ಚಿತ್ರದುರ್ಗ ಫೆ.15:
ಜಿಲ್ಲಾಮಟ್ಟದ ತಂಬಾಕು ತನಿಖಾ ತಂಡವು ಚಿತ್ರದುರ್ಗ ನಗರ ಪ್ರದೇಶದಲ್ಲಿ ಶಾಲಾ ಕಾಲೇಜುಗಳ ಸುತ್ತಮುತ್ತ ಬುಧವಾರ ತಂಬಾಕು ಕಾರ್ಯಾಚರಣೆ ನಡೆಸಲಾಯಿತು.
ಕಾರ್ಯಾಚರಣೆಯಲ್ಲಿ ಸೆಕ್ಷನ್-4 ಅಡಿಯಲ್ಲಿ 13 ಪ್ರಕರಣ ದಾಖಲಿಸಿ, ರೂ.1300 ದಂಡ, ಸೆಕ್ಷನ್ 6ಬಿ ಅಡಿಯಲ್ಲಿ 13 ಪ್ರಕರಣ ದಾಖಲಿಸಿ ರೂ.2150 ದಂಡ ಹಾಕಲಾಯಿತು.
ಅಂಗಡಿಗಳ ಮಾಲೀಕರಿಗೆ ಶಾಲಾ ಕಾಲೇಜುಗಳ ಹತ್ತಿರ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ನಿಷೇಧಿಸಲಾಗಿದೆ. ಪುನರಾವರ್ತನೆಯಾದರೆ ಎಫ್ಐಆರ್ ದಾಖಲಿಸುವುದು ಎಂದು ಎಚ್ಚರಿಸಲಾಯಿತು.
ಕಾರ್ಯಚರಣೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್, ಪೊಲೀಸ್ ಇಲಾಖೆ ರಂಜಿತಾ, ಆರೋಗ್ಯ ಇಲಾಖೆ ಮಂಜುನಾಥ್, ರಂಗಸ್ವಾಮಿ ಇದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments