ಚುನಾವಣೆ ಘೋಷಣೆ ಮುನ್ನವೇ ಅಕ್ರಮ ಪ್ಲೆಕ್ಸ್ , ಬ್ಯಾನರ್ ಅಳವಡಿಕೆಗೆ ಬಿತ್ತು ಬ್ರೇಕ್ ,ಒಂದೇ ಕಾರ್ಯಕ್ರಮಕ್ಕೆ 25800 ರೂ ನಗರಸಭೆ ಬೊಕ್ಕಸಕ್ಕೆ ಬಂತು ಆಧಾಯ

by | 18/03/23 | ಜನಧ್ವನಿ, ಸುದ್ದಿ


ಪ್ರತಿ ನಿತ್ಯ ಪ್ಲೆಕ್ಸ್ ಬ್ಯಾನರ್ ಗಳಿಂದ ತುಂಬಿದ್ದ ನೆಹರು ವೃತ್ತ ಕಟ್ಟು ನಿಟ್ಟಿನ ಕಾನೂನು ಪಾಲನೆಯಿಂದ ತೆರವು ಬಿಕೋಎನ್ನುತ್ತಿರುವ ವೃತ್ತ
ಚಳ್ಳಕೆರೆ ಜನಧ್ವನಿ ವಾರ್ತೆ ಮಾ.18
ಇದೇನಪ್ಪ ಚುನಾವಣೆ ನೀತಿ ಸಂಹಿತೆ ಏನಾದರೂ ಘೋಷಣೆಯಾತ್ತ ಪ್ಲೆಕ್ಸ್ ಬ್ಯಾನರ್ ತೆರವುಗೊಳಿಸುತ್ತಿದ್ದಾರೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.
ರಾಜಕೀಯ ನೇತಾರರಿಂದ ಪದೇ ಪದೇ ನಿಯಮ ಉಲ್ಲಂಘನೆಯಾದರೂ ಕಡಿವಾಣ ಹಾಕುವ ಅಧಿಕಾರಿಗಳು ಮಾತ್ರ ಮೌನಕ್ಕೆ ಜಾರಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೆ ಈಗ ನಗರಸಭೆ ಅಧಿಕಾರಿಗಳು ಅಕ್ರಮ ನಿಷೇದಿತ ಪ್ಲೆಕ್ಸ್ ,ಬ್ಯಾನರ್‌ಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ.
ಹೌದು ಇದು ಚಳ್ಳಕೆರೆ ನಗರದ ನೆಹರು ವೃತ್ತ ಸೇರುದಂತೆ ಸಾರ್ವಜನಿಕ ಸ್ಥಳದಲ್ಲಿ ವಿವಿಧ ಪಕ್ಷಗಳ ಸಭೆ.ಸಮಾರಂಭ. ಹುಟ್ಟು ಹಬ್ಬ, ನಾಮಕರಳ, ನಾಟಕ, ಜಾತ್ರೆ ಉತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಪ್ಲೆಕ್ಸ್ ಬ್ಯಾನರ್ ಗಳನ್ನು ನಗರಸಭೆ ಅನುಮತಿ ಪಡೆಯದೆಎಲ್ಲೆಂದಲ್ಲಿ ಹಾಕಿ ಕಾರ್ಯಗಳು ಮುಗಿದರೂ ಅವುಗಳನ್ನು ತೆರವುಗೊಳಿಸುವ ಗೋಜಿಗೆ ಹೋಗುತ್ತಿರಲಿಲ್ಲ. ನ್ಯಾಯಾಲಯ ಆದೇಶ ಇದ್ದರೂ ಸಹ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನುಮತಿ ಪಡೆಯದೆ ಅನಧಿಕೃತವಾಗಿ ಬ್ಯಾನರ್ ಮತ್ತು ಫ್ಲೆಕ್ಸ್ಗಳನ್ನು ಅಳವಡಿಸಿದರೆ ಒಂದು ಸಾವಿರ ದಂಡ ಮತ್ತು ೬ ತಿಂಗಳು ಜೈಲು ಶಿಕ್ಷೆ ವಿಧಿಸಲಾಗು ಎಂಬ ಕಾನೂನು ಇದ್ದರೂ ಸಹ ಉಲ್ಲಂಘಿಸಿ ರಾಜಕೀಯ ಸಮಾವೇಶ, ರಾಜಕಾರಣಿಗಳ ಜನ್ಮದಿನ, ಸಮಾರಂಭ, ಜಯಂತಿ, ಉತ್ಸವ, ಧಾರ್ಮಿಕ ಕಾರ್ಯಕ್ರಮಗಳ ಸಮಯದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಸ್ಟಿಕ್ಕರ್, ಭಿತ್ತಿಪತ್ರ, ಸ್ವಾಗತ ಕಮಾನುಗಳು ನಗರದ ಎಲ್ಲೆಡೆ ರಾರಾಜಿಸುವಂತೆ ಮಾಡುತ್ತಿದ್ದರು.
ಸಾಂಧರ್ಭಿಕ ಚಿತ್ರ
ಅಕ್ರಮ ಪ್ಲೆಕ್ಸ್ ಅವಳಡಿಸುವುದರಿಂದ ನಗರದ ಸೌಂದರ್ಯಕ್ಕೆ ಧಕ್ಕೆ ಹಾಗೂ ನಗರಸಭೆ ಬೊಕ್ಕಸಕ್ಕೂ ನಷ್ಟವನ್ನುಂಟು ಮಾಡುತ್ತಿತ್ತು. ಈ
