ಚಿತ್ರದುರ್ಗ ಪೋಲಿಸರಿಂದ ಅಂತರ ಜಿಲ್ಲಾ ಸುಲಿಗೆಕೋರರನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

by | 09/12/23 | ಕ್ರೈಂ


ಚಿತ್ರದುರ್ಗ. ಡಿ.9. ವಿವಿದೆಡೆ ಸರಗಳ್ಳತನ ಮಾಡಿತ್ತಿದ್ದ ಕಳ್ಳರನ್ನು ಚಿತ್ರದುರ್ಗ ಪೋಲಿಸರು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೋಲಿಸರು ಗಸ್ತಿನಲ್ಲಿರುವಾಗ ಅನುಮಾನಸ್ಪದವಾಗಿ ಓಡಾಡುತ್ತಿರುವುದನ್ನು ಗಮನಿಸಿ ವಿಚಾರಣೆ ಮಾಡಿದಾಗ ಕಳ್ಳತನ ಮಾಡಿರುವ ಬಗ್ಗೆ ಬಯಲಾಗಿದ್ದು ಹಣ ಹಾಗೂ ಮಾಲು ಸಹಿತ ವಶಪಡಿಸಿಕೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆ ಬಡಾವಣೆ ಪೊಲೀಸರಿಂದ ಅಂತರ್ ಜಿಲ್ಲಾ ಸುಲಿಗೆಕೋರ ಮಹಿಳೆಯರ ಬಂಧನ,
ಆರೋಪಿತರಿಂದ 2,01,500/- ರೂ ಬೆಲೆ ಬಾಳುವ ಆಭರಣಗಳು ಹಾಗೂ 50,000/- ನಗದು ವಶ
ಇತ್ತೀಚೆಗೆ ಬಡಾವಣೆ ಠಾಣಾ ವ್ಯಾಪ್ತಿಯಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬಸ್ ನಿಲ್ದಾಣಗಳಲ್ಲಿ,
ಬಸ್ಸುಗಳನ್ನು ಹತ್ತುವ ಮತ್ತು ಇಳಿಯುವ ವೇಳೆ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಕಳವು ಮಾಡುವ
ಹಾಗೂ ಬಸ್ಸಗಳಲ್ಲಿ ಪ್ರಯಾಣಿಕರಂತೆ ಕುಳಿತು ಪ್ರಯಾಣಿಕರ ಬಳಿ ಇರುವ ಬೆಲೆ ಬಾಳುವ ಆಭರಣಗಳನ್ನು ಕಳವು
ಮಾಡುವ, ಬಗ್ಗೆ ಪ್ರಕರಣಗಳು ವರದಿಯಾಗುತ್ತಿದ್ದು, ಈ ಬಗ್ಗೆ ಚಿತ್ರದುರ್ಗ ಬಡಾವಣೆ ಠಾಣೆಯಲ್ಲಿ 1] ಮೊ.ನಂ:-
129/2023 ಕಲಂ-392 ಐಪಿಸಿ & 2] ಮೊ.ನಂ: 158/2023 ಕಲಂ. 379 ಐಪಿಸಿ ರಿತ್ಯಾ
ಪ್ರಕರಣಗಳು
ದಾಖಲಾಗಿರುತ್ತವೆ. ಸದರಿ ಪ್ರಕರಣಗಳ ಆರೋಪಿತರ ಪತ್ತೆ ಸಲುವಾಗಿ ಮಾನ್ಯ ಮೇಲಾಧಿಕಾರಿಗಳು ನಗರದಲ್ಲಿ
ಸಂಜೆ ಗಸ್ತು ಹೆಚ್ಚಿಸುವಂತೆ ಹಾಗೂ ಜಾತ್ರೆ, ಮೆರವಣಿಗೆ, ಹೆಚ್ಚು ಜನರು ಸೇರುವ ಕಡೆ ಮಹಿಳೆಯರ ಬಂಗಾರದ
ಸರಗಳನ್ನು ಸುಲಿಗೆ/ಕಳುವು ಮಾಡುವವರ ಬಗ್ಗೆ ನಿಗಾವಹಿಸುವಂತೆ ಸೂಚಿಸಿರುತ್ತಾರೆ.
ಅದರಂತೆ ಬಡಾವಣೆ ಪೊಲೀಸ್ ಠಾಣೆ ಅಧಿಕಾರಿ & ಸಿಬ್ಬಂದಿಗಳು ದಿನಾಂಕ:04.12.2023 ರಂದು ಸಂಜೆ
