ಜನಧ್ವನಿ ಎಫೆಕ್ಟ್ ಓಬಯ್ಯನಹಟ್ಟಿ ಗ್ರಾಮದ ಸಮೀಪವಿರುವ ಬಡಹುಚ್ಚಯ್ಯರ ಕಪಿಲೆ ಹಟ್ಟಿ ಬೋರಯ್ಯ ಕಪಿಲೆ ಜನರಿಗೆ ನೀರಿನ ವ್ಯವಸ್ಥೆ ಸರಿ ಪಡಿಸಿದ್ದಾರೆ.

by | 04/11/23 | ಇಂಪ್ಯಾಕ್ಟ್

ಜನಧ್ವನಿ ಡಿಜಿಟಲ್ ಮೀಡಿಯಾ ವರದಿ ಫಲಶೃತಿ
ಚಳ್ಳಕೆರೆ ಜನಧ್ವನಿ ಮೀಡಿಯಾ ನ. 4 ಸುಮಾ ಬಾವಿಯನ್ನು ಖಾಸಿ ವ್ಯಕ್ತಿ ಬಳಸಿಕೊಂಡು ಗ್ರಾಮಸ್ಥರಿಗೆ ನೀರಿನ ಸಮಸ್ಯಯಿಂದ ಪರದಾಡುತ್ತಿರುವ ಬಗ್ಗೆ ಅ. 26 ರಂದು ಜನಧ್ವನಿ ಮೀಡಿಯಾ ವರದಿ ಬೆಳಕು ಚೆಲ್ಲಿದ ಬೆನ್ನಲ್ಲೇ ಖಸಗಿಯವರ ಪಾಲಾಗಿದ್ದ ಸರಕಾರಿ ಕೊಳವೆ ಬಾವಿ ಬಿಡಿಸಿ ಗ್ರಾಮಪಂಚಾಯಿತಿ ವತಿಯಿಂದ ಮೋಟರ್ ಪಂಪ್ ಬಿಟ್ಟು ಜನರಿಗೆ ನೀರು ಸರಬರಾಜು ಮಾಡುವಲ್ಲಿ ಗ್ರಾಪಂ ಪಿಡಿಒ ಶ್ರೀನಿವಾಸ್ ಯಶಸ್ವಿಯಾಗಿದ್ದು ಇಲ್ಲಿನ ಜನರ ಬಹುದಿನಗಳ ಸಮಸ್ಯೆಗೆ ಮುಕ್ತಿದೊರೆತಂತಾಗಿದೆ. . ಕಿರು ನೀರು ಸರಬರಾಜು ಟ್ಯಾಂಕ್ ಇದೆ. ನೀರಿನ ತೊಟ್ಟಿ ಇದೆ ನಲ್ಲಿಗಳೂ ಇವೆ ಆದರೆ ನೀರು ಮಾತ್ರ ಬರಲ್ಲ ಯಾರಿಗೆ ಹೇಳಲಿ ನಮ್ಮ ಕುಡಿಯುವ ನೀರಿನ ಪ್ರಾಬ್ಲಮ್ ? ಓಬಯ್ಯನಹಟ್ಟಿ ಗ್ರಾಮಸ್ಥರ ಅಳಲು. ಎಂಬ ತಲೆಬತಹದಡಿಯಲ್ಲಿ ಜನಧ್ವನಿ ಮೀಡಿಯಾ ವರದಿ ಬೆಳಕು ಚೆಲ್ಲಿದ ಬೆನ್ನಲ್ಲೇ ಪಿಡಿಒ ಶ್ರೀನಿವಾಸ್ ಹಾಗೂ ಗ್ರಾಪಂ ಸದಸ್ಯರು ನೀರಿನ ವ್ಯವಸ್ಥೆ ಒದಗಿಸುವ ಭರವಸೆ ನೀಡಿದ್ದರು. ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಪಂ ವ್ಯಾಪ್ಯಿಯ ಓಬಯ್ಯನಹಟ್ಟಿ ಗ್ರಾಮದ ಸಮೀಪವಿರುವ ಬಡಹುಚ್ಚಯ್ಯರ ಕಪಿಲೆ ಗಟ್ಟಿ ಬೋರಯ್ಯ ಕಪಿಲೆ ಹಾಗೂ ತಿಪ್ಪಳ್ಳಿ ಕಪಿಲೆ ವ್ಯಾಪ್ತಿಯಲ್ಲಿ ಸುಮಾರು 27 ರಿಂದ30 ಮನೆಗಳಿದ್ದು ಕಿರು ನೀರು ಸಬರಾಜು ಕುಡಿಯುವ ನೀರಿನ 4 ಟ್ಯಾಂಕ್ ಗಳಿವೆ 2 ಜಾನುವಾರು ತೊಟ್ಟಿಗಳಿವೆ ಕಳೆದ ಸುಮಾರು 8 ವರ್ಷಗಳಿಂದ ವರ್ಷಗಳಿಂದ ನೀರು ಬಿಡದೆ ಖಾಲಿ ಇವೆ ಜನ ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುಔಮತಾಗಿದೆ ಎಂದು ಇಲ್ಲಿನ ಜನರು ಜನಧ್ವನಿ ಮೀಡಿಯಾದೊಂದಿಗೆ ಅಳಲು ತೋಡಿಕೊಂಡಿದ್ದರು. ವರದಿ ಬೆಳಕು ಚೆಲ್ಲಿದ ಬೆನ್ನಲ್ಲೇ ಸ್ಥಳಕ್ಕೇ ಪಿ ಡಿ ಒ ಹಾಗೂ ಸದಸ್ಯ ಭೇಟಿ ನೀಡಿ ಪರಿಶೀಲನೆ ನಡೆಸುದರು.