ನೆಹರು ವೃತ್ತದಲ್ಲಿರ ನೆಹರು ಪ್ರತಿಮೆಗೂ ಪ್ಲೆಕ್ಸ್ ಹೆಚ್ಚು ಜನಸಂದಣಿ ಇರುವ ಪ್ರಮುಖ ವೃತ್ತಗಳು ಸೇರಿ ಪಾದಚಾರಿ ಮಾರ್ಗಗಳಲ್ಲಿ, ವಿಭಜಕಗಳಲ್ಲಿರುವ ಬೀದಿ ದೀಪದ ಕಂಬಗಳು, ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸುತ್ತಿದ್ದರು ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರ ಸಂಚಾರಕ್ಕೂ ಅಡಚಣೆಯಾಗುತ್ತಿತ್ತು ವಿವಿಧ ಪಕ್ಷದಮುಖಂಡರು , ಜನಪ್ರತಿನಿಧಿಗಳ ಪ್ಲೆಕ್ಸ್ ಆಗಿರುವುದರಿಂದ ನಗರಸಭೆ ಅಧಿಗಳು ಅವುಗಳನ್ನು ತೆರವುಗೊಳಿಸುವ ಗೋಜಿಗೆ ಹೋಗುತ್ತಿರಲಿಲ್ಲ ಈಗ ಚುನಾವಣೆ ಸಮೀಪಿಸುತ್ತಿರುವುದರಿಂದ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಜಿಲ್ಲಾಡಳಿ ನೀಡಿದ ಎಚ್ಚರಿಕೆಯಿಂದ ದಿನದ೨೪ ಗಂಟೆಯೊಳಗೆ ಪ್ಲೆಕ್ಸ್ಗಳನ್ನು ತೆರವುಗೊಳಿಸಬೇಕು, ಪ್ಲೆಕ್ಸ್ ಅಳವಡಿಸುವ ಮುನ್ನ ನಿಗಧಿ ಸ್ಥಳ ಹಾಗೂ ಹಣ ನೀಡಿ ಪರವಾನಿಗೆ ಪಡೆದು ಅಳಡವಡಿಸ ಬೇಕು ಒಂದು ವೇಳೆ ಪರವಾನಿಗೆಪಡೆಯದೆ ಪ್ಲೆಕ್ಸ್ ಗಳನ್ನು ಅಳವಡಿಸಿದರೆ ಕಾನೂನು ಶಿಕ್ಷೆಗೆ ಗುರಿಯಾಗ ಬೇಕಾಗುತ್ತದೆ .
ತಮ್ಮ ಪ್ಲೆಕ್ಸ್ಗಳಿಗೆ ತಾವೆ ಜವ್ಬಾರಿ.
ನಗರಸಭೆಯಿಂದ ಪರವಾನಿಗೆ ಪಡೆದು ಅಳವಡಿಸುವ ಜಾಹೀರಾತುಗಳಿಗೆ ಪ್ಲೆಕ್ಸ್ ದಾರರು ಜವಾಬ್ದಾರರು, ಜಾಹೀರಾತುಗಳಿಗೆ ಏನಾದರೂ ಹಾನಿಯಾದಲ್ಲಿ ನಗರಸಭೆ ಜವಾಬ್ದಾರಿಯಲ್ಲ, ಪರವಾನಿಗೆ ಪಡೆದು ಸಮಯದ ನಂತರ ಒಂದು ಗಂಟೆಯೊಳಗೆ ಹಾಕಿರುವ ಜಾಹೀರಾತುಗಳನ್ನು ತಮ್ಮ ಸ್ವಂತ ಖರ್ಚಿನಿಂದ ತೆರವುಗೊಳಿಸಿಕೊಡತಕ್ಕದ್ದು ಪರವಾನಿಗೆಯು ಜಾರಿಯಲ್ಲಿದ್ದು, ಸರ್ಕಾರದಿಂದ ಯಾವುದಾದರೂ ತುರ್ತು ಆದೇಶ ಬಂದಲ್ಲಿ, ನಿಯಮಾನುಸಾರ ಯಾವುದೇ ತಿಳುವಳಿಕೆ ನೀಡದೆ ರದ್ದುಪಡಿಸುವ ಅಧಿಕಾರವನ್ನು ಪೌರಾಯುಕ್ತರು, ನಗರಸಭೆ, ಚಳ್ಳಕೆರೆ ರವರಿಗೆ ಇರುತ್ತದೆ ಯಾವುದೇ ಸರ್ಕಾರಿ ಆಸ್ತಿಗಳ ಮೇಲೆ ಜಾಹೀರಾತುಗಳನ್ನು ಅಳವಡಿಸಬಾರದು. ನಿಗಧಿಪಡಿಸಿದ ಸ್ಥಳಗಳಲ್ಲೇ(ಪರವಾನಿಗೆ ನೀಡಿದ) ಜಾಹೀರಾತುಗಳನ್ನು ಅಳವಡಿಸತಕ್ಕದ್ದು. ನಗರಸಭೆ ವ್ಯಾಪ್ತಿಯಲ್ಲಿನ ವಿದ್ಯುತ್ ಕಂಬ ಹಾಗೂ ಮರಗಳಿಗೆ ಜಾಹೀರಾತುಗಳನ್ನು ಹಾಕುವಂತಿಲ್ಲ. ಪರವಾನಿಗೆ ಎಷ್ಟು ಬ್ಯಾನರ್ , ಪ್ಲೆಕ್ಸ್ಗಳಿಗೆ ಪಡೆದಿರುತ್ತಾರೆ ಅದಕ್ಕಿಂತ ಹೆಚ್ಚಿಗೆ ಹಾಕುವಂತೆ ಒಂದು ವೇಳ ಪರವಾನಿಗೆ ಪಡೆಯದೆ ಅಕ್ರಮವಾಗಿ ಪ್ಲೆಕ್ಸ್ ಬ್ಯಾನರ್ ಅಳವಡಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಎಚ್ಚರಿಕೆ ನೀಡಿದೆ.
ನಗರಸಭೆ ಬೊಕ್ಕಸಕ್ಕೆ ಲಾಭ.

ಪ್ಲೆಕ್ಸ್ ಅಳವಡಿಕೆಗೆ ಕಾನೂನು ಜಾರಿಯಾದ ಮೊದಲ ಬಿಜೆಪಿ ಪಕ್ಷದ ವಿಜಯಸಂಕಲ್ಪ ರೋಡ್ ಶೋಗೆ ಪ್ಲೆಕ್ಸ್ ಬ್ಯಾನರ್ ಅಳವಡಿಸಲು ಬಿಜೆಪಿ ಪಕ್ಷದಿಂದ 25800 ರೂ ನಗರಸಭೆ ಬೊಕ್ಕಸಕ್ಕೆ ಪ್ಲೆಕ್ಸ್ ಬ್ಯಾನರ್ , ಬಂಟಿAಗ್ಸ್ ನಿಂದ ಲಾಭ ಬಂದಿದೆ ಈ ಹಿಂದೆ ರಾಜಕೀಯ ಪಕ್ಷಗಳು ಯಾವುದೇ ಪರವಾನಿಗೆ ಪಡೆಯದೆ ಹಣವೂ ಸಂದಾಯ ಮಾಡದೆ ಅಳವಡಿಸುತ್ತಿದ್ದರು ಎಂಬ ಆರೋಗಳು ಜನರಿಂದ ಕೇಳಿ ಬರುತ್ತಿದ್ದವು ಈಗ ಯಾರೇ ಆಗಲಿ ಹಣ ನೀಡಿ ಪರವಾನಿಗೆ ಪಡೆದು ನಿಗಧಿಯ ಸಮಯ ನಂತರ ಒಂದುಗAಟೆಯೊಳಗೆ ತೆರವುಗೊಳಿಸ ಬೇಕು ಎಂಬಷರತ್ತು ವಿಧಿಸಿದೆ.