ನಗರದ ಚಳ್ಳಕೆರೆ ಗೇಟ್ ಬಳಿ ಗಸ್ತಿನಲ್ಲಿರುವಾಗ ಅನುಮಾನಸ್ಪದವಾಗಿ ನಿಂತಿದ್ದ ಮೂವರು ಮಹಿಳೆಯರ ಹೆಸರು
ವಿಳಾಸ ಕೇಳಲಾಗಿ ಅಸ್ಪಷ್ಟ ಉತ್ತರ ನೀಡಿದ್ದು, ಸದರಿಯವರನ್ನು ಹೆಚ್ಚಿನ ವಿಚಾರಣೆಗೆ ಠಾಣೆಗೆ ಕರೆದು ತಂದು
ವಿಚಾರಣೆ ಮಾಡಿದಾಗ 1] ಮಹೇಶ್ವರಿ @ ರೇಖಾವತಿ @ ರಾಧ ಗಂಡ ರಾಘವೇಂದ್ರ ಸು 26 ವರ್ಷ, ಹತ್ತರಗಿ
ಗ್ರಾಮ, ಹುಕ್ಕೇರಿ ತಾಲ್ಲೂಕು, ಬೆಳಗಾಂ ಜಿಲ್ಲೆ, 2] ಸಂಜನಾ ಗಂಡ ಮಂಜುನಾಥ ಸು 25 ವರ್ಷ, ಹತ್ತರಗಿ ಗ್ರಾಮ,
ಹುಕ್ಕೇರಿ ತಾಲ್ಲೂಕು, ಬೆಳಗಾಂ ಜಿಲ್ಲೆ, 3] ಅಕಿಲಾ ಗಂಡ ಮಂಜುನಾಥ ಸು 35 ವರ್ಷ, ಹತ್ತರಗಿ ಗ್ರಾಮ, ಹುಕ್ಕೇರಿ
ತಾಲ್ಲೂಕು, ಬೆಳಗಾಂ ಜಿಲ್ಲೆ ಎಂಬುದಾಗಿ ಹಾಗೂ ಸರಗಳ್ಳತನ ಮಾಡುವುದಾಗಿ ತಿಳಿಸಿರುತ್ತಾರೆ. ಮುಂದುವರೆದು
ಪ್ರಕರಣಗಳಲ್ಲಿ ಸರಗಳ್ಳತನ & ಒಡವೆಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ.
ಸದರಿ ಆರೋಪಿತರಿಂದ
1) ಬಡಾವಣೆ ಠಾಣೆ ಮೊ.ನಂ:129/2023 ಕಲಂ.392 ಐಪಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಗ್ರಾಂ ತೂಕದ
ತುಂಡಾದ ಬಂಗಾರದ ಮಾಂಗಲ್ಯ ಸರ ಅಂದಾಜು ಬೆಲೆ 1,00,000
2] ಬಡಾವಣೆ ಠಾಣೆ ಮೊ.ನಂ: 158/2023 ಕಲಂ, 379 ಐಪಿಸಿ ಪ್ರಕರಣಕ್ಕೆ ಸಂಬಂಧಿಸಿದ 20 ಗ್ರಾಂ ತೂಕದ 05
ಜೊತೆ ಬಂಗಾರದ ಕಿವಿಯೋಲೆಗಳು ಅಂದಾಜು ಬೆಲೆ 1,00,000 ಒಂದು ಜತೆ ಬೆಳ್ಳಿಯ ಕಾಲು ಚೈನು ಅಂದಾಜು
ಬೆಲೆ 1500 ಮತ್ತು 50,000 ರೂ ನಗದು ಹಣವನ್ನು ಅಮಾನತು ಪಡಿಸಿಕೊಳ್ಳಲಾಗಿದೆ.
ಆರೋಪಿತರು ಬಳ್ಳಾರಿ, ದಾವಣಗೆರೆ ಮತ್ತು ಕೊಪ್ಪಳ ಜಿಲ್ಲೆಗಳ ಅಪರಾಧ ಪ್ರಕರಣಗಳಲ್ಲಿ
ಭಾಗಿಯಾಗಿರುವುದು ತನಿಖಾ ಸಮಯದಲ್ಲಿ ಕಂಡುಬಂದಿರುತ್ತದೆ.
ಸದರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಬಡಾವಣೆ ವೃತ್ತದ ವೃತ್ತ ನಿರೀಕ್ಷಕರಾದ ಶ್ರೀ.ನಯೀಂ
ಅಹಮದ್, ಪಿ.ಎಸ್.ಐ. ಶ್ರೀ.ರಘು.ಟಿ. ಮತ್ತು ಸಿಬ್ಬಂದಿಯವರಾದ ಲಕ್ಷ್ಮಣ, ಮಂಜುನಾಥ, ವೀರೇಶ ಇವರ
ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ.

Latest News >>

ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಗೆ 4 ಬಾರಿ ಗೈರು ಹಾಜರಾದ ಸದಸ್ಯೆಯನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ ರಾಜ್ಯ ಸರಕಾರ

ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಗೆ 4 ಬಾರಿ ಗೈರು ಹಾಜರಾದ ಸದಸ್ಯೆಯನ್ನು ಅನರ್ಹಗೊಳಿಸಲಾಗಿದೆ. ಈ ಸಂಬಂಧ ಗ್ರಾಮೀಣಾಭಿವೃದ್ಧಿ...

ಇ-ಆಸ್ತಿ ಆಂದೋಲನ ಸದುಪಯೋಗ ಪಡಿಸಿಕೊಳ್ಳುವಂತೆ ಪೌರಾಯುಕ್ತ ಚಂದ್ರಪ್ಪ.

ಸರಕಾರದ ನಿರ್ದೇಶನ ಹಾಗೂ ಜಿಲ್ಲಾಧಿಕಾರಿಗಳ ಸುತ್ತೋಲೆಯಂತೆ ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ ಇ -ಆಸ್ತಿ ಸೇವೆ ಆಂದೋಲನ ಪ್ರಾರಂಭ ಮಾಡಿದ್ದೆವೆ...

ನೀರಿನ ಅಸಮರ್ಪಕ ಬಳಕೆಯಿಂದ ಬರ ಪ್ರತಿಯೊಬ್ಬರು ಜಲಸಂರಕ್ಷಣೆಗೆ ಒತ್ತು ನೀಡಿ

ಚಿತ್ರದುರ್ಗ ಫೆ.23: ನೀರಿನ ಅಸಮರ್ಪಕ ಬಳಕೆಯಿಂದ ನೀರಿನ ಸಮಸ್ಯೆ ಹಾಗೂ ಬರ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರು ಜಲರಕ್ಷಕರಾಗಿ ಎಚ್ಚೆತ್ತುಕೊಂಡಾಗ...

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ ಜೂನ್ ವೇಳೆಗೆ ರೈಲ್ವೇ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ: ವರ್ಷಾಂತ್ಯಕ್ಕೆ ನೇರ ರೈಲು ಕಾಮಗಾರಿ ಆರಂಭ

ಚಿತ್ರದುರ್ಗ. ಫೆ.26: ದಾವಣಗೆರೆ ರಸ್ತೆ ಹಾಗೂ ಕವಾಡಿಗರಹಟ್ಟಿ ಹತ್ತಿರದ ಹೊಳಲ್ಕೆರೆ ರಸ್ತೆಯಲ್ಲಿ ರೈಲ್ವೇ ಸೇತುವೆ ನಿರ್ಮಾಣಕ್ಕೆ ಯೋಜನೆ...

ಗೊರವಯ್ಯನ ಕಾರ್ಣಿಕ ನುಡಿ ಸಂಪಾದಿತಲೇ ಪರಾಕ್ ಎಂಬುದನ್ನು ವಿಶ್ಲೇಷಿಸಿ ಹೇಳಿರುವಂತ ಜನರು ಈ ಸಲ ಭಾರೀ ಮಳೆ, ಬೆಳೆ ಚೆನ್ನಾಗಿ ಆಗಿ, ರೈತರ ಬಾಳು ಹಸನಾಗಲಿದೆ ಎಂಬುದಾಗಿ ತಿಳಿಸಿದ್ದಾರೆ.

ವಿಜಯನಗರ: ಜಿಲ್ಲೆಯ ಪ್ರಸಿದ್ಧ ಸುಕ್ಷೇತ್ರ ಶ್ರೀಮೈಲಾರ ಲಿಂಗೇಶ್ವರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಾರ್ಮಿಕ ನುಡಿ ಹೊರ ಬಿದ್ದಿದೆ....

ಫೆ. 29ರಂದು ಜಿಲ್ಲಾ ಮಟ್ಟದ ಸಂತ ಸೇವಾಲಾಲ್ ರವರ 285ನೇ ಜಯಂತಿಫೆ. 29ರಂದು ಜಿಲ್ಲಾ ಮಟ್ಟದ ಸಂತ ಸೇವಾಲಾಲ್ ರವರ 285ನೇ ಜಯಂತಿ ಕಾರ್ಯಕ್ರಮ

ಚಳ್ಳಕೆರೆ: ಸಂತ ಸೇವಾಲಾಲ್ ರವರ 285ನೇ ಜಯಂತಿಯನ್ನು ಫೆ.29ರಂದು ಚಿತ್ರದುರ್ಗ ಜಿಲ್ಲೆಯ ತಾರಾಸು ರಂಗಮಂದಿರದಲ್ಲಿ ಜಿಲ್ಲಾ ಮಟ್ಟದ...

ನಿಧಿಗಳ್ಳರ ವಕ್ರದೃಷ್ಠಿಗೆ ಪುರಾತನ ದೇವಾಲಯಗಳು ಶಿಥಿಲ ಅರ್ಚಕ ತಿಪ್ಪೇಸ್ವಾಮಿ.

ಚನ್ನಗಿರಿ ಫೆ.26 ನಿಧಿ ಹಾಗೂ ದೇವಾಲಯಆಸ್ತಿ ಗಾಗಿ ಪುರಾತನ ದೇವಾಲಗಳು ಶಿಥಿಲವಾಸ್ಥೆಗೆ ತಲುಪಿದರು ಸಂಬಂಧ ಪಟ್ಟ ಇಲಾಖೆ ಮೌನಕ್ಕೆ ಜಾರಿದೆ ಎಂಬ...

ಸಮಾಜದಲ್ಲಿ ಸರ್ವಧರ್ಮದ ದಾರ್ಶನಿಕರು ಶಾಂತಿಯ ಸಂದೇಶವನ್ನು ಬೋಧಿಸಿದ್ದಾರೆ: ಶಾಸಕ ಟಿ ರಘುಮೂರ್ತಿ

ಚಳ್ಳಕೆರೆ: ಮಾನವರಾದ ನಾವು ಜಾತಿ ಧರ್ಮಗಳನ್ನು ಗೌರವಿಸುವ ಮುನ್ನ ಮಾನವ ಧರ್ಮವನ್ನು ಗೌರವಿಸುವುದು, ಉತ್ತಮ ಎಂದು ಶಾಸಕ ಹಾಗೂ ಸಣ್ಣ ಕೈಗಾರಿಕೆಗಳ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page