ಗ್ರಾಪಂ ಕುಡಿಯುವ ನೀರಿನ ಕೊಳವೆ ಬಾವಿಯನ್ನು ಗ್ರಾಪಂ ಸದಸ್ಯರೊಬ್ಬರ ಸಂಬಂಧಿಕರ ಜಮೀನಿಗೆ ನೀರು ಬಿಟ್ಟುಕೊಳ್ಳಲು ಬಿಟ್ಟಿರುವುದರಿಂದ ನಮಗೆ ನೀರಿನ ತೋಂದರೆಯಾಗಿದೆ ಹಾಗೂ ಇಲ್ಲಿದ್ದ ಕೈಪಂಪಿನ ಬಿಡಿಭಾಗಗಳನ್ನು ಮಾರಿಕೊಂಡಿದ್ದಾರೆ ಎಂದು ಗ್ರಾಮಸ್ಥರ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿತ್ತು. . ಸರಕಾರಿ ಬೋರು ನನ್ನ ಜಮೀನಿನಲ್ಲಿದೆ ನಾನು ಬಿಡುವುದಿಲ್ಲ ಎಂದು ಕುಡಿಯುವ ನೀರಿನ ಬೋರ್ ವಶಪಡಿಸಿಕೊಂಡ ರೈತ ಹಠ ಮಾಡಿದಾಗ ಪಿಡಿಒ ಶ್ರೀನಿವಾಸ್ ಹಾಗೂ ಸದಸ್ಯರು ಮಾತನಾಡಿ ರೈತನ ವಶದಲ್ಲಿರುವ ಬೋರನ್ನು ಪಂಚಾಯತ್ ವತಿಯಿತಿ ವಶಕ್ಕೆ ಪಡೆದು ರೆಡಿ ಮಾಡ್ಸಿ ನೀರು ಬಿಡ್ತಿವಿ ಎಂದು ಭರವಸೆ ನೀಡಿದ್ದರು . ಅದರಂತೆ ಶನಿವಾರ ಗ್ರಾಪಂ ಪಿಡಿಒ ಶ್ರೀನಿವಾಸ್ ಹಾಗೂ ಗ್ರಾಪಂ ಸದಸ್ಯರು ಇಲ್ಲಿನ‌ ಸ್ಥಳೀಯರಿಗೆ ನೀರು ಬಿಟ್ಟಿದ್ದಾರೆ ಇಲ್ಲಿನ ಜನರು ಗ್ರಾಪಂ ಆಡೀತ ಹಾಗೂ ಜನಧ್ವನಿ ಮೀಡಿಯಾಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page