Latest News >>

ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ: -ಮುಖ್ಯಮಂತ್ರಿ ಸಿದ್ದರಾಮಯ್ಯ

ಬಳ್ಳಾರಿ,ಜೂ.20 ರಾಜ್ಯದಲ್ಲಿ ಸಾರಿಗೆ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ವಿಷಯ ಸದ್ಯ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸೋಲಿನ ಹೊಣೆಯನ್ನು ನಾನೇ ಹೊರುವೆ: ಪರಾಜಿತ ಅಭ್ಯರ್ಥಿ ಬಿ ಎನ್ ಚಂದ್ರಪ್ಪ 

ಚಳ್ಳಕೆರೆ: ಚಿತ್ರದುರ್ಗ ಜಿಲ್ಲೆಯು ಕಳೆದ ಹತ್ತು ವರ್ಷಗಳಿಂದ ನನ್ನ ಕರ್ಮಭೂಮಿಯಾಗಿದ್ದು ಇಲ್ಲಿನ ಜನತೆ ಮನೆ ಮಗನಂತೆ ನೋಡಿದ್ದು ಒಂದು ಬಾರಿ...

ಜಾತಿನಿಂದನೆ, ದೌರ್ಜನ್ಯಗಳಂತಹ ಆರೋಪಗಳನ್ನು ಪರಿಶಿಷ್ಟರು ಕೈಬಿಟ್ಟಾಗ ಮಾತ್ರ ಸಮಾಜದಲ್ಲಿಬೆಳೆಯಲು ಸಾಧ್ಯ: ನೂತನ ಸಂಸದರಾದ ಗೋವಿಂದ ಕಾರಜೋಳ

ಹಿರಿಯೂರು: ಜಾತಿ ನಿಂದನೆ ಮತ್ತು ದಲಿತ ದೌರ್ಜನ್ಯಗಳಂತಹ ವೃತಾ ಆರೋಪಗಳನ್ನು ಪರಿಶಿಷ್ಟರು ಕೈ ಬಿಟ್ಟಾಗ ಮಾತ್ರ ಸಮಾಜದಲ್ಲಿ ಬೆಳೆಯಲು ಸಾಧ್ಯ...

ಚಿಕ್ಕಾಲಘಟ್ಟ ಗ್ರಾಮದಲ್ಲಿ ಜನಸ್ಪಂದನ ಕಾರ್ಯಕ್ರಮ ಶೀಘ್ರ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯ ಭರವಸ -ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ

ಚಿತ್ರದುರ್ಗ. ಜೂನ್.19: ಚಿಕ್ಕಾಲಘಟ್ಟ ಗ್ರಾಮದ ಬಹುದಿನಗಳ ಬೇಡಿಕೆಯಾದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಈಗಾಗಲೇ ಜಾಗ...

ಜನಪ್ರತಿನಿಧಿಗಳು ಸರ್ಕಾರಿ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸೋಣ – ಸಂಸದ ಗೋವಿಂದ ಕಾರಜೋಳ

ಚಿತ್ರದುರ್ಗ. ಜೂನ್19: ಚುನಾಯಿತ ಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಸಮನ್ವಯತೆಯಿಂದ ಉತ್ತಮವಾಗಿ ಕಾರ್ಯನಿರ್ವಹಿಸಿ ಕೇಂದ್ರ ಹಾಗೂ...

ಕರ್ನಾಟಕ ಮಾಧ್ಯಮ ಮಹಾಕೂಟ ಜಿಲ್ಲಾ ಅಧ್ಯಕ್ಷರಾಗಿ ಕರುನಾಡು ಜಿಯಾ ಉಲ್ಲಾ ಆಯ್ಕೆ

ಚಳ್ಳಕೆರೆ ಕರ್ನಾಟಕ ಮಾಧ್ಯಮ ಮಹಾಕೂಟ ಜಿಲ್ಲಾ ಅಧ್ಯಕ್ಷರಾಗಿ ಕರುನಾಡು ಜಿಯಾ ಉಲ್ಲಾ ಆಯ್ಕೆ ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಕರ್ನಾಟಕ...

ಜೂ.21 ರ ಶುಕ್ರವಾರ ಬೆಳಗ್ಗೆ 10- 30 ಕ್ಕೆ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ತಾಪಂ ಇಒ ಶಶಿಧರ್

ಚಳ್ಳಕೆರೆ ಜೂ.19ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜೂ21 ರ ಶುಕ್ರವಾರ ಬೆಳಗ್ಗೆ 10-30 ಕ್ಕೆ ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆಯಲ್ಲಿ...

ಗೋವಿಂದಕಾರಜೋಳರನ್ನು ಕೇಂದ್ರಸಚಿವರಾಗಿ ಮಾಡಬೇಕೆಂದು ಹೆಗ್ಗೆರೆ ಮಂಜುನಾಥ್ ಒತ್ತಾಯ

ಹಿರಿಯೂರು: ರಾಜ್ಯದಲ್ಲಿ ಅತಿ ಹೆಚ್ಚು ಎಡಗೈ ಸಮುದಾಯದವರಿದ್ದು, ಈ ಬಾರಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಹಾಗೆಯೇ ಚಿತ್ರದುರ್ಗ ಲೋಕಸಭಾ...

ಮಹನೀಯರ ಜಯಂತಿ: ಅರ್ಥಪೂರ್ಣ ಆಚರಣೆಗೆ ನಿರ್ಧಾರ- ಬಿ.ಟಿ. ಕುಮಾರಸ್ವಾಮಿ

ಚಿತ್ರದುರ್ಗ ಜೂನ್19: ಇದೇ ಜೂನ್ 27 ರಂದು ನಾಡಪ್ರಭು ಕೆಂಪೇಗೌಡ ಜಯಂತಿ ಹಾಗೂ ಜುಲೈ 02 ರಂದು ಡಾ. ಫ.ಗು. ಹಳಕಟ್ಟಿಯವರ ಜನ್ಮದಿನದ ಅಂಗವಾಗಿ...

ಯೋಗ ನಡಿಗೆಗೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ

ಚಿತ್ರದುರ್ಗ ಜೂನ್18: 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮಂಗಳವಾರ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page