾದ ಸಿದ್ದಲಿಂಗಮ್ಮ ಗುಂಡಯ್ಯ, ಗ್ರಾಮಸ್ಥರಾದ ಗಾದ್ರಿಪಾಲಯ್ಯ, ಗೋನೂರು ತಿಪ್ಪೇಸ್ವಾಮಿ, ಸಿದ್ದಣ್ಣ, ಮಲ್ಲಿಕಾರ್ಜುನ್, ಇತರರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *