ಚೌಡೇಶ್ವರಿ ಜಾತ್ರೆಯಲ್ಲಿ ಬುಡಕಟ್ಟು ಸಂಸ್ಕೃತಿಯ ಅನಾವರಣ ಸಂಭ್ರಮದ ಹಿರೆಕೆರೆ ಕಾವಲು ಚೌಡೇಶ್ವರಿ ಜಾತ್ರಾ ಮಹೋತ್ಸವ

by | 21/02/24 | ಸುದ್ದಿ

ನಾಯಕನಹಟ್ಟಿ : ನಾಯಕನಹಟ್ಟಿ ಸಮೀಪದ ಹಿರೆಕೆರೆ ಕಾವಲಿನಲ್ಲಿ ನೆಲೆಸಿರುವ ಬುಡಕಟ್ಟು ಸಮುದಾಯಗಳ ಆರಾಧ್ಯ ದೈವ ಕಾವಲು ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವವು ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಹಲವು ಪವಾಡ ಹಾಗೂ ಮಹಿಮೆಗಳ ಮೂಲಕ ಪ್ರಸಿದ್ಧಿಯನ್ನು ಪಡೆದಿರುವ ಚೌಡೇಶ್ವರಿ ದೇವಿಯು ಸುತ್ತಮುತ್ತಲ ಗ್ರಾಮಗಳ ಆರಾದ್ಯ ದೇವತೆಯಾಗಿದ್ದಾಳೆ. ಜಾತ್ರೆಯ ಸಂದರ್ಭದಲ್ಲಿ ಬುಡಕಟ್ಟು ಸಂಸ್ಕೃತಿಯ ಆಚರಣೆಗಳು ಅನಾವರಣಗೊಂಡವು. ಬಣ್ಣಬಣ್ಣದ ಬಾವುಟಗಳಿಂದ ಸಿಂಗಾರಗೊಂಡ 30ಅಡಿ ಎತ್ತರದ ತೇರಿಗೆ ಎತ್ತಿನಹಟ್ಟಿ ಗೌಡರ ಮನೆಯಿಂದ ಬಲಿ ಅನ್ನದ ಸೋರೆಹೊತ್ತು ತರಲಾಯಿತು. ಹಾಗೂ ಜೋಗಿಹಟ್ಟಿಯಿಂದ ಮೊಸರು ಕುಂಭ, ಜಿನಿಗೆಹಾಲು, ಕಡಬನಕಟ್ಟೆ, ಭೀಮಗೊಂಡನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಕಾಸುಮೀಸಲು ತಂದು ರಥಕ್ಕೆ ಅರ್ಪಿಸಿ ರಥದ ಚಕ್ರಗಳಿಗೆ ಬಲಿಅನ್ನದ ಎಡೆಹಾಕಿ ಪೂಜೆ ಸಲ್ಲಿಸಿದರು.
ನಂತರ ಸಂಪ್ರದಾಯದಂತೆ ಮುಕ್ತಿಬಾವುಟ ಹಾರಾಜು ಪ್ರಕ್ರಿಯೆಯಲ್ಲಿ ಗೌಡಗೆರೆ ಗ್ರಾ.ಪಂ.ಸದಸ್ಯ ತಿಪ್ಪೇಸ್ವಾಮಿ ರೂ.71ಸಾವಿರಕ್ಕೆ ತೆಗೆದುಕೊಂಡರು. ನಂತರ ಮಹಾ ಮಂಗಳಾರತಿ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಹಲವು ಬಣ್ಣಗಳ ಬಾವುಟಗಳಿಂದ ಸುಂದರವಾಗಿ ಅಲಂಕೃತಗೊAಡ ರಥವನ್ನು ದೇವಾಲಯದ ಎದುರು ಇರುವ ಪಾದಗಟ್ಟೆಯ ಬಳಿಗೆ ನೆರೆದ ಸಾವಿರಾರು ಭಕ್ತರು ಎಳೆದು ತಂದು ಪೂಜೆಯನ್ನು ಮಾಡಿ, ಪುನಃ ದೇವಾಲಯಸ ಸ್ವಸ್ಥಾನಕ್ಕೆ ರಥವನ್ನು ಎಳೆದು ತಂದು ದೇವರನ್ನು ಗುಡಿದುಂಬಿಸಲಾಯಿತು. ಇದೇವೇಳೆ ನೆರೆದ ಸಾವಿರಾರು ಭಕ್ತರು ರಥಕ್ಕೆ ಕಾಳುಮೆಣಸು, ಚೂರುಬೆಲ್ಲ, ಮಂಡಕ್ಕಿ ಸೇರಿದಂತೆ ದವಸ ದಾನ್ಯಗಳನ್ನು ಎರಚಿ ಭಕ್ತಿಯನ್ನು ಸಮರ್ಪಿಸಿದರು.
ಇದೇವೇಳೆ ರಥೋತ್ಸವಕ್ಕೆ ಜಾನಪದ ವಾದ್ಯಗಳಾದ ತಪ್ಪಡಿ, ಕಹಳೆ, ಉರುಮೆಗಳು, ಜನಪದೆ ಕ್ರೀಡೆ ಕೋಲಾಟ, ನಂದಿಕೋಲು, ನಂಧಿಜ್ವಜ ಮೆರುಗು ತುಂಬಿದವು. ಹರಕೆ ಹೊತ್ತ ನೂರಾರು ಭಕ್ತರು ಹರಕೆಯನ್ನು ಪೂರೈಸಿದರು.
ಮೂರು ದಿನಗಳ ಜಾತ್ರೆ ಇದಾಗಿದ್ದು, ಸಾವಿರಾರು ಭಕ್ತರು ಬೇಟಿ ನೀಡುವ ಹಿನ್ನೆಲೆಯಲ್ಲಿ ಸಾಕಷ್ಟು ಅಂಗಡಿ ಮುಂಗಟ್ಟುಗಳಲ್ಲಿ ತಿಂಡಿ ತಿನಿಸುಗಳು ಮತ್ತು ಅಲಾಂಕಾರಿಕ ವಸ್ತುಗಳ ಕೊಳ್ಳುವಲ್ಲಿ ಜನರು ನಿರತರಾಗಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಇದೇವೇಳೆ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ, ದೇವಾಲಯ ಸಮಿತಿ ಅದ್ಯಕ್ಷ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ(ಎತ್ತಿನಹಟ್ಟಿಗೌಡ್ರು), ಕಾರ್ಯದರ್ಶಿ ಎಂ.ವೈ.ಟಿ.ಸ್ವಾಮಿ, ಮುಖಂಡರಾದ ಜಿ.ಟಿ.ದೇವರಾಜ, ಜೆ.ಆರ್.ರವಿಕುಮಾರ್, ಶ್ರೀಕಾಂತ್, ಮುದಿಯಪ್ಪ, ಬೋರಸ್ವಾಮಿ, ಮಂದಯ್ಯರನಾಗರಾಜ, ಎಸ್.ಓಬಣ್ಣ, ಚಿನ್ನಯ್ಯ, ಹನುಮಣ್ಣ, ನಾಮಲ ಓಬಯ್ಯ, ಆರ್.ಪಾಲಯ್ಯ ಸೇರಿದಂತೆ ಸಾವಿರಾರು ಭಕ್ತರು ಇದ್ದರು.

ರೋಮಾಂಚನಗೊಳಿಸಿದ ಜೋಡೆತ್ತಿನಬಂಡಿ ಓಟ
ಇದೇಮೊದಲ ಬಾರಿಗೆ ಜಾತ್ರೆಯಲ್ಲಿ ಜೋಡೆತಿನ ಬಂಡಿ ಓಟದ ಸ್ಪರ್ಧೇಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೇಯಲ್ಲಿ ಜಿಲ್ಲೆಯ ನಾನಾ ಭಾಗಗಳಿಂದ ೪೮ಜೋಡಿ ವಿವಿಧ ತಳಿ ರಾಸುಗಳು ಭಾಗವಹಿಸಿದ್ದವು. ಮೊದಲ ಸುತ್ತಿನ ಓಟದ ಸ್ಪರ್ಧೇಯಲ್ಲಿ 13 ಜೋಡಿ ರಾಸುಗಳು ಜಯಗಳಿದ್ದು, ರಥೋತ್ಸವದ ನಿಮಿತ್ತ ಆಟವನ್ನು ಬುಧವಾರಕ್ಕೆ ಮುಂದೂಡಲಾಯಿತು. ರಾಸುಗಳ ರಭಸವಾದ ಓಟವನ್ನು ಕಣ್ತುಂಬಿಕೊಳ್ಳಲು 4ಸಾವಿರಕ್ಕೂ ಅಧಿಕ ಜನರು ಭಾಗವಹಿಸಿ ಶಿಳ್ಳೆ, ಕೇಕೆ ಹಾಕುವ ಮೂಲಕ ಜೋಡೆತ್ತಿನ ಗಾಡಿ ಓಟದ ಸ್ಪರ್ಧೇಗೆ ಹುರಿದುಂಬಿಸಿದರು.

Latest News >>

ಯುಗಾದಿ ಹಬ್ಬಕ್ಕೆ ಬಂದವರಿಗೆ ಬೆಂಗಳೂರಿಗೆ ತೆರಳಲು ಬಸ್ಸಿಗಾಗಿ ಸಾರಿಗೆ ಬಸ್ಸು ನಿಲ್ದಾಣದಲ್ಲಿ ಕಾಯುತ್ತಿರುವ ಪ್ರಯಾಣಿಕರು.

ಚಳ್ಳಕೆರೆ ಏ11 ಯುಗಾದಿ ಹಬ್ಬ ಮುಗಿಸಿಕೊಂಡು ಮತ್ತೆ ಬೆಂಗಳೂರಿಗೆ ತೆರಳಲು ಸಾರಿಗೆ ಬಸ್ಸುಗಳ ವ್ಯವಸ್ಥೆಯಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ....

ರಂಜಾನ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಅಗತ್ಯವಸ್ತುಗಳ ಖರೀದಿ ಬಲು ಜೋರು..

ಚಳ್ಳಕೆರೆ ಚಳ್ಳಕೆರೆ ಏ.8 ಅಗತ್ಯ ವಸ್ತುಗಳ ಬೆಳೆ ಏರಿಕೆ , ಬಿಸಿಲಿನ ತಾಪ ಹಾಗೂ ಬರಗಾಲದ ನಡುವೆಯೂ ರಂಜಾನ್ ಹಾಗೂ ಯುಗಾದಿ ಹಬ್ಬದ ಖರೀದಿ ಭರಾಟೆ...

ಯುಗಾದಿ ಹಾಗೂ ರಂಜಾನ್ ಹಬ್ಬಗಳನ್ನು‌ ಶಾಂತಿ‌ಸೌಹಾರ್ಧತೆಯಿಂದ ಆಚರಿಸಿ ಠಾಣಾಧಿಕಾರಿ ಕೆ.ಕುಮಾರ್.

ಚಳ್ಳಕೆರೆ ಏ.8 ಈ ಬಾರಿ ರಂಜಾನ್ ಹಾಗೂ ಯುಗಾದಿ ಹಬ್ಬಗಳು ಒಟ್ಟಾಗಿ ಬಂದಿದ್ದು, ಸೌಹಾರ್ದಯುತವಾಗಿ ಹಬ್ಬಗಳನ್ನು ಆಚರಿಸಬೇಕು ಎಂದು ಠಾಣಾಧಿಕಾರಿ...

ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಗೆ ಮೇವು ಸಾಗಟ ನಿಷೇಧ ಜಿಲ್ಲಾಧಿಕಾರಿ ವೆಂಕಟೇಶ್.

ಚಿತ್ರದುರ್ಗ ಏ.05: ಚಿತ್ರದುರ್ಗ ಜಿಲ್ಲೆಯ ಎಲ್ಲಾ ಆರು ತಾಲ್ಲೂಕುಗಳನ್ನು ತೀವ್ರ ಬರ ಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿದೆ. ಪ್ರಸ್ತುತ...

ತಾಲೂಕಿನಬರಪರಿಸ್ಥಿತಿ ಎದುರಿಸಲು ಪಿಡಿಒಗಳು ಕಾರ್ಯೋನ್ಮುಖರಾಗಬೇಕು, ಕುಡಿಯುವ ನೀರಿಗೆ ತೊಂದರೆಯಾಗದಂತೆ ನಿಗವಹಿಸಿ ನೋಡಲ್ ಅಧಿಕಾರಿ ರಾಮಾಂಜನೇಯ

ಚಳ್ಳಕೆರೆ: ರಾಜ್ಯ ಸರ್ಕಾರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಈಗಾಗಲೇ ಘೋಷಣೆ ಮಾಡಿರುವುದರಿಂದ ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ...

ಜನರ ದಾಹ ತಣಿಸಲು ಅರವಟ್ಟಿಗೆ ಪಟ್ಟಣದ ವಿವಿಧ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರು ವಿತರಣೆ. ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಎ.ನಸರುಲ್ಲಾ..

ನಾಯಕನಹಟ್ಟಿ:: ಪಟ್ಟಣದ ಹಾಗೂ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಜನರ ದಾಹ ತಣಿಸಲು ಅರವಟ್ಟಿಗೆ ತೆರೆದಿದೆ ಎಂದು ಪಟ್ಟಣ ಪಂಚಾಯತಿ ಮುಖ್ಯ...

ಶುದ್ದ ಕುಡಿಯುವ ನೀರು ಒದಗಿಸಲು ಅಗತ್ಯ ಕ್ರಮ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ : ಏಪ್ರಿಲ್ 02 ಪ್ರಸಕ್ತ ಬೇಸಿಗೆಯಲ್ಲಿ ಚಿತ್ರದುರ್ಗ ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿನ ನಿವಾಸಿಗಳಿಗೆ...

ಬರಗಾಲ ನಿರ್ವಾಹಣಾ ಸಭೆಗೆ ಅಧಿಕಾರಿಗಳು ಹಾಜರಿಯಾಗುವಂತೆ ತಹಶೀಲ್ದಾರ್ ರೇಹಾನ್ ಪಾಷ.

ಚಳ್ಳಕೆರೆ ಏ.2. ಬೇಸಿಗೆಯ ಬಿಸಿಲಿನ ತಾಪ ಹೆಚ್ಚಾಗಿದ್ದು ತಾಲೂಕು ಬರಗಾಲ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಏ 3 ಬುಧವಾರ 10 ಗಂಟೆ‌ಗೆ